For Quick Alerts
ALLOW NOTIFICATIONS  
For Daily Alerts

ಕನ್ನಡ ಹಾಡಿಗೆ ಟಿಬೆಟಿಯನ್ನರ ಡ್ಯಾನ್ಸ್ ವೀಡಿಯೋ ವೈರಲ್

|

ನವೆಂಬರ್ ತಿಂಗಳು ಬಂತೆಂದರೆ ಕನ್ನಡಿಗರಿಗೆ ಹರ್ಷವೋ ಹರ್ಷ. ಏಕೆಂದರೆ ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್‌ 1ರಂದು ಆಚರಿಸಿದರೂ ಆ ಹಬ್ಬದ ಸಡಗರ, ಸಂಭ್ರಮ, ಸಮಾರಂಭಗಳು ಈ ತಿಂಗಳು ಪೂರ್ತಿ ಇರುತ್ತದೆ.

Kannada Rajyotsava 2022: Tibetans dance to Kannada song; video goes viral

ಕನ್ನಡ ನಾಡು, ನುಡಿಯ ವಿಷಯಕ್ಕೆ ಬಂದರೆ ಯಾವ ಕನ್ನಡಿಗನೂ ಸಹಿಸಲ್ಲ. ಅದೇ ನಮ್ಮ ನಾಡನ್ನು ಇಷ್ಟಪಡುವವರನ್ನು ನಮ್ಮ ಭಾಷೆಯನ್ನು ಇಷ್ಟಪಡುವವರನ್ನು ಕಂಡ್ರೆ ನಮಗೆ ಅಷ್ಟೇ ಪ್ರೀತಿ.

ನಮ್ಮ ಕರ್ನಾಟಕವನ್ನು ನೋಡಿದರೆ ಇಡೀ ಭಾರತದ ದೇಶದ ಪ್ರತಿಬಿಂಬವಾಗಿ ಕಾಣುವುದು. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆಯೋ ಕರ್ನಾಟಕದಲ್ಲೂ ಅದನ್ನು ಕಾಣಬಹುದು. ವಿವಿಧ ರಾಜ್ಯದ ಜನರು ಬದುಕನ್ನು ಕಟ್ಟಿಕೊಳ್ಳಲು ನಮ್ಮ ಕರ್ನಾಟಕಕ್ಕೆ ಬರುತ್ತಿದ್ದಾರೆ ಇನ್ನು ನಿರಾಶ್ರಿತರಾದ ಟಿಬೆಟಿಯನ್ನರಿಗೂ ನೆಲೆ ನೀಡಿದೆ. ಕುಶಾಲನಗರದ ಬೈಲುಕುಪ್ಪೆಗೆ ಹೋದರೆ ಅಲ್ಲಿ ಕಾಣಸಿಗುವುದು ಟಿಬೆಟಿಯನ್ನರೇ... ಅವರಿಂದಲೇ ತುಂಬಿರುವ ಆ ಸ್ಥಳದಲ್ಲಿ ಗೋಲ್ಡನ್‌ ಟೆಂಪಲ್‌ ಪ್ರಮುಖ ಆಕರ್ಷಣೆಯ ಕೇಂದ್ರವೂ ಹೌದು.

ಟೆಬೆಟಿಯನ್ನರು ಭಾರತಕ್ಕೆ ಬಂದು ಹಲವಾರು ವರ್ಷಗಳು ಕಳೆದಿರುವುದರಿಂದ ಅವರಲ್ಲಿ ಅನೇಕರಿಗೆ ಸ್ಪಷ್ಟವಾದ ಕನ್ನಡ ಬರುತ್ತದೆ. ವ್ಯಾಪಾರ- ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡುತ್ತಾರೆ.

ಇದೀಗ ಟಿಬೆಟ್ ಲಾಮಗಳ ಗುಂಪು ಕನ್ನಡ ಹಾಡಿಗೆ ಹೆಜ್ಜೆ ಹಾಕುತ್ತಾ ಕರ್ನಾಟಕ ರಾಜ್ಯೋತ್ಸವ ಸಂಭ್ರಮಿಸಿದ ಪರಿ ತುಂಬಾನೇ ವೈರಲ್ ಆಗಿದೆ.

ಕನ್ನಡಿಗರು ಕನ್ನಡ ಮಾತನಾಡುವ ಬದಲು ಬೇರೆ ಭಾಷೆ ಮಾತನಾಡುವ ಕೆಟ್ಟ ಗುಣ ಈಗ ದೂರಾಗುತ್ತಿದೆ. ಕನ್ನಡದ ಸಿನಿಮಾಗಳು ದೊಡ್ಡ ಮಟ್ಟಿಗೆ ಸಕ್ಸಸ್ ಪಡೆದ ಬಳಿಕ, ಈಗ ಕನ್ನಡದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ, ಸಿರಿಗನ್ನಡ ಗೆಲ್ಗೆ....

English summary

Kannada Rajyotsava 2022: Tibetans dance to Kannada song; video goes viral

Kannada Rajyotsava :Tibetans dance at kushalnagar f0r kannada song, read on..
X
Desktop Bottom Promotion