For Quick Alerts
ALLOW NOTIFICATIONS  
For Daily Alerts

ಶರದ್ ಪೂರ್ಣಿಮಾ ಕುರಿತ ಕೆಲವೊಂದು ಆಸಕ್ತಿಕರ ಸಂಗತಿಗಳು

|

ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳಲ್ಲಿ ಒಂದು ಹುಣ್ಣಿಮೆ ಹಾಗೂ ಅಮವಾಸ್ಯೆಯು ಬರುವುದು. ಹೆಚ್ಚಾಗಿ ಇಂತಹ ಹುಣ್ಣಿಮೆ ಹಾಗೂ ಅಮವಾಸ್ಯೆಗಳಿಗೆ ಅದು ಬರುವಂತಹ ಸಮಯಕ್ಕೆ ಅನುಗುಣವಾಗಿ ಹೆಸರುಗಳನ್ನು ಇಡಲಾಗುತ್ತದೆ. ಮಹಾಲಯ ಅಮವಾಸ್ಯೆ, ಸೋಮವತಿ ಅಮವಾಸ್ಯೆ ಇತ್ಯಾದಿ. ಹುಣ್ಣಿಮೆಗೂ ಹಾಗೆ ಕೆಲವೊಂದು ಹೆಸರುಗಳಿಗೆ.

Interesting Facts about Sharad Purnima Festival

ಇದರಲ್ಲಿ ಶರದ್ ಹುಣ್ಣಿಮೆ ಕೂಡ ಒಂದು. ಶರದ್ ಹುಣ್ಣಿಮೆಯನ್ನು ಕೋಜಗರಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ವಿಜಯದಶಮಿ ಅಥವಾ ದಸರಾದ ಐದನೇ ದಿನದಂದು ಬರುವ ಹುಣ್ಣಿಮೆಯೇ ಶರದ್ ಹುಣ್ಣಿಮೆ.

ಈ ದಿನದಂದು ಚಂದ್ರನು ಭೂಮಿಯ ಮೇಲಿನ ಅಮೃತ(ಜೀವನ)ವನ್ನು ಶುದ್ಧೀಕರಿಸುತ್ತಾನೆ ಎಂದು ಹೇಳಲಾಗುತ್ತದೆ. ಈ ಹಬ್ಬವು ಅಕ್ಟೋಬರ್ 19ರಂದು ಬಂದಿದೆ. ಇದರ ಬಗ್ಗೆ ಇನ್ನಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯಿರಿ.

ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಹಬ್ಬವು ಶರದ್(ಬಿತ್ತನೆ) ಋತುವನ್ನು ಹೇಳುತ್ತದೆ. ಇದನ್ನು ಹೊರತುಪಡಿಸಿ, ಈ ದಿನವು ನಿಮಗೆ ಒಳ್ಳೆಯ ಅದೃಷ್ಟ ಮತ್ತು ಸಂಪತ್ತನ್ನು ತರುವುದು. ಶರದ್ ಹುಣ್ಣಿಮೆಯಂದು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು.

ಲಕ್ಷ್ಮೀ ಹುಟ್ಟಿದ ದಿನ

ಲಕ್ಷ್ಮೀ ಹುಟ್ಟಿದ ದಿನ

ಶರದ್ ಪೂರ್ಣಿಮೆಯಂದು ಲಕ್ಷ್ಮೀ ದೇವಿಯು ಹುಟ್ಟಿರುವರು ಎಂದು ಹೇಳಲಾಗುತ್ತದೆ. ಈ ದಿನ ಉಪವಾಸ ಮಾಡುವಂತಹವರು ಉಪವಾಸ ವ್ರತ ಮುಗಿಸಲು ತಣ್ಣಗಿನ ಹಾಲಿಗೆ ಅಕ್ಕಿ ಹೊಟ್ಟು ಹಾಕಿ ಸೇವಿಸಬೇಕು.

ಪಿತ್ತ ದೋಷ

ಪಿತ್ತ ದೋಷ

ತಣ್ಣಗಿನ ಹಾಲು ಹಾಗೂ ಅಕ್ಕಿಯ ಹೊಟ್ಟನ್ನು ಸೇರಿಸಿಕೊಂಡು ಕುಡಿದರೆ ಅದರಿಂದ ದೇಹದಲ್ಲಿ ಪಿತ್ತ ದೋಷವು ಕಡಿಮೆಯಾಗುವುದು ಮತ್ತು ಅಸಿಡಿಟಿಯನ್ನು ಕಡಿಮೆ ಮಾಡುವುದು.

