For Quick Alerts
ALLOW NOTIFICATIONS  
For Daily Alerts

ವರ್ಷ ಪೂರ್ತಿ ಸುಖ ಸೌಭಾಗ್ಯವನ್ನು ನೀಡುವ 'ವಿಷು ಹಬ್ಬದ' ಮಹತ್ವ

ವಿಷುವು ಯಾವುದೇ ಪುರಾತನ ಕಥೆಗಳನ್ನು ಅವಲಂಬಿಸದೇ ಇದ್ದರೂ ಧನ ಮತ್ತು ಸಂಪತ್ತನ್ನು ಇದು ಪ್ರತಿನಿಧಿಸುತ್ತದೆ. ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ.ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ.

By Manu
|

ತುಳುನಾಡಿನಲ್ಲಿ ಬಿಸುವಾಗಿಯೂ ಕೇರಳದಲ್ಲಿ ವಿಶುವಾಗಿಯೂ ಆಚರಿಸಲ್ಪಡುವ ವಿಷು ಹಬ್ಬವು ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ ಬಿಶು ಎಂಬುದಾಗಿ ಇದನ್ನು ಕೊಂಡಾಡಿದರೆ ಪಂಜಾಬ್‌ನಲ್ಲಿ ಬೈಸಾಕಿ ಮತ್ತು ತಮಿಳು ನಾಡಿನಲ್ಲಿ ಪುತ್ತಾಂಡ್ ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. ಮಲಯಾಳಂ ತಿಂಗಳ ಪ್ರಥಮ ಮಾಸದಲ್ಲಿ ಬರುವ ವಿಷು ಹಬ್ಬವು ಕೇರಳದಲ್ಲಿ ತುಸು ವಿಜೃಂಭಣೆಯಿಂದಲೇ ಕೊಂಡಾಡುತ್ತಾರೆ.

ಸುಗ್ಗಿಯನ್ನು ಈ ಹಬ್ಬವು ಪ್ರತಿನಿಧಿಸುವುದರಿಂದ ಇದು ಉನ್ನತಿಯನ್ನು ಸಂಕೇತಿಸುತ್ತದೆ. ಮಕರ ರಾಶಿಗೆ ಸೂರ್ಯನು ಪ್ರವೇಶಿಸುವುದನ್ನು ಇದು ತೋರಿಸುತ್ತದೆ. ವಿಷು ಸಂಕ್ರಾಂತಿಯಂದು ಸೂರ್ಯನ ಬೆಳಕು ಮತ್ತು ಕತ್ತಲು ಸಮಾನವಾಗಿರುತ್ತದೆ. ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆಯಾಗಿ ಇದನ್ನು ಕೊಂಡಾಡಲಾಗುತ್ತದೆ. ವಿಶು ಹಬ್ಬಕ್ಕೆ ಕೇರಳ ಶೈಲಿಯ ತೋರನ್

ವಿಷುವು ಯಾವುದೇ ಪುರಾತನ ಕಥೆಗಳನ್ನು ಅವಲಂಬಿಸದೇ ಇದ್ದರೂ ಧನ ಮತ್ತು ಸಂಪತ್ತನ್ನು ಇದು ಪ್ರತಿನಿಧಿಸುತ್ತದೆ. ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ. ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ಈ ದಿನದಂದು ಮುಂಜಾನೆ ನೀವು ಏನನ್ನು ಕಾಣುತ್ತೀರೋ ಅದುವೇ ವರ್ಷವಿಡೀ ನಿಮಗೆ ಅನುಭವವನ್ನು ನೀಡುತ್ತದೆ. ಈ ದಿನಂದು ಜನರು ಒಗ್ಗೂಡಿ ಹಬ್ಬವನ್ನು ಆಚರಿಸುತ್ತಾರೆ. ಮನೆಯಲ್ಲಿ ಒಂದಾಗಿ ಸೇರಿ ವಿಷುವಿನ ಹಬ್ಬದಡುಗೆಯನ್ನು ತಯಾರಿಸಿ ಸಂಭ್ರಮಿಸುತ್ತಾರೆ. ಇಂದಿನ ಲೇಖನದಲ್ಲಿ ವಿಷುವಿನ ಇನ್ನಷ್ಟು ಪ್ರಾಮುಖ್ಯತೆಗಳನ್ನು ಅರಿತುಕೊಳ್ಳೋಣ....

Kerala recipe

ವಿಷುಕಣಿ
ವಿಶುವಿನಂದು ಮುಂಜಾನೆ "ವಿಷುಕಣಿ" ಯನ್ನು ಇಟ್ಟು ಜನರು ವರ್ಷದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಕಾತರರಾಗಿರುತ್ತಾರೆ. ಕಣಿಯನ್ನು ಇಡುವುದಕ್ಕಾಗಿ ತರಕಾರಿ, ಹಣ್ಣುಗಳು, ಅರ್ಧ ತೆಂಗಿನಕಾಯಿ,ಹಲಸು,ಸೌತೆಕಾಯಿ,ಒಂದು ಲೋಟ ಅಕ್ಕಿ,ಸೆಟ್‌ ಮುಂಡು,ಕನ್ನಡಿ,ವೀಳ್ಯದೆಲೆ,ಅಡಿಕೆ,ಚಿನ್ನ ಮತ್ತು ನಾಣ್ಯಗಳನ್ನು ಬಳಸಿಕೊಳ್ಳುತ್ತಾರೆ.

