For Quick Alerts
ALLOW NOTIFICATIONS  
For Daily Alerts

ಗುರುವಾರ ರಾಘವೇಂದ್ರ ಸ್ವಾಮಿ ಪೂಜೆ, ಮಾಡುವ ವಿಧಿ-ವಿಧಾನಗಳು

|

ಶ್ರೀ ರಾಘವೇಂದ್ರರ್ ಎಂದು ಪೂಜಿಸಲ್ಪಡುವ ವೆಂಕಟ ಕೃಷ್ಣರ್ ಅವರು ತಮಿಳುನಾಡಿನ ಸಣ್ಣ ಹಳ್ಳಿ ಭುವನಗಿರಿಯಲ್ಲಿ ಜನಿಸಿದರು. ಇವರು ಕೃಷ್ಣರ್ ಅವರಿಗೆ ಆಶೀರ್ವಾದಿಸಲ್ಪಟ್ಟ ಮಗನಾಗಿದ್ದರು. ಮಹಾಭಾರತದಲ್ಲಿ ವೇದವ್ಯಾಸರು ಮತ್ತು ಶ್ರೀಕೃಷ್ಣನ ನರಸಿಂಹ ಅವತಾರದ ವೇಳೆ ಪ್ರಹ್ಲಾದ ಜನಿಸಿದಂತೆ ಇವರ ಜನನವಾಗಿದೆ.

ಜನರಿಗೆ ದೈವತ್ವದ ಬಗ್ಗೆ ಬೋಧಿಸಿದರು ಮತ್ತು ಶ್ರೀಮನ್ ನಾರಾಯನನ ಶ್ರೇಷ್ಠತೆ ಬಗ್ಗೆ ಜಗತ್ತಿಗೆ ತಿಳಿಸಿದರು. ರಾಘವೇಂದ್ರರ್ ರನ್ನು ಗುರುವಾರದಂದು ಪೂಜಿಸಿದರೆ ತುಂಬಾ ಒಳ್ಳೆಯದು ಮತ್ತು ಈ ಪೂಜೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ..

ಗುರುವಾರದಂದು ಶ್ರೀ ರಾಘವೇಂದ್ರರ್ ಅವರಿಗೆ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು

ಗುರುವಾರದಂದು ಶ್ರೀ ರಾಘವೇಂದ್ರರ್ ಅವರಿಗೆ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು

ಪ್ರತೀ ಗುರುವಾರದಂದು ಶ್ರೀ ರಾಘವೇಂದ್ರರ್ ಅವರಿಗೆ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು. ಪೂಸ ನಕ್ಷತ್ರಂನಲ್ಲಿ ಬರುವಂತಹ ಗುರುವಾರವು ಪೂಜೆ ಅತೀ ಶುಭವೆನ್ನಲಾಗಿದೆ. ನಮ್ಮ ಸಾಮಾನ್ಯ ವಿಧಿವಿಧಾನದಂತೆ ಪೂಜೆ ಮಾಡಬಹುದು. ಆದರೆ ನಾವು ಸ್ವಚ್ಛವಾಗಿರುವುದು ಅತೀ ಅಗತ್ಯ.ಆರು ಗುರುವಾರಗಳ ಕಾಲ ಪೂಜೆ ಮಾಡಬೇಕು ಮತ್ತು ಅಂತ್ಯದ ಪೂಜೆ ಏಳನೇ ಗುರುವಾರದಂದು ಮಾಡಬೇಕು. ಏಳನೇ ಗುರುವಾರದಂದು ಪೂಜೆ ಮಾಡಬೇಕು ಮತ್ತು ಇದು ಪೂಜೆ ಕೊನೆಗೊಳಿಸಲು ಅಂತಿಮ ಗುರುವಾರವಾಗಿದೆ ಮತ್ತು ಇದಕ್ಕೆ ವಿಶೇಷ ಬದ್ಧತೆ ತೋರಿಸಬೇಕು.

