For Quick Alerts
ALLOW NOTIFICATIONS  
For Daily Alerts

ಭಾರತೀಯ ಹಿಂದೂ ಧರ್ಮದ ಆಚರಣೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳು

|

ಹಿಂದೂ ಧರ್ಮ ಅದರಲ್ಲೂ ಭಾರತದಲ್ಲಿ ಇರುವಂತಹ ಕೆಲವೊಂದು ಆಚರಣೆಗಳ ಹಿಂದೆ ವೈಜ್ಞಾನಿಕವಾದ ಕಾರಣಗಳು ಇವೆ ಎಂದು ಹಲವಾರು ಸಂಶೋಧನೆಗಳಿಂದಲೂ ಸಾಬೀತು ಆಗಿದೆ. ಇದರಿಂದಾಗಿಯೇ ಇಂದಿನ ದಿನಗಳಲ್ಲಿ ವಿದೇಶಿಯರು ಕೂಡ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಹೆಚ್ಚು ವಿದೇಶಿಯರು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ ಅಂದರೆ ಭಾರತೀಯತೆಗೆ ಮಾರು ಹೋಗಿದ್ದಾರೆ. ಭಾರತದಲ್ಲಿ ಹಲವಾರು ಧರ್ಮಗಳು ಇದ್ದರೂ ಇಲ್ಲಿನ ಕೆಲವೊಂದು ಆಚರಣೆಗಳು ಮಾತ್ರ ಸಮಾನವಾಗಿದೆ. ಭಾರತದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ಹಲವಾರು ವಿಧದ ಆಚರಣೆಗಳು ಇವೆ. ಭಾರತದದಲ್ಲಿ ಪ್ರತಿಯೊಬ್ಬರು ತಮ್ಮ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಇದೆಲ್ಲವನ್ನು ಅನುಸರಿಸಿಕೊಂಡು ಹೋಗುವರು. ಕೆಲವೊಂದು ಆಚರಣೆಗಳ ಬಗ್ಗೆ ಇಂದು ಕೂಡ ಅಧ್ಯಯನಗಳು ನಡೆಯುತ್ತಲೇ ಇದೆ. ಭಾರತದಲ್ಲಿ ಪ್ರತೀ ರಾಜ್ಯಕ್ಕೆ ತನ್ನ ಆಗಿರುವಂತಹ ಸಂಸ್ಕೃತಿ ಮತ್ತು ಆಚರಣೆಗಳು ಇವೆ. ವಿಶ್ವವೇ ಇಂದು ಭಾರತದ ಆಚರಣೆಗಳ ಕಡೆ ನೋಡುತ್ತಲಿದೆ. ಕೆಲವೊಂದು ರಾಷ್ಟ್ರಗಳು ಈ ಬಗ್ಗೆ ಗೇಲಿ ಮಾಡಿದರೂ ಅವುಗಳು ಕೂಡ ಸಂಶೋಧನೆಯ ವರದಿ ಬಳಿಕ ಎಚ್ಚೆತ್ತುಕೊಂಡಿವೆ.

ದೇವಸ್ಥಾನದಲ್ಲಿ ಗಂಟೆಗಳನ್ನು ಅಳವಡಿಸಿಕೊಂಡಿರುವುದು ಯಾಕೆ ಮತ್ತು ಒಬ್ಬರು ದೇವಾಲಯದ ಒಳಗಡೆ ಹೋದಾಗ ಗಂಟೆ ಬಡಿಯುವುದು ಯಾಕೆ? ಮದುವೆಯಾಗುವಂತಹ ಹುಡುಗಿಯು ತನ್ನ ಕೈಗೆ ಮದರಂಗಿ ಹಚ್ಚಿಕೊಳ್ಳುವುದು ಯಾಕೆ? ಮುಂತಾದ ಪ್ರಶ್ನೆಗಳನ್ನು ಹಲವಾರು ಮಂದಿ ಕೇಳಬಹುದು.

ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಕೂಡ ಇದ್ದರೆ ಆಗ ನೀವು ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಈ ಲೇಖನದಲ್ಲಿ ನಾವು ನಿಮಗೆ ಉತ್ತರ ನೀಡಲಿದ್ದೇವೆ

ಮೂರ್ತಿಗೆ ಪೂಜೆ ಮಾಡುವುದು

ಮೂರ್ತಿಗೆ ಪೂಜೆ ಮಾಡುವುದು

ನಾವು ಏನು ನೋಡುತ್ತೇವೆಯೋ ಅದನ್ನು ಮನಸ್ಸು ಬೇಗನೆ ಗ್ರಹಿಸುತ್ತದೆ ಮತ್ತು ಮನಸ್ಸಿನಲ್ಲಿ ಒಂದು ಗುರುತು ಮಾಡಿಕೊಳ್ಳೂತ್ತದೆ. ಇದನ್ನು ಒಂದು ಫೋಟೊ ಅಥವಾ ದೃಶ್ಯದಲ್ಲಿ ರೂಪದಲ್ಲಿ ಅದು ಬಿಂಬಿಸಬಹುದು, ಮೆದುಳು ಅದನ್ನು ವೇಗವಾಗಿ ಪಡೆದುಕೊಳ್ಳುವುದು. ಇದು ನಿಮ್ಮ ಮನಸ್ಸಿನ ಹುರುಪನ್ನು ಹಿಡಿದಿಡಲು ನೆರವಾಗುವುದು.