Most Read: ಪೂಜಾ ರೂಮ್‌ನಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ವಿವಾಹವಾಗದೆ ಇರುವ ಹುಡುಗಿಯರು

ವಿವಾಹವಾಗದೆ ಇರುವ ಹುಡುಗಿಯರು

ವಿವಾಹವಾಗದೆ ಇರುವಂತಹ ಹುಡುಗಿಯರು ತಮಗೆ ಒಳ್ಳೆಯ ಸುಂದರ ಪತಿ ಬೇಕೆಂದು ಬಯಸುವುದಾದರೆ ಆಗ ಅವರು ಈ ದಿನ ಸೂರ್ಯ ಹಾಗೂ ಚಂದ್ರರನ್ನು ಪೂಜಿಸಬೇಕು.

ಪ್ರಾರ್ಥನೆ

ಪ್ರಾರ್ಥನೆ

ಈ ದಿನ ಉಪವಾಸ ಮಾಡುವಂತಹ ಹುಡುಗಿಯರು ಬೇಗನೆ ಎದ್ದು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಸಂಜೆ ವೇಳೆ ಇದೇ ರೀತಿ ಚಂದ್ರನಿಗೆ ಪ್ರಾರ್ಥನೆ ಸಲ್ಲಿಸಬೇಕು. ಉಪವಾಸ ಬಿಡಲು ಹಾಲಿನ ಉತ್ಪನ್ನ ಸೇವಿಸಬೇಕು.

ರಾಸ ಲೀಲಾ

ರಾಸ ಲೀಲಾ

ಶರದ್ ಹುಣ್ಣಿಮೆಯಂದು ಕೃಷ್ಣವು ರಾಧಾಳ ಜತೆಗೆ ತನ್ನ ರಾಸಲೀಲೆಯನ್ನು ಆರಂಭಿಸಿದ ಎನ್ನಲಾಗುತ್ತದೆ. ರೈತರಿಗೆ ಇದು ತುಂಬಾ ಸಮೃದ್ಧಿಯನ್ನು ತರುವುದು.

ಪ್ರೀತಿ ಹಾಗೂ ಸಮೃದ್ಧಿ

ಪ್ರೀತಿ ಹಾಗೂ ಸಮೃದ್ಧಿ

ಈ ದಿನ ಕೃಷ್ಣ ದೇವರು ಹಾಗೂ ಲಕ್ಷ್ಮೀ ದೇವಿಗೆ ಪ್ರಾರ್ಥನೆ ಮಾಡುವವರಿಗೆ ಜೀವನದಲ್ಲಿ ಪ್ರೀತಿ ಹಾಗೂ ಸಂಪತ್ತು ಲಭ್ಯವಾಗುವುದು.

ಬಂಗಾಳ

ಬಂಗಾಳ

ಬಂಗಾಳದಲ್ಲಿ ಲಕ್ಷ್ಮೀ ದೇವಿಯನ್ನು ಮಾ ಲೊಕ್ಕಹಿ ಎಂದು ಕರೆಯಲಾಗುತ್ತದೆ. ಈ ದಿನ ಪ್ರತಿಯೊಬ್ಬ ಬಂಗಾಳಿಗಳ ಮನೆಯ ಬಾಗಿಲಿಗೆ ಅಲ್ತಾದಿಂದ ಶೃಂಗರಿಸಲಾಗುತ್ತದೆ.

