For Quick Alerts
ALLOW NOTIFICATIONS  
For Daily Alerts

ಕಂಸ ವಧೆ 2020: ಭಗವಾನ್ ಕೃಷ್ಣನಿಂದ ಕಂಸನ ವಧೆಯ ಪುರಾಣ-ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

|

ನವೆಂಬರ್‌ 24ಕ್ಕೆ ಕಂಸ ವಧೆ ಆಚರಣೆ ಮಾಡಲಾಗುವುದು.ಹಿಂದೂ ಧರ್ಮದಲ್ಲಿ ನೂರು ಕೋಟಿ ದೇವದೇವತೆಗಳಿದ್ದರೂ ಇದಲ್ಲಿ ಪ್ರಮುಖವಾಗಿ ಆರಾಧಿಸಲ್ಪಡುವಂತಹ ದೇವರುಗಳಲ್ಲಿ ಶ್ರೀಕೃಷ್ಣ ಪರಮಾತ್ಮನು ಒಬ್ಬರು.

ಶ್ರೀಕೃಷ್ಣ ಪರಮಾತ್ಮನು ಹಿಂದೂ ಧರ್ಮಗ್ರಂಥ ಭಗದ್ಗೀತೆಯ ಉಪದೇಶಿಸಿ ದಾತ. ಶ್ರೀಕೃಷ್ಣ ಪರಮಾತ್ಮನ ಬಾಲ್ಯ, ಯೌವನ ಮತ್ತು ಅದರ ಬಳಿಕ ಜೀವನದ ಬಗ್ಗೆ ನಾವು ಪುರಾಣಗಳಲ್ಲಿ ತಿಳಿದುಕೊಂಡಿದ್ದೇವೆ. ದುಷ್ಟ ಮಾವನಾಗಿದ್ದ ಕಂಸನಿಂದಾಗಿ ತನ್ನ ತಾಯಿ ಹಾಗೂ ತಂದೆಯು ಜೈಲಿನಲ್ಲೇ ಬಂಧಿಸಲ್ಪಟ್ಟಿದ್ದರು. ಈ ವೇಳೆ ಜೈಲಿನಲ್ಲಿ ಜನಿಸಿದ ಶ್ರೀಕೃಷ್ಣ ಪರಮಾತ್ಮನು ಬಾಲ್ಯದಲ್ಲಿ ತುಂಬಾ ತುಂಟತನ ಹೊಂದಿದ್ದರು.

ಇದರ ಬಳಿಕ ಹದಿಹರೆಯದಲ್ಲಿ ಒಳ್ಳೆಯ ಪ್ರೇಮಿಯಾಗಿ, ಆನಂತರದಲ್ಲಿ ಒಬ್ಬ ಸಲಹೆಗಾರ ಮತ್ತು ಸೈನಿಕ, ಮಾರ್ಗದರ್ಶನಾಗಿದ್ದರು. ಹೆಚ್ಚಿನ ರಾಜರು ತಮ್ಮ ರಾಜ್ಯವನ್ನು ಕೃಷ್ಣನಿಗೆ ಒಪ್ಪಿಸಿದ್ದರು. ಆದರೆ ಇದನ್ನು ವಿರೋಧಿಸಿದ್ದ ಶ್ರೀಕೃಷ್ಣ ಪರಮಾತ್ಮನು ಒಬ್ಬ ಸಂಧಾನಕಾರರಾಗಿದ್ದರು. ನ್ಯಾಯ ಸಮ್ಮತವಾಗಿ ಇದ್ದವರನ್ನು ಯಾವಾಗಲೂ ಅವರು ಕಾಪಾಡುತ್ತಿದ್ದರು. ಆದರೆ ಹದಿಹರೆಯದ ತನಕ ಅವರು ತನ್ನ ಮಾವ ಕಂಸನಿಂದ ಹಲವಾರು ಸಲ ದಾಳಿಗೆ ಒಳಗಾದರು. ವಿಷ್ಣುವಿನ ಅವತಾರವಾಗಿದ್ದ ಶ್ರೀಕೃಷ್ಣನು ಸಾಮಾನ್ಯ ವ್ಯಕ್ತಿಯಾಗಿಯೇ ಜೀವನ ಸಾಗಿಸಿ, ಭೂಮಿ ಮೇಲಿದ್ದ ಅಧರ್ಮವನ್ನು ನಿವಾರಣೆ ಮಾಡಲು ಬಂದಿದ್ದರು. ಇದಕ್ಕಾಗಿ ಅವರು ಮೊದಲಿಗೆ ದುಷ್ಟ ರಾಜನಾಗಿದ್ದ ತನ್ನ ಮಾವ ಕಂಸನನ್ನು ಕೂಡ ವಧೆ ಮಾಡಿದರು. ಇದರ ಬಗ್ಗೆ ನೀವು ಇನ್ನಷ್ಟು ಓದಿಕೊಳ್ಳಿ.

