For Quick Alerts
ALLOW NOTIFICATIONS  
For Daily Alerts

ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರ ಮಹತ್ವ

|

ಕೈಲಾಸನಾಥನಿಗೆ ಬಿಲ್ವ ಪತ್ರೆ ಅಂದರೆ ತುಂಬಾ ಪ್ರೀತಿ. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆ ಜತೆ ಪೂಜಿಸಿದರೆ ಶಿವನಿಗೆ ತುಂಬಾ ಪ್ರಿಯವಾಗುವುದು ಎಂದು ಶಿವನಿಗೆ ಪೂಜೆ ಸಲ್ಲಿಸುವಾಗ ಬಿಲ್ವೆ ಪತ್ರೆ ಉಪಯೋಗಿಸುತ್ತಾರೆ. ಅದರಲ್ಲೂ ಸೋಮವಾರದ ಶಿವನ ಪೂಜೆಗೆ ವಿಶೇಷವಾದ ದಿನ, ಈ ದಿನದಂದು ಬಿಲ್ವೆ ಪತ್ರೆ ಎಲೆಗಳಿಂದ ಶಿವನಿಗೆ ಪೂಜೆ ಸಲ್ಲಿಸಲಾಗುವುದು.

ಶಿವನಿಗೆ ಬಿಲ್ವೆ ಪತ್ರೆ ಅರ್ಪಿಸುವುದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು?

ಮುಕ್ಕಣ್ಣ ಶಿವನಿಗೆ ಬಿಲ್ವೆ ಪತ್ರೆ ಏಕೆ ಪ್ರಿಯವಾದದು ಎಂಬುವದರ ಹಿಂದೆ ಒಂದು ಪೌರಾಣಿಕ ಕತೆಯಿದೆ. ಬಿಲ್ವೆ ಪತ್ರೆ ಮರ ನೋಡಿದರೆ ಒಂದು ದಂಟಿನಲ್ಲಿ ಮೂರು ಎಲೆಗಳಿರುತ್ತವೆ. ಬಿಲ್ವಪತ್ರೆ ಎಲೆಯಲ್ಲಿ ತ್ರಿಮೂರ್ತಿಗಳು ಅಂದರೆ ಬ್ರಹ್ಮ, ವಿಷ್ನು,ಶಿವ ನೆಲೆಸಿದ್ದಾರೆ ಎಮಬ ನಂಬಿಕೆಯಿದೆ. ಬಿಲ್ವೆ ಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಈ ಬಿಲ್ವಪತ್ರೆ ಮರ ಕಾಶಿಕ್ಷೇತ್ರಕ್ಕೆ ಸಮವಾದ ಮರವಾಗಿದೆ ಎಂದು ಹೇಳಲಾಗುವುದು.

Lord Shiva

ಇನ್ನು ಈ ಮರದ ಹುಟ್ಟಿನ ಬಗ್ಗೆಯೂ ಸ್ಕಂದ ಪುರಾಣದಲ್ಲಿ ಹೇಳಾಗಿದೆ. ಈ ಪವಿತ್ರವಾದ ಮರ ಪಾರ್ವತಿಯ ಬೆವರು ಹನಿ ಮಂದಾರ ಪರ್ವತದ ಮೇಲೆ ಬಿದ್ದಾಗ ಬಿಲ್ವಪತ್ರೆ ಹುಟ್ಟಿಕೊಂಡಿತುಕೊಂಡಿತು. ಪಾರ್ವತಿ ದೇವಿ ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳೆ. ಆದ್ದರಿಂದ ಶಿವನಿಗೆ ಈ ಮರದ ಎಲೆಗಳಿಂದ ಪ್ರಿಯವಾದದ್ದು ಎಂದು ಹೇಳಲಾಗಿದೆ.

