For Quick Alerts
ALLOW NOTIFICATIONS  
For Daily Alerts

ಕಷ್ಟ ಕಾರ್ಪಣ್ಯದಿಂದ ಮುಕ್ತಿ ಹೊಂದಲು ಮಹಾಕಾಲಭೈರವನನ್ನು ಪೂಜಿಸೋಣ

|

ನಿಮ್ಮೆಲ್ಲಾ ಕಷ್ಟಗಳನ್ನು ನಿವಾರಿಸುವ ಚಿಂತೆಯಿಂದ ಮುಕ್ತಿ ದೊರೆಯುವ ಮಾರ್ಗ ನಿಮಗೆ ದೊರೆತಲ್ಲಿ ನಿಮಗೆ ಎಷ್ಟು ಸಂತೋಷವಾಗುತ್ತದೆ ಅಲ್ಲವೇ? ಜೀವನದಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾದಾಗ ಅದು ನಮ್ಮನ್ನು ಒತ್ತಡದಿಂದ ಜೀವಿಸುವಂತೆ ಮಾಡುತ್ತದೆ. ಸುಖ, ಶಾಂತಿ ಸಮಾಧಾನಗಳು ನಮ್ಮ ಜೀವನದಲ್ಲಿ ದೊರೆಯುವುದೇ ಇಲ್ಲ ಎಂಬ ಖಿನ್ನತೆ ನಮ್ಮನ್ನು ಆವರಿಸುತ್ತದೆ. ಕಷ್ಟಗಳು ಹೆಚ್ಚು ನಮ್ಮನ್ನು ಕಾಡಿದಾಗ ನಾವು ಅದನ್ನು ಭಗವಂತ ಎದುರು ಹೊರಹಾಕುತ್ತೇವೆ.

ನಮಗೆ ಮಾತ್ರ ಭಗವಂತ ಕಷ್ಟಗಳನ್ನು ನೀಡುತ್ತಿರುತ್ತಾರೆ ಎಂಬ ಭಾವನೆ ನಮ್ಮ ಮನದಲ್ಲಿ ಬೇರೂರುತ್ತದೆ. ಕಷ್ಟಗಳನ್ನು ನೀಡುವ ಭಗವಂತನೇ ಅದಕ್ಕೆ ಪರಿಹಾರವನ್ನು ನೀಡುತ್ತಾರೆ ಎಂಬ ಅಂಶವನ್ನು ನಾವು ದುಃಖದ ಭರದಲ್ಲಿ ಮರೆತು ಬಿಡುತ್ತೇವೆ. ಆತನ ಮಕ್ಕಳಾಗಿರುವ ನಾವೆಲ್ಲರೂ ಎಂದೆಂದಿಗೂ ದುಃಖದಲ್ಲಿ ಒತ್ತಡದಲ್ಲಿ ಬೇಯುವುದಿಲ್ಲ. ಏಕೆಂದರೆ ಸರ್ವಶಕ್ತನು ತನ್ನ ಕಂದ ಬಳಲುವುದನ್ನು ನೋಡಲು ಇಷ್ಟಪಡುವುದಿಲ್ಲ. ಬದಲಿಗೆ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿ ಕಷ್ಟವನ್ನು ಉಣಿಸುತ್ತಾನೆ.

ವೇದ, ಪುರಾಣಗಳಲ್ಲಿ ಕಷ್ಟಗಳಿಂದ ಹೊರಬರುವ ಹಲವಾರು ದಾರಿಗಳನ್ನು ದೇವರು ನೀಡಿದ್ದು ಆ ದಾರಿಯನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಇಂತಹುದೇ ವಿಧಾನಗಳಲ್ಲಿ ಒಂದಾಗಿದೆ ಕಾಲಾಷ್ಟಮಿ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಈ ದಿನ ಪರಿಹಾರವನ್ನು ನೀಡುತ್ತದೆ.

