For Quick Alerts
ALLOW NOTIFICATIONS  
For Daily Alerts

ಹನುಮಂತನ ಮೂಲಕ ಶ್ರೀರಾಮ ದೇವರ ಭೇಟಿಯಾದ ತುಳಸಿದಾಸರು!

|

ರಾಮಾಯಣವನ್ನು ಹಲವರು ಬರೆದಿರುವುದಾಗಿ ಪ್ರಚಲಿತದಲ್ಲಿದೆ. ಇದರಲ್ಲಿ ಮೊದಲನೇಯದಾಗಿ ವಾಲ್ಮೀಕಿ ಅವರು ಬರೆದಿರುವಂತಹ ರಾಮಾಯಣವು ಹೆಚ್ಚು ಜನಪ್ರಿಯ. ಅದೇ ರೀತಿ ತುಳಸಿ ದಾಸರು ಕೂಡ ರಾಮಾಯಣ ಬರೆದಿರುವರು. ತುಳಸಿ ದಾಸರ ಬಗ್ಗೆ ಹೇಳುವುದಾದರೆ ಅವರು ಹಿಂದೂ ಧರ್ಮದ ಬಹುದೊಡ್ಡ ಸನ್ಯಾಸಿ ಲೇಖಕ. ಅವರು ಸಂಸ್ಕೃತದಲ್ಲೂ ತನ್ನ ಛಾಪನ್ನು ಮೂಡಿಸಿದವರು. ಭಕ್ತಿ ಆಂದೋಲನದ ಮೂಲಕವಾಗಿ ಅವರು ಅಖಂಡ ಭಾರತದಲ್ಲಿ ತನ್ನದೇ ಆದ ಬೆಂಬಲಿಗರನ್ನು ಪಡೆದಿದ್ದರು. ರಾಮನ ಭಕ್ತನಾಗಿದ್ದ ಸಂತ ತುಳಸಿದಾಸರು ರಾಮನ ಗುಣಗಾನಗೈದು ಕವಿತೆಗಳನ್ನು ಬರೆಯುತ್ತಿದ್ದರು. ತುಳಸಿದಾಸರು ರಾಮನ ಬಗ್ಗೆ ಬರೆದಿರುವಂತಹ ದೋಹದಿಂದಲೇ ಹೆಚ್ಚು ಜನಪ್ರಿಯರಾಗಿದ್ದರು. ಇಂದಿಗೂ ತುಳಸಿದಾಸರ ದೋಹಗಳು ಪ್ರಸ್ತುತ ಎನಿಸುವುದು.

ರಾಮ ದೇವರು ಯಾವತ್ತಿಗೂ ತನ್ನ ಭಕ್ತರಿಗೆ ದರ್ಶನ ನೀಡದೇ ಇರುತ್ತಿರಲಿಲ್ಲ. ಶಬರಿಗೆ ಕೂಡ ಹಲವಾರು ವರ್ಷಗಳ ಬಳಿಕ ಆತ ದರ್ಶನ ನೀಡುತ್ತಾನೆ. ತುಳಸಿದಾಸರ ವಿಚಾರದಲ್ಲೂ ಇದೇ ಆಯಿತು. ಅವರ ಪ್ರಾರ್ಥನೆಯನ್ನು ಹನುಮಂತನ ಮೂಲಕವಾಗಿ ರಾಮನಿಗೆ ತಿಳಿಯಿತು. ಆದರೆ ಸಾಮಾನ್ಯರಂತೆ ಇದ್ದ ತುಳಸಿದಾಸರು ಶ್ರೀರಾಮ ದೇವರ ದರ್ಶನ ಹೇಗೆ ಪಡೆದರು ಎನ್ನುವುದನ್ನು ತಿಳಿಯಿರಿ.