ಈ ಮರದಲ್ಲಿ ಲಕ್ಷ್ಮೀದೇವಿ ವಿವಿಧ ರೂಪದಲ್ಲಿ ನೆಲೆಸಿರುತ್ತಾಳೆ, ಕಾಂಡದಲ್ಲಿ ಮಹೇಶ್ವರಿಯಾಗಿ, ಕೊಂಬೆಯಲ್ಲಿ ದಾಕ್ಷಾಯಣಿಯಾಗಿ, ಎಲೆಗಳಲ್ಲಿ ಪಾರ್ವತಿ, ಕಾತ್ಯಾನಿಯಾಗಿ ಹಣ್ಣಿನಲ್ಲಿ, ಗೌರಿಯಾಗಿ ಹೂಗಳಲ್ಲಿ ನೆಲೆಸಿರುತ್ತಾಳೆ, ಆದ್ದರಿಂದ ಈ ಮರದ ಸಮಿಪ ಹೋದರೆ, ಆ ಮರ, ಎಲೆ, ಹೂ, ಕಾಯಿಗಳನ್ನು ಮುಟ್ಟಿದರೆ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ಶಿವಾಲಯದ ಸಮೀಪ ಬಿಲ್ವ ಪತ್ರೆ ಗಿಡ ಬೆಳೆಯಲಾಗುವುದು.

ಬಿಲ್ವ ಪತ್ರೆ ಎಲೆಗಳನ್ನು ಶಿವನ ಪೂಜೆಗೆ ಅರ್ಪಿಸುವುದರ ಮಹತ್ವದ ಬಗ್ಗೆ ಶ್ಲೋಕವಿದೆ
ಮೂಲತೋಭವರೂಪಾಯ ಮಧ್ಯತೋ ಮೃದುರೂಪಿಣಿ
ಅಗ್ರತಃ ಶಿವರೂಪಾಯ ಪತ್ರ್ನೆವೇರ್ದಸ್ವರೂಪಿಣಿ
ಸ್ಕಂದೇ ವೇದಾಂತರೂಪೆಯ ತರುರಾಜಯಃ ತೆ ನಮಃ
ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್‌ರ್ಯ ಪ್ರಣಾಶನಂ ಬಿಲ್ವಾತ್ಪಾತ್ರಂ ನಾಸ್ಪಿ ಯೇನ ತುಷ್ಯತಿ ಶಂಕರ

ಬಿಲ್ವ ಮರ ಶಿವನ ಭಾವ ರೂಪ, ಅದರ ಮೂರು ಎಲೆಗಳು ಮೂರು ವೇದಗಳು, ಕೊಂಬೆಗಳು ಉಪನಿಷತ್ತುಗಳು, ಬಿಲ್ವ ಪತ್ರೆ ಮರ ಮರಗಳ ರಾಜ, ಈ ಮರವನ್ನು ಭಕ್ತಿಯಿಂದ ಪೂಜಿಸಿದರೆ ಬಡತನ ದೂರವಾಗುವುದು, ಶಿವನಿಗೆ ಈ ಮರದ ಎಲೆಗಳನ್ನು ಅರ್ಪಿಸಿದರೆ ತುಂಬಾ ಖುಷಿಯಾಗುವುದು ಎಂಬುವುದು ಈ ಶ್ಲೋಕದ ಅರ್ಥವಾಗಿದೆ.

ಶಿವಪೂಜೆಗೆ ಬಿಲ್ವಪತ್ರೆ ಎಲೆಗಳ ಆಯ್ಕೆ ಹೇಗಿರಬೇಕು?

