For Quick Alerts
ALLOW NOTIFICATIONS  
For Daily Alerts

ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದಾಗುವ ಲಾಭಗಳು

|

ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳಿವೆ. ಇದನ್ನು ಸದುದ್ದೇಶ ಹಾಗೂ ಒಳ್ಳೆಯ ಮನಸ್ಸಿನಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಆ ಮಂತ್ರದ ಫಲವು ಸಿಗುವುದು ಎಂದು ಹೇಳಲಾಗುತ್ತದೆ. ಇಂತಹ ಮಂತ್ರಗಳಲ್ಲಿ ಮಹಾಮೃತ್ಯುಂಜಯ ಮಂತ್ರವು ಒಂದಾಗಿದೆ. ಈ ಮಂತ್ರವು ವೇದಗಳ ಹೃದಯವೆಂದು ಹೇಳಲಾಗುತ್ತದೆ. ಮಹಾಮೃತ್ಯುಂಜಯ ಮಂತ್ರವು ನಾಲ್ಕು ವೇದಗಳ ಕೆಲವೊಂದು ಭಾಗಗಳಲ್ಲಿ ಕಂಡುಬರುತ್ತದೆ. ಶುಕ್ರಾಚಾರ್ಯರಿಗೆ ಈಶ್ವರ ದೇವರು ಸ್ವತಃ ಈ ಮಂತ್ರವನ್ನು ಕಲಿಸಿದರು ಎಂದು ಪುರಾಣಗಳಲ್ಲಿ ಇದೆ. ರಾಕ್ಷಸರ ಗುರುವಾಗಿದ್ದ ಶುಕ್ರಾಚಾರ್ಯರು ಸಾವನ್ನು ಗೆದ್ದು ಬರುವ ಮಂತ್ರವನ್ನು ಶಿವನಿಂದ ಪಡೆದಿದ್ದರು. ಆದರೆ ವಶಿಷ್ಠ ಋಷಿ ಮಹರ್ಷಿಗಳು ದೀರ್ಘವಾದ ತಪಸ್ಸಿನ ಮೂಲಕ ಈ ಮಂತ್ರವನ್ನು ಪಡೆದು ಅದನ್ನು ಲೋಕ ಕಲ್ಯಾಣಾರ್ಥವಾಗಿ ಬಳಸಿಕೊಂಡರು.

ಮಹಾಮೃತ್ಯುಂಜಯ ಮಂತ್ರ

ಮಹಾಮೃತ್ಯುಂಜಯ ಮಂತ್ರ

ಓಂ!! ತ್ರಯಂಬಕಮ್ ಯಜಾಮಹೇ ಸುಗಂಧೀಂ ಪುಷ್ಟಿವರ್ಧನಂ ಊರ್ವಾವರ್ಕಮೀವ ಬಂಧಂ ಮೃತ್ಯೊರ್ ಮೋಕ್ಷಂ ಅಮೃತಃ

ಮಹಾ ಮೃತ್ಯುಂಜಯ ಮಂತ್ರದ ಅರ್ಥ

ಮಹಾ ಮೃತ್ಯುಂಜಯ ಮಂತ್ರದ ಅರ್ಥ

ಎಲ್ಲಾ ಮೂರು ಲೋಕಗಳಲ್ಲಿ ಮೂರು ಕಣ್ಣಿನ ದೇವ, ಸಕಲ ಜೀವಿಗಳನ್ನು ಪೋಷಿಸುವವನು, ಮಾಗಿದ ಸೌತೆಕಾಯಿ ಬಳ್ಳಿಯಿಂದ ಬಿಡುಗಡೆ ಆಗುವಂತೆ ನನ್ನನ್ನು ಸಾವಿನಿಂದ ಅಮರತ್ವವು ಬಿಡಿಸಲಿ.

ಒತ್ತಡ ಮತ್ತು ಭೀತಿಯಿಂದ ಮನಸ್ಸನ್ನು ಮುಕ್ತಗೊಳಿಸುವುದು

ಒತ್ತಡ ಮತ್ತು ಭೀತಿಯಿಂದ ಮನಸ್ಸನ್ನು ಮುಕ್ತಗೊಳಿಸುವುದು

ಮಹಾ ಮೃತ್ಯುಂಜಯ ಮಂತ್ರವು ಸೂಕ್ಷ್ಮ ಮನಸ್ಸಿನ ಮೇಲೆ ಕೆಲಸ ಮಾಡುವಲ್ಲಿ ಒಂದು ಅದ್ಭುತವಾದ ಗುಣವನ್ನು ಹೊಂದಿದೆ. ಇದು ಭೀತಿಯನ್ನು ಹೋಗಲಾಡಿವುದು ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುವುದು. ಈ ಮಂತ್ರವನ್ನು ನೀವು ಪಠಿಸಬಹುದು. ಇದನ್ನು ಪಠಿಸಲು ಸರಿಯಾದ ಸಮಯ ಮುಂಜಾನೆ 4 ಗಂಟೆಯಿಂದ 6 ಗಂಟೆ ತನಕ.

