For Quick Alerts
ALLOW NOTIFICATIONS  
For Daily Alerts

ಶ್ರಾವಣ ಸೋಮವಾರದಂದು ಶಿವನನ್ನು ಹೇಗೆ ಪೂಜಿಸಬೇಕು?

|

ನಮಗೆಲ್ಲಾ ತಿಳಿದಿರುವಂತೆ ಶಿವನು ಸರಳ ಪೂಜೆಗೆ ಒಲಿಯುವ ದೇವರಾಗಿದ್ದಾರೆ. ಬಿಲ್ವ ಪತ್ರೆಯನ್ನು ಅರ್ಪಿಸಿದರೂ ಆ ಮಹಾದೇವ ತೃಪ್ತಿಯನ್ನು ಹೊಂದಿ ಭಕ್ತರ ಅಭಿಲಾಶೆಗಳನ್ನು ಈಡೇರಿಸುತ್ತಾರೆ. ದುಷ್ಟ ರಾಕ್ಷಸರೂ ಕೂಡ ಶಿವನನ್ನು ಪೂಜಿಸಿ ವರವನ್ನು ಪಡೆದುಕೊಳ್ಳುತ್ತಾರೆ ಅದಕ್ಕಾಗಿಯೇ ದೇವರನ್ನು ಮುಗ್ಧ ಭೋಲೇನಾಥ ಎಂದು ಕರೆಯುತ್ತಾರೆ. ಲೋಕಕ್ಕೆ ಒಳಿತಾಗಲಿ ಎಂದು ವಿಷವನ್ನು ಕುಡಿದ ವಿಷಕಂಠನನ್ನು ಪೂಜಿಸಿ ಅವರನ್ನು ಮೆಚ್ಚಿಸಿಕೊಳ್ಳುವುದು ಸುಲಭವಾಗಿದ್ದರೂ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.

ಶ್ರಾವಣ ಸೋಮವಾರದಂದು ಶಿವನನ್ನು ಪೂಜಿಸುವ ವಿಧಾನವನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಪೂಜೆ ಸಮಯದಲ್ಲಿ ಕೆಲವೊಂದು ಅನುಷ್ಠಾನಗಳನ್ನು ನೀವು ಅನುಸರಿಸಲೇಬೇಕು, ಈ ಕ್ರಮಗಳನ್ನು ಎಂದಿಗೂ ತಪ್ಪಿಸಬಾರದು. ಶ್ರಾವಣ ಮಾಸದಂದು ಎಲ್ಲಾ ದಿನಗಳಂದು ಭಕ್ತರು ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಪೂಜೆಗೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಬ್ರಹ್ಮ ಮುಹೂರ್ತದಲ್ಲಿ ಏಳುವುದು ನಮ್ಮ ಧನಾತ್ಮಕ ಶಕ್ತಿಯನ್ನು ಊರ್ಜಿತಗೊಳಿಸುತ್ತದೆ ಮತ್ತು ಸುತ್ತಲಿನ ಸಾತ್ವಿಕ ಅಂಶಗಳನ್ನು ಬಲಪಡಿಸುತ್ತದೆ. ಶ್ರಾವಣ ಸೋಮವಾರದಂದು ಬಿಳಿ ಬಟ್ಟೆಗಳನ್ನು ಧರಿಸಬೇಕು. ಇದು ಶಾಂತಿ ಮತ್ತು ಕ್ಷಮೆಯ ಸಂಕೇತವಾಗಿದೆ. ಹಾಗೆಯೇ ಶಿವನಿಗೆ ಬಿಳಿ ಬಣ್ಣ ಹೆಚ್ಚು ಪ್ರಿಯವಾದುದಾಗಿದೆ. ಬಿಳಿ ಹೂವನ್ನು ಕೂಡ ನಾವು ದೇವರಿಗೆ ಅರ್ಪಿಸುತ್ತೇವೆ.

ಶ್ರಾವಣ ಮುಗಿಯುವುದರೊಳಗೆ ಶಿವನ ಕೃಪೆಗೆ ಪಾತ್ರರಾಗಿ!

How To worship lord Shiva

ಪೂಜಾ ತಟ್ಟೆಯಲ್ಲಿ ಏನು ಇಡಬೇಕು

ಪೂಜಾ ತಟ್ಟೆಯಲ್ಲಿ ನೀವು ಕೆಳಗಿನ ಪರಿಕರಗಳನ್ನು ಇರಿಸಬೇಕು

ಗಂಗಾಜಲ, ನೀರು, ದನದ ಹಾಲು, ಮೊಸರು, ಹೂವುಗಳು, ಬಿಲ್ವ ಪತ್ರೆ, ಜೇನು, ಬೆಲ್ಲ, ತುಪ್ಪ, ಕರ್ಪೂರ, ಹತ್ತಿ, ಅಡಿಕೆ, ಯೋಗಪವಿತ್, ಏಲಕ್ಕಿ, ದಾಲ್ಚಿನ್ನಿ, ವೀಳ್ಯದೆಲೆ, ಹಳದಿ ಚಂದನ, ಧೂಪ, ದೀಪ, ದತ್ತೂರ, ಭಾಂಗ್, ಜಲಪತ್ರೆ, ನೈವೇದ್ಯ, ಜನೇವು, ಬಟ್ಟೆ,