ಶಿವಪೂಜೆಗೆ ಬಿಲ್ವಪತ್ರೆ ಆಯ್ಕೆ ಮಾಡುವಾಗ ಎಲೆಯ ಮೇಲೆ ಯಾವುದೇ ಹುಳುಗಳ ಕುಳಿತು ಎಲೆಗಳು ಹಾಳಾಗಿಬಾರದು, ಅದರ ಮೇಲೆ ಬಿಳಿ ಚುಕ್ಕಿಗಳಿರಬಾರದು, ಇನ್ನು ತರುವ ಎಲೆ ಹರಿದಿರಬಾರದು. ಮೂರು ಎಲೆಗಳಿರುವ ದಂಟನ್ನು ಕಿತ್ತು ತಂದು ಶಿವನಿಗೆ ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆಯ ಮಾಲೆ ಮಾಡಿ ಹಾಕಬಹುದು, ಬಿಲ್ವಪತ್ರೆ ಎಲೆಗಳ ಜತೆಗೆ ಕಾಯಿಗಳನ್ನೂ ಪೂಜೆಗೆ ಅರ್ಪಿಸಬಹುದು.

ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು?

ಬಿಲ್ವಪತ್ರೆಗಳನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ಹೀಗೆ ಮಾಡುವುದರಿಂದ ಮೂರು ಎಲೆಗಳಿಂದ ಬರುವ ಶಕ್ತಿಗಳಿಂದ ಬರುವ ಶಕ್ತಿ ನಮ್ಮ ಕಡೆಗೆ ಬರುತ್ತದೆ. ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡಿ ನಮಗೆ ಧನಾತ್ಮಕ ಶಕ್ತಿಯ ಅನುಬವ ಉಂಟಾಗುವುದು.

ಬಿಲ್ವಪತ್ರೆ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ, ಎಲೆಗಳ ತುದಿಗಳನ್ನು ಶಿವನ ಕಡೆಗೆ ಇರುವಂತೆ ಅರ್ಪಿಸಿದರೆ ಆಗ ಬಲ್ವಪತ್ರೆ ಯಾರು ಅರ್ಪಿಸುತ್ತಾರೋ ಅವರಿಗೆ ಮಾತ್ರ ಶಿವತತ್ತ್ವ ಸಿಗುತ್ತದೆ. ಮೇಲೆ ಹೇಳಿದಂತೆ ಅರ್ಪಿಸಿದರೆ ಶಿವನ ಪೂಜೆಗೆ ಬರುವ ಭಕ್ತರಿಗೂ ಶಿವತತ್ತ್ವವೂ ದೊರೆಯುವುದು.

ಬಿಲ್ವಪತ್ರೆ ಸೋಮವಾರ ಏಕೆ ಅರ್ಪಿಸಬೇಕು?

ಸೋಮವಾರ ಶಿವಪೂಜೆಗೆ ಶ್ರೇಷ್ಠವಾದ ದಿನ, ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ಮಡಿ ಬಟ್ಟೆ ಧರಿಸಬೇಕು. ಬಿಲ್ವಪತ್ರೆಯನ್ನು ಅರ್ಚನೆ ಮಾಡುವಾಗ ಓಂ ನಮಃ ಶಿವಾಯ ಎಂಬ ಮಂತ್ರ ಪಠಣೆ ಮಾಡುತ್ತಾ ಶಿವಲಿಂಗಕ್ಕೆ ಒಂದೊಂದೇ ಎಲೆಗಳನ್ನು ಅರ್ಪಿಸಬೇಕು. ಬಿಲ್ವಪತ್ರೆ ಎಲೆಗಳು ಶಿವಲಿಂಗವನ್ನು ಮುಚ್ಚುವಂತೆ ಅರ್ಪಣೆ ಮಾಡಬೇಕು. ಬಿಲ್ವ ಪತ್ರೆ ಎಲೆಗಳ ಜತೆಗೆ ಶ್ರೀಗಂಧ, ಹೂಗಳು, ಹಣ್ಣುಗಳು, ಎಳ್ಳುಗಳನ್ನು ಅರ್ಪಿಸಬಹುದು.

English summary

Importance Of Offering A Bilwa Leaves To Lord Shiva On A Monday in

It is believed that offering prayers to a Bilwa tree pleases Lord Shiva. Here we have explained importance of offering bilwa leaves on Monday to how to worship by this leaf. Take a look.
X
Desktop Bottom Promotion