ಕುಸ್ತಿ ಪಟುಗಳಾಗಿರುವ ಚಾನುರ ಮತ್ತು ಮುಷ್ತಿಕ

ಕುಸ್ತಿ ಪಟುಗಳಾಗಿರುವ ಚಾನುರ ಮತ್ತು ಮುಷ್ತಿಕ

ಶ್ರೀಕೃಷ್ಣ ಪರಮಾತ್ಮನನ್ನು ಕೊಲ್ಲಲು ಆತನ ಮಾವ ಕಂಸ ಹಲವಾರು ಸಲ ಪ್ರಯತ್ನಿಸಿ ವಿಫಲನಾಗುತ್ತಾನೆ. ಕೊನೆಗೆ ಒಂದು ಸಲ ಈ ಕೆಲಸ ಮಾಡಲು ಕುಸ್ತಿ ಪಟುಗಳಾಗಿರುವಂತಹ ಚಾನುರ ಮತ್ತು ಮುಷ್ತಿಕನನ್ನು ನೇಮಿಸಬೇಕೆಂದು ಕಂಸ ನಿರ್ಧರಿಸುತ್ತಾನೆ. ಕಂಸ ತನ್ನ ಸಲಹೆಗಾರನನ್ನು ಕರೆದು, ಶ್ರೀಕೃಷ್ಣನು ಚಾನುರ ವಿರುದ್ಧ ಕುಸ್ತಿ ಆಡುವಂತೆ ಮಾಡಲು ಏನಾದರೂ ಯೋಜನೆ ಹಾಕುವಂತೆ ಹೇಳುತ್ತಾನೆ. ಚಾನುರನ ಬಲದ ಬಗ್ಗೆ ಕಂಸನಿಗೆ ಸಂಪೂರ್ಣವಾಗಿ ನಂಬಿಕೆಯಿತ್ತು ಮತ್ತು ಆತ ಕೃಷ್ಣನ್ನು ಕೊಲ್ಲುತ್ತಾನೆ ಎಂದು ಆತನಿಗೆ ವಿಶ್ವಾಸವಿತ್ತು. ಚಾನುರ ಮತ್ತು ಮುಸ್ತಿಕ ತುಂಬಾ ಜನಪ್ರಿಯ ಕುಸ್ತಿಪಟುಗಳಾಗಿದ್ದರು. ಚಾನುರ ದೈತ್ಯ ದೇಹದೊಂದಿಗೆ ಕಟ್ಟುಮಸ್ತಾದ ಕೈಕಾಲುಗಳನ್ನು ಹೊಂದಿದ್ದ. ಆತ ತನ್ನ ಸಂಪೂರ್ಣ ದೇಹದ ಭಾರವನ್ನು ಎದುರಾಗಳಿಗಳ ಮೇಲೆ ಹಾಕಿ ಅವರನ್ನು ಒಳಗಿನಿಂದಲೇ ಪುಡಿ ಮಾಡಿ, ಪಂದ್ಯ ಗೆಲ್ಲುತ್ತಿದ್ದ. ಇದರಿಂದಾಗಿ ಆತ ಯಾವಾಗಲೂ ಚಾಂಪಿಯನ್ ಆಗಿರುತ್ತಿದ್ದ.

