ರಾಹುವಿನ ಸ್ಥಾನವನ್ನು ಅರಿತುಕೊಂಡು ಭವಿಷ್ಯದಲ್ಲಿ ಮುನ್ನಡೆಯಿರಿ!

Posted By: Jaya subramanya
Subscribe to Boldsky

ನಮ್ಮ ಬಗ್ಗೆ ನಾವು ತಿಳಿದುಕೊಂಡಾಗ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧಿಸಲು ನಮ್ಮಿಂದ ಸಾಧ್ಯವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅರಿಯುವ ಬಗ್ಗೆ ಕೆಲವೊಂದು ವಿಧಾನಗಳಿದ್ದು ಇದರ ಮೂಲಕ ನಮ್ಮ ಬಲಹೀನತೆ ಮತ್ತು ಬಲವನ್ನು ಅರಿತುಕೊಳ್ಳಬಹುದು.

ನಮ್ಮ ಜನ್ಮಕುಂಡಲಿಯಲ್ಲಿ ರಾಹು ಗ್ರಹದ ಸ್ಥಿತಿಯನ್ನು ಅರಿತುಕೊಂಡು ನಮ್ಮ ಸಾಮರ್ಥ್ಯವನ್ನು, ಬಲಹೀನತೆಯನ್ನು ಮನದಟ್ಟು ಮಾಡಿಕೊಳ್ಳಬಹುದಾಗಿದೆ. ರಾಹುವಿನ ಕುರಿತಾಗಿ ಪುರಾಣಗಳಲ್ಲಿ ಹಲವಾರು ಉಲ್ಲೇಖಗಳಿದ್ದು ಈ ಕಥೆಗಳು ಮತ್ತು ಘಟನೆಗಳ ಮೂಲಕ ರಾಹುವಿನ ಪ್ರಾಮುಖ್ಯತೆಯನ್ನು ಮಹತ್ವವನ್ನು ಮನದಟ್ಟು ಮಾಡಿಕೊಳ್ಳಬಹುದಾಗಿದೆ.

ಒಮ್ಮೆ ದೇವತೆಗಳು ಮತ್ತು ಅಸುರರು ಸರ್ವ ರೋಗವನ್ನು ಪರಿಹರಿಸುವ ಮಾಂತ್ರಿಕ ಸಸ್ಯವನ್ನು ಅರಸುತ್ತಾ ಪ್ರಯಾಣಿಸುತ್ತಾರೆ. ಅಸುರರ ನಾಯಕ ಸ್ವರ್ಭಾನು ಎಂಬಾತನಾಗಿರುತ್ತಾನೆ. ಹೀಗೆ ಸಾಗುತ್ತಾ ಇರುವಾಗ ಒಂದೆಡೆಯಲ್ಲಿ ಈ ಮಾಂತ್ರಿಕ ಸಸ್ಯ ಅವರ ಕಣ್ಣಿಗೆ ಬೀಳುತ್ತದೆ. ಅಸುರರಿಗೆ ಈ ಸಸ್ಯ ದೊರಕದಂತೆ ಮಾಡಬೇಕು ಮತ್ತು ಇದನ್ನು ಅವರು ಪಡೆದುಕೊಂಡಲ್ಲಿ ಅನರ್ಥ ಸಂಭವಿಸಬಹುದು ಎಂಬುದಾಗಿ ಯೋಚಿಸಿ ದೇವತೆಗಳು ಅದನ್ನು ಮರೆಮಾಡಲು ನಿರ್ಧರಿಸುತ್ತಾರೆ. ಇದನ್ನರಿತ ಅಸುರ ನಾಯಕ ಸ್ವರ್ಭಾನು ಈ ಸಸ್ಯವನ್ನು ಅಡಗಿಸಲು ಪ್ರಯತ್ನಿಸುತ್ತಾನೆ ಆದರೆ ಇದರ ನಡುವೆ ಇಂದ್ರನು ಸಸ್ಯವನ್ನು ಎರಡು ತುಂಡುಗಳನ್ನಾಗಿ ಮಾಡುತ್ತಾನೆ.  