ಪೂಜೆ ಮಾಡುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಪೂಜೆ ಮಾಡುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಪೂಜೆ ಮಾಡುವಂತಹ ಜಾಗವನ್ನು ಮೊದಲು ಶುಚಿಗೊಳಿಸಿ. ಬಳಿಕ ಈ ಜಾಗದಲ್ಲಿ ಕೊಲಂ ಅಥವಾ ರಂಗೋಲಿ ಹಾಕಿ. ಇದರ ಬಳಿಕ ಸಣ್ಣ ಮನಾಯಿ(ಮರದಿಂದ ಮಾಡಿದ ಕುಳಿತುಕೊಳ್ಳುವ ಸಾಧನ) ಇಡಿ ಮತ್ತು ಇದನ್ನು ಶುದ್ಧ ಮಾಡಿಕೊಂಡು, ಇದಕ್ಕೂ ರಂಗೋಲಿ ಹಚ್ಚಿ. ಮನಾಯಿಯ ಮೇಲೆ ಶ್ರೀ ರಾಘವೇಂದ್ರರ್ ಫೋಟೊ ಇಡಿ. ಈ ಫೋಟೊವನ್ನು ಸ್ವಚ್ಛಗೊಳಿಸಿ ಮತ್ತು ಇದಕ್ಕೆ ಶ್ರೀಗಂಧ ಮತ್ತು ಕುಂಕುಮ ಹಾಕಿ. ಇದರ ಬಳಿಕ ತುಳಸಿ ಮಾಲೆ ಮತ್ತು ಬೇರೆ ಹೂಗಳ ಮಾಲೆ ಫೋಟೊಗೆ ಹಾಕಿ.

ಬೆಳಗುವ ದೀಪವನ್ನಿಡಿ

ಬೆಳಗುವ ದೀಪವನ್ನಿಡಿ

ಫೋಟೋದ ಮುಂದೆ ಐದು ಕಡೆಗಳಿಂದ ಬೆಳಗುವ ದೀಪವನ್ನಿಡಿ. ಒಳ್ಳೆಯ ಹಣ್ಣುಗಳು, ತೆಂಗಿನಕಾಯಿ, ವೀಲ್ಯದ ಎಲೆಗಳನ್ನು ತೆಗೆದುಕೊಳ್ಳಿ. ಮನಾಯಿಯಲ್ಲಿ ಮೊದಲು ಅರಶಿನವನ್ನು ಮೊದಲಿಗೆ ಇಡಿ. ಮೊದಲ ದೇವರು ವಿನಯಗರ್ ಆಗಿ ಇದನ್ನು ಇಡಿ ಮತ್ತು ಅದಕ್ಕೆ ತಿಲಕವನ್ನಿಡಿ. ವಿನಯಗರ್ ಗೆ ಮೊದಲು ಪೂಜೆ ಮಾಡಿ ಮತ್ತು ಹಣ್ಣುಗಳು, ತೆಂಗಿನಕಾಯಿ ಇತ್ಯಾದಿ ನೀಡಿ. ಇದೇ ಹಣ್ಣುಗಳು ಮತ್ತು ತೆಂಗಿನಕಾಯಿಯನ್ನು ರಾಘವೇಂದ್ರರ್ ಗೆ ಅರ್ಪಿಸಬೇಡಿ. ಅವರಿಗೆ ಬೇರೆಯೇ ಹಣ್ಣುಗಳನ್ನು ಅರ್ಪಿಸಿ. ಈಗ ರಾಘವೇಂದ್ರರ್ ಫೋಟೊದ ಮುಂದೆ ವಿಲಕ್ಕುವನ್ನಿಡಿ. ಇವೆರಡನ್ನು ಒಂದೇ ಜಾಗದಲ್ಲಿಡಿ. ಇಲ್ಲಿ ಪ್ರದಕ್ಷಿಣೆ ಬರುವಂತೆ ಇರಲಿ.

ಈ ಮಂತ್ರವನ್ನು ಹೇಳಿ..

ಈ ಮಂತ್ರವನ್ನು ಹೇಳಿ..