ಮುಂಜಾನೆ 108 ಸಲ ಮಂತ್ರ ಪಠಿಸಿ

ಮುಂಜಾನೆ 108 ಸಲ ಮಂತ್ರ ಪಠಿಸಿ

ಮುಂಜಾನೆ ಎದ್ದು ಸ್ನಾನ ಮಾಡಿ, ಇದರ ಬಳಿಕ ಶಿವ ಚಿತ್ರವಿರುವತ್ತ ಮುಖ ಮಾಡಿ ಮತ್ತು 108 ಸಲ ಇದನ್ನು ಪಠಿಸಿ. ನೀವು 40 ದಿನಗಳ ಹೀಗೆ ಮಾಡಿದರೆ ಆಗ ಖಂಡಿತವಾಗಿಯೂ ಪರಿಹಾರ ಸಿಗುವುದು ಮತ್ತು ಆತ್ಮವಿಶ್ವಾಸವು ಹೆಚ್ಚಾಗುವುದು.

ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು

ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು

ಮಹಾಮೃತ್ಯಂಜಯ ಮಂತ್ರವನ್ನು ಪಠಿಸಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುವುದು. ಇದು ಪರೀಕ್ಷೆ ಭೀತಿ ನಿವಾರಿಸುವುದು ಮತ್ತು ಪರೀಕ್ಷೆಯನ್ನು ತುಂಬಾ ಧೈರ್ಯವಾಗಿ ಎದುರಿಸಲು ನೆರವಾಗುವುದು. ಇದು ಏಕಾಗ್ರತೆ, ಗಮನ ಮತ್ತು ದೃಷ್ಟಿಕೋನ ಹೆಚ್ಚಿಸುವುದು. ಮನಸ್ಸಿನಲ್ಲಿ ಇರುವ ಎಲ್ಲಾ ಅಸ್ಥಿರವನ್ನು ನಿವಾರಣೆ ಮಾಡುವುದು.

ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು

ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು

ಮುಂಜಾನೆ ಎದ್ದು ಸ್ನಾನ ಮಾಡಿದ ಬಳಿಕ ಶಿವನ ಮೂರ್ತಿ ಅಥವಾ ಫೋಟೊದ ಮುಂದೆ ಕುಳಿತು ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಓದುವುದರಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಅದು ನಿವಾರಣೆ ಆಗುವುದು. ಶಾಲೆಗೆ ಹೋಗುವ ಮೊದಲು ಮೂರು ಸಲ ಈ ಮಂತ್ರ ಪಠಿಸಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಮಲಗುವ ಮೊದಲು ಇದನ್ನು ಮೂರು ಸಲ ಪಠಿಸಿ.

ಸಾಲದಿಂದ ಮುಕ್ತರಾಗಲು ಮತ್ತು ಹಣ ಮರಳಿ ಬರಲು

ಸಾಲದಿಂದ ಮುಕ್ತರಾಗಲು ಮತ್ತು ಹಣ ಮರಳಿ ಬರಲು

ಜೀವನದಲ್ಲಿ ಹಣ ಎನ್ನುವುದು ಅತೀ ಪ್ರಾಮುಖ್ಯತೆ ಪಡೆದಿದೆ. ಸಾಲದಿಂದಾಗಿ ನಿಮ್ಮ ಮನಸ್ಸಿನ ಶಾಂತಿ ಕೆಡಬಹುದು ಮತ್ತು ಒತ್ತಡಕ್ಕೆ ಸಿಲುಕಬಹುದು. ನಿದ್ರೆ ಇಲ್ಲದೆ ಇರುವುದು, ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಆತ್ಮಹತ್ಯೆಗೆ ಮುಂದಾಗುವುದು, ಜೀವನದ ಧನಾತ್ಮಕ ಅಂಶದ ಬಗ್ಗೆ ಗಮನ ಕೇಂದ್ರೀಕರಿಸಲು ವಿಫಲವಾಗುವುದು ಸಾಲದ ಕೆಲವೊಂದು ಪರಿಣಾಮಗಳು.