ಕೃಷ್ಣನಿಗೆ ಚಾನುರನ ಸವಾಲು

ಕೃಷ್ಣನಿಗೆ ಚಾನುರನ ಸವಾಲು

ಅಂತಿಮವಾಗಿ ಪಂದ್ಯವು ಆಯೋಜನೆಗೊಂಡ ಬಳಿಕ ಚಾನುರನು ಪ್ರೇಕ್ಷಕರಲ್ಲಿದ್ದ ಎಲ್ಲರಿಗೂ ಸವಾಲು ಹಾಕುತ್ತಾನೆ. ಪ್ರೇಕ್ಷಕರಲ್ಲಿ ಶ್ರೀಕೃಷ್ಣ ಮತ್ತು ಬಲರಾಮ ಕೂಡ ಇದ್ದ. ಚಾನುರನು ಅವರನ್ನು ನೋಡಿದ ಕೂಡಲೇ ಕುಸ್ತಿ ಪಂದ್ಯಕ್ಕೆ ಆಹ್ವಾನ ನೀಡುತ್ತಾನೆ. ಕೃಷ್ಣನ ಕುಸ್ತಿಯು ತುಂಬಾನೇ ಜನಪ್ರಿಯವಾಗಿ ಎಂದು ಆತ ವ್ಯಂಗ ಮಾಡುತ್ತಾನೆ. ಅದಾಗ್ಯೂ, ಕೃಷ್ಣನಿಗೆ ಕೇವಲ 16ರ ಹರೆಯವಾಗಿದ್ದ ಕಾರಣ ಪ್ರತಿಯೊಬ್ಬರು ಇದನ್ನು ವಿರೋಧಿಸುತ್ತಾರೆ ಮತ್ತು ಚಾನುರನು ದೈತ್ಯ ದೇಹವನ್ನು ಹೊಂದಿದ್ದ. ಚಾನುರನು ಸಾಧ್ಯವಿರುವಂತಹ ಎಲ್ಲಾ ರೀತಿಯಿಂದಲೂ ಕೃಷ್ಣನ ಹೀಯಾಳಿಸಿ, ಆತನಿಗೆ ಕೋಪ ಬರುವಂತೆ ಮಾಡಿ ಕುಸ್ತಿಯ ಅಖಾಡಕ್ಕೆ ಇಳಿಯುವಂತೆ ಮಾಡುವುದು ಚಾನುರನ ಉದ್ದೇಶವಾಗಿತ್ತು. ಅದಾಗ್ಯೂ, ಶ್ರೀಕೃಷ್ಣ ತನ್ನ ನಗುವಿನಿಂದಲೇ ಚಾನುರನಿಗೆ ಉತ್ತರ ನೀಡುತ್ತಿದ್ದ. ಈ ಆಹ್ವಾನವು ಉದ್ದೇಶಪೂರ್ವಕವಾಗಿ ಮಾಡಿರುವುದು ಎಂದು ಶ್ರೀಕೃಷ್ಣನಿಗೆ ತಿಳಿದಿತ್ತು. ಕುಸ್ತಿ ಪಂದ್ಯವನ್ನು ಆಡದೆ ಇದ್ದರೆ ಕೃಷ್ಣನು ಪುರುಷನೇ ಅಲ್ಲ ಎಂದು ಚಾನುರನು ಸವಾಲು ಹಾಕಿದ. ಇದಕ್ಕೆ ಉತ್ತರಿಸಿದ ಶ್ರೀಕೃಷ್ಣ, ನನ್ನ ತಂದೆಯ ಅನುಮತಿ ಇಲ್ಲದೆ ಕುಸ್ತಿ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಹೇಳುವನು. ಇದರ ಬಳಿಕ ಕೃಷ್ಣನು ತಂದೆಯ ಅನುಮತಿ ಪಡೆದುಕೊಂಡು ಬಳಿಕ ಕುಸ್ತಿಯ ಅಖಾಡಕ್ಕೆ ಇಳಿಯುತ್ತಾನೆ.

Most Read: ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಮುಷ್ತಿಕ ವಿರುದ್ಧ ಪಂದ್ಯದಲ್ಲಿ ಬಲರಾಮನಿಗೆ ಗೆಲುವು

ಮುಷ್ತಿಕ ವಿರುದ್ಧ ಪಂದ್ಯದಲ್ಲಿ ಬಲರಾಮನಿಗೆ ಗೆಲುವು

ಇದೇ ವೇಳೆ ಇನ್ನೊಬ್ಬ ಕುಸ್ತಿ ಪಟವಾಗಿದ್ದ ಮುಷ್ತಿಕನು ಬಲರಾಮನನ್ನು ಕುಸ್ತಿ ಅಖಾಡಕ್ಕೆ ಆಹ್ವಾನಿಸುವನು. ಕೃಷ್ಣನು ಚಾನುರನ ಆಹ್ವಾನವನ್ನು ಸ್ವೀಕರಿಸಿರುವುದು, ಬಲರಾಮನಿಗೆ ಮುಷ್ತಿಕನ ಸವಾಲನ್ನು ಸ್ವೀಕರಿಸಲು ನೀಡಿದ ಸುಳಿವು ಆಗಿತ್ತು. ಕೆಲವೇ ನಿಮಿಷಗಳಲ್ಲಿ ಮುಷ್ತಿಕ ಕುತ್ತಿಗೆ ಮುರಿದ ಬಲರಾಮ ಪಂದ್ಯ ಗೆದ್ದುಕೊಂಡ.