ವಿಷು ಭೋಜನ
ವಿಷುವಿನಂದು ಸಾಂಪ್ರದಾಯಿಕ ಕೇರಳ ಭೋಜನವನ್ನು ಏರ್ಪಡಿಸಲಾಗುತ್ತದೆ. ಬೇರೆ ಬೇರೆ ಖಾದ್ಯಗಳನ್ನು ಈ ದಿನ ತಯಾರಿಸಿ ಕುಟುಂಬದ ಎಲ್ಲರೂ ಒಂದೆಡೆ ಸೇರಿ ಜೊತೆಯಾಗಿ ಊಟವನ್ನು ಸೇವಿಸುತ್ತಾರೆ. ಭೋಜನವನ್ನು ಬಾಳೆಎಲೆಯಲ್ಲಿ ಸೇವಿಸಲಾಗುತ್ತದೆ. ಪ್ರಧಾನಂ ಅನ್ನು ಊಟದ ಕೊನೆಗೆ ಸೇವಿಸಲಾಗುತ್ತದೆ. ಉಪ್ಪು, ಹುಳಿ, ಖಾರ, ಸಿಹಿಯನ್ನು ಇದು ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನು ಈ ಹಬ್ಬ ಸಾರಿ ಹೇಳುವ ಜೊತೆಗೆ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳು ನೀತಿ ಇಲ್ಲಿದೆ.

ವಿಷು ಕೈನೀಟಂ
ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ವಿಷು ಕೈನೀಟಂ ತಿಳಿಸುತ್ತದೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರನ್ನು ಖುಷಿಪಡಿಸುತ್ತಾರೆ. ವರ್ಷಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿಯಾಗಿದೆ. ಹಿರಿಯರ ಆಶಿರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ.

ವಿಷು ಕೊಡಿ
ಸಾಂಪ್ರದಾಯಿಕ ಹಬ್ಬದಂದು ಹೊಸ ದಿರಿಸು ಅತ್ಯಂತ ಪ್ರಧಾನವಾದುದಾಗಿದೆ. ಹಿಂದಿನ ಕಾಲದಲ್ಲಿ ವ್ಯವಸಾಯವನ್ನೇ ಜನರು ಅವಲಂಬಿಸಿದ್ದರಿಂದ ವಿಷು ಮತ್ತು ಓಣಂ ಹಬ್ಬಕ್ಕೆ ಮಾತ್ರವೇ ಹೊಸ ಬಟ್ಟೆಗಳನ್ನು ಕೊಳ್ಳುತ್ತಿದ್ದರು. ಈಗ ಜನರು ಈ ಪದ್ಧತಿಯನ್ನು ಅನುಸರಿಸದೇ ಇದ್ದರೂ ವಿಶುವಿನಂದು ಹೊಸ ದಿರಿಸುಗಳನ್ನು ಧರಿಸುವ ಕ್ರಮ ಹಾಗೆಯೇ ಇದೆ.

ವಿಷು ಪಡಕ್ಕಂ
ವಿಷುವಿನಂದು ಪಟಾಕಿಗಳನ್ನು ಸಿಡಿಸಿ ಜನರು ಸಂಭ್ರಮಿಸುತ್ತಾರೆ. ಕೇರಳದಲ್ಲಿ ವಿಷು ಮತ್ತು ದೀಪಾವಳಿಗೆ ಪಟಾಕಿಗೆ ಹೆಚ್ಚು ಬೇಡಿಕೆ ಇರುತ್ತದೆ. ಇಡಿಯ ಕುಟುಂಬವೇ ಪಟಾಕಿಯನ್ನು ಸಿಡಿಸಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಿ ಎಂದಾಗಿದೆ ಇದರ ಹಿಂದಿರುವ ತಾತ್ಪರ್ಯ. ಹೆಚ್ಚು ಆನಂದ ಮತ್ತು ಸಂಭ್ರಮದ ಸುಖ ಸೌಭಾಗ್ಯವುಳ್ಳ ಹೊಸ ವರುಷ ಬರಲಿ ಎಂಬುದೇ ವಿಶು ಹಬ್ಬದ ಹಿಂದಿರುವ ತಾತ್ಪರ್ಯವಾಗಿದೆ.

English summary

Importance Of Celebrating Vishu Festival

Importance of vishu festival is that it is a festival of harvest and thus it indicates prosperity. Vishu shows the transit of sun into the Meda Raas and on the spring equinox. This has equal hours of sunlight and darkness and Vishu in Sanskrit means equal. Vishu is considered as the first step to a prosperous new year.
X
Desktop Bottom Promotion