For Quick Alerts
ALLOW NOTIFICATIONS  
For Daily Alerts

ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು

|

ಅಪ್ಪ ಮಗಳು ಜೊತೆಯಾಗಿ ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಬರೆದಿರುವ ಘಟನೆ ನಡೆದಿದೆ. ಭಾರತೀಯ ವಾಯುಸೇನೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಘಟನೆ ನಡೆದಿದ್ದು, ಈ ಅಭೂತಪೂರ್ವ ಕ್ಷಣಕ್ಕೆ ಬೀದರ್ ಸಾಕ್ಷಿಯಾಗಿತ್ತು. ಏರ್‌ ಕಮಾಂಡರ್ ಸಂಜಯ್ ಶರ್ಮಾ ಹಾಗೂ ಅವರ ಪುತ್ರಿ ಫ್ಲೈಯಿಂಗ್ ಆಫೀಸರ್ ಆಗಿರುವ ಅನನ್ಯಾ ಶರ್ಮಾ ಅವರು ಜೊತೆಯಾಗಿ ಯುದ್ಧ ವಿಮಾನ ಹಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ದಾಖಲೆ ಮಾಡಿದ ಅಪ್ಪ-ಮಗಳು

ದಾಖಲೆ ಮಾಡಿದ ಅಪ್ಪ-ಮಗಳು

ಈ ಸಾಧನೆ ಮಾಡಿದ ಮೊದಲ ಅಪ್ಪ ಮಗಳು ಎಂಬ ದಾಖಲೆಯನ್ನು ಇವರಿಬ್ಬರು ನಿರ್ಮಿಸಿದ್ದಾರೆ. ತಂದೆ-ಮಗಳ ಈ ಜೋಡಿ ಕರ್ನಾಟಕದ ಬೀದರ್‌ನ ಏರ್ ಫೋರ್ಸ್ ಸ್ಟೇಷನ್‌ನಲ್ಲಿ 2022ರ ಮೇ 30 ರಂದು ಹಾಕ್ -132 ಯುದ್ದ ವಿಮಾನವನ್ನು ಹಾರಾಟ ನಡೆಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಫ್ಲೈ ಇನ್ ಫಾರ್ಮೇಶನ್ ನಲ್ಲಿ ಅಪ್ಪ-ಮಗಳು ಪಾಲ್ಗೊಂಡು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. .

ಅಪ್ಪ-ಮಗಳ ಸಾಧನೆಗೆ ವ್ಯಾಪಕ ಮೆಚ್ಚುಗೆ

ಅಪ್ಪ-ಮಗಳ ಸಾಧನೆಗೆ ವ್ಯಾಪಕ ಮೆಚ್ಚುಗೆ

ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್‌ನಲ್ಲಿ ಬಿಟೆಕ್ ಮಾಡಿದ ಅನನ್ಯಾ ಐಎಎಫ್ ಫ್ಲೈಯಿಂಗ್ ಬ್ಯಾಚ್‌ನ ತರಬೇತಿಗೆ 2016ರಲ್ಲಿ ಆಯ್ಕೆಯಾದರು. ನಂತರ ಡಿಸೆಂಬರ್ 2021ರಲ್ಲಿ ಫೈಟರ್ ಪೈಲಟ್ ಆಗಿ ನೇಮಕಗೊಂಡರು. ಅನನ್ಯಾ ಮುಂಚೂಣಿಯಲ್ಲಿರುವ ಯುದ್ಧ ವಿಮಾನದಲ್ಲಿ ಕರ್ತವ್ಯ ಸೇರಿದಂತೆ ಮಿಗ್ -21 ಸ್ಕ್ವಾಡ್ರನ್ ಗೆ ಕಮಾಂಡರ್ ಆಗಿ ಯುದ್ಧವಿಮಾನದ ಕಾರ್ಯಾಚರಣೆಗಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಇನ್ನು ಸಂಜಯ್ ಶರ್ಮಾ 1989ರಿಂದ ಭಾರತೀಯ ವಾಯುಸೇನೆಯ ಫೈಟರ್ ಸ್ಟ್ರೀಮ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಈ ಅಪ್ಪ-ಮಗಳ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತ್ತವಾಗುತ್ತಿದೆ.

ಅಪ್ಪನ ನೋಡಿ ಬೆಳೆದ ಮಗಳು

ಅಪ್ಪನ ನೋಡಿ ಬೆಳೆದ ಮಗಳು

ವಾಯುಸೇನೆಯಲ್ಲಿದ್ದ ಅಪ್ಪನನ್ನು ನೋಡಿಕೊಂಡೇ ಬೆಳೆದ ಮಗಳು ಅನನ್ಯಾ ಶರ್ಮಾ ತಾನು ಅಪ್ಪನಂತೆ ಪೈಲೆಟ್ ಆಗಬೇಕು ಎಂದುಕೊಂಡಿದ್ದಳು. ಇದೀಗ ಆಕೆಯ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಆದರೆ ಅಪ್ಪನ ಜೊತೆಗೆ ಯುದ್ಧ ವಿಮಾನ ಹಾರಿಸಿರುವುದು ವಿಶೇಷಕ್ಕಿಂತ ವಿಶೇಷ ಆಗಿದೆ. ಇನ್ನು ಮಗಳ ಸಾಧನೆ ಬಗ್ಗೆ ಅಪ್ಪ ಸಂಜಯ್ ಶರ್ಮಾಗೂ ಹೆಮ್ಮೆ ಇದೆ.

English summary

IAF Father-Daughter Duo Creates History By Flying Fighter Jets

Here is inspiring story about father and daughter IAF sather-daughter dDuo createshistory By flying fighter jets, Read on,
X
Desktop Bottom Promotion