Most Read: ಮದುವೆಗೆ ಸಮಸ್ಯೆಗಳು ಎದುರಾದರೆ-ಕಾತ್ಯಾಯಿನಿ ದೇವಿಯನ್ನು ಪೂಜಿಸಿ

ಪ್ರಾರ್ಥನೆ

ಪ್ರಾರ್ಥನೆ

ಇದರ ಹೊರತಾಗಿ ಲಕ್ಷ್ಮೀ ದೇವಿಗೆ ವಿಶೇಷ ಸಿಹಿ ನೀಡಲಾಗುತ್ತದೆ. ನರ್ಕೆಲ ನಾಡು ಎನ್ನುವುದು ಈ ದಿನ ಮಾಡುವಂತಹ ವಿಶೇಷ ಸಿಹಿ ತಿಂಡಿ. ಇದರ ಹೊರತಾಗಿ ಹಣ್ಣುಗಳು ಹಾಗೂ ಒಣಹಣ್ಣುಗಳನ್ನು ಕೂಡ ದೇವಿಗೆ ಸಮರ್ಪಿಸಲಾಗುತ್ತದೆ.

ಉತ್ತರ ಭಾರತ

ಉತ್ತರ ಭಾರತ

ಉತ್ತರ ಪ್ರದೇಶದಲ್ಲಿ ಅದರಲ್ಲೂ ವೃಂದಾವನದಲ್ಲಿ ಯುವಕರು ಹಾಗೂ ಯುವತಿಯರು ರಾಧಾ ಮತ್ತು ಕೃಷ್ಣನ ರಾಸಲೀಲೆಯ ಹಾಡುಗಳಿಗೆ ಹೆಜ್ಜೆ ಹಾಕುವರು.

ಪೂಜೆ

ಪೂಜೆ

ಸಾಂಪ್ರದಾಯಿಕವಾಗಿರುವಂತಹ ಶರದ್ ಪೂರ್ಣಿಮೆ ಪೂಜೆಯನ್ನು ಪಾಯಸ, ದೇವರಿಗೆ ಬಿಳಿಬಟ್ಟೆಯ ಶೃಂಗಾರ, ನೀರು, ವೀಲ್ಯದೆಳೆ, ಅಕ್ಕಿ ಮತ್ತು ಗೋಧಿ ಕಾಳುಗಳಿಂದ ತುಂಬಿರುವಂತಹ ಕಲಶವನ್ನು ಇಡುವುದರೊಂದಿಗೆ ಮಾಡಲಾಗುತ್ತದೆ.

ಭೂಮಿಗೆ ಆಶೀರ್ವಾದ

ಭೂಮಿಗೆ ಆಶೀರ್ವಾದ

ಈ ದಿನದಂದು ತನ್ನನ್ನು ಪೂಜಿಸುವಂತಹ ಪ್ರತಿಯೊಬ್ಬರಿಗೂ ದೇವಿ ಲಕ್ಷ್ಮೀಯು ಆಶೀರ್ವಾದ ನೀಡುತ್ತಾಳೆಂದು ಹೇಳಲಾಗುತ್ತದೆ.

ಶರದ್ ಪೂರ್ಣಿಮಾ ಕಥಾ

ಶರದ್ ಪೂರ್ಣಿಮಾ ಕಥಾ

ಸಾಂಪ್ರದಾಯಿಕವಾಗಿರುವಂತಹ ಪೂಜೆಯನ್ನು ಮಾಡುವ ಜತೆಗೆ ಶರದ್ ಪೂರ್ಣಿಮಾ ಕಥಾವನ್ನು ಆಲಿಸಬೇಕು. ಯಾವುದೇ ಪೂಜಾಸಾಮಗ್ರಿ ಅಂಗಡಿಗಳಲ್ಲಿ ಇದು ಲಭ್ಯವಿರುವುದು.

ಗಣೇಶ ಕಥಾ

ಗಣೇಶ ಕಥಾ

ಪೂಜೆಯ ಬಳಿಕ ಗಣೇಶ ಕಥಾವನ್ನು ಓದಬೇಕು. ಕಥಾವನ್ನು ಪೂರ್ಣಗೊಳಿಸಿದ ಬಳಿಕ ಪ್ರಸಾದ ನೀಡಲಾಗುತ್ತದೆ. ಗೋಧಿ ಕಾಳುಗಳನ್ನು ದೇವಿಗೆ ಅರ್ಪಿಸಲಾಗುವುದು.

English summary

Interesting Facts about Sharad Purnima Festival

Sharad Purnima, also known as Kojaagari Purnima is celebrated on a full moon day, 5 days after Vijaydakshami or Dussehra ---- it is said that on this day, the Moon filters the elixir of life (amrit) on the earth. The festival is falling today, October 23.
X
Desktop Bottom Promotion