For Quick Alerts
ALLOW NOTIFICATIONS  
For Daily Alerts

ಕಾಲ ಸರ್ಪದ ದೋಷವಿದ್ದರೆ, ಹೀಗೆಲ್ಲಾ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ!!

By Hemanth
|

ಜ್ಯೋತಿಷಿಗಳ ಬಳಿ ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ನಿಮಗೆ ಕಾಲಸರ್ಪ ದೋಷವಿದೆ. ಅದಕ್ಕೆ ಪರಿಹಾರ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ಭಾರೀ ತೊಂದರೆಯಾಗಲಿದೆ ಎನ್ನುವ ಮಾತುಗಳನ್ನು ಹೇಳುತ್ತಾರೆ. ಜನರು ಕೂಡ ಜ್ಯೋತಿಷಿಗಳ ಮಾತನ್ನು ಕೇಳಿ ಸಾವಿರಾರು ರೂಪಾಯಿ ಸುರಿದು ದೋಷ ನಿವಾರಣೆ ಮಾಡಲು ಮುಂದಾಗುತ್ತಾರೆ.

ತಮ್ಮ ದೋಷ ನಿವಾರಣೆಯಾಗಿದೆಯಾ ಎಂದು ತಿಳಿಯಲು ಮತ್ತೊಮ್ಮೆರಲ್ಲಿ ಹೋದಾಗ ಅವರಿಂದಲೂ ಇದೇ ಮಾತು ಕೇಳಿಬರುತ್ತದೆ. ಇದು ಹಣ ಮಾಡುವ ತಂತ್ರವಾಗಿದೆ. ಇಂತಹ ಘಟನೆಗಳಿಂದಾಗಿ ಕಾಲಸರ್ಪ ದೋಷವೆಂದರೆ ಜನರು ಬೆಚ್ಚಿ ಬೀಳುವ ಪರಿಸ್ಥಿತಿ ಎದುರಾಗಿದೆ. ಆದರೆ ನಿಜವಾಗಿಯೂ ಕಾಲಸರ್ಪ ದೋಷವೆಂದರೆ ಏನು ಎನ್ನುವ ಪ್ರಶ್ನೆ ಕಾಡುತ್ತದೆ. ಕಾಲಸರ್ಪ ದೋಷವೆಂದರೆ ಏನು ಮತ್ತು ಇದರಿಂದ ಎದುರಾಗುವ ಸಮಸ್ಯೆಗಳೇನು ಎಂದು ಬೋಲ್ಡ್ ಸ್ಕೈ ನಿಮಗೆ ವಿವರವಾಗಿ ತಿಳಿಸಲಿದೆ. ಇದನ್ನು ತಿಳಿದು ಕಾಲಸರ್ಪ ದೋಷದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ನಂಬಬೇಡಿ...

ರಾಹು ಮತ್ತು ಕೇತು ಮಧ್ಯೆ ಸಿಲುಕಿಕೊಂಡಿರುವುದು

ರಾಹು ಮತ್ತು ಕೇತು ಮಧ್ಯೆ ಸಿಲುಕಿಕೊಂಡಿರುವುದು

ಒಬ್ಬನ ಜಾತಕದಲ್ಲಿ ಕಾಲಸರ್ಪ ದೋಷ ಅಥವಾ ಕಾಲಸರ್ಪ ಯೋಗವಿದ್ದರೆ ಅದು ತುಂಬಾ ಗಂಭೀರವೆಂದು ಪರಿಗಣಿಸಲಾಗುತ್ತದೆ ಎಂದು ಭಾರತೀಯ ವೈದಿಕ ಜ್ಯೋತಿಷ್ಯವು ಹೇಳುತ್ತದೆ. ಬುಧ, ಶುಕ್ತ, ಮಂಗಳ, ಸೂರ್ಯ, ಚಂದ್ರ, ಗುರು ಮತ್ತು ಶನಿ ಈ ಏಳು ಗ್ರಹಗಳು ರಾಹು ಮತ್ತು ಕೇತುವಿನ ನೆರಳಿನಲ್ಲಿ ಸಿಲುಕಿರುವುದು.

