For Quick Alerts
ALLOW NOTIFICATIONS  
For Daily Alerts

ಬೈಜನಾಥ್ ಸ್ಥಾಪನೆಯಾದ ಸ್ಟೋರಿ-ಕೊನೆಗೂ ರಾವಣನ ಆಸೆ ಈಡೇರಲೇ ಇಲ್ಲ!

By Hemanth
|

ಭಕ್ತರಿಗೆ ಈಶ್ವರ ದೇವರು ತುಂಬಾ ಸುಲಭ ಹಾಗು ಬೇಗನೆ ಒಲಿಯುವರು ಎಂದು ಹೇಳಲಾಗುತ್ತದೆ. ನಾವು ಪುರಾಣಗಳನ್ನು ಓದಿದಾಗ ಇದೇ ಕಾರಣದಿಂದಾಗಿ ಹಲವಾರು ಮಂದಿ ಈಶ್ವರ ದೇವರನ್ನು ಒಲಿಸಿಕೊಂಡು ವರವನ್ನು ಪಡೆದಿರುವುದನ್ನು ಕೇಳಿದ್ದೇವೆ ಅಥವಾ ಓದಿಕೊಂಡಿದ್ದೇವೆ. ಭಕ್ತರ ಪ್ರಿಯ ದೇವರಾಗಿರುವಂತಹ ಈಶ್ವರ ದೇವರು ಬೇಗನೆ ಒಲಿಯಲು ಹಲವಾರು ಕಾರಣಗಳು ಇವೆ.

ಆದರೆ ಇದನ್ನೇ ಕೆಲವು ರಾಕ್ಷಸರು ದುರುಪಯೋಗ ಪಡಿಸಿಕೊಂಡಿರುವರು. ಇದರಲ್ಲಿ ಮುಖ್ಯವಾಗಿ ಲಂಕಾದ ಅಧಿಪತಿಯಾಗಿದ್ದ ರಾವಣನು ಈಶ್ವರನ ಪರಮಭಕ್ತನಾಗಿದ್ದ. ಪ್ರತಿನಿತ್ಯವೂ ಆತ ಈಶ್ವರ ದೇವರನ್ನು ಆರಾಧಿಸುತ್ತಿದ್ದ. ಒಂದು ಸಲ ಶಿವನನ್ನು ಒಲಿಸಿಕೊಳ್ಳಲು ರಾವಣನು ಹಲವಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ರಾವಣನು ದುರ್ಬುದ್ಧಿ ತಿಳಿದಿದ್ದ ಶಿವನು ಪ್ರತ್ಯಕ್ಷರಾಗಲೇ ಇಲ್ಲ. ಇದರಿಂದ ಕಂಗೆಟ್ಟ ರಾವಣನು ಈಶ್ವರ ದೇವರನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೇರೆ ದಾರಿ ಹುಡುಕಿದೆ. ಈ ವೇಳೆ ಆತ ತನ್ನ ಹತ್ತು ತಲೆಗಳಲ್ಲಿ 9 ತಲೆಗಳನ್ನು ಒಂದೊಂದಾಗಿಯೇ ಕಡಿಯುತ್ತಾ ಹೋದ. ಹತ್ತನೇ ತಲೆ ಕಡಿಯಲು ಸಿದ್ಧವಾಗುತ್ತಾ ಇದ್ದಂತೆ ಈಶ್ವರ ದೇವರು ಪ್ರತ್ಯಕ್ಷರಾದರು.