ಶ್ರಾವಣ ಸೋಮವಾರದಂದು ಪೂಜೆಯನ್ನು ಹೇಗೆ ಮಾಡಬೇಕು

ಮೊದಲಿಗೆ ಶಿವಲಿಂಗಕ್ಕೆ ನೀರು ಹಾಕಿ ಶುದ್ಧೀಕರಿಸಬೇಕು. ಶಿವ ಧ್ಯಾನ ಮಾಡುತ್ತಾ ದೇವರಿಗೆ ನೀರು ಅರ್ಪಿಸಿ. ಜಲಪತ್ರೆಯಲ್ಲಿ ಈ ನೀರನ್ನು ಬಳಸಬೇಕು.

ಶಿವಲಿಂಗಕ್ಕೆ ಪಂಚಾಮೃತವನ್ನು ಅಭಿಷೇಕ ಮಾಡಿ

ಹಾಲು, ಮೊಸರು, ತುಪ್ಪ, ಜೇನು ಹಾಗೂ ಸಕ್ಕರೆಯನ್ನು ಬೆರೆಸಿ ಮಾಡಿದ ಪ್ರಸಾದವೇ ಪಂಚಾಮೃತವಾಗಿದೆ. ಈ ಮಿಶ್ರಣವನ್ನು ಶಿವಲಿಂಗಕ್ಕೆ ಅರ್ಪಿಸುಬೇಕು. ಐದು ಅಂಶಗಳನ್ನು ಬಳಸಿ ಮಾಡಿದ ಮಿಶ್ರಣದಿಂದ ದೇವರನ್ನು ಶುದ್ಧೀಕರಿಸಬೇಕು. ಇದರ ನಂತರ ಸುಗಂಧ ಸ್ನಾನವನ್ನು ಮಾಡಬೇಕು. ಕೇಸರಿ ಜಲವನ್ನು ಅರ್ಪಿಸಿ ಇದನ್ನು ಮಾಡಲಾಗುತ್ತದೆ. ತಿಲಕಕ್ಕೆ ಶೀಗ್ರಂಧವನ್ನು ಲೇಪಿಸಿ. ಸೆಂಟು, ಜೇನವು, ಮೋಲಿ, ಬಟ್ಟೆ ಬಿಲ್ವಪತ್ರೆಯನ್ನು ಅರ್ಪಿಸಿ ಪೂಜೆಯನ್ನು ಪ್ರಾರಂಭಿಸಿ. ದೀಪವನ್ನು ಧೂಪವನ್ನು ಬೆಳಗಿಸಿ. ಐದು, ಹನ್ನೊಂದು, ಇಪ್ಪತ್ತೊಂದು, ಐವತ್ತೊಂದರಂತೆ ನೀವು ಬಿಲ್ವಪತ್ರೆಯನ್ನು ಅರ್ಪಿಸಬೇಕು. ಇದು ವ್ಯಕ್ತಿಯ ರೋಗವನ್ನು ನಿವಾರಿಸುತ್ತದೆ.

ಯಾವ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಕು

ದೇವರಿಗೆ ಬೇರೆ ಬೇರೆ ಹೂವುಗಳನ್ನು ಅರ್ಪಿಸಿ ಶಿವ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಇಲ್ಲಿ ನಾವು ಯಾವ ಹೂವುಗಳನ್ನು ದೇವರಿಗೆ ಅರ್ಪಿಸಬಹುದು ಎಂಬ ಪಟ್ಟಿಯನ್ನು ನೀಡುತ್ತಿದ್ದೇವೆ.

ಪುತ್ರ ಪ್ರಾಪ್ತಿ

ಮಗುವನ್ನು ದೇವರ ಅನುಗ್ರಹದಿಂದ ಪಡೆದುಕೊಳ್ಳಲು, ಅಕ ಮತ್ತು ಧತ್ತೂರವನ್ನು ಶಿವನಿಗೆ ಅರ್ಪಿಸಬೇಕು. ವಾಹನವನ್ನು ಹೊಂದಲು ಮಲ್ಲಿಗೆಯನ್ನು ನೀಡಿ. ವಾಹನ ಭಾಗ್ಯದ ಅವಕಾಶ ಕೆಲವರಿಗೆ ಜಾತಕದಲ್ಲಿ ಬರೆದಿರುತ್ತದೆ. ವಾಹನಗಳ ಖರೀದಿಗೆ ಅವರಿಗೆ ವಿಘ್ನವುಂಟಾಗುವುದಿಲ್ಲ. ಬಿಳಿಯ ಮಲ್ಲಿಗೆಯನ್ನು ದೇವರಿಗೆ ಅರ್ಪಿಸುವುದರಿಂದ ಅವರು ವಾಹನ ಸೌಭಾಗ್ಯ ನಮಗೆ ದೊರೆಯುವಂತೆ ಮಾಡುತ್ತಾರೆ.