ರಾಹು ದೋಷ ನಿವಾರಣೆಗೆ ಆಧ್ಯಾತ್ಮಿಕ ಪರಿಹಾರ

ರಾಹು ಮತ್ತು ಕೇತು ಮಧ್ಯೆ ಸಿಲುಕಿಕೊಂಡಿರುವುದು

ರಾಹು ಮತ್ತು ಕೇತು ಮಧ್ಯೆ ಸಿಲುಕಿಕೊಂಡಿರುವುದು

ಇಂತಹ ಸಮಯದಲ್ಲಿ ಒಬ್ಬನ ಜಾತಕದಲ್ಲಿ ಕಾಲಸರ್ಪ ದೋಷವು ಕಾಣಿಸಬಹುದು. ರಾಹು ಸರ್ಪದ ತಲೆಯನ್ನು ಪ್ರತಿನಿಧಿಸಿದರೆ ಕೇತು ಸರ್ಪದ ಬಾಲವನ್ನು ಪ್ರತಿನಿಧಿಸುತ್ತಾನೆ.

ಜಾತಕದಲ್ಲಿ ಕಾಲಸರ್ಪದೋಷವಿದ್ದರೆ ಏನಾಗುವುದು?

ಜಾತಕದಲ್ಲಿ ಕಾಲಸರ್ಪದೋಷವಿದ್ದರೆ ಏನಾಗುವುದು?

ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಆ ವ್ಯಕ್ತಿಯ ಜೀವನಕ್ಕೆ ತುಂಬಾ ಹಾನಿಯಾಗುವುದು ಮತ್ತು ಆತನ ಜೀವನದ ಪ್ರತಿಯೊಂದು ಹಂತದಲ್ಲೂ ಇದು ಪರಿಣಾಮ ಬೀರುವುದು. ಪ್ರತಿಯೊಂದರಲ್ಲೂ ಆತನಿಗೆ ದುರಾದೃಷ್ಟವು ಕಾಡುತ್ತಾ ಇರುತ್ತದೆ. ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿದ್ದರೂ ಆತ ಮಾಡುವಂತಹ ಕೆಲಸಗಳು ಕೈಗೂಡದೇ ಇರಬಹುದು. ಈ ದೋಷದಿಂದ ಎಲ್ಲಾ ಒಳ್ಳೆಯ ಪ್ರಭಾವಗಳು ದೂರವಾಗುವುದು.

ಅರ್ಧ ಕಾಲಸರ್ಪದೋಷ

ಅರ್ಧ ಕಾಲಸರ್ಪದೋಷ

ಭಾರತೀಯ ಹಿಂದೂ ವೈದಿಕ ಜ್ಯೋತಿಷ್ಯ ಹೇಳುವಂತೆ ಒಂದನ್ನೂ ಬಿಡದೆ ಎಲ್ಲಾ ಏಳು ಗ್ರಹಗಳು ರಾಹು ಮತ್ತು ಕೇತುವಿನ ನೆರಳಿನಲ್ಲೇ ಇದ್ದರೆ ಆಗ ಮಾತ್ರ ಸಂಪೂರ್ಣ ಕಾಲಸರ್ಪ ದೋಷವು ಉಂಟಾಗುವುದು. ಏಳು ಗ್ರಹಗಳಲ್ಲಿ ಒಂದು ಗ್ರಹವು ಇದಕ್ಕಿಂತ ಹೊರಗಡೆ ಅಥವಾ ಬೇರೆ ಬದಿಯಲ್ಲಿ ಇದ್ದರೆ ಆಗ ಅರ್ಧ ಕಾಲಸರ್ಪ ದೋಷವು ಉಂಟಾಗುವುದು.

ಕಾಲಸರ್ಪ ದೋಷವು ನಿಮಗೆ ದುರಾದೃಷ್ಟ ಉಂಟು ಮಾಡಲ್ಲ

ಕಾಲಸರ್ಪ ದೋಷವು ನಿಮಗೆ ದುರಾದೃಷ್ಟ ಉಂಟು ಮಾಡಲ್ಲ

ಕಾಲಸರ್ಪ ದೋಷದ ಜಾತಕ ಹೊಂದಿರುವ ಪ್ರತಿಯೊಬ್ಬರು ದುರಾದೃಷ್ಟಕ್ಕೆ ಒಳಗಾಗುವುದಿಲ್ಲ ಮತ್ತು ಅವರೊಂದಿಗೆ ಪ್ರತಿಯೊಂದು ಕೆಟ್ಟದಾಗಿ ನಡೆಯುವುದಿಲ್ಲ. ಈ ದೋಷವು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಜಾತಕದಲ್ಲಿರುವ ಇತರ ಕೆಲವು ಯೋಗಗಳನ್ನು ಹೊಂದಿಕೊಂಡು ಇರುತ್ತದೆ.