ಬಳೆಗಳನ್ನು ಧರಿಸುವುದು

ಬಳೆಗಳನ್ನು ಧರಿಸುವುದು

ಬಳೆಗಳನ್ನು ಧರಿಸುವ ಕಾರಣದಿಂದಾಗಿ ದೇಹದ ಒಳಗಿನ ಶಕ್ತಿಯು ಹೊರಗೆ ಬರುವುದು ಮತ್ತು ನೀವು ಮದುವೆಯಾಗಿದ್ದೀರಿ ಎನ್ನುವುದರ ಬಲಿಷ್ಠ ಭಾವನೆಯನ್ನು ಇದು ಉಂಟು ಮಾಡುವುದು. ಇದು ವೈವಾಹಿಕ ಜೀವನದ ಸಂಕೇತವು ಆಗಿದೆ. ಇದು ಆಚೀಚೆ ಚಲಿಸುತ್ತಿರುವ ಕಾರಣದಿಂದಾಗಿ ಇದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮ ಪಡಿಸುವುದು. ವೃತ್ತಾಕಾರದಲ್ಲಿ ಇರುವಂತಹ ಬಳೆಗಳು ದೇಹಕ್ಕೆ ಜೀವಂತಿಕೆ ನೀಡುವುದು.

ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು

ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು

ತನಗಿಂತ ಹಿರಿಯದ ಪಾದ ಮುಟ್ಟಿ ನಮಸ್ಕಾರ ಮಾಡುವುದು ಕೇವಲ ಗೌರವ ಸೂಚಕವಾಗಿ ಮಾತ್ರವಲ್ಲ. ಆದರೆ ಆಗ ವ್ಯಕ್ತಿಯು ಅಂತಹ ವ್ಯಕ್ತಿಯ ಪಾದವನ್ನು ಮುಟ್ಟುವುದು, ಅಪರೂಪವಾಗಿ ಭೇಟಿಯಾಗುವ ವ್ಯಕ್ತಿಯೆನ್ನುವ ಸೂಚನೆ ಕೂಡ. ಹಿರಿಯತ್ವ ಎನ್ನುವುದು ಕೇವಲ ಕಲಿಯುವುದು ಮತ್ತು ಅನುಭವದಲ್ಲಿ ಮಾತ್ರ ಇರುವುದು. ಅವರು ಜೀವನದಲ್ಲಿ ಎಲ್ಲವನ್ನು ಅರಿತುಕೊಂಡಿರುವರು ಮತ್ತು ಇವರು ಹಿರಿಯ ನಾಗರಿಕರು ಎಂದು ಕೂಡ ಕರೆಯಲಾಗುವುದು. ಇಂತಹ ವ್ಯಕ್ತಿಗಳ ಪಾದ ಮುಟ್ಟಿ ನಮಸ್ಕರಿಸುವ ಕಾರಣದಿಂದಾಗಿ ಜೀವಂತಿಕೆಯು ಬರುವುದು. ಇಷ್ಟು ಮಾತ್ರವಲ್ಲದೆ ಕೆಲವು ಹಿರಿಯುರು ತಮ್ಮ ಪಾದ ಮುಟ್ಟಿ ನಮಸ್ಕಾರ ಮಾಡಿದ ಕಾರಣಕ್ಕೆ ಕೆಲವೊಂದು ಉಡುಗೊರೆ ಅಥವಾ ಹಣವನ್ನು ನೀಡುವರು.

Most Read: ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿದರೆ, ಯಶಸ್ಸು ನಿಮ್ಮ ಹಿಂದೆಯೇ ಬರಲಿದೆ!

