For Quick Alerts
ALLOW NOTIFICATIONS  
For Daily Alerts

ವ್ರತ ಹಿಡಿಯುವ ಮುನ್ನ ಈ ವಸ್ತುಗಳು ಇದೆಯೇ ಎಂದು ಪರಿಶೀಲಿಸಿಕೊಳ್ಳಿ

By Divya
|

ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಇದನ್ನು ಪ್ರತಿ ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ಈ ಪೂಜಾ ವಿಧಾನದಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚುವುದು ಎನ್ನುವ ಪ್ರತೀತಿ ಇದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಪ್ರಮುಖ ಹಬ್ಬಗಳಲ್ಲಿ ಇದು ಒಂದು.

ವರಮಹಾಲಕ್ಷ್ಮಿ ಹಬ್ಬದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ವ್ರತವನ್ನು ಆಚರಿಸುವವರಿಗೆ ಲಕ್ಷ್ಮಿ ದೇವಿಯುವ ಆಶೀರ್ವದಿಸಿ ವರ ನೀಡುತ್ತಾಳೆ ಎನ್ನುವ ನಂಬಿಕೆಯಿದೆ. ಈ ಹಬ್ಬ/ವ್ರತವನ್ನು ಆಚರಿಸಲು ಯಾವುದೇ ಜಾತಿಯ ತಾರತಮ್ಯವಿಲ್ಲ. ಎಲ್ಲರೂ ಇದನ್ನು ಆಚರಿಸಬಹುದು. ಆಚರಿಸಿದವರೆಲ್ಲಾ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ನೀವು ಈ ವ್ರತವನ್ನು ಆಚರಿಸಬೇಕು ಎನ್ನುವ ಆಸೆ ಇದ್ದರೆ ಮುಂದೆ ಓದಿ. ಪೂಜೆಗೆ ಬೇಕಾದ ವಸ್ತುಗಳ ಮಾಹಿತಿಯನ್ನು ನೀಡಲಾಗಿದೆ.

Varamahalakshmi

ಲಕ್ಷ್ಮಿ ದೇವಿಯ ಮುಖ
ಈ ಮಂಗಳಕರ ವ್ರತ ಆಚರಣೆಗೆ ಲಕ್ಷ್ಮಿ ದೇವಿಯ ಬೆಳ್ಳಿ ಮುಖ ಪ್ರಮುಖವಾದದ್ದು. ಇದನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಪಡೆಯಬಹುದು. ಇದಕ್ಕೆ ಅಮ್ಮನ್ ಮೊಘಮ್ ಎಂತಲೂ ಕರೆಯುತ್ತಾರೆ.

ಕುಂಕುಮ
ಕುಂಕುಮ ಅಥವಾ ಸಿಂಧೂರ ವರಮಹಾಲಕ್ಷ್ಮಿ ಪೂಜೆಗೆ ಬೇಕಾದ ಇನ್ನೊಂದು ಪ್ರಮುಖ ವಸ್ತು. ವಿವಾಹಿತ ಮಹಿಳೆಯರಿಂದ ಪೂಜಿಸಲಾಗುವ ಈ ವ್ರತದಲ್ಲಿ ಕುಂಕುಮಾರ್ಚನೆ ಮಾಡಿ, ದೇವಿಗೆ ಕುಂಕುಮ ಅಲಂಕಾರ ಮಾಡುವುದು ಬಹಳ ಶ್ರೇಷ್ಠವಾದದ್ದು.

ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ

ಚಂದನ
ಶ್ರೀಗಂಧದ ಪುಡಿ ಮಂಗಳ ಕರ ಕಾರ್ಯದಲ್ಲಿ ಬಹಳ ಪ್ರಮುಖವಾದದ್ದು. ದೇವಿಯನ್ನು ಅಲಂಕರಿಸಲು ಹಾಗೂ ಪೂಜಾ ವಸ್ತುಗಳ ಶುದ್ಧೀಕರಣಕ್ಕೆ ಇದು ಪ್ರಮುಖವಾದದ್ದು.

