For Quick Alerts
ALLOW NOTIFICATIONS  
For Daily Alerts

ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು, ಅವನ ಆಶೀರ್ವಾದ ಪಡೆಯಲು ಹೀಗೆ ಪ್ರಾರ್ಥಿಸಿ

|

ಕರ್ಮ, ನ್ಯಾಯದ ದೇವರು ಶನಿಯು ಸೂರ್ಯನ ಮಗ. ಜ್ಯೋತಿಷ್ಯದ ಪ್ರಕಾರ, ಅವನು ಅತ್ಯಂತ ಭಯಾನಕ 'ಗ್ರಹ'ಗಳಲ್ಲಿ ಒಬ್ಬ. ಶನಿಯು ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ಅಡಚಣೆಯನ್ನು ಉಂಟುಮಾಡಿದರೆ ಆ ಸಂದರ್ಭದಲ್ಲಿ, ಯಾವುದೇ ಇತರ ಗ್ರಹಗಳು ಯಾವುದೇ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ನಂಬಲಾಗಿದೆ, ಇದು ಶನಿಯ ಶಕ್ತಿಯಾಗಿದೆ.

123

ಅದೇ ಶನಿಯು ತನ್ನ ಆಶೀರ್ವಾದವನ್ನು ನಿಮ್ಮ ಮೇಲೆ ವರಿಸಿದರೆ ನೀವು ಜೀವನದ ಎಲ್ಲಾ ಸಂಕಷ್ಟಗಳ ವಿರುದ್ಧ ಬಲವಾಗಿ ಹೋರಾಡಬಹುದು. ಒಟ್ಟಾರೆ ಶನಿಯು ನಿಮ್ಮ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳ ನಿಧಾನಗತಿಯ ವಿತರಣೆಯನ್ನು ನಂಬುತ್ತಾರೆ ಮತ್ತು ಕಠಿಣ ಪರಿಶ್ರಮ ಮತ್ತು ಶಿಸ್ತಿನ ನಡವಳಿಕೆಯನ್ನು ಬಯಸುತ್ತಾರೆ.

ಶನಿ ದೇವರ ದುಷ್ಟ ಕಣ್ಣು ನಿಮ್ಮ ಮೇಲೆ ಬೀಳದಿರಲು, ಶನಿಯು ನಿಮ್ಮ ಜೀವನದಲ್ಲಿ ಕೆಟ್ಟ ಸ್ಥಾನದಲ್ಲಿ ಇರದಿರಲು, ನಿಮ್ಮ ಕರ್ಮದ ಫಲದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಶನಿ ದೇವರನ್ನು ಸಮಾಧಾನಪಡಿಸುವುದು ಮುಖ್ಯವಾಗಿದೆ. ಶನಿಯನ್ನು ಸಮಾಧಾನ ಮಾಡುವುದು ಆಚರಣೆ ಹೇಗೆ ಮುಂದೆ ನೋಡೋಣ:

1. ಸಾಸಿವೆ ಎಣ್ಣೆ ಮತ್ತು ಎಳ್ಳನ್ನು ಅರ್ಪಿಸಿ ಮತ್ತು ಶನಿಮಂತ್ರ ಜಪಿಸಿ

1. ಸಾಸಿವೆ ಎಣ್ಣೆ ಮತ್ತು ಎಳ್ಳನ್ನು ಅರ್ಪಿಸಿ ಮತ್ತು ಶನಿಮಂತ್ರ ಜಪಿಸಿ

ಶನಿ ದೇವರನ್ನು ಸಮಾಧಾನಪಡಿಸಲು ಇದು ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ನೀವು ತಾಮ್ರದ ಪಾತ್ರೆಯನ್ನು ತೆಗೆದುಕೊಂಡು ಸಾಸಿವೆ ಎಣ್ಣೆ ಮತ್ತು ಎಳ್ಳು ಸೇರಿಸಿ ಮತ್ತು ಶನಿ ತಾಂತ್ರಿಕ ಮಂತ್ರವನ್ನು ಪಠಿಸುವಾಗ ಶನಿ ದೇವರ ವಿಗ್ರಹಕ್ಕೆ ಈ ಮಿಶ್ರಣವನ್ನು ಅರ್ಪಿಸಬೇಕು. ದೇವರಿಗೆ ಅರ್ಪಿಸುವಾಗ "ಓಂ ಪ್ರಾಂ ಪ್ರೀಂ ಪ್ರಾಂ ಶನೈಶ್ಚರೇ ನಮಃ" ಎಂದು ಹೇಳಿ.

