For Quick Alerts
ALLOW NOTIFICATIONS  
For Daily Alerts

ಧನ, ವೈಭವ ಪ್ರಾಪ್ತಿಗಾಗಿ ಮನೆಯಲ್ಲಿಯೇ ಚೈತ್ರ ಪೌರ್ಣಿಮೆಯನ್ನು ಆಚರಿಸುವುದು ಹೇಗೆ?

|

ಹಿಂದೂ ಧರ್ಮದಲ್ಲಿ ಪೂರ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪೂರ್ಣಿಮೆ ದಿನದಂದು ಶಿವ ಮತ್ತು ವಿಷ್ಣುವನ್ನು ಉಪವಾಸವಿದ್ದು ಆರಾಧನೆ ಮಾಡಲಾಗುವುದು. ಚೈತ್ರ ಪೂರ್ಣಿಮೆಯಂದು ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ಹಿಂದೂ ವರ್ಷದ ಮೊದಲು ಬರುವ ಹುಣ್ಣಿಮೆಯೇ ಚೈತ್ರ ಪೂರ್ಣಿಮೆ. ಇದೇ ದಿನ ಹನುಮಾನ್ ಜಯಂತಿಯನ್ನು ಆಚರಿಸಲಾಗುವುದು. ಅಲ್ಲದೆ ಈ ದಿನ ಸತ್ಯನಾರಾಯಣನ ಉಪವಾಸ ಮಾಡಲಾಗುವುದು. ಚೈತ್ರ ಪೂರ್ಣಿಮೆ ಹಾಗೂ ಚಿತ್ರ ಪೂರ್ಣಿಮೆ ಬೇರೆಯಾಗಿದ್ದು, ಬೇರೆ-ಬೇರೆ ತಿಂಗಳಿನಲ್ಲಿ ಬರುವುದು. 2021ರಲ್ಲಿ ಏಪ್ರಿಲ್‌ 27ರಂದು ಇರುವುದು ಚೈತ್ರ ಪೂರ್ಣಿಮೆಯಾಗಿದೆ.

ಈ ದಿನ ಉಪವಾಸ ವ್ರತ ಮಾಡಿ ಸತ್ಯನಾರಾಯಣ ಆರಾಧನೆ ಮಾಡಿದರೆ ಧನ, ವೈಭವ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು. ಮನೆಯಲ್ಲಿ ಪೌರ್ಣಿಮೆ ವ್ರತ ಮಾಡುವುದು ಹೇಗೆ, ಈ ದಿನ ಮಾಡುವ ದಾನದ ಮಹತ್ವವೇನು ಎಂದು ಹೇಳಲಾಗಿದೆ ನೋಡಿ:

ಮನೆಯಲ್ಲಿಯೇ ಚೈತ್ರ ಪೌರ್ಣಿಮೆ ವ್ರತ ಮಾಡುವುದು ಹೇಗೆ?

ಮನೆಯಲ್ಲಿಯೇ ಚೈತ್ರ ಪೌರ್ಣಿಮೆ ವ್ರತ ಮಾಡುವುದು ಹೇಗೆ?

ಚೈತ್ರ ಪೂರ್ಣಿಮೆಯೆಂದು ಸಾಮಾನ್ಯವಾಗಿ ಪುಣ್ಯ ನದಿಯಲ್ಲಿ ಹೋಗಿ ಸ್ನಾನ ಮಾಡಿ ವ್ರತ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಈ ಬಾರಿ ಕೊರೊನಾ ಕಾರಣ ನದಿಗೆ ಹೋಗಿ ಸ್ನಾನ ಮಾಡಬೇಡಿ, ಮನೆಯಲ್ಲಿ ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿ. ನಂತರ ಉಪವಾಸವಿದ್ದು ವಿಷ್ಣುವನ್ನು ಹಾಗೂ ಆಂಜನೇಯನನ್ನು ಆರಾಧಿಸಿ.

ವಿಷ್ಣು ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಿಸಿ

ವಿಷ್ಣು ಮಂತ್ರ

ವಿಷ್ಣು ಮಂತ್ರ

ಓಂ ನಮೋ ಭಗವತೇ ವಾಸುದೇವಾಯ ನಮಃ

ಓಂ ಶ್ರೀಮ್‌ ಕೃಷ್ಣಾಯ ಶ್ರೀಮ್‌ ಶ್ರೀಮ್ ಶ್ರೀಮ್ ಗೋವಿಂದಾಯ ಗೋಪಾಲಯ ಗೋಲೋಕಾ ಸುಂದರಾಯ ಸತ್ಯಾಯ ಪರಮಾತ್ಮನೇ, ಪಾರಾಯ ವೈಖನಸಾಯ ವೈರಾಜಮೂರ್ತಯೇ ಮೇಶಾತ್ಮಾನ್ ಶ್ರೀಮ್ ನರಸಿಂಹವಾಸ ನಮಃ

ಹನುಮಾನ್ ಚಾಲೀಸ ಪಠಿಸಿ.

ಹನುಮಾನ್ ಚಾಲೀಸ ಪಠಿಸಿ.

ಹನುಮಾನ್ ಚಾಲೀಸಾ ಪಠಣೆ ಮಾಡುವ ಮುನ್ನ ಹನುಮಂತ್ರನ ಫೋಟದ ಮುಂದೆ ಕಮಂಡಲದಲ್ಲಿ ನೀರನನ್ನು ಇಡಿ, ಪಠಣೆ ಮುಗಿದ ಬಳಿಕ ಆ ನೀರನ್ನು ಪ್ರಸಾದದ ರೂಪದಲ್ಲಿ ಸೇವಿಸಬೇಕು. ಅಲ್ಲದೆ ಮನೆಯಲ್ಲಿ ಈ ಆ ನೀರನ್ನು ಸಿಂಪಡಿಸಿ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.

ಚಂದ್ರನನ್ನು ಪೂಜಿಸಿ

ಚೈತ್ರ ಪೌರ್ಣಿಮೆಯೆಂದು ಚಂದ್ರನನ್ನು ಪೂಜಿಸುವುದರಿಂದ ಚಂದ್ರದೋಷವಿದ್ದರೆ ಅದು ದೂರವಾಗುವುದು. ನಂತರ ಸತ್ಯನಾರಾಯಣ ಕತೆ ಓದಿ.

ಚೈತ್ರ ಪೌರ್ಣಿಮೆಯಂದು ಮಾಡುವ ದಾನ

ಚೈತ್ರ ಪೌರ್ಣಿಮೆಯಂದು ಮಾಡುವ ದಾನ

ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಪೌರ್ಣಿಮೆಯಂದು ಮಾಡುವ ದಾನಕ್ಕೆ ದುಪ್ಪಟ್ಟು ಫಲ ಸಿಗುವುದು. ಈ ದಿನ ನಿರ್ಗತಿಕರಿಗೆ ಹಣ ನೀಡಿ. ಈ ದಿನ ಬೆಳಗ್ಗೆ ಗಾಯತ್ರಿ ಮಂತ್ರದೊಂದಿಗೆ ಸೂರ್ಯನಿಗೆ ಆರ್ಘ್ಯ ನೀಡಿ. ಬಟ್ಟೆ, ಅಕ್ಕಿ, ತರಕಾರಿಗಳನ್ನು ದಾನ ಮಾಡಿ.

English summary

How To Celebrate Chitra Pournami At Home To Get Success

How to celebrate chitra pournami at home to get money and success and what to donate on this day, read on...
X