ದೈವಿಕ ದೃಷ್ಟಿ ನೆರವಿನಿಂದ ದೇವರನ್ನು ಕಾಣಬಹುದು

ದೈವಿಕ ದೃಷ್ಟಿ ನೆರವಿನಿಂದ ದೇವರನ್ನು ಕಾಣಬಹುದು

ವಿವಿಧ ರೂಪದಲ್ಲಿ ಬರುವಂತಹ ದೇವರನ್ನು ಗುರುತು ಹಿಡಿಯಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಾಗದೆ ಇರುವ ಕಾರಣ, ಎಷ್ಟೇ ಭಕ್ತಿ ಇದ್ದರೂ ದೇವರ ನೋಡಲು ದೈವಿಕ ದೃಷ್ಟಿಯು ಬೇಕಾಗುತ್ತದೆ. ಸನ್ಯಾಸಿ, ಅರ್ಚಕ ಅಥವಾ ಬೇರೆ ಯಾರೇ ಆಗಿರಲಿ, ಪ್ರತಿಯೊಬ್ಬರಿಗೂ ಹಾಗೆ ಸುಲಭವಾಗಿ ದೇವರನ್ನು ಕಾಣಲು ಸಾಧ್ಯವಾಗದು. ಪ್ರಹ್ಲಾದನಂತವರಲ್ಲಿ ಅಂತಹ ದೈವಿಕ ದೃಷ್ಟಿಯಿತ್ತು ಮತ್ತು ಆತನನ್ನು ಬೆಂಕಿಗೆ ಹಾಕಿದರೂ ಸುಡದೆ ಅದ್ಭುತವಾದ ಶಕ್ತಿಯಿಂದ ದೇವರ ದರ್ಶನ ಪಡೆದಿದ್ದಾನೆ. ಅದೇ ರೀತಿಯಾಗಿ ಶಬರಿ ಕೂಡ ತನ್ನ ಇಳಿ ವಯಸ್ಸಿನಲ್ಲಿ ಶ್ರೀರಾಮನ ದರ್ಶನ ಪಡೆಯುವಳು. ರಾಮಾಯಣ ಬರೆದಿರುವಂತಹ ವಾಲ್ಮೀಕಿ ಅವರು ಒಬ್ಬ ದರೋಡೆಕೋರನಾಗಿದ್ದರು ಮತ್ತು ಅವರ ಮನಪರಿವರ್ತನೆಯಾಗಿ ಸನ್ಯಾಸ ದೀಕ್ಷೆ ಪಡೆದ ಬಳಿಕ ರಾಮಾಯಣ ಬರೆದಿದ್ದರು.

Most Read: ರಾಮಾಯಣ ಕಥೆ: ಅಂದು ಶ್ರೀರಾಮನಿಗೆ ಸಹಾಯ ಮಾಡಿದ ಪುಟ್ಟ ಅಳಿಲಿನ ಕಥೆ

ತುಳಸಿದಾಸರು ಶ್ರೀರಾಮ ಮತ್ತೊಬ್ಬ ಪರಮಭಕ್ತ

ತುಳಸಿದಾಸರು ಶ್ರೀರಾಮ ಮತ್ತೊಬ್ಬ ಪರಮಭಕ್ತ

ತುಳಸಿದಾಸರು ಶ್ರೀರಾಮನ ಮತ್ತೊಬ್ಬ ಪರಮಭಕ್ತ. ತುಳಸಿದಾಸರು ಶ್ರೀರಾಮನ ಬಗ್ಗೆ ಕವಿತೆ ಹಾಗೂ ಭಜನೆಗಳನ್ನು ಬರೆದು ಹಾಡುತ್ತಲಿದ್ದರೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹನುಮಂತನ ನೆರವಿನಿಂದಾಗಿ ತುಳಸಿದಾಸರು ಶ್ರೀರಾಮನನ್ನು ಭೇಟಿಯಾದರು. ಇದು ಹೇಗೆ ನಡೆಯಿತು ಎಂದು ತಿಳಿಯಿರಿ.