ಕೃಷ್ಣನ ತೀಕ್ಷ್ಣ ಬುದ್ಧಿಯು ಚಾನುರ ವಿರುದ್ಧ ಹೋರಾಡುತ್ತಿತ್ತು

ಕೃಷ್ಣನ ತೀಕ್ಷ್ಣ ಬುದ್ಧಿಯು ಚಾನುರ ವಿರುದ್ಧ ಹೋರಾಡುತ್ತಿತ್ತು

ಕುಸ್ತಿಯ ಅಖಾಡದಲ್ಲಿ ಚಾನುರನ ಎದುರು ಸ್ಪರ್ಧಿಸುತ್ತಿದ್ದ ಕೃಷ್ಣನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡುತ್ತಲಿದ್ದ. ಚಾನುರನಿಗೆ ತನ್ನನ್ನು ಹಿಡಿಯಲು ಬಿಡುತ್ತಿರಲಿಲ್ಲ. ಇದು ಕೆಲವು ಸಮಯದವರೆಗೆ ಹಾಗೆ ಮುಂದುವರಿಯಿತು. ಯಾಕೆಂದರೆ ಚಾನುರನ ಶಕ್ತಿಯು ಆತನ ದೈತ್ಯ ದೇಹ ಎನ್ನುವುದು ಶ್ರೀಕೃಷ್ಣನಿಗೆ ಸರಿಯಾಗಿ ತಿಳಿದಿತ್ತು. ಚಾನುರನ್ನು ಓಡಿ ಓಡಿ ಬಳಲಿದ ಬಳಲುತ್ತಾನೆ ಮತ್ತು ಆತ ಸಂಪೂರ್ಣವಾಗಿ ತನ್ನ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ ಎಂದು ಕೃಷ್ಣನಿಗೆ ಸರಿಯಾಗಿ ತಿಳಿದಿತ್ತು. ಚಾನುರ ಬಿದ್ದ ಬಳಿಕ ಆತನ ಮೇಲೆ ಜಿಗಿದು, ಕುತ್ತಿಗೆ ಮುರಿಯುವುದು ಕೃಷ್ಣನಿಗೆ ಸುಲಭವಾಗಿತ್ತು.

Most Read: ಹಿಂದೂ ದೇವಸ್ಥಾನಗಳಲ್ಲಿ ಪುರುಷರು ಪ್ರವೇಶಿಸುವ ಮುನ್ನ ಯಾಕೆ ಶರ್ಟ್‍ಗಳನ್ನು ತೆಗೆದು ಹೋಗಬೇಕು?

ಕಂಸನ ಸೇನೆ ಮತ್ತು ಯಾದವರ ಮಧ್ಯೆ ಹೋರಾಟ

ಕಂಸನ ಸೇನೆ ಮತ್ತು ಯಾದವರ ಮಧ್ಯೆ ಹೋರಾಟ

ತಾನು ನೇಮಿಸಿರುವಂತಹ ಕುಸ್ತಿ ಪಟುಗಳು ಸತ್ತ ಬಳಿಕ ತನಗೆ ಕೃಷ್ಣನಿಗೆ ಉಳಿಗಾಲವಿಲ್ಲವೆಂದು ಕಂಸನಿಗೆ ಸರಿಯಾಗಿ ತಿಳಿದಿತ್ತು. ಕೃಷ್ಣನ ಕೈಯಿಂದ ಸಾಯುವ ಸರದಿಯು ನನ್ನದಾಗಿದೆ ಎಂದು ಕಂಸನಿಗೆ ತಿಳಿದಿತ್ತು. ಇದರಿಂದ ಇಂತಹ ಸಂದರ್ಭದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಆತ ಒಂದು ಸಣ್ಣ ಸೇನೆಯನ್ನು ನಿಯೋಜನೆ ಮಾಡಿಕೊಂಡಿದ್ದ. ಚಾನುರ ಮತ್ತು ಮುಷ್ತಿಕ ಎಂಬಿಬ್ಬರು ಕುಸ್ತಿ ಪಟುಗಳು ಸತ್ತ ಬಳಿಕ ಆತ ತನ್ನ ಸೇನೆಯು ಯಾದವರ ಮೇಲೆ ದಾಳಿ ಮಾಡುವಂತೆ ಆದೇಶ ನೀಡುವನು. ಕೆಲವೇ ಕ್ಷಣಗಳಲ್ಲಿ ಕಂಸನ ಸೇನೆ ಮತ್ತು ಯಾದವರ ಮಧ್ಯೆ ದೊಡ್ಡ ಯುದ್ಧ ನಡೆಯುತ್ತದೆ.