ಮುಂದುವರಿಯುತ್ತದೆ....

ಮುಂದುವರಿಯುತ್ತದೆ....

ಉದಾಹರಣೆಗೆ ಒಬ್ಬ ವ್ಯಕ್ತಿಗೆ ಜಾತಕದಲ್ಲಿ ರಾಜರೋಗವಿದ್ದರೆ ಅಥವಾ ನಾಲ್ಕು ಗ್ರಹಗಳ ದಿಗ್ಬಲಿ ಅಥವಾ 2-3 ಗ್ರಹಗಳ ಉಲ್ಬಣಿಸಿದ್ದರೆ ಮತ್ತು ಜಾತಕದಲ್ಲಿ ಕಾಲಸರ್ಪ ದೋಷವೂ ಇದ್ದರೆ ಆಗ ಕಾಲಸರ್ಪ ದೋಷದ ಪರಿಣಾಮವು ಕಡಿಮೆಯಾಗುವುದು.

ಕಾಲಸರ್ಪದೋಷದ ಲಕ್ಷಣಗಳು

ಕಾಲಸರ್ಪದೋಷದ ಲಕ್ಷಣಗಳು

ಜಾತಕದಲ್ಲಿ ಕಾಲಸರ್ಪ ದೋಷವಿದೆಯೆಂದು ತಿಳಿಯದೆ ಇರುವಂತಹ ವ್ಯಕ್ತಿಗಳಲ್ಲಿ ಈ ಕೆಲವೊಂದು ಲಕ್ಷಣಗಳನ್ನು ಕಾಣಬಹುದಾಗಿದೆ.

ದುಸ್ವಪ್ನಗಳು

ದುಸ್ವಪ್ನಗಳು

ಜಾತಕದಲ್ಲಿ ಕಾಲಸರ್ಪ ದೋಷವಿರುವ ವ್ಯಕ್ತಿಗಳಿಗೆ ನಿಯಮಿತವಾಗಿ ದುಸ್ವಪ್ನಗಳು ಅಥವಾ ಕೆಟ್ಟ ಕನಸುಗಳು ಬೀಳುತ್ತಾ ಇರುತ್ತದೆ. ನಿದ್ರೆ ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ. ಅವರ ಮನಸ್ಸು ಭಯ ಹಾಗೂ ನಕಾರಾತ್ಮಕ ಆಲೋಚನೆಗಳಿಂದ ತುಂಬಿರುತ್ತದೆ.

ಸರ್ಪದ ಕನಸು

ಸರ್ಪದ ಕನಸು

ಜಾತಕದಲ್ಲಿ ಕಾಲಸರ್ಪ ದೋಷವಿರುವ ವ್ಯಕ್ತಿಗಳಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಅವರು ಪದೇ ಪದೇ ಎಚ್ಚರಗೊಳ್ಳುತ್ತಾ ಇರುತ್ತಾರೆ. ಅವರಿಗೆ ಹಾವುಗಳ ಕನಸು ಬೀಳುತ್ತಾ ಇರುತ್ತದೆ. ಯಾರೋ ತಮ್ಮ ಬಳಿಯಲ್ಲೇ ನಿಂತಿರುವ ಅನುಭವ ಅವರಿಗಾಗುತ್ತದೆ.

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಜೀವನದಲ್ಲಿ ಸುಖವಿಲ್ಲದಿರುವುದು

ಜೀವನದಲ್ಲಿ ಸುಖವಿಲ್ಲದಿರುವುದು

ಜಾತಕದಲ್ಲಿ ಕಾಲಸರ್ಪ ದೋಷವಿರುವ ವ್ಯಕ್ತಿಗಳ ಜೀವನದಲ್ಲಿ ಕೆಲವೊಂದು ಕೌಟುಂಬಿಕ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಅವರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಯಶಸ್ಸನ್ನು ತಂದುಕೊಡುವುದೇ ಇಲ್ಲ. ಅವರ ಶತ್ರುಗಳ ಸಂಖ್ಯೆಯು ಹೆಚ್ಚಾಗುತ್ತಾ ಇರುತ್ತದೆ.

English summary

If you suffer from these symptoms then you have kaal sarp dosh

The term Kaal Sarp Dosh is very daunting and haunts the daylights out of people. In fact, if an astrologer happens to mention the very name, people running helter-skelter. But what is Kaal Sarp Dosha and should we be really worried about it? Let’s find out
X
Desktop Bottom Promotion