Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಜಗತ್ತಿಗೆ ಜ್ಞಾನದ ಬೆಳಕನ್ನು ಪಸರಿಸಿದ ಗುರುವನ್ನು ಸ್ಮರಿಸುವ ದಿನವಾಗಿ ಗುರು ಪೂರ್ಣಿಮೆ ಮಹತ್ವವನ್ನು ಪಡೆದಿದೆ. ಹಿಂದೂ ಧರ್ಮದಲ್ಲಿ ಗುರುವು ಉದಯಿಸುವ ಸೂರ್ಯನಿದ್ದಂತೆ. ಹೇಗೆ ಸಾಮಾನ್ಯ ಜನರು, ನಕ್ಷತ್ರ ಮತ್ತು ಚಂದ್ರನು ಸೂರ್ಯನಿಂದ ಬೆಳಕನ್ನು ಹೀರಿ ಅದರಿಂದ ಬರುವ ಉತ್ತಮತೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು ಮುಂದುರವರಿಯುತ್ತಾರೋ ಅಂತೆಯೇ ಗುರುವಿನ ಮಾರ್ಗದರ್ಶನ ಅವರು ಪಡೆದುಕೊಂಡ ಜ್ಞಾನ ಭಂಡಾರವನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದಾಗಿದೆ. ಈ ದಿನಂದು ಮಹಾನ್ ಗುರು ವೇದವ್ಯಾಸರನ್ನು ಪೂಜಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಹೆಸರನ್ನು ಗಳಸಿಕೊಂಡಿರುವ ವೇದವ್ಯಾಸರು ವೇದಗಳ ಜನಕ ಎಂದೆನಿಕೊಂಡಿದ್ದಾರೆ. 18 ಪುರಾಣಗಳ ಕರ್ತೃ ಇವರಾಗಿದ್ದು, ಮಹಾಭಾರತದಂತಹ ಪುರಾಣ ಗ್ರಂಥದ ನಿರ್ಮಾತೃ ಎಂದೆನಿಸಿಕೊಂಡಿದ್ದಾರೆ. ಗುರುಗಳಿಗೆ ಗುರು, ಮಹಾನ್ ಗುರು ಎಂಬುದಾಗಿ ಬಿರುದಾಂಕಿತರಾದ ವೇದವ್ಯಾಸರು ದತ್ತಾತ್ರೇಯನ ಗುರುಗಳು ಎಂದೆನಿಸಿಕೊಂಡಿದ್ದಾರೆ.
ಗುರುಪೂರ್ಣಿಮೆಯ ಮಹತ್ವವವು ಗುರುಗಳನ್ನು ಆಧರಿಸಿದ್ದು ನಮ್ಮ ಜೀವನದಲ್ಲಿ ಗುರುಗಳ ಪಾತ್ರವೇನು ಎಂಬುದನ್ನು ಅರಿಯುವುದರ ಮೂಲಕ ಗುರುಪೂರ್ಣಿಮಯ ಸಾರವನ್ನು ತಿಳಿದುಕೊಳ್ಳಬೇಕಾಗುತ್ತದೆ. ಗುರುವನ್ನು ದೇವರಿಗೆ ಸಮಾನ ಎಂಬುದಾಗಿ ಪರಿಗಣಿಸಲಾಗಿದ್ದು ತಂದೆ ತಾಯಿಯ ನಂತರದ ಸ್ಥಾನವೇ ಗುರುವಿಗಿದೆ. ತ್ರಿಮೂರ್ತಿಗಳ ಅಪರಾವತಾರ ಎಂಬದಾಗಿ ಕೂಡ ಗುರುವನ್ನು ಬಣ್ಣಿಸಲಾಗಿದೆ. ಇಂದಿನ ಲೇಖನದಲ್ಲಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಿದ್ದು ವಿಶೇಷತೆಯನ್ನು ಅರಿತುಕೊಳ್ಳಿ. ಗುರುಪೂರ್ಣಿಮೆ ವಿಶೇಷ- ಜ್ಞಾನ ನೀಡಿದ ಗುರುವನ್ನು ಗೌರವಿಸೋಣ
ಗುರುಪೂರ್ಣಿಯಮೆಯ ಸಮಯ
ಗುರು ಪೂರ್ಣಿಮೆಯ ಮಹತ್ವವನ್ನು ಅರಿತುಕೊಳ್ಳಲು, ನೀವು ಸಮಯದ ಮೇಲೆ ಏಕಾಗ್ರತೆಯನ್ನು ಹೊಂದಿರಬೇಕು. ಆಷಾಢ ಮಾಸದ ಪೂರ್ಣ ಚಂದ್ರ ದಿನ (ಜುಲೈ-ಆಗಸ್ಟ್) ದಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಮಹರ್ಷಿ ವೇದವ್ಯಾಸರಿಗೆ ಈ ದಿನವನ್ನು ಅರ್ಪಿಸಲಾಗುತ್ತದೆ.