ಸಾಲ ತೀರಲು ಮತ್ತು ಹಣ ಮರಳಿ ಬರಲು

ಸಾಲ ತೀರಲು ಮತ್ತು ಹಣ ಮರಳಿ ಬರಲು

ಸಾಲವು ನಿಮ್ಮನ್ನು ಖಂಡಿತವಾಗಿಯೂ ಚಿಂತೆಗೀಡು ಮಾಡುವುದು. ಅದೇ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಾಲದಿಂದ ಮುಕ್ತಿ ಪಡೆದು, ನಿಮ್ಮ ಹಣವು ಮರಳಿ ಬರುವುದು. ಬೆಳಗ್ಗೆ ನೀವು 108 ಸಲ ನೀವು ಈ ಮಂತ್ರವನ್ನು ಪಠಿಸಬೇಕು ಮತ್ತು ಅದೇ ರೀತಿ ಸಂಜೆ ಕೂಡ. ಈ ರೀತಿ ಮಾಡಿದರೆ ಆಗ ನಿಮ್ಮ ಆರ್ಥಿಕ ಪರಿಸ್ಥಿತಿಯು ಖಂಡಿತವಾಗಿಯೂ ಸುಧಾರಣೆ ಆಗುವುದು. ನಿಮ್ಮ ಆದಾಯ ಹೆಚ್ಚುವುದು ಮತ್ತು ಆತ್ಮವಿಶ್ವಾಸವು ಮರಳಿ ಬರುವುದು.

ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು

ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು

ಪ್ರತಿಯೊಬ್ಬರ ವೃತ್ತಿ ಬದುಕಿನಲ್ಲಿ ಏನಾದರೊಂದು ತೊಂದರೆಯು ಇದ್ದೇ ಇರುತ್ತದೆ. ಆದರೂ ಕಚೇರಿಗಳಲ್ಲಿ ಕೆಲವೊಂದು ಸಲ ವೃತ್ತಿಪರ ವೈಷಮ್ಯಗಳು ಇದ್ದೇ ಇರುತ್ತದೆ. ಇದರಿಂದಾಗಿ ನಿಮಗೆ ಭಡ್ತಿ ಹಾಗೂ ಸಂಬಳ ಹೆಚ್ಚಳಕ್ಕೆ ತೊಂದರೆ ಆಗುತ್ತಲಿರಬಹುದು. ನಿಮ್ಮ ಹಾದಿಗೆ ತೊಂದರೆ ಆಗುವುತ್ತಿರುವುದನ್ನು ತಪ್ಪಿಸಲು ಮೃತ್ಯುಂಜಯ ಮಂತ್ರ ಪಠಿಸಿ ಮತ್ತು ನಿಮ್ಮ ಗುರಿಯನ್ನು ಸಾಧಿಸಿ.

ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು…

ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು…

ನಿಮ್ಮ ವೃತ್ತಿಪರ ಯಶಸ್ಸು ಮತ್ತು ಪ್ರಗತಿಯನ್ನು ಸಹಿಸದೆ ಇರುವಂತಹ ಹಲವಾರು ಜನರು ಇರಬಹುದು. ಇದರಿಂದ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತಿರಬಹುದು. ಪ್ರತಿನಿತ್ಯವೂ ನೀವು ಬೆಳಗ್ಗೆ 54 ಸಲ ಮತ್ತು ಸಂಜೆ ವೇಳೆ 54 ಸಲ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ದೈನಂದಿನ ಕೆಲಸಗಳನ್ನು ಆರಂಭಿಸುವ ಮೊದಲು ಈ ಮಂತ್ರವನ್ನು ಮೂರು ಸಲ ಪಠಿಸಿ. ನಿಮ್ಮ ಶತ್ರುಗಳು ಸೂರ್ಯನ ಬೆಳಕಿನಡಿಯಲ್ಲಿ ಮಂಜು ಕರಗುವಂತೆ ನಾಶವಾಗುವರು.

English summary

How Maha Mrityunjaya Mantra Can Fulfill Your Wishes

Maha Mrityunjaya Mantra Also described as the heart of the Vedas, Maha Mrutyunjaya mantra is found part of several hymns in the four Vedas. It is said this mantra was taught by Lord Shiva himself to Shukracharya, the preceptor of the Asuras (demons) to overcome death. In his deep meditation sage Vasishta got this mantra revealed and gave it to the world for the benefit of all times.
Story first published: Saturday, October 12, 2019, 11:56 [IST]
X
Desktop Bottom Promotion