ಧನ ಪ್ರಾಪ್ತಿ

ಧನ ಎಂದರೆ ಹಣ ಅಂತೆಯೇ ಪ್ರಾಪ್ತಿ ಎಂದರೆ ಲಭಿಸುವುದು ಎಂದಾಗಿದೆ. ಧನ ಪ್ರಾಪ್ತಿಗಾಗಿ ನಾವು ದೇವರಿಗೆ ತಾವರೆಯನ್ನು ಅರ್ಪಿಸಬೇಕು. ಶಂಖ ಪುಷ್ಪ ಮತ್ತು ಜೂಹಿ ಹೂವುಗಳನ್ನು ದೇವರಿಗೆ ಅರ್ಪಿಸುವುದರಿಂದ ಧನಪ್ರಾಪ್ತಿ ಯೋಗಕ್ಕೆ ಪಾತ್ರರಾಗಬಹುದು.

ವಿವಾಹ

ನೀವು ವಿವಾಹ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಬಿಲ್ವ ಪತ್ರೆ ದೇವರಿಗೆ ಹೆಚ್ಚು ಪ್ರಿಯವಾದುದು. ತಾವು ಮೆಚ್ಚಿರುವ ಪತಿಯನ್ನು ಪಡೆಯಲು ಅಥವಾ ಶಿವನಂತಹ ಪತಿಯನ್ನು ಪಡೆಯಲು ಬಿಲ್ವ ಪತ್ರೆಯನ್ನು ಅರ್ಪಿಸುವುದರಿಂದ ವಿವಾಹ ಯೋಗ್ಯ ಲಭಿಸುತ್ತದೆ.

ಮಾನಸಿಕ ಶಾಂತಿ

ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಅತ್ಯಗತ್ಯವಾದುದು. ಪಾರಿಜಾತ ಹೂವನ್ನು ದೇವರಿಗೆ ಅರ್ಪಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.

ಕುಟುಂಬ ಒಡಕು

ಕುಟುಂಬದಲ್ಲಿ ಕಲಹ, ಜಗಳಗಳು ಇದ್ದಲ್ಲಿ ಹಳದಿ ಕರವೀರ ಹೂವನ್ನು ಶಿವನಿಗೆ ಅರ್ಪಿಸಬೇಕು.

ಶ್ರಾವಣ ಮಾಸದಲ್ಲಿ ತಪ್ಪದೇ ಮಾಡಿ ಈ ಕೆಲಸವ, ಶಿವ ಖುಷಿ ಪಡುವನು

ಆರತಿಯೊಂದಿಗೆ ಪೂಜೆಯನ್ನು ಮುಗಿಸಿ

ಈ ಎಲ್ಲಾ ವಸ್ತುಗಳನ್ನು ದೇವರಿಗೆ ಅರ್ಪಿಸಿ ನಂತರ ಆರತಿಯನ್ನು ಬೆಳಗಬೇಕು ಜಯ ಶಿವ ಓಂಕಾರ ನಂತರ ಕ್ಷಮಾ ಮಂತ್ರವನ್ನು ಪಠಿಸಬೇಕು
ಅವಾಹನಾಮ್ ನ ಜನಮಿ;ನ ಜನಮಿ ತವರ್‌ಹಕನಮ್
ಪೂಜಾಶ್ರಾವ್ ನ ಜನಮಿ; ಕ್ಷಮಯಾತಾಮ್ ಪರಮೇಶ್ವರಹ

ಮರೆಯಬೇಡಿ: ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ಸೇವಿಸಬಾರದು. ಶಿವ ಗಣಗಳು ಅವರ ಪ್ರಸಾದವನ್ನು ಸೇವಿಸುತ್ತಾರೆ ಎಂದು ಹೇಳುತ್ತಾರೆ.

English summary

How to Worship Shiva in the Auspicious Shravana Month

We all have heard that Lord Shiva can be pleased with minimal offerings. We all have heard this so many times. Pleasing him becomes easier as well as vital in the month of Shravana. There are a few points which we must not forget while worshipping Lord Shiva. We have brought to you the procedure to worship Lord Shiva on a Shravana Monday. There are some rules which you must not violate and some things which you must not forget to keep in the puja tray.
X
Desktop Bottom Promotion