ರೈತರ ಮಹತ್ವ
ಗುರುಪೂರ್ಣಿಮೆಯ ಮಹತ್ವ ಸಂಪೂರ್ಣವಾಗಿ ಆಧಾತ್ಮಿಕವಾಗಿರದೇ ಇದರ ಹಿಂದೆ ಕೆಲವೊಂದು ವೈಜ್ಞಾನಿಕ ಕಾರಣಗಳೂ ಅಡಗಿದೆ. ರೈತರು ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿರುವ ಮಳೆಯ ಆಗಮನವನ್ನು ಇದು ಸೂಚಿಸುತ್ತಿದ್ದು ತಂಗಾಳಿಯು ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಕೃಷಿ ಭೂಮಿ ಫಲವತ್ತಾಗಿರುತ್ತದೆ ಎಂಬ ನಂಬಿಕೆಯೂ ಇದೆ.
ಆಧ್ಯಾತ್ಮಿಕ ಸಾಧನೆ
ಗುರು ಪೂರ್ಣಿಮೆಯ ಮಹತ್ವ ಇದರಲ್ಲಿ ಅಡಗಿದೆ. ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಆರಂಭಿಸಲು ಇದು ಸೂಕ್ತ ಸಮಯವಾಗಿದೆ. ಆಧ್ಯಾತ್ಮಿಕ ಗುರುಗಳ ಪ್ರಕಾರ, ಸಾಧನೆಯ ಮೂಲಕ ನಿಮ್ಮ ಕಲಿಕೆಯನ್ನು ಪ್ರಾರ್ಥನೆಯ ಮೂಲಕ ವರ್ಗಾಯಿಸಬಹುದಾಗಿದೆ ಮತ್ತು ಎಲ್ಲಾ ಜೀವಿಗಳಿಗೂ ಪ್ರೀತಿಯನ್ನು ನೀಡುವ ಮಹತ್ವವನ್ನು ಇದು ಹೊಂದಿದೆ.
ಚಾತುರ್ಮಾಸದ ಮಹತ್ವ
ಗುರುಪೂರ್ಣಿಮೆಯ ಇನ್ನೊಂದು ಅರ್ಥ ಮತ್ತು ಮಹತ್ವ ಇಲ್ಲಿದೆ. ಈ ದಿನದಂದೇ ನಾಲ್ಕು ತಿಂಗಳುಗಳ ಪವಿತ್ರ ಸಮಯ ಆರಂಭವಾಗುತ್ತದೆ. ಬ್ರಹ್ಮ ಸೂತ್ರವನ್ನು ಅಭ್ಯಸಿಸಲು ವೇದ ವ್ಯಾಸರು ತಿಳಿಸಿರುವ ವೇದ ಸೂತ್ರಗಳನ್ನು ಅರಿತುಕೊಳ್ಳಲು, ವೇದ ಅಧ್ಯಯನಗಳಲ್ಲಿ ತೊಡಗಲು ಈ ಮಾಸ ಸೂಕ್ತವಾದುದು ಎಂಬ ನಂಬಿಕೆ ಇದೆ.
ಪ್ರಕಾಶಿಸುವ ದೀಪಗಳು
ಈ ಮಂಗಳಕರ ದಿನವನ್ನು ಆಚರಿಸುವುದಕ್ಕಾಗಿ, ದಿನದಂದು ಹಿಂದೂಗಳು ತಮ್ಮ ಮನೆಯಲ್ಲಿ ದೀಪಗಳನ್ನು ಉರಿಸುತ್ತಾರೆ. ಈ ಪ್ರಕಾಶಮಾನವಾದ ದೀಪಗಳು ತಮ್ಮ ಗುರುಗಳಿಂದ ಪಡೆದುಕೊಂಡ ಜ್ಞಾನದ ಸಂಕೇತವಾಗಿದೆ. ಅವರಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಮನೆಗಳಲ್ಲಿ ದೀಪವನ್ನು ಹಚ್ಚಿಡುತ್ತಾರೆ.
ಗುರು ಗ್ರಹದ ಆರಾಧನೆ



Click it and Unblock the Notifications