2. ಹನುಮಂತನನ್ನು ಪೂಜಿಸಿ

2. ಹನುಮಂತನನ್ನು ಪೂಜಿಸಿ

ಹನುಮಂತ ಬಹಳ ಬಲಶಾಲಿ ಹಾಗೂ ಶಕ್ತಿವಂತ ದೇವರು, ಸಂಕಷ್ಟದಲ್ಲಿರುವವನ ರಕ್ಷಣೆಗೆ ಬರುತ್ತಾನೆ. ಯಾರು ಹನುಮಂತನನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರಿಗೆ ಶನಿದೇವನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಹನುಮಂತನು ರಾವಣನ ದುಷ್ಟರಿಂದ ಶನಿಯನ್ನು ರಕ್ಷಿಸಿದನು ಎಂದು ನಂಬಲಾಗಿದೆ. ಅಂದಿನಿಂದ ನೀವು ಶನಿ ದೇವರನ್ನು ಸಮಾಧಾನಪಡಿಸಲು ಬಯಸಿದರೆ ನೀವು ಭಗವಾನ್ ಹನುಮಂತನಿಗೆ ನಿಮ್ಮನ್ನು ಅರ್ಪಿಸಬೇಕು ಎಂದು ನಂಬಲಾಗಿದೆ.

3. ದೇಣಿಗೆ ನೀಡಿ

3. ದೇಣಿಗೆ ನೀಡಿ

ಶನಿ ದೇವರನ್ನು ಸ್ತುತಿಸುವ ಅತ್ಯುತ್ತಮ ಮಾರ್ಗವೆಂದರೆ ಅಗತ್ಯವಿರುವವರಿಗೆ ಮತ್ತು ಅನನುಕೂಲಕರರಿಗೆ ನೆರವು ನೀಡುವುದು. ಬಡವರಿಗೆ ದಾನ ಮಾಡುವುದು ನಿಮ್ಮ ಕರ್ಮದ ಕಾರ್ಯಗಳನ್ನು ಸರಿಪಡಿಸಲು ಒಂದು ಮಾರ್ಗವಾಗಿದೆ. ಪ್ರತಿಯಾಗಿ ಏನನ್ನೂ ಬಯಸದೆ ಅಗತ್ಯವಿರುವವರಿಗೆ ಸ್ವಇಚ್ಛೆಯಿಂದ ಮತ್ತು ಸ್ವಯಂಪ್ರೇರಣೆಯಿಂದ ದಾನ ಮಾಡುವವರನ್ನು ಶನಿ ದೇವರು ಆಶೀರ್ವದಿಸುತ್ತಾನೆ.

