For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ

By manu
|

ವರಮಹಾಲಕ್ಷ್ಮಿಪೂಜೆ ಅಥವಾ ವರಲಕ್ಷ್ಮಿವ್ರತವನ್ನು ವರಮಹಾಲಕ್ಷ್ಮಿ ಅಥವಾ ಲಕ್ಷ್ಮಿ ದೇವತೆಗೆ ಸಲ್ಲಿಸುವ ಪೂಜೆಯಾಗಿದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದವರ ಆರೋಗ್ಯ ಮತ್ತು ಸಮೃದ್ಧಿಯನ್ನು ಬಯಸಿ ಕೈಗೊಳ್ಳುತ್ತಾರೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಈ ಪೂಜೆ ಹೆಚ್ಚು ವ್ಯಾಪಕವಾಗಿದೆ. ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ

ಶ್ರಾವಣ ಮಾಸದ ಹುಣ್ಣಿಮೆಯ ಬಳಿಕ ಬರುವ ಶುಕ್ರವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 12 ಶುಕ್ರವಾರದಂದು ಈ ಹಬ್ಬ ಆಗಮಿಸಿದ್ದು ಗುರುವಾರವೇ ಪೂಜೆಯ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಶುಕ್ರವಾರದ ಪೂಜೆಗೆ ಅಣಿಯಾಗಬೇಕಾಗುತ್ತದೆ. ಎಲ್ಲಾ ಹಬ್ಬಗಳಿಗೆ ಇರುವಂತೆ ವರಮಹಾಲಕ್ಷ್ಮಿಪೂಜೆಗೂ ಒಂದು ಕಥೆಯಿದೆ. ಬನ್ನಿ ಅದರ ಸಂಪೂರ್ಣ ವಿವರಣೆ ಸ್ಲೈಡ್ ಶೋ ಮೂಲಕ ಓದಿ..

ಚಾರುಮತಿ ಎಂಬ ಮಹಿಳೆಯ ಕಥೆ

ಚಾರುಮತಿ ಎಂಬ ಮಹಿಳೆಯ ಕಥೆ

ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ. ಅಂದರೆ ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಹೇಗೆ ಪಡೆಯುವುದು ಎಂದು ಕೇಳಿದಳಂತೆ. ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಚಾರುಮತಿ ಎಂಬ ಮಹಿಳೆಯ ಕಥೆ

ಚಾರುಮತಿ ಎಂಬ ಮಹಿಳೆಯ ಕಥೆ

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯಾದ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು. ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮಿ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ಕೇಳಿಕೊಂಡಳು. ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ದಾನ ನೀಡಿದಳು.

ಚಾರುಮತಿ ಎಂಬ ಮಹಿಳೆಯ ಕಥೆ

ಚಾರುಮತಿ ಎಂಬ ಮಹಿಳೆಯ ಕಥೆ

ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನ ಮತ್ತು ಸೌಲಭ್ಯಗಳನ್ನು ಪಡೆದರು.

ಚಾರುಮತಿ ಎಂಬ ಮಹಿಳೆಯ ಕಥೆ

ಚಾರುಮತಿ ಎಂಬ ಮಹಿಳೆಯ ಕಥೆ

ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಈ ಪೂಜೆಯಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿಗೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಾಹುಕಾಲ ಈ ಪೂಜೆಗೆ ಪ್ರಶಸ್ತವಲ್ಲ

ರಾಹುಕಾಲ ಈ ಪೂಜೆಗೆ ಪ್ರಶಸ್ತವಲ್ಲ

ಪೂಜೆಯ ದಿನದ ರಾಹುಕಾಲ ಪ್ರಶಸ್ತ ಸಮಯವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ಹತ್ತೂವರೆಯಿಂದ ಹನ್ನೆರಡು ಘಂಟೆಯವರೆಗೆ ರಾಹುಕಾಲವಿದ್ದು ಈ ಅವಧಿಯ ಆಚೀಚಿನ ಹೊತ್ತಿನಲ್ಲಿ ಪೂಜೆನಡೆಸುವುದು ಅತ್ಯಂತ ಶುಭವಾಗಿದೆ. ಅಂದರೆ ಬೆಳಿಗ್ಗೆ ಹತ್ತೂವರೆಗೂ ಮೊದಲು ಅಥವಾ ಮದ್ಯಾಹ್ನ ಹನ್ನೆರಡರ ಬಳಿಕ ಪೂಜೆ ನಡೆಸಿದರೆ ಅತ್ಯುತ್ತಮವಾಗಿದೆ. ಇನ್ನೂ ಹಲವೆಡೆ ಗೋಧೂಳಿಯ ಸಮಯ ಈ ಪೂಜೆಗೆ ಪ್ರಶಸ್ತ ಎಂದು ಭಾವಿಸಲಾಗಿದೆ.