ಹನುಮಂತನನ್ನು ತುಳಸಿದಾಸರು ಭೇಟಿಯಾದರು

ಹನುಮಂತನನ್ನು ತುಳಸಿದಾಸರು ಭೇಟಿಯಾದರು

ತುಳಸಿದಾಸರು ತನ್ನ ದೈವಿಕ ಆತ್ಮದಿಂದ ಹನುಮಂತ ದೇವರನ್ನು ಹೇಗೆ ಭೇಟಿಯಾಗುವುದು ಎಂದು ತಿಳಿದುಕೊಂಡರು. ಹನುಮಂತ ದೇವರನ್ನು ಭೇಟಿಯಾದ ವೇಳೆ ಶ್ರೀರಾಮನ ಭೇಟಿಯಾಗಲು ತನಗೆ ನೆರವಾಗಬೇಕು ಎಂದು ತುಳಸಿದಾಸರು ಕೇಳಿಕೊಂಡರು. ಶ್ರೀರಾಮನ ಭೇಟಿಯಾಗಬೇಕಿದ್ದರೆ ಚಿತ್ರಕೂಟವೆಂಬ ಬೆಟ್ಟಕ್ಕೆ ತೆರಳಬೇಕು ಎಂದು ಹನುಂತ ದೇವರು ಸೂಚಿಸುವರು. ಶ್ರೀರಾಮ ದೇವರನ್ನು ನೋಡಬೇಕೆಂಬ ಹಂಬಲದೊಂದಿಗೆ ತುಳಸಿದಾಸರು ಚಿತ್ರಕೂಟದ ಬೆಟ್ಟದತ್ತ ಪ್ರಯಾಣ ಬೆಳೆಸಿದರು. ತುಳಸಿದಾಸರು ಪ್ರಯಾಣಿಸುತ್ತಿರುವ ವೇಳೆ ದಾರಿ ಮಧ್ಯೆ ಇಬ್ಬರು ಸುಂದರ ಯುವಕರು ಕುದುರೆ ಮೇಲೆ ಪ್ರಯಾಣಿಸುತ್ತಿದ್ದರು. ಅದಾಗ್ಯೂ, ಕುದುರೆ ಮೇಲೆ ಪ್ರಯಾಣಿಸುತ್ತಿದ್ದವರು ಸೋದರರಾದ ಶ್ರೀರಾಮ ದೇವರು ಮತ್ತು ಲಕ್ಷಣ ಎಂದು ತುಳಸಿದಾಸರಿಗೆ ತಿಳಿಯದೇ ಹೋಯಿತು. ಹನುಮಂತ ಈ ಬಗ್ಗೆ ತುಳಸಿದಾಸರಿಗೆ ಹೇಳಿದಾಗ ಈ ವಿಚಾರ ತಿಳಿಯಿತು.