4. ಅನಗತ್ಯ ಅಸ್ತವ್ಯಸ್ತತೆಯನ್ನು ಸ್ವಚ್ಛಗೊಳಿಸಿ

4. ಅನಗತ್ಯ ಅಸ್ತವ್ಯಸ್ತತೆಯನ್ನು ಸ್ವಚ್ಛಗೊಳಿಸಿ

ಶನಿಯು ನಿಮ್ಮ ಬೆಳವಣಿಗೆಗೆ ಅಗತ್ಯವಿಲ್ಲದ ಎಲ್ಲಾ ವಸ್ತುಗಳನ್ನು ತೆಗೆದುಹಾಕುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ, ನಿಮ್ಮ ಜೀವನದಿಂದ ಏನನ್ನು ತೆಗೆದುಹಾಕಬೇಕು ಎಂದು ಅವನು ನಿರ್ಧರಿಸುವ ಮೊದಲು, ನಿಮ್ಮ ಅವ್ಯವಸ್ಥೆ ಅಥವಾ ಅಸ್ತವ್ಯಸ್ತಗೊಳಿಸುವುದನ್ನು ನೀವೆ ಕಂಡುಕೊಳ್ಳಬೇಕು. ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಸಾಧ್ಯವಾದಷ್ಟು ಕಾಲದಿಂದ ಬಿದ್ದಿರುವ ಎಲ್ಲಾ ಅನಗತ್ಯ ವಸ್ತು, ನಿಮ್ಮ ಬಳಕೆಗೆ ಎಂದಿಗೂ ಬರದ ತ್ಯಾಜ್ಯವನ್ನು ತೊಡೆದುಹಾಕಿ. ಅಲ್ಲದೆ, ನಿಮ್ಮ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳುವ ಮೂಲಕ ಎಲ್ಲಾ ಭೌತಿಕ ಆಲೋಚನೆಗಳು ಮತ್ತು ನಕಾರಾತ್ಮಕ ಪ್ರಭಾವಗಳಿಂದ ನಿಮ್ಮನ್ನು ಮುಕ್ತಗೊಳಿಸಿ.

5. ಅರಳಿ ಮರ ಮತ್ತು ಕಾಗೆಯನ್ನು ಪೂಜಿಸಿ

5. ಅರಳಿ ಮರ ಮತ್ತು ಕಾಗೆಯನ್ನು ಪೂಜಿಸಿ

ಶನಿ ದೇವರನ್ನು ಸ್ತುತಿಸಲು, ನೀವು ಮರಗಳ ರಾಜ ಅರಳಿ ಮರವನ್ನು ಪೂಜಿಸಬೇಕು. ಪ್ರತಿ ಶನಿವಾರ, ಅರಳಿ ಮರದ ಕೊಂಬೆಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸುರಿಯುವುದರ ಮೂಲಕ ಅಥವಾ ಸೂರ್ಯೋದಯಕ್ಕೆ ಮೊದಲು ಪೂಜಿಸುವ ಮೂಲಕ ಶನಿ ದೇವನ ಕೃಪೆಗೆ ಪಾತ್ರರಾಗಬಹುದು.

ಶನಿವಾರದಂದು ನೀವು ಕಾಗೆಗೆ ಆಹಾರವನ್ನು ನೀಡಬೇಕು, ಏಕೆಂದರೆ ಕಾಗೆಯು ಶನಿಯ ವಾಹನ ಎಂದು ನಂಬಲಾಗಿದೆ. ಭಾರತದಲ್ಲಿ ಕಾಗೆಯನ್ನು ಮಂಗಳಕರ ಪಕ್ಷಿಯಾಗಿ ನೋಡಲಾಗುವುದಿಲ್ಲ, ಹೀಗಾಗಿ ನಿಮ್ಮನ್ನು ದುರದೃಷ್ಟದಿಂದ ದೂರವಿರಿಸಲು ನೀವು ಕಾಗೆಯನ್ನು ಸಮಾಧಾನಪಡಿಸುವುದು ಮುಖ್ಯವಾಗುತ್ತದೆ. ಅಲ್ಲದೆ, ಕಾಗೆಗಳು ಎಲ್ಲಕ್ಕಿಂತ ಹೆಚ್ಚು ಮೆಚ್ಚಿನವುಗಳಲ್ಲದಿದ್ದರೂ, ಅವುಗಳು ಎಲ್ಲಕ್ಕಿಂತ ಬುದ್ಧಿವಂತವಾಗಿವೆ; ಆದ್ದರಿಂದ ನೀವು ಬುದ್ಧಿವಂತಿಕೆಯಿಂದ ಆಶೀರ್ವದಿಸಲು ಕಾಗೆಗೆ ಆಹಾರವನ್ನು ನೀಡಬೇಕು.

English summary

How you can worship Lord Shani to keep your karma in check in Kannada

Here we are discussing about How you can worship Lord Shani to keep your karma in check in Kannada. Read more.
X
Desktop Bottom Promotion