ರಾಹು ದೋಷ ನಿವಾರಣೆಗೆ ಆಧ್ಯಾತ್ಮಿಕ ಪರಿಹಾರ

ಈ ಸಸ್ಯವೇ ತಲೆಯ ಭಾಗ ರಾಹು ಮತ್ತು ಕಿಬ್ಬೊಟ್ಟೆಯ ಭಾಗ ಕೇತುವಾಗಿ ಮಾರ್ಪಡುತ್ತದೆ. ರಾಹುವಿನ ತಪ್ಪಿಸಿಕೊಂಡು ಹೋಗುವ ಬಗ್ಗೆ ಸೂರ್ಯ ಚಂದ್ರರು ಇಂದ್ರನಿಗೆ ತಿಳಿಸಿದ್ದಕ್ಕಾಗಿ ರಾಹುವಿಗೆ ಇವೆರಡರ ಮೇಲೆ ತೀವ್ರ ಅಸಮಾಧಾನವಿರುತ್ತದೆ. ರಾಹುವಿನ ಸ್ಥಳದ ನಿಯಮಗಳಿಂದ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ. ನಿಮ್ಮ ವೃತ್ತಿಪರತೆ ಸಾಧನೆಯನ್ನು ಇದು ಯಾವ ಮನೆಯಲ್ಲಿದೆ ಎಂಬುದರಿಂದ ಕಂಡುಕೊಳ್ಳಬಹುದಾಗಿದೆ. ವೇದಶಾಸ್ತ್ರದಲ್ಲಿ 12 ವಿಭಾಗಗಳಿದ್ದು ಯಾವ ವಿಭಾಗದಲ್ಲಿ ರಾಹು ಇದ್ದಾನೆ ಎಂಬುದನ್ನು ಕಂಡುಕೊಂಡರಾಯಿತು. ಇದನ್ನು ಮನೆಗಳು ಎಂದು ಕರೆಯಲಾಗುತ್ತದೆ. ಇಂದಿನ ಲೇಖನದಲ್ಲಿ ರಾಹುವು ಯಾವ ಮನೆಯಲ್ಲಿದ್ದರೆ ಏನು ಸಂಭವಿಸುತ್ತದೆ ಮತ್ತು ಇದರ ಮಹತ್ವವೇನು ಎಂಬುದನ್ನು ಅರಿತುಕೊಳ್ಳೋಣ.... 

Rahu's Placement

ಮೊದಲನೆಯ

ನಿಮ್ಮದೇ ಸ್ವಂತ ಪ್ರಯತ್ನಗಳನ್ನು ಇದು ಪ್ರತಿನಿಧಿಸುತ್ತದೆ. ನಿಮ್ಮದೇ ಪ್ರಯತ್ನಗಳು ನಿಮಗೆ ಯಶಸಸ್ಸನ್ನು ತರುತ್ತದೆ. ರಾಜಕೀಯ ಅಥವಾ ನಾಯಕರಾಗಿ ನೀವು ಸಾಧನೆಯನ್ನು ಮಾಡುತ್ತೀರಿ. ರಾಹು ನಿಮಗೆ ಅಧಿಕಾರವನ್ನು ನೀಡುತ್ತದೆ. ಜನಸಾಮಾನ್ಯರನ್ನು ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಇದು ನಿಮಗೆ ನೀಡುತ್ತದೆ.

ಎರಡನೇಯ

ಈ ಮನೆಯು ಹಣ, ವಸ್ತು ಸಂಪತ್ತು, ಕುಟುಂಬ, ಭಾಷಣ, ದೃಷ್ಟಿ ಮತ್ತು ಪೋಷಣೆಯನ್ನು ಸೂಚಿಸುತ್ತದೆ. ಬಾಣಸಿಗ, ಆಹಾರ ಅಂಗಡಿಯ ಮಾಲೀಕರು, ನಗದು ವ್ಯಾಪಾರಿ, ವಾಗ್ಮಿ ಅಥವಾ ಗಾಯಕನಂತೆ ನಿಮ್ಮ ಅದೃಷ್ಟವನ್ನು ಪರಿಶೀಲಿಸಿ.

ಮೂರನೇಯ

ಈ ಮನೆ ಧೈರ್ಯದ ಸಂಕೇತವಾಗಿದೆ. ನಿಮ್ಮದೇ ಸ್ವಂತ ವ್ಯಾಪಾರವನ್ನು ರಾಹುವು ಪ್ರತಿನಿಧಿಸುತ್ತದೆ. ಬರವಣಿಗೆ, ಎಡಿಟಿಂಗ್, ಮಾಧ್ಯಮ, ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ಟಿವಿ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ನಿಮ್ಮ ಬರವಣಿಗೆ ಸಂಬಂಧಿಸಿರುವ ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಬಹುದು.