Most Read: ಶ್ರೀಕೃಷ್ಣನ ಕಿರೀಟದಲ್ಲಿರುವ 'ನವಿಲಿನ ಗರಿಯ' ಹಿಂದಿರುವ ರಹಸ್ಯ

ಕೃಷ್ಣನ ಕೈಯಲ್ಲಿ ಕಂಸನ ವಧೆ

ಕೃಷ್ಣನ ಕೈಯಲ್ಲಿ ಕಂಸನ ವಧೆ

ಯುದ್ಧದ ಬಗ್ಗೆ ಕೃಷ್ಣನಿಗೆ ತಿಳಿದಾಗ, ಇದಕ್ಕೆ ಏನಾದರೂ ಮಾಡಬೇಕು ಎಂದು ಆತ ಆಲೋಚನೆ ಮಾಡುತ್ತಾನೆ. ಇನ್ನೊಂದು ಕಡೆಯಲ್ಲಿ ಕಂಸನು ಖಡ್ಗವನ್ನು ಹಿಡಿದುಕೊಂಡು ಕೃಷ್ಣನನ್ನು ಕೊಲ್ಲಲು ಓಡುತ್ತಾ ಬರುತ್ತಿರುತ್ತಾನೆ. ಇದೇ ವೇಳೆ ಕೃಷ್ಣನು ದೊಡ್ಡ ಹೆಜ್ಜೆಯನ್ನಿಟ್ಟು ಹಾರಿ ಕಂಸನ ಹಿಂದೆ ಹೋಗಿ ನಿಂತು, ಆತನ ಕೂದಲನ್ನು ಹಿಡಿದುಕೊಳ್ಳುತ್ತಾನೆ ಮತ್ತು ಹಿಂದಕ್ಕೆ ಎಳೆಯುತ್ತಾನೆ. ಈ ವೇಳೆ ಕಂಸನ ಖಡ್ಗವು ಕೆಳಗೆ ಬೀಳುತ್ತದೆ. ಕೃಷ್ಣನು ಈ ಖಡ್ಗವನ್ನು ಎತ್ತಿಕೊಂಡು ಸ್ವಲ್ಪವೂ ತಡ ಮಾಡದೆ ತಕ್ಷಣವೇ ದುಷ್ಟ ರಾಜ ಕಂಸನ ತಲೆ ಕಡಿಯುತ್ತಾನೆ. ಇದರ ಬಳಿಕ ಕಂಸನ ಕುತ್ತಿಗೆಯಲ್ಲಿ ಇದ್ದ ಶಂಖವನ್ನು ತೆಗೆದು ಅದನ್ನು ಊದಿ, ತಮ್ಮ ಗೆಲುವಿನ ಬಗ್ಗೆ ಘೋಷಣೆ ಮಾಡುತ್ತಾನೆ. ಆಗ ಯುದ್ಧವು ನಿಲ್ಲುತ್ತದೆ ಮತ್ತು 16ರ ಹರೆಯದ ದೇವಕಿ ಪುತ್ರನು ಕಂಸನನ್ನು ಕೊಲ್ಲುತ್ತಾನೆ. ದುಷ್ಟ ರಾಜನ ವಧೆಯಾದ ಪರಿಣಾಮವಾಗಿ ಆ ರಾಜ್ಯದ ಜನರು ಹಾಡು ಹಾಡಿಕೊಂಡು ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳುವರು. ಅದಾಗ್ಯೂ, ಕೃಷ್ಣನು ಈ ಜನಸಮೂಹದ ಸಂಭ್ರಮವನ್ನು ನಿಲ್ಲಿಸಲು ಸೂಚಿಸುತ್ತಾನೆ ಮತ್ತು ತಾನು ಸಮಯಕ್ಕೆ ಬೇಕಾಗಿರುವುದನ್ನು ಮಾತ್ರ ಮಾಡಿದ್ದೇನೆ ಎಂದು ಹೇಳುತ್ತಾನೆ. ಕಂಸ ನಿಮ್ಮ ರಾಜನಾಗಿದ್ದ ಮತ್ತು ರಾಜನ ಸಾವನ್ನು ಯಾವತ್ತೂ ಸಂಭ್ರಮಾಚರಣೆ ಮಾಡಬಾರದು ಎಂದು ಕೃಷ್ಣನು ಹೇಳುವನು.

English summary

Kansa Vadh 2020: Who was Kansa, and How did Krishna kill him?

Kamsa was the maternal uncle of Lord Krishna. Kamsa was a tyrant whose death was to happen at the hands of the eighth child of his sister Devaki, as per a prophecy. Lord Krishna was this eighth child. Fearing this, Kamsa plotted the death of Krishna. However, the entire plan fell through and became a reason for his own death.
X
Desktop Bottom Promotion