ಸಿಂಧೂರ ಇಟ್ಟುಕೊಳ್ಳುವುದು

ಸಿಂಧೂರ ಇಟ್ಟುಕೊಳ್ಳುವುದು

ಸಿಂಧೂರವನ್ನು ಪಾದರಸ, ಅರಶಿನ ಮತ್ತು ಲಿಂಬೆ ಬಳಸಿಕೊಂಡು ತಯಾರಿಸಲಾಗುತ್ತದೆ. ಪಾದರಸವು ಮೆದುಳನ್ನು ಕ್ರಿಯಾತ್ಮಕವಾಗಿ, ಎಚ್ಚರಿಕೆಯಿಂದ ಇಡುವುದು. ಇದರ ಹೊರತಾಗಿ ಇದು ನಾಡಿಮಿಡಿತವನ್ನು ನಿಯಂತ್ರಿಸುವುದು. ಇದರಿಂದ ಲೈಂಗಿಕಾಸಕ್ತಿ ಮತ್ತು ಮಾಣಸಿಕ ಪ್ರಚೋದನೆ ಹುರುಪು ಹೆಚ್ಚಾಗುವುದು.

ಉಪವಾಸ

ಉಪವಾಸ

ಕೆಲವೊಂದು ವಿಶೇಷ ದಿನಗಳಲ್ಲಿ ಭಾರತೀಯರು ಹೆಚ್ಚಾಗಿ ಉಪವಾಸ ಮಾಡುವರು. ನಮ್ಮ ದೇಹದಲ್ಲಿ ಹಲವಾರು ವಿಷಕಾರಿ ಅಂಶಗಳು ಜಮೆಯಾಗಿರುವುದು. ಇದರಿಂದ ಉಪವಾಸ ಮಾಡಿದರೆ ಅದರಿಂದ ದೇಹವು ತನ್ನಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಲು ನೆರವಾಗುವುದು. ಇದು ಹೊಟ್ಟೆಯ ಎಲ್ಲಾ ವ್ಯವಸ್ಥೆಯನ್ನು ಶುದ್ಧೀಕರಿಸುವುದು.

ನದಿಗೆ ನಾಣ್ಯ ಎಸೆಯುವುದು

ನದಿಗೆ ನಾಣ್ಯ ಎಸೆಯುವುದು

ರೈಲಿನಲ್ಲಿ ಹೋಗುವಾಗ ಹೊಳೆ ಅಥವಾ ನದಿ ಸಿಕ್ಕಿದರೆ ಆಗ ಕೆಲವು ಮಂದಿ ಅದಕ್ಕೆ ನಾಣ್ಯವನ್ನು ಎಸೆಯುವುದನ್ನು ನೋಡಿದ್ದೇವೆ. ಇದು ಯಾಕೆ ಎಂದು ನಮಗೆ ಅಚ್ಚರಿಯಾಗಿರಬಹುದು. ಹಿಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳು ಇದ್ದರು. ತಾಮ್ರವು ಮಾನವ ದೇಹಕ್ಕೆ ಅದ್ಭುತವಾಗಿ ನೆರವಾಗುವುದು. ಹೊಳೆ ಹಾಗೂ ನದಿಯಿಂದ ಕುಡಿಯುವ ನೀರನ್ನು ಪಡೆಯುವ ಕಾರಣದಿಂದಾಗಿ ತಾಮ್ರದ ನಾಣ್ಯಗಳನ್ನು ನದಿ ಅಥವಾ ಹೊಳೆಗೆ ಎಸೆಯಲಾಗುತ್ತಿತ್ತು. ಆದರೆ ಇದು ಈಗಲೂ ಒಂದು ಸಂಪ್ರದಾಯವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

Most Read: ತಿರುಪತಿಯ ಶ್ರೀನಿವಾಸ/ಬಾಲಾಜಿ ದೇವರಿಗೆ ಮುಡಿಕೊಡುವುದರ ಮಹತ್ವ...

ಅಂಗೈ ಜೋಡಿಸಿ ನಮಸ್ಕಾರ ಮಾಡುವುದು

ಅಂಗೈ ಜೋಡಿಸಿ ನಮಸ್ಕಾರ ಮಾಡುವುದು

ಎರಡು ಅಂಗೈಗಳನ್ನು ಜೋಡಿಸುವುದು ಕಣ್ಣುಗಳು, ಕಿವಿ ಮತ್ತು ಮೆದುಳಿನ ಸಮತೋಲನವನ್ನು ಕಾಪಾಡಿಕೊಳ್ಳುವುದು. ಈ ಮೂಲಕವಾಗಿ ನಾವು ಆ ವ್ಯಕ್ತಿಯನ್ನು ತುಂಬಾ ದೀರ್ಘ ಕಾಲದ ತನಕ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

ಹುಬ್ಬುಗಳ ಮಧ್ಯೆ ಕುಂಕುಮ

ಹುಬ್ಬುಗಳ ಮಧ್ಯೆ ಕುಂಕುಮ

ಹುಬ್ಬುಗಳ ಮಧ್ಯೆ ಕುಂಕುಮವನ್ನು ಇಡುವುದು(ಆಜ್ಞಾ ಚಕ್ರದ ಮಧ್ಯದಲ್ಲಿ) ಮಾನವನ ದೇಹದಲ್ಲಿ ಹುರುಪನ್ನು ಉಂಟು ಮಾಡುವುದು ಮತ್ತು ಸ್ಥೀರಿಕರಣದ ವೈವಿಧ್ಯಮಯ ಆಯಾಮಗಳನ್ನು ಕಾಪಾಡಿಕೊಳ್ಳುವುದು. ಮುಖದಲ್ಲಿನ ಸ್ನಾಯುಗಳಿಗೆ ರಕ್ತ ಸಂಚಾರವು ಸರಿಯಾಗಿ ಆಗಲು ಇದು ನೆರವಾಗುವುದು.