ನಾಲ್ಕನೇಯ

ನಿಮ್ಮ ಮಾನಸಿಕ ಮತ್ತು ದೈಹಿಕ ಆರಾಮದಾಯಕವನ್ನು ಇದು ಪ್ರತಿನಿಧಿಸುತ್ತದೆ. ವೈದ್ಯರು ಅಥವಾ ನರ್ಸ್ ವೃತ್ತಿಯನ್ನು ಆಯ್ದುಕೊಂಡು ನಿಮ್ಮ ಕಾರ್ಯಸಾಮರ್ಥ್ಯವನ್ನು ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಇಂಟೀರಿಯರ್ ಡೆಕೊರೇಟರ್, ರಿಯಲ್ ಎಸ್ಟೇಟ್ ವ್ಯಾಪಾರಿ, ಕೃಷಿಕ, ರೈತರು, ಹೀಗೆ ಬೇರೆ ಬೇರೆ ವೃತ್ತಿ ವಲಯವನ್ನು ನಿಮಗೆ ಆರಿಸಿಕೊಳ್ಳಬಹುದಾಗಿದೆ.

ಐದನೇಯ

ನಿಮ್ಮದೇ ಕ್ರಿಯಾತ್ಮಕ ವಿಚಾರಗಳನ್ನು ಪೋಷಿಸಲು ಈ ಮನೆಯಲ್ಲಿರುವ ರಾಹುವು ನಿಮಗೆ ಸಹಾಯ ಮಾಡುತ್ತದೆ. ನಿಮ್ಮದೇ ಸ್ವಂತ ವ್ಯಾಪಾರವನ್ನು ನಡೆಸಬಹುದು. ಮಕ್ಕಳ ವೈದ್ಯರಾಗಿ ಕಾರ್ಯನಿರ್ವಹಿಸಬಹುದು.

ಆರನೇಯ

ಹಣದ ವ್ಯಾಪಾರ, ಆರ್ಥಿಕ ವ್ಯವಹಾರ ಮತ್ತು ಔಷಧಿಗಳ ಕ್ಷೇತ್ರದಲ್ಲಿ ನಿಮಗೆ ಕಾರ್ಯನಿರ್ವಹಿಸಿ ಯಶಸ್ಸನ್ನು ಸಾಧಿಸಬಹುದಾಗಿದೆ.

ಏಳನೇಯ

ನಿಮ್ಮ ಎದುರಾಳಿಗಳ ಮನೆ ಇದಾಗಿದೆ. ರಾಹುವು ಈ ಮನೆಯಲ್ಲಿರುವುದರಿಂದ ಜನಸಾಮಾನ್ಯರ ಮೇಲೆ ಹತೋಟಿಯನ್ನು ಇಟ್ಟುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಅವರನ್ನು ನಿಮಗೆ ಆಕರ್ಷಿಸಬಹುದಾಗಿದೆ. ನಿಮ್ಮ ಶಕ್ತಿಯನ್ನು ವಿನಿಯೋಗಿಸಿ ಸಾಧನೆಯನ್ನು ಸಾಧಿಸಬಹುದಾಗಿದೆ.

ಎಂಟನೇಯ

ಈ ಮನೆಯು ಸಂಪೂರ್ಣವಾಗಿ ಆಧ್ಯಾತ್ಮಿಕತೆ, ನಿಗೂಢ, ತೆರಿಗೆ, ವಿಮೆ ಮತ್ತು ಸಾಗರ ಸಂಬಂಧಿ ವಿಷಯಗಳಿಗೆ ಸಂಬಂಧಿತವಾಗಿದೆ. ಕಡಲ ತೀರದ ಜೀವರಕ್ಷಕ ಅಥವಾ ಕಡಲನ್ನು ರಕ್ಷಿಸುವವರಾಗಿ ನೀವು ಮುಂದಿರವರಿಯಬೇಕೇ ಎಂಬುದನ್ನು ನಿರ್ಧರಿಸಬೇಕು. ಆಧ್ಯಾತ್ಮ ಸಂಬಂಧಿ ಅಂಶಗಳ ಬಗ್ಗೆ ಕೂಡ ನೀವು ಯೋಚಿಸಬಹುದಾಗಿದೆ.