ಪೂಜೆಯ ವೇಳೆ ಪಠಿಸಬೇಕಾದ ಶ್ಲೋಕಗಳು

ಪೂಜೆಯ ವೇಳೆ ಪಠಿಸಬೇಕಾದ ಶ್ಲೋಕಗಳು

ಈ ಪೂಜೆಯಯಲ್ಲಿ ಲಕ್ಷ್ಮಿ ಸಹಸ್ರನಾಮ ಮತ್ತು ಲಕ್ಷ್ಮಿ ಆಷ್ಟೋತ್ರಂ ಪಠಿಸುವುದು ಶ್ರೇಯಸ್ಕರವಾಗಿದೆ.

ಪೂಜೆಯ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಪೂಜೆಯ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ.

ಉಪವಾಸ ಆಚರಣೆ

ಉಪವಾಸ ಆಚರಣೆ

ಈ ದಿನ ಮುಂಜಾನೆಯಿಂದ ಮಹಿಳೆಯರು ಪೂಜೆ ಸಂಪನ್ನಗೊಳ್ಳುವವರೆಗೆ ಉಪವಾಸ ಆಚರಿಸುತ್ತಾರೆ. ಉದ್ಯೋಗಸ್ಥೆ, ಗರ್ಭಿಣಿ, ರೋಗಿ ಅಥವಾ ವೈದ್ಯಕೀಯ ಆರೈಕೆಯಲ್ಲಿರುವ ಮಹಿಳೆಯರು ಉಪವಾಸದಿಂದ ವಿನಾಯಿತಿ ಪಡೆಯಬಹುದು.

ಒಂದು ವೇಳೆ ಈ ಪೂಜೆ ತಪ್ಪಿದರೆ?

ಒಂದು ವೇಳೆ ಈ ಪೂಜೆ ತಪ್ಪಿದರೆ?

ಕಾರಣಾಂತರಗಳಿಂದ ಈ ಪೂಜೆ ನೆರವೇರಿಸಲಾಗದ ಮಹಿಳೆಯರು ಮುಂದಿನ ಶುಕ್ರವಾರ ನೆರವೇರಿಸಬಹುದು. ಅದೂ ಸಾಧ್ಯವಾಗದಿದ್ದ ಪಕ್ಷದಲ್ಲಿ ನವರಾತ್ರಿಯ ಶುಕ್ರವಾರದಂದೂ ನೆರವೇರಿಸಬಹುದು.

ಒಂಬತ್ತು ಗಂಟುಗಳ ದಾರ ಕಟ್ಟುವುದು ಅಗತ್ಯ

ಒಂಬತ್ತು ಗಂಟುಗಳ ದಾರ ಕಟ್ಟುವುದು ಅಗತ್ಯ

ಪೂಜೆ ನೆರವೇರಿಸುವ ಮಹಿಳೆಯರು ತಮ್ಮ ಬಲಗೈ ಮಣಿಕಟ್ಟಿನಲ್ಲಿ ನಡುವೆ ಹೂವೊಂದು ಇರುವ ಹಳದಿ ದಾರವನ್ನು ಒಂಬತ್ತು ಗಂಟುಗಳಿರುವಂತೆ ಮಾಡಿ ಕಟ್ಟಿಕೊಳ್ಳಬೇಕು. ಪೂಜೆ ಸಂಪನ್ನಗೊಳ್ಳುವವರೆಗೆ ಈ ದಾರವನ್ನು ಸರ್ವಥಾ ತೆಗೆಯಕೂಡದು. ಇದು ಪೂಜೆಯ ಒಂದು ಪ್ರಮುಖ ಭಾಗವಾಗಿದೆ.

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

* ಈ ಪೂಜೆಯನ್ನು ಎಂದಿಗೂ ಒಂಟಿಯಾಗಿ ನೆರವೇರಿಸಕೂಡದು.