ಈಶ್ವರ ದೇವರು ರಾವಣನ ಮುಂದೆ ಪ್ರತ್ಯಕ್ಷರಾಗುವರು

ಈಶ್ವರ ದೇವರು ರಾವಣನ ಮುಂದೆ ಪ್ರತ್ಯಕ್ಷರಾಗುವರು

ರಾವಣನ ಭಕ್ತಿಗೆ ಒಲಿದ ಈಶ್ವರ ದೇವರು ಪ್ರತ್ಯಕ್ಷರಾಗುವರು. ಈ ವೇಳೆ ರಾವಣನು ವರ ಒಂದನ್ನು ಕೇಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಬಂದು ನೆಲೆಸಬೇಕೆಂದು ರಾವಣನು ವರವನ್ನು ಕೇಳುತ್ತಾನೆ. ಆತನ ಮಾತಿಗೆ ಈಶ್ವರ ದೇವರು ಒಪ್ಪಿಕೊಳ್ಳುವರು. ತನ್ನ ಸಂಕೇತವಾಗಿ ಎರಡು ಶಿವಲಿಂಗವನ್ನು ಆತನಿಗೆ ನೀಡುವರು. ಶಿವಲಿಂಗ ನೀಡುವ ಮೊದಲು ಈಶ್ವರ ದೇವರು ರಾವಣನಿಗೆ ಒಂದು ಮಾತನ್ನು ಹೇಳುವರು. ಎಲ್ಲಿ ಈ ಶಿವಲಿಂಗವನ್ನು ನೆಲದ ಮೇಲೆ ಇಡಲಾಗುತ್ತದೆಯಾ ಅಲ್ಲಿಯೇ ಅದು ಸ್ಥಾಪಿತವಾಗುವುದು ಎಂದು ಹೇಳುವರು. ತನ್ನ ರಾಜ್ಯವನ್ನು ತಲುಪುವ ತನಕ ಅದನ್ನು ನೆಲದ ಮೇಲೆ ಇಡಬಾರದು ಎಂದು ಈಶ್ವರ ದೇವರು ಹೇಳುವರು.

Most Read: ಶಿವ ಪೂಜೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ರಾವಣ ಲಂಕೆಯತ್ತ ಪ್ರಯಾಣ ಬೆಳೆಸಿದ

ರಾವಣ ಲಂಕೆಯತ್ತ ಪ್ರಯಾಣ ಬೆಳೆಸಿದ

ಈಶ್ವರ ದೇವರಿಂದ ವರ ಕೇಳಿ ಅವರಿಂದ ಆಶೀರ್ವಾದ ಪಡೆದ ಬಳಿಕ ರಾವಣನು ತನ್ನ ರಾಜ್ಯ ಲಂಕೆಯತ್ತ ಪ್ರಯಾಣ ಬೆಳೆಸಲು ಮುಂದಾಗುತ್ತಾನೆ. ಕೈಲಾಶ ಪರ್ವತದಿಂದ ಲಂಕೆಗೆ ಪ್ರಯಾಣ ಬೆಳೆಸುವುದು ದೀರ್ಘ ದಾರಿಯಾಗಿರುವುದು. ಪ್ರಯಾಣದ ಮಧ್ಯದಲ್ಲಿ ರಾವಣನಿಗೆ ತುಂಬಾ ಬಾಯಾರಿಕೆಯಾಗುವುದು. ನೀರನ್ನು ಕುಡಿಯಬೇಕಾದರೆ ಆತ ಆ ಎರಡು ಶಿವಲಿಂಗಗಳನ್ನು ಎಲ್ಲಾದರೂ ಇಡಲೇಬೇಕಾಗುತ್ತದೆ. ನೆಲದ ಮೇಲೆ ಶಿವಲಿಂಗವನ್ನು ಇಡಬಾರದು ಎಂದು ಈಶ್ವರ ದೇವರು ಮೊದಲೇ ಹೇಳಿರುವರು. ಇದರಿಂದ ರಾವಣನು ತನ್ನ ಬಾಯಾರಿಕೆಯನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುವನು.

ರಾವಣನು ದನಗಾಹಿ ಬೈಜುವನ್ನು ಭೇಟಿಯಾಗುವನು

ರಾವಣನು ದನಗಾಹಿ ಬೈಜುವನ್ನು ಭೇಟಿಯಾಗುವನು

ರಾವಣನು ಹೇಗಾದರೂ ತನ್ನ ಬಾಯಾರಿಕೆಯನ್ನು ನಿಯಂತ್ರಿಸಿಕೊಳ್ಳುತ್ತಾ ಮುಂದುವರಿಯಬೇಕಾದರೆ ಆತನಿಗೆ ದನಗಾಹಿ ಬೈಜು ಎಂಬಾತನು ಸಿಗುತ್ತಾನೆ. ಬೈಜು ತನ್ನ ದನಗಳನ್ನು ಮೇಯಿಸುತ್ತಿರುತ್ತಾನೆ. ದನಗಾಹಿಯ ನೆರವಿನಿಂದ ಸ್ವಲ್ಪ ನೀರನ್ನು ಕುಡಿಯಬಹುದು ಎಂದು ರಾವಣನು ಆಲೋಚನೆ ಮಾಡುತ್ತಾನೆ. ಇದಕ್ಕಾಗಿ ಆತ ಅಲ್ಲಿ ಸ್ವಲ್ಪ ಹೊತ್ತು ನಿಲ್ಲಲು ನಿರ್ಧರಿಸುತ್ತಾನೆ. ಅಲ್ಲಿ ಆತ ನಿಂತು ಊರಿನ ಹೆಸರು ಕೇಳಿದಾಗ, ಅದು ಬೈಜನಾಥ್ ಮತ್ತು ಆತನ ಹೆಸರು ಬೈಜು ಎಂದು ಹೇಳುತ್ತಾನೆ. ಸ್ವಲ್ಪ ಸಮಯ ಅಂದರೆ ನೀರು ಕುಡಿದು ಬರುವ ತನಕ ಶಿವಲಿಂಗವನ್ನು ಹಿಡಿದುಕೊಳ್ಳು ಎಂದು ರಾವಣನು ಬೈಜು ಹತ್ತಿರ ಮನವಿ ಮಾಡಿಕೊಳ್ಳುವನು.

