For Quick Alerts
ALLOW NOTIFICATIONS  
For Daily Alerts

ಜ.25ಕ್ಕೆ ಕಾಲಾಷ್ಟಮಿ, ಈ ದಿನ ಮಹತ್ವವೇನು? ಪೂಜಾ ವಿಧಿಗಳೇನು?

|

ಜನವರಿ 25ಕ್ಕೆ ಕಾಲಾಷ್ಟಮಿ. ಪ್ರತೀ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ವ್ರತವನ್ನು ಆಚರಿಸಲಾಗುವುದು. ಈ ದಿನ ಕಾಲ ಭೈರವನನ್ನು ಅಂದ್ರೆ ಶಿವನನ್ನು ಪೂಜಿಸಲಾಗುವುದು. ಈ ದಿನ ಉಪವಾಸವಿದ್ದು ಅವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದೆ ಶಿವನ ಸಂತುಷ್ಟನಾಗಿ ನಮ್ಮ ಸಂಕಲ್ಪವನ್ನು ನೆರವೇರಿಸುತ್ತಾನೆ. ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಬರುವ ಕಾಲಾಷ್ಟಮಿ ತುಂಬಾನೇ ಮಹತ್ವವನ್ನು ಪಡೆದಿದೆ.

ಕಾಲ ಭೈರವನನ್ನು ಬಟುಕ ಭೈರವ ಎಂದು ಕೂಡ ಹೇಳಲಾಗುವುದು. ಬಟುಕ ಬೈರವ ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ನಾಯಿಗೆ ಆಹಾರ ನೀಡಿದರೆ ಕಾಲ ಭೈರವನಿಗೆ ಸಂತೋಷವಾಗುವುದು.

ಕಾಲಾಷ್ಟಮಿ ಮಹತ್ವ, ಅಷ್ಟಮಿ ತಿಥಿ ಸಮಯ, ಪೂಜಾ ವಿಧಾನ ತಿಳಿಯಲು ಮುಂದೆ ಓದಿ:

ಅಷ್ಟಮಿ ತಿಥಿ ಸಮಯ

ಅಷ್ಟಮಿ ತಿಥಿ ಸಮಯ

ದಿನಾಂಕ: ಜನವರಿ 25

ತಿಥಿ ಪ್ರಾರಂಭ: ಜನವರಿ 25 ಬೆಳಗ್ಗೆ 7:49ಕ್ಕೆ

ತಿಥಿ ಮುಕ್ತಾಯ: ಜನವರಿ 26 ಬೆಳಗ್ಗೆ 6:25ಕ್ಕೆ

ಕಾಲಾಷ್ಟಮಿ ಮಹತ್ವ:

ಕಾಲಾಷ್ಟಮಿ ಮಹತ್ವ:

ಈ ದಿನ ಭಕ್ತರು ಕಾಲ ಭೈರವನ ಜೊತೆಗೆ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುವುದು. ಕಾಲಾಷ್ಟಮಿ ವ್ರತ ಮಾಡುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು, ಸಂತೋಷ, ಯಶಸ್ಸು ಪ್ರಾಪ್ತಿಯಾಗುವುದು. ಈ ದಿನ ಕಾಲ ಭೈರವನನ್ನು ಪೂಜಿಸುವುದರಿಂದ ರಾಹು ಮತ್ತು ಶನಿ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುವುದು.

ಕಾಲಾಷ್ಟಮಿಯ ಪೂಜೆಯ ಮಹತ್ವ

ಕಾಲಾಷ್ಟಮಿಯ ಪೂಜೆಯ ಮಹತ್ವ

* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಶುದ್ಧವಾದ ಬಟ್ಟೆ ತೊಟ್ಟು ಸ್ಪೆಷಲ್ ಪೂಜೆ ಮಾಡಬೇಕು. ಈ ದಿನ ಪಿತೃಗಳಿಗೂ ಪೂಜೆ ಮಾಡಬೇಕು.

* ರಾತ್ರ ಜಾಗರಣೆ ಮಾಡಬೇಕು, ರಾತ್ರಿ ಶಿವನ ಮಂತ್ರಗಳನ್ನು ಹೇಳುತ್ತಾ, ಕಾಲಭೈರವನ ಕತೆಗಳನ್ನು ಓದುತ್ತಾ ಕಾಲ ಕಳೆಯಬೇಕು.

* ಮಧ್ಯರಾತ್ರಿ ಶಂಖ ಊದುವುದು, ಗಂಟೆ ಬಾರಿಸುತ್ತಾ ಮಂತ್ರಗಳನ್ನು ಹೇಳುವುದು ಒಳ್ಳೆಯದು.

* ಕೆಲವರು ಈ ದಿನ ಪೂರ್ತಿ ಉಪವಾಸ ಇರುತ್ತಾರೆ.

* ಈ ದಿನ ನಾಯಿಗೆ ಹಾಲು, ಆಹಾರವನ್ನು ನೀಡಲಾಗುವುದು.

ಕಾಲಾಷ್ಟಮಿ ವ್ರತ ಮಂತ್ರ

ಕಾಲಾಷ್ಟಮಿ ವ್ರತ ಮಂತ್ರ

"ಓಂ ಭಯಹರಣಂ ಚ ಭೈರವಃ|

ಓಂ ಕಾಲಭೈರವಾಯ ನಮಃ|

ಓಂ ಹ್ರೀಂ ಬಂ ಬಟುಕಾಯ ಆಪದುದ್ಧಾರಣಾಯ ಕುರೂಕುರೂ ಬಟುಕಾಯ ಹ್ರೀಂ|

ಓಂ ಭ್ರಂ ಕಾಲಭೈರವಾಯ ಫಟ್‌|"

English summary

Kalashtami January 2022 Date, Tithi, Rituals, Puja Muhurat And Importance in Kannada

Kalashtami fast is kept on the Ashtami of Krishna Paksha of every month. Let us know the worship method of Kalbhairav and the importance of this fast.
Story first published: Monday, January 24, 2022, 17:35 [IST]
X
Desktop Bottom Promotion