* ಈ ಪೂಜೆಯಲ್ಲಿ ಭಾಗಿಯಾಗಲು ಯಾರನ್ನೂ ಬಲವಂತ ಮಾಡಕೂಡದು, ಅವರ ಸ್ವ ಇಚ್ಛೆಯಿಂದಲೇ ಆಗಮಿಸಬೇಕು. ಏಕೆಂದರೆ ಈ ಪೂಜೆಯ ಫಲ ಕೇವಲ ಶ್ರದ್ದೆ, ಭಕ್ತಿ ಮತ್ತು ಸಂಪೂರ್ಣ ನಂಬಿಕೆಯಿರುವ ಮನಸ್ಸುಗಳಿಗೆ ಮಾತ್ರ ಸಲ್ಲುತ್ತದೆ.

* ಈ ಪೂಜೆಯನ್ನು ಬಾಣಂತಿಯರು, ಅದರಲ್ಲೂ ಮಗುವಿಗೆ ಇನ್ನೂ ಇಪ್ಪತ್ತೆರಡು ದಿನ ತುಂಬದಿದ್ದಾಗ, ನೆರವೇರಿಸಬಾರದು.

* ಮಾಸಿಕ ರಜೆ ಈ ದಿನದಲ್ಲಿದ್ದರೆ ಈ ವಾರ ಬಿಟ್ಟು ಮುಂದಿನ ವಾರ ನೆರವೇರಿಸಬೇಕು

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

* ಸಮಸಂಖ್ಯೆಯಲ್ಲಿ ಎಂದಿಗೂ ಸಿಹಿತಿಂಡಿಗಳನ್ನು ಮಾಡಕೂಡದು. ಎಂದಿಗೂ ಬೆಸಸಂಖ್ಯೆಯಲ್ಲಿ ಅಂದರೆ ಒಂದು, ಮೂರು, ಐದು, ಏಳು ಅಥವಾ ಒಂಬತ್ತು ವಿಧದ ಸಿಹಿತಿಂಡಿಗಳನ್ನೇ ತಯಾರಿಸಬೇಕು.

*ಒಂಬತ್ತಕ್ಕೂ ಹೆಚ್ಚು ಸಿಹಿಗಳನ್ನು ಮಾಡುವಂತೆ ಎಲ್ಲೂ ಉಲ್ಲೇಖಿಸದೇ ಇರುವುದರಿಂದ ಇದಕ್ಕೂ ಹೆಚ್ಚು ಬಗೆಯನ್ನು ಮಾಡದೇ ಇರುವುದು ಒಳಿತು.

* ಹಣ್ಣುಗಳನ್ನು ಸಮಸಂಖ್ಯೆಯಲ್ಲಿರಿಸಬೇಕು.

* ಪೂಜೆಗೆ ಸೂಕ್ತವಾದ ಒಂಬತ್ತು ತಿಂಡಿಗಳು: ಒಬ್ಬಟ್ಟು, ಸಿಹಿದೋಸೆ, ಮೆದುವಡೆ, ಶಂಕರಪಾಳೆ, ಪೊಂಗಲ್, ಸುಂದಲ್, ಮೋದಕ, ಪಾಯಸ, ಕೇಸರಿಬಾತ್ ಮತ್ತು ಲಡ್ಡು

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾಡಬಾರದ ವಿಧಿಗಳು

* ಈ ಪೂಜೆಗೆ ವಿಧವೆಯರು ಅನರ್ಹರಾಗಿದ್ದಾರೆ.

* ಪೂಜೆಯ ಬಳಿಕ ಎಲ್ಲಾ ಸಿಹಿಗಳನ್ನು ಮನೆಯವರು ಮತ್ತು ಅತಿಥಿಗಳು ಸೇವಿಸಿ ಖಾಲಿ ಮಾಡಬೇಕು, ನಾಳೆಗಾಗಿ ಉಳಿಸಬಾರದು.

English summary

Important Things To Do On Varamahalakshmi Puja

Varamahalakshmi Pooja or Varalakshmi Vrat is an important ritual dedicated to Goddess Varamahalakshmi/ Goddess Lakshmi. Married women in south India and Maharashtra observe the ritual for the welfare and prosperity of their families.It is celebrated in the month of Shravan, on the Friday that precedes the full moon. This year, Varamahalakshmi Pooja falls on 28th of August. The preparations for the Pooja is usually done the day before ie, the Thursday that comes before the full moon.
X
Desktop Bottom Promotion