ನೂತನ ಬ್ಲೌಸ್ ಪೀಸಸ್
ದೇವಿಯನ್ನು ಕಲಶದಲ್ಲಿ ಆಹ್ವಾನಿಸಿ ಪೂಜಿಸುವುದರಿಂದ ಕಲಶಕ್ಕೆ ಹೊಸ ಬಟ್ಟೆಯಿಂದ ಅಲಂಕರಿಸಬೇಕಾಗುವುದು. ಅದಕ್ಕಾಗಿ ಹೊಸದಾದ ಬ್ಲೌಸ್ ಪೀಸ್ ಬಳಸಲಾಗುವುದು. ಇದು ಕೆಂಪು ಅಥವಾ ಹಸಿರು ಬಣ್ಣದಲ್ಲಿರಬೇಕು. ಕಲಶದಲ್ಲಿ ಅಕ್ಕಿ, ನೀರು, ಅರಿಶಿನ ಪುಡಿ, ನಾಣ್ಯ, ಅಡಿಕೆ ಮತ್ತು ಬಿಲ್ವ ಪತ್ರೆಯನ್ನು ಹಾಕಲಾಗುವುದು.

ತೆಂಗಿನ ಕಾಯಿ
ಪೂಜೆಗೆ ಬಳಸುವ ಪವಿತ್ರ ಹಾಗೂ ಅಗತ್ಯ ವಸ್ತು ತೆಂಗಿನಕಾಯಿ. ಮಂಗಳಕರ ವಸ್ತುವಾದ ಇದನ್ನು ಕಲಶವಿಡಲು ಬಳಸುತ್ತಾರೆ. ಇದರ ಅಲಂಕಾರಗೊಳಿಸಿಯೇ ದೇವಿಯನ್ನು ಪೂಜಿಸಲಾಗುವುದು.

ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ

ನೈವೇದ್ಯ
ಹಬ್ಬ, ವ್ರತ ಹಾಗೂ ಮಂಗಳ ಕಾರ್ಯದಲ್ಲಿ ದೇವರಿಗೆ ನೈವೇದ್ಯವನ್ನು ಮಾಡಲಾಗುತ್ತದೆ. ನೈವೇದ್ಯಕ್ಕೆ ಹಣ್ಣು, ಒಣ ಹಣ್ಣು, ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ಇಡಬೇಕು. ನೈವೇದ್ಯಕ್ಕೆ ಸೂಕ್ತವಾದ ತಿಂಡಿಗಳೆಂದರೆ ಪಾಯಸ, ಹೋಳಿಗೆ, ಕಡಬು ಸೇರಿದಂತೆ ಇನ್ನಿತರ ಸಿಹಿ ತಿಂಡಿಗಳು.

ಮಾವಿನ ಎಲೆ
ಪೂಜೆಯ ಜಾಗ ಹಾಗೂ ಮನೆಯನ್ನು ಅಲಂಕರಿಸಲು ಮಾವಿನ ಎಲೆ ಬಹಳ ಶ್ರೇಷ್ಠವಾದದ್ದು. ಲಕ್ಷ್ಮಿಯನ್ನು ಸ್ವಾಗತಿಸಲು ಮಾವಿನ ಎಲೆಯ ತೋರಣವನ್ನು ಕಟ್ಟಲಾಗುವುದು.

ನಾನ್ಬು ಸಾರಡು/ಹಳದಿ ದಾರ
ಪೂಜೆಗೆ ಬೇಕಾದ ಪವಿತ್ರ ವಸ್ತುಗಳಲ್ಲಿ ಇದೂ ಒಂದು. ಹೂಗಳ ಜೋಡಣೆಗೆ, ಕಂಕಣ ಕಟ್ಟಿಕೊಳ್ಳಲು ಈ ದಾರವನ್ನು ಬಳಸುತ್ತಾರೆ. ಇದನ್ನು ಲಕ್ಷ್ಮಿ ದೇವಿಯ ಪಾದದ ಮೇಲೂ ಹಾಕಲಾಗುತ್ತದೆ.

English summary

Important Puja Items Needed For Varamahalakshmi festival

Varamahalakshmi is an important festival to the Hindus living in the south of India. It is dedicated to the Goddess Maha Lakshmi who is considered to be the Goddess of wealth. In the southern states of Karnataka, Tamil Nadu, Andhra Pradesh and Telangana, women gather to perform the Pooja to please the Goddess Maha Lakshmi.
X
Desktop Bottom Promotion