kalashtami

ಕಾಲಾಷ್ಟಮಿ ಮಹತ್ವವೇನು
ಪೂರ್ಣಮಿಯ ನಂತರ ಎಂಟನೇ ದಿನವನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ಪೂರ್ಣ ಚಂದ್ರನು ಆಗಸದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಕೃಷ್ಣ ಪಕ್ಷದಲ್ಲಿ ಇದು ಬರುತ್ತದೆ. ಈ ದಿನ ಕಾಲಾಷ್ಟಮಿಯು ಏಪ್ರಿಲ್ 7 ರಂದು ಬರಲಿದೆ. ಭಗವಂತ ಕಾಲಭೈರವ ಈ ದಿನ ಜನಿಸಿದರು ಎಂಬುದಾಗಿ ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಈ ದಿನ ಕಾಲಭೈರವನನ್ನು ಪೂಜಿಸಲಾಗುತ್ತದೆ. ಕಾಲಭೈರವ ಜಯಂತಿ ಅಥವಾ ಕಾಲಭೈರವ ಅಷ್ಟಮಿ ಎಂಬುದಾಗಿ ಕೂಡ ಈ ದಿನವನ್ನು ಕರೆಯಲಾಗುತ್ತದೆ. ಸಮಯವನ್ನು ಕಾಲವು ಪ್ರತಿನಿಧಿಸುತ್ತಿದ್ದು ಮರಣವನ್ನು ಇದು ಸೂಚಿಸುತ್ತದೆ. ಯಮ ರಾಜ ಮರಣಕ್ಕೆ ದೇವತೆಯಾಗಿದ್ದರೂ ಕಾಲನ ಆಜ್ಞೆ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಕಾಲಭೈರವ ಅಷ್ಟಮಿ ಎಂಬುದಾಗಿ ಈ ದಿನವನ್ನು ಕರೆಯಲಾಗುತ್ತದೆ.

ಕಾಲಭೈರವನ ಅನುಗ್ರಹಕ್ಕಾಗಿ ಭೈರವ ಮಂತ್ರಗಳು

ಭಗವಾನ್ ಶಿವನನ್ನು ಕಾಲಭೈರವನ ರೂಪದಲ್ಲಿ ಪೂಜಿಸುವುದರಿಂದ ನಿಮ್ಮೆಲ್ಲಾ ಸಂಕಷ್ಟಗಳು ದೂರಾಗಲಿವೆ. ಕಾಲಭೈರವ ಕಪ್ಪು ನಾಯಿಯ ಮೇಲೆ ಕುಳಿತುಕೊಂಡು ಕೋಪ ಸ್ವರೂಪದಲ್ಲಿ ಇರುತ್ತಾರೆ.

ಕಾಳಹಸ್ತಿ ಪೂಜೆಯನ್ನು ನಡೆಸುವುದು ಹೇಗೆ?
ಕಾಲಭೈರವನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆಯನ್ನು ನೆರವೇರಿಸುವುದು ನಿತ್ಯವೂ ಭಕ್ತರು ಮಾಡುವ ಸಂಗತಿಯಾಗಿದೆ. ಭಕ್ತರು ಕಾಲಭೈರವ ಅಷ್ಟಕವನ್ನು ಈ ದಿನ ಹೇಳಲಿದ್ದು ಕಪ್ಪು ನಾಯಿಗೆ ಆಹಾರವನ್ನು ನೀಡುತ್ತಾರೆ. ಹಾಲಿನ ಉತ್ಪನ್ನಗಳನ್ನು ನಾಯಿಗೆ ನೀಡಲಾಗುತ್ತದೆ. ಈ ದಿನ ಕೆಲವರು ವೃತವನ್ನು ಕೂಡ ಮಾಡುತ್ತಾರೆ. ಈ ದಿನ ವೃತವನ್ನು ಇರಿಸುವುದರಿಂದ ಕಷ್ಟವು ಕಳೆಯುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಈ ದಿನ ಭಕ್ತರು ಕಾಲಸರ್ಪ ಪೂಜೆ, ಶಕ್ತಿ ಪೂಜೆ, ರಕ್ಷಾ ಪೂಜೆಯನ್ನು ನಡೆಸಬಹುದಾಗಿದೆ. ಇನ್ನು ಭಕ್ತರು ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳಬಹುದು. ಈ ರೀತಿಯ ಪೂಜೆಗಳನ್ನು ನಡೆಸುವ ಮುನ್ನ ನೀವು ಅರ್ಚಕರನ್ನು ಭೇಟಿ ಮಾಡಿ ಯಾವ ರೀತಿಯ ಪೂಜೆ ನಡೆಸಬೇಕು ಎಂದು ಕೇಳುವುದು ಉತ್ತಮವಾಗಿದೆ.