Most Read:ರಾವಣನ ಬಗ್ಗೆ ನೀವು ತಿಳಿದಿರದ ರಹಸ್ಯ ಸಂಗತಿಗಳು

ಬೈಜು ತಪ್ಪು ಮಾಡುವನು

ಬೈಜು ತಪ್ಪು ಮಾಡುವನು

ಬೈಜು ರಾವಣನಿಗೆ ನೆರವಾಗಲು ಒಪ್ಪಿಕೊಳ್ಳುತ್ತಾನೆ. ಆತ ರಾವಣನಿಂದ ಎರಡು ಶಿವಲಿಂಗವನ್ನು ಪಡೆದುಕೊಳ್ಳುವನು ಮತ್ತು ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾನೆ. ರಾವಣನಿಗೆ ಕಾಯುತ್ತಾ ಇರುವಾಗ ಆತನ ಗೋವುಗಳು ಅಲ್ಲೇ ಮೇಯುತ್ತಾ ಇರುತ್ತವೆ. ಅದಾಗ್ಯೂ, ಶಿವಲಿಂಗವನ್ನು ಸಾಮಾನ್ಯ ವ್ಯಕ್ತಿಗಳು ಹೆಚ್ಚು ಹೊತ್ತು ಹಿಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದರಿಂದ ತುಂಬಾ ಶಕ್ತಿಯು ಹೊರಬರುತ್ತಲಿರುತ್ತದೆ. ಬೈಜುಗೆ ಕೂಡ ಹೀಗೆ ಆಯಿತು. ಶಿವಲಿಂಗವನ್ನು ದೀರ್ಘ ಸಮಯದ ತನಕ ಹಿಡಿದುಕೊಳ್ಳಲು ಸಾಧ್ಯವಾಗದೆ ಇರುವಾಗ ಬೈಜು ಅದನ್ನು ನೆಲದ ಮೇಲಿಟ್ಟ.

ಬೈಜನಾಥ್ ಸ್ಥಾಪನೆಯಾಯಿತು

ಬೈಜನಾಥ್ ಸ್ಥಾಪನೆಯಾಯಿತು

ಶಿವಲಿಂಗವು ನೆಲದ ಮೇಲಿಟ್ಟ ಜಾಗವು ಬೈಜನಾಥ್ ಆಗಿ ಸ್ಥಾಪನೆಗೊಂಡಿತು ಮತ್ತು ಈ ಸ್ಥಳವು ಶಿವನ ಅತಿ ಪವಿತ್ರ ಕ್ಷೇತ್ರವಾಗಿರುವುದು. ಇದರ ಪರಿಣಾಮವಾಗಿ ರಾವಣನು ತನ್ನ ರಾಜ್ಯಕ್ಕೆ ಖಾಲಿ ಕೈಯಲ್ಲಿ ತೆರಳಿದ ಮತ್ತು ಬೈಜು ಶಿವಲಿಂಗವನ್ನು ಇಟ್ಟ ಜಾಗದಲ್ಲಿ ಮಂದಿರವು ನಿರ್ಮಾಣವಾಯಿತು. ಒಂದು ಶಿವಲಿಂಗವನ್ನು ಚಂದ್ರ ಮಾಲಾ ಮತ್ತೊಂದು ಶಿವಲಿಂಗವನ್ನು ಬೈಜನಾಥ ಎಂದು ಕರೆಯಲಾಗುತ್ತದೆ.

Read more about: shiva spirituality
English summary

How Ravana's One Wish Lead To The Making Of Baijnath

Both Gokarna and Baijnath are famous places where Lord Shiva is worshipped. It is said that Ravana played a very significant role in making both these holy places. He wanted Lord Shiva to stay with him in his kingdom. Does Lord Shiva agree and does Ravana become successful in pleasing Lord Shiva? Ravana's Unfulfilled Wish
X
Desktop Bottom Promotion