ಪೂಜೆ ಆರಂಭಿಸುವ ಮೊದಲು ನಿಮ್ಮ ಮನಸ್ಸು ಶುದ್ಧವಾಗಿರಲಿ ಮತ್ತು ಅದನ್ನು ನಿಯಂತ್ರಿಸಿಕೊಳ್ಳಿ. ಎಲ್ಲಾ ಇಚ್ಛೆಗಳು ಪೂರ್ತಿಯಾಗಲಿ ಎಂದು ಬೇಡಿಕೊಳ್ಳಿ. ಫೋಟೊದ ಮುಂದೆ ಕುಳೀತು ಧೂಪ ನೀಡಿ ಮತ್ತು ಇದರ ಬಳಿಕ ನೈವೇದ್ಯ ಅರ್ಪಿಸಿ. 2-3 ತುಳಸಿ ಎಲೆಗಳನ್ನು ತೆಗೆದುಕೊಂಡು ಅಂಗೈಯಲ್ಲಿ ಇಟ್ಟುಕೊಂಡು ಫೋಟೊ ಮತ್ತು ವಿಲಕ್ಕುಗೆ ಪ್ರದಕ್ಷಿಣೆ ಬನ್ನಿ. ನೀವು 11 ಸಲ ಪ್ರದಕ್ಷಿಣೆ ಬರಬೇಕು ಮತ್ತು ಹೀಗೆ ಮಾಡುವಾಗ ಈ ಮಂತ್ರವನ್ನು ಹೇಳಿ.

``ಪೂಜ್ಯಾಯಾ ರಾಘವೇಂದ್ರಾಯ

ಸತ್ಯಧರ್ಮ ರಧಾಯಚ

ಭಜತಾಂ ಕಲ್ಪವೃಕ್ಷಯಾ ನಮತಾಂ

ಶ್ರೀ ಕಾಮಧೇನುವೇ''

ಹನ್ನೊಂದು ಸಲವಾದರೂ ಈ ಶ್ಲೋಕವನ್ನು ಪಠಿಸಬೇಕು

ಹನ್ನೊಂದು ಸಲವಾದರೂ ಈ ಶ್ಲೋಕವನ್ನು ಪಠಿಸಬೇಕು

ಪ್ರದಕ್ಷಿಣೆ ಮಾಡುವ ವೇಳೆ ನೀವು ಈ ಶ್ಲೋಕವನ್ನು ಆದಷ್ಟು ಸಲ ಪಠಿಸಿ. ಕನಿಷ್ಠವೆಂದು 11 ಪ್ರದಕ್ಷಿಣೆ ವೇಳೆ ಹನ್ನೊಂದು ಸಲವಾದರೂ ಈ ಶ್ಲೋಕವನ್ನು ಪಠಿಸಬೇಕು.11 ಸಲ ಪ್ರದಕ್ಷಿಣೆ ಮಾಡಿದ ಬಳಿಕ ಅಂಗೈಯಲ್ಲಿರುವ ತುಳಸಿಯನ್ನು ರಾಘವೇಂದ್ರರ್ ಅವರಿಗೆ ಅರ್ಪಿಸಿ ಪ್ರಾರ್ಥಿಸಿ. ಇದರ ಬಳಿಕ ಸಾಷ್ಟಾಂಗ ನಮಸ್ಕಾರ ಮಾಡಿ ಮತ್ತು ಪೂಜೆ ಕೊನೆಗೊಳಿಸಿ. ಮಧ್ಯಾಹ್ನ ವೇಳೆ ಊಟ ಮಾಡಿದರೆ ರಾತ್ರಿ ವೇಳೆ ಕೇವಲ ಹಣ್ಣುಗಳನ್ನು ತಿಂದು, ಹಾಲು ಕುಡಿಯಬೇಕು. 7 ಗುರುವಾರಗಳ ಕಾಲ ನೀವು ಈ ಪೂಜೆಯನ್ನು ಮಾಡಬೇಕು ಮತ್ತು ಏಳನೇ ಗುರುವಾರದಂದು ಪಾಯಸ ಮತ್ತು ಬೇರೆ ವಿಶೇಷವಾದ ತಿಳಿಸಲು ರಾಘವೇಂದ್ರರ್ ಗೆ ನೀಡಬಹುದು. ವೃತದ ವೇಳೆ ಹಾಸಿಗೆ ಮೇಲೆ ಮಲಗಬೇಡಿ. ನೀವು ಚಾಪೆಯಲ್ಲಿ ನೆಲದ ಮೇಲೆ ಮಲಗಬೇಕು.

ಸೂಚನೆ- ನೀವು ಈ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲಿಸಿಕೊಂಡು ಹೋದರೆ ಆಗ ಪೂಜೆಯು ಯಶಸ್ವಿಯಾಗುವುದು

ಈ ಎಲ್ಲಾ ಸಂಗತಿಗಳು ನೆನಪಿರಲಿ...