ಒಂಬತ್ತನೇಯ

ನಿಮ್ಮ ರಾಹುವು 9ನೆಯ ಮನೆಯಲ್ಲಿದ್ದರೆ 9 ನೆಯ ಮನೆಯ ವಿಶೇಷವೇನು ಎಂಬುದನ್ನು ನೀವು ಅರಿತುಕೊಳ್ಳಬೇಕು. ಇದು ದೀರ್ಘ ಪ್ರವಾಸ, ಅಂತರಾಷ್ಟ್ರೀಯ ಸಂಬಂಧಗಳು, ಹೆಚ್ಚಿನ ಜ್ಞಾನ, ಮಾಧ್ಯಮ, ಪ್ರಕಟಿಸುವಿಕೆ, ಶಿಕ್ಷಣ, ಉಪದೇಶ, ಸಮಾಲೋಚನೆ, ಕಾನೂನು ಮತ್ತು ಅಧ್ಯಾತ್ಮಿಕತೆಗೆ ಸೇರಿದೆ. ನೀವು ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡಬಹುದಾಗಿದೆ.

ಹತ್ತನೇಯ

ನಿಮ್ಮ ವೃತ್ತಿಯನ್ನು ಇತರರು ಅರಿತುಕೊಳ್ಳಬಹುದಾಗಿದೆ. ನೀವು ಗುಂಪಿನ ಭಾಗವಾಗಲಿರುವಿರಿ. ಗುಂಪು ಹೊಂದಿಸುವಿಕೆಗಳಲ್ಲಿ ನೀವು ಪರಿಣಿತರಾಗಿರುವಿರಿ. ಗುಂಪುಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವುದರಲ್ಲಿ ನಿಮ್ಮ ಆಸಕ್ತಿಯಾಗಿದೆ.

ಹನ್ನೊಂದನೇಯ

ಇದು ನೆಟ್‌ವರ್ಕಿಂಗ್ ಮತ್ತು ನಿಮ್ಮ ಸ್ವಂತ ವ್ಯಾಪಾರದ ಕುರಿತಾಗಿದೆ. ನೀವು ಗುಂಪಿನ ಒಂದು ಭಾಗವಾಗಿ ಹೊರಹೊಮ್ಮುತ್ತೀರಿ. ಗುಂಪಿನಲ್ಲಿಯೇ ಕ್ರಿಯಾತ್ಮಕ ವಿಚಾರವನ್ನು ನೀವು ಹೊಂದಿರುತ್ತೀರಿ.

ಹನ್ನೆರಡನೇಯ

ಇದು ಮರೆಯಾಗಿರುವ ಬುದ್ಧಿವತಿಕೆಯನ್ನು ಹೊರಸೂಸುತ್ತದೆ. ಎಡಿಟರ್‌ನಂತೆ ಹಿನ್ನಲೆಯಲ್ಲಿ ನಿಮಗೆ ಕೆಲಸ ಮಾಡಲು ಇದು ಸಹಾಯಕವಾಗಿದೆ. ಹಿನ್ನಲೆಯಲ್ಲಿದ್ದುಕೊಂಡೇ ನೀವು ಪ್ರತಿಯೊಂದನ್ನು ನಿರ್ವಹಿಸುತ್ತೀರಿ.

ಪುರಾತನ ಗ್ರಂಥಗಳು ಹೇಳುವಂತೆ ನಾವು ಈ ಭೂಮಿಯಲ್ಲಿ ಏಕಿದ್ದೇವೆ ಮತ್ತು ನಮ್ಮ ಭಾಗವೇನು ಎಂಬುದನ್ನು ರಾಹುವು ತಿಳಿಸಿಕೊಡುತ್ತದೆ. ನಮ್ಮ ಹಿಂದಿನ ಜನ್ಮದಲ್ಲಿ ನಾವು ಮಾಡಿರುವ ಕೆಲಸಗಳು ಮತ್ತು ಈ ಜನ್ಮದಲ್ಲಿ ನಾವು ಏನು ಮಾಡಬೇಕಿದೆ ಎಂಬುದನ್ನು ರಾಹುವು ತಿಳಿಸಿಕೊಡುತ್ತದೆ.

ಅಂತೆಯೇ ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಅಂತೆಯೇ ಭವಿಷ್ಯದಲ್ಲಿ ಏನೂ ಸಾಧಿಸಲು ಆಗದವರು ಕೂಡ ರಾಹುವಿನ ಸ್ಥಾನವನ್ನು ಅರಿತುಕೊಂಡು ಜೀವನದಲ್ಲಿ ಸಾಧನೆಯನ್ನು ನಡೆಸಬಹುದಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    How Rahu's Placement Helps You To Find Your Passion

    Finding your passion from astrology is such a simple task. For the beginners in astrology, you have to look just at one planet, Rahu. For experts you have to look at Rahu, then the nakshatra and nakshatra lord's placement.
    Story first published: Tuesday, May 30, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more