Most Read: ಶ್ರೀಕೃಷ್ಣ ಮತ್ತು ಮಾವಿನ ಹಣ್ಣು ಮಾರುವವಳ ಕಥೆ

ತುಳಸಿದಾಸರ ಮುಂದೆ ಶ್ರೀರಾಮ ದೇವರು ಪ್ರತ್ಯಕ್ಷರಾದರು

ತುಳಸಿದಾಸರ ಮುಂದೆ ಶ್ರೀರಾಮ ದೇವರು ಪ್ರತ್ಯಕ್ಷರಾದರು

ತಾನು ತುಂಬಾ ಭಕ್ತಿಯಿಂದ ಪೂಜಿಸುತ್ತಿದ್ದ ಶ್ರೀರಾಮನನ್ನು ಗುರುತಿಸಲು ತನಗೆ ಸಾಧ್ಯವಾಗಲಿಲ್ಲ ಎನ್ನುವ ನೋವು ತುಳಸಿದಾಸರನ್ನು ಬಹುವಾಗಿ ಕಾಡಿತು. ಅದಾಗ್ಯೂ, ತುಳಸಿದಾಸರನ್ನು ಸಮಾಧಾನಪಡಿಸಿದ ಹನುಮಂತ, ಶ್ರೀರಾಮ ದರ್ಶನಕ್ಕೆ ಮತ್ತೊಂದು ಅವಕಾಶ ಸಿಗುವುದು ಎಂದು ಭರವಸೆ ನೀಡುವನು. ಶ್ರೀರಾಮ ಮರುದಿನ ಬೆಳಗ್ಗೆ ಮತ್ತೆ ಇಲ್ಲಿಗೆ ಬರುವನು ಎಂದು ಹನುಮಂತ ಹೇಳುತ್ತಾನೆ. ಇದನ್ನು ಕೇಳಿದ ತುಳಿಸದಾಸರು ಸಂಪೂರ್ಣ ರಾತ್ರಿ ಮರುದಿನ ಬೆಳಗ್ಗಿನ ಬಗ್ಗೆ ಯೋಚಿಸುತ್ತಾ ಕಳೆದರು. ಬೆಳಗ್ಗೆ ಎದ್ದು ನಿತ್ಯಾಧಿಕರ್ಮಗಳನ್ನು ಪೂರೈಸಿದ ಬಳಿಕ ತಿಲಕವನ್ನು ಇಡಲು ಶ್ರೀಗಂಧ ತಯಾರಿಸುತ್ತಿದ್ದ ವೇಳೆ ಅವರ ಮುಂದೆ ಒಬ್ಬ ಪುಟ್ಟ ಬಾಲಕ ಕಾಣಿಸಿಕೊಳ್ಳುತ್ತಾನೆ.

ಹನುಮಂತ ದೇವರು ದೋಹ ಪಠಿಸುವರು

ಹನುಮಂತ ದೇವರು ದೋಹ ಪಠಿಸುವರು

ಶ್ರೀರಾಮ ದೇವರನ್ನು ಗುರುತಿಸಲು ಮತ್ತೆ ತುಳಸಿದಾಸರಿಗೆ ಸಾಧ್ಯವಾಗುವುದಿಲ್ಲವೆಂದು ಅರಿತುಕೊಂಡ ಹನುಮಂತ ದೇವರು ಒಂದು ದೋಹವನ್ನು ಪಠಿಸುವರು. ಚಿತ್ರಕೂಟ್ ಘಾಟ್ ಪೇ ಭಾಯಿ ಸನತಾನ್ ಕೆ ಭೀರ್, ತುಳಸಿದಾಸ್ ಚಂದನ್ ಭೀಸನ್, ತಿಲಕ್ ದೇ ರಘುಬಿರ್. ಈ ದೋಹದ ಅರ್ಥ ಈ ರೀತಿಯಾಗಿದೆ: ಚಿತ್ರಕೂಟವೆಂಬ ಪರ್ವತದಲ್ಲಿ ಹಲವಾರು ಮಂದಿ ಸನ್ಯಾಸಿಗಳು ಸೇರಿದ್ದಾರೆ. ತುಳಸಿದಾಸರು ಶ್ರೀಗಂಧವನ್ನು ತೇಯುತ್ತಿರುವರು, ಶ್ರೀರಾಮ ದೇವರು ತಿಲಕ ಹಾಕುವರು.

ಹನುಮಂತ ದೇವರು ದೋಹ ಪಠಿಸುತ್ತಾ ಇದ್ದಂತೆ ತುಳಸಿದಾಸರಿಗೆ ತನ್ನ ಮುಂದೆ ನಿಂತಿರುವ ಮಗು ಶ್ರೀರಾಮ ದೇವರು ಎಂದು ತಕ್ಷಣವೇ ತಿಳಿದುಬರುತ್ತದೆ. ತುಳಸಿದಾಸರು ತದೇಕಚಿತ್ತದಿಂದ ಪ್ರೀತಿ ಹಾಗೂ ಭಕ್ತಿಯಿಂದ ಶ್ರೀರಾಮ ದೇವರನ್ನು ನೋಡುವರು.

English summary

How Hanuman Led Tulsidas To Lord Rama

There have been many great devotees of Lord Rama. While some like Prahlad could experience the divine power of the Lord at a young age, others such as Shabari had to wait until they attained old age. Another devotee Tulsidas believed that it was Lord Hanuman who could help him as he was the closest to Lord Rama. Was he right?
X
Desktop Bottom Promotion