ಕಾಲ್ಬೆರಳಿಗೆ ಉಂಗುರ(ಕಾಲುಂಗುರು) ಧರಿಸುವುದು

ಕಾಲ್ಬೆರಳಿಗೆ ಉಂಗುರ(ಕಾಲುಂಗುರು) ಧರಿಸುವುದು

ಕಾಲುಂಗುರ ಧರಿಸುವ ಕಾರಣದಿಂದ ಗರ್ಭವು ಬಲವಾಗುವುದು. ಇದು ರಕ್ತಪರಿಚಲನೆ ಮತ್ತು ಋತುಚಕ್ರವು ಸರಿಯಾಗಿ ಆಗುವಂತೆ ಮಾಡುವುದು. ಎರಡನೇ ಬೆರಳಿನ ನರಗಳು ನೇರವಾಗಿ ಗರ್ಭಕೋಶಕ್ಕೆ ಸಂಬಂಧ ಹೊಂದಿದೆ. ಇದು ಹೃದಯಕ್ಕೂ ಹೋಗುವುದು. ಬೆಳ್ಳಿಯಿಂದ ಮಾಡಲ್ಪಟ್ಟಿರುವಂತಹ ಕಾಲುಂಗುರವನ್ನು ಮಾತ್ರ ಬಳಸಿಕೊಳ್ಳಬೇಕು. ಇದು ಭೂಮಿಯಿಂದ ಶಕ್ತಿಯನ್ನು ಪಡೆದು ಅದನ್ನು ದೇಹಕ್ಕೆ ವರ್ಗಾಯಿಸುವುದು.

ಪುರುಷರ ತಲೆ ಮೇಲೆ ಸಿಖಾ

ಪುರುಷರ ತಲೆ ಮೇಲೆ ಸಿಖಾ

ಇದು ತಲೆಯಲ್ಲಿ ಸ್ಪರ್ಶವಾಗಿರುವಂತಹ ಸ್ಥಳವಾಗಿದ್ದು ಮತ್ತು ಇದು ಎಲ್ಲವೂ ಸಮಾನವಾಗಿರುವುದು. ಸಿಖಾವು ಈ ಕೇಂದ್ರವನ್ನು ರಕ್ಷಣೆ ಮಾಡುವುದು. ಬ್ರಹ್ಮರಾಂದ್ರಾ ಮತ್ತು ಶಶುನಮ್ ನರವು ತಲೆಯಿಂದ ದೇಹದ ಕೆಳಭಾಗಕ್ಕೆ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಮೆಹಂದಿ ಹಚ್ಚಿಕೊಳ್ಳುವುದು

ಮೆಹಂದಿ ಹಚ್ಚಿಕೊಳ್ಳುವುದು

ಕೈಗಳಿಗೆ ಮೆಹಂದಿ ಹಾಕಿಕೊಳ್ಳುವುದರಿಂದ ದೇಹವು ತುಂಬಾ ಶಾಂತವಾಗುವುದು ಮತ್ತು ಅದು ನರಗಳು ಒತ್ತಡಕ್ಕೆ ಒಳಗಾಗದಂತೆ ತಡೆಯುವುದು.

ಸೂರ್ಯ ನಮಸ್ಕಾರ ಮಾಡುವುದು

ಸೂರ್ಯ ನಮಸ್ಕಾರ ಮಾಡುವುದು

ಬೆಳಗ್ಗೆ ಬೇಗನೆ ಸೂರ್ಯನ ಕಿರಣಗಳನ್ನು ನೋಡಿದರೆ ಅದು ಕಣ್ಣಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಬೆಳಗ್ಗಿನ ಅವಧಿಯು ದಿನದ ತುಂಬಾ ಶಾಂತ ಸಮಯವಾಗಿರುವುದು.

English summary

Indian Traditions That Has Deep Scientific Meaning

India is excellent due to its traditions and dharmas. India is such a country where all the custom has to be followed whether its birth ceremony death or marriage. In every event all has to follow the custom accordinlg to their religion . Each custom that Indians pursue has profound importance inside that stuns the alleged researchers even today. Each state in India has its very own custom and culture. The world perceives and acknowledges India for its conventions.
X