ಈ ಎಲ್ಲಾ ಸಂಗತಿಗಳು ನೆನಪಿರಲಿ...

ಶ್ರೀ ರಾಘವೇಂದ್ರರ್ ಪೂಜಿಸಲು ಗುರುವಾರವು ಒಳ್ಳೆಯದು. ಆದರ ಯಾವುದೇ ಒಳ್ಳೆಯ ದಿನದಂದು ನೀವು ಈ ಪೂಜೆ ಆರಂಭಿಸಬಹುದು. ಇದಕ್ಕೆ ನೀವು ಗುರುವಾರಕ್ಕಾಗಿ ಕಾರಯಬೇಕಿಲ್ಲ.

ಪುರುಷರು ಧೋತಿ(ಬಿಳಿ ಪಂಚೆ) ಧರಿಸಬೇಕು ಮತ್ತು ಖಾಲಿ ಮೈಯಲ್ಲಿ ಇರಬೇಕು. ಪೂಜೆಯ ವೇಳೆ ಮಹಿಳೆಯರು ಸೀರೆ ಉಡಬೇಕು.

ನೀವು ಗುರುವಾರ ಬೆಳಗ್ಗೆ ಪೂಜೆ ಮಾಡುವಿರಾದರೆ ಬುಧವಾರ ರಾತ್ರಿ ಪೂಜೆಗೆ ಉಡುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಇದರ ಬಳಿಕ ಪೂಜೆಗೆ ಸಂಬಂಧಿಸಿದ ಬಟ್ಟೆಗಳು ಒಣಗಿಸುವ ಜಾಗದಲ್ಲಿ ಇದನ್ನು ಒಣಗಿಸಿ.

ಪೂಜೆಯ ದಿನ ಹಾಸಿಗೆ ಅಥವಾ ದಿಂಬು ಬಳಸಬೇಡಿ. ನೆಲದ ಮೇಲೆ ಶುದ್ಧ ಬಟ್ಟೆ ಅಥವಾ ಚಾಪೆ ಹಾಕಿ ಮಲಗಿ.

ಬೆಳಗ್ಗೆ 5 ಗಂಟೆಗೆ ಎದ್ದು ಬಳಿಕ ಪೂಜೆ ಮಾಡಿ.

ಈ ದಿನ ನೀವು ಟಿವಿ ನೋಡಬೇಡಿ ಮತ್ತು ಮನಸ್ಸು ಬೇರೆಡೆ ಸೆಳೆಯುವ ಕಾರ್ಯಕ್ರಮ ನೋಡಬೇಡಿ. ಸಾಧ್ಯವಾದರೆ ಬೆಳಗ್ಗಿನಿಂದಲೇ ಉಪವಾಸ ಮಾಡಿ. ಉಪವಾಸ ಮಾಡಲು ಸಾಧ್ಯವಿಲ್ಲದೆ ಇದ್ದರೆ ಆಗ ಹಣ್ಣುಗಳನ್ನು ತಿಂದು ಹಾಲು ಕುಡಿಯಿರಿ.

ಮಾಂಸಹಾರ ಸೇವನೆ ಮಾಡಲೇಬೇಡಿ. ಪೂಜೆಯ ದಿನದಂದು ರಾಘವೇಂದ್ರರ್ ಬಗ್ಗೆ ಹೆಚ್ಚು ಯೋಚಿಸಿ. ಅನಗತ್ಯ ಮಾತುಕತೆಯಲ್ಲಿ ತೊಡಗಬೇಡಿ ಮತ್ತು ಸಾಧ್ಯವಾದಷ್ಟು ಮೌನವೃತ ಆಚರಿಸಿ.

English summary

How to perform Raghavendra Pooja on thursday

Sri Raghavendrar, who is also named as “Venkata Krishnar” was born in Bhuvanagiri, a small village in Tamil Nadu. He is said to be the blessed child of Sri Krishnar. He is said to be born as Veda Vyasar during the time of Mahabharatha and was born as “Prahaladhan” during the time of Sri Narasimhavathar. He preached the Dvaitam towards the people and has explained Sriman Narayanan's greatness to the world. The best days to worship Sri Raghavendrar is on Thursdays and now let us know the procedure of doing it.
Story first published: Wednesday, August 29, 2018, 17:34 [IST]
X
Desktop Bottom Promotion