ಕಾಲಾಷ್ಟಮಿಯ ಹಿಂದಿರುವ ಕಥೆ
ಆದಿತ್ಯ ಪುರಾಣದಲ್ಲಿ ಈ ದಿನದ ಮಹತ್ವವನ್ನು ತಿಳಿಸಲಾಗಿದೆ. ಒಮ್ಮೆ ಮೂವರು ದೇವರಾದ ಬ್ರಹ್ಮ, ವಿಷ್ಣು ಮತ್ತು ಶಿವನ ನಡುವೆ ಯಾರು ಶ್ರೇಷ್ಠರು ಎಂಬುದಾಗಿವಾಗ್ವಾದ ನಡೆಯುತ್ತದೆ. ಬ್ರಹ್ಮನು ಶಿವನ ಕುರಿತಾಗಿ ಕೆಲವೊಂದು ಮಾತುಗಳನ್ನು ಹೇಳುತ್ತಾರೆ. ಸಭೆಯಲ್ಲಿ ಶಿವನ ಬಗ್ಗೆ ಪಂಡಿತರು ಋಷಿಗಳು ಹೇಳಿದ ಮಾತಿಗೆ ಬ್ರಹ್ಮನು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಮೂವರೂ ದೇವತೆಗಳು ಸಮಾನ ಶಕ್ತಿಯನ್ನು ಹೊಂದಿದ್ದಾರೆ ಎಂಬ ಮಾತಿಗೆ ಬ್ರಹ್ಮನು ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ.

ಇದರಿಂದ ಶಿವನು ಕ್ರೋಧಗೊಳ್ಳುತ್ತಾರೆ. ಹೆಚ್ಚು ಶಾಂತ ದೇವತೆ ಎಂದೇ ಕರೆಯಿಸಿಕೊಳ್ಳುವ ಶಿವನಿಗೆ ಕೂಡ ಬ್ರಹ್ಮನ ಮಾತು ಕೋಪವನ್ನು ತರಿಸುತ್ತದೆ. ಬ್ರಹ್ಮನ ವಾದವನ್ನು ಅಲ್ಲಗೆಳೆಯುವುದಕ್ಕಾಗಿ ಶಿವನು ಮಹಾಕಾಳೇಶ್ವರ ರೂಪವನ್ನು ಧರಿಸಿ ಬ್ರಹ್ಮನ ತಲೆಯನ್ನು ತುಂಡರಿಸುತ್ತಾರೆ.

ಶಿವನ ಈ ಹೊಸ ರೂಪವನ್ನು ನೋಡಿ ದೇವತೆಗಳು ಹೆದರಿ ಶಿವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾರೆ ಮತ್ತು ಬ್ರಹ್ಮನಿಗೆ ಕೂಡ ತಮ್ಮ ತಪ್ಪಿನ ಅರಿವಾಗುತ್ತದೆ. ಆದ್ದರಿಂದಲೇ ಈ ದಿನವನ್ನು ಮಹಾಕಾಳ ಅಷ್ಟಮಿ ಎಂದು ಕರೆಯಲಾಗುತ್ತದೆ. ಈ ಮಹಾಕಾಲ ಅಷ್ಟಮಿಯಂದು ನಮ್ಮ ಸುತ್ತಲಿರುವ ಋಣಾತ್ಮಕ ಅಂಶವನ್ನು ನಿವಾರಿಸಿಕೊಳ್ಳೋಣ ಹಾಗೂ ನಮ್ಮ ಮನದಲ್ಲಿ ಧನಾತ್ಮಕ ಅಂಶಗಳನ್ನು ತುಂಬಿಕೊಳ್ಳೋಣ. ಜೊತೆಗೆ ಪೂಜೆಯನ್ನು ಮಾಡಿ ಭಗವಂತ ಶಿವನ ಅನುಗ್ರಹವನ್ನು ಪಡೆದುಕೊಳ್ಳೋಣ....

English summary

kalashtami-will-drive-away-all-the-negativies-from-your-life

Kalashtmi is the the eighth day after the Poornima that is the full moon day. So, it falls in the Krishna Paksh. This year, the day falls on 7th of April, which is a Saturday. This is the day when lord Kaalbhairav was born. So, on this day, Kaalbhairav is worshipped. Hence, it is also known as Kaalbhairav Jayanti and also Kaalbhairav Ashtmi. Kaal means time and it also denotes the lord of death, Yamdev. Yamdev is actually the fierce from of Lord Shiva, the lord of destruction. And this is how Kaalashtmi derives it name.
X
Desktop Bottom Promotion