For Quick Alerts
ALLOW NOTIFICATIONS  
For Daily Alerts

ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...

By manu
|

ಹಿಂದೂ ಧರ್ಮ ಭಾರತದ ಪ್ರಾಚೀನ ಧರ್ಮವಾಗಿದ್ದು ಇದನ್ನು ಅನುಸರಿಸುವವರು ವಿಶಾಲ ಮನೋಭಾವವನ್ನು, ಕ್ಷಮಾಗುಣವನ್ನೂ, ಶೃದ್ಧೆ, ತನ್ಮಯತೆಗಳನ್ನು ಹೊಂದಿರಬೇಕೆಂದು ಬೋಧಿಸುತ್ತದೆ. ಕೆಲವರ ದೃಷ್ಟಿಯಲ್ಲಿ ಇದೊಂದು ತತ್ವಜ್ಞಾನವೂ ಹೌದು. ಹಿಂದೂ ಧರ್ಮದಲ್ಲಿಯೂ ಹಲವಾರು ಒಳಪಂಗಡಗಳಿದ್ದು ಪ್ರತಿ ಪಂಗಡಗಳಿಗೂ ಪ್ರತ್ಯೇಕವಾದ ಕಟ್ಟಳೆಗಳಿವೆ. ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿರುವ 7 ಪವಿತ್ರ ಕ್ಷೇತ್ರಗಳು

ಒಂದು ಪಂಗಡದ ಕಟ್ಟಳೆ ಇನ್ನೊಂದು ಪಂಗಡದ ಕಟ್ಟಳೆಗೂ ಭಿನ್ನವಾಗಿರಬಹುದು, ಕೆಲವೊಮ್ಮೆ ವ್ಯತಿರಿಕ್ತವೂ ಆಗಿರಬಹುದು. ಆದರೆ ಮುಖ್ಯವಾದ ಕಟ್ಟಳೆಗಳೆಲ್ಲಾ ಒಂದೇ ಆಗಿರುತ್ತವೆ. ದೇವನೊಬ್ಬ ನಾಮ ಹಲವು ಎಂಬ ಸೂತ್ರವನ್ನು ಅನುಸರಿಸುವ ಹಿಂದೂಗಳು ತಮ್ಮ ಆರಾಧ್ಯ ದೈವವನ್ನು ಪೂಜಿಸುವ, ಗರ್ಭಗುಡಿಗೆ ಸುತ್ತುಬರುವ, ಕಾಣಿಕೆ ಅರ್ಪಿಸುವ ಮೊದಲಾದ ವಿಧಿಗಳು ಸರಿಸುಮಾರು ಒಂದೇ ಪ್ರಕಾರವಾಗಿವೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ಹಿಂದೂ ಪುರಾಣಗಳ ಪ್ರಕಾರ ಮೂವತ್ತಮೂರು ಕೋಟಿ ದೇವತೆಗಳಿದ್ದರೂ ಎಲ್ಲಾ ದೇವರಿಗೆ ಗುಡಿಗಳನ್ನು ಕಟ್ಟಲಾಗಿಲ್ಲ. ಪ್ರಮುಖವಾದ ಕೆಲವು ದೇವರುಗಳಿಗೆ ಗುಡಿಗಳನ್ನು ಕಟ್ಟಲಾಗಿದ್ದು ಸಾವಿರಾರು ವರ್ಷಗಳಿಂದ ಪೂಜೆಗಳನ್ನು ಸಲ್ಲಿಸುತ್ತಾ ಬರಲಾಗಿದೆ. ಈ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡುವ ಮುನ್ನ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ನೀವು ಯಾವುದಾದರೂ ಹಿಂದೂ ಮಂದಿರಕ್ಕೆ ಭೇಟಿ ನೀಡುವ ಇಚ್ಛೆ ಹೊಂದಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿ ನಿಮಗೆ ದಾರಿದೀಪವಾಗಲಿದೆ.

ಸ್ವಚ್ಛತೆಯನ್ನು ಕಾಪಾಡಿ

ಸ್ವಚ್ಛತೆಯನ್ನು ಕಾಪಾಡಿ

ಯಾವುದೇ ಮಂದಿರಕ್ಕೆ ಪ್ರವೇಶ ಪಡೆಯುವ ಮುನ್ನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹೊರಡುವ ಮುನ್ನ ಸ್ನಾನ ಮಾಡಿ ಒಗೆದ ಮತ್ತು ಸ್ವಚ್ಛ ಬಟ್ಟೆಗಳನ್ನೇ ತೊಡುವುದು ಕಡ್ಡಾಯವಾಗಿದೆ. ಮಂದಿರದೊಳಗೆ ಎಲ್ಲರಿಗೂ ಪ್ರವೇಶದ ಅನುಮತಿಯಿದ್ದು ಯಾವುದೇ ಧರ್ಮದ ಅನುಯಾಯಿಗಳು ದರ್ಶನ ಪಡೆಯಬಹುದು.

ಕಾಣಿಕೆಗಳನ್ನು ಕೊಳ್ಳಿ, ಆದರೆ ಕಡ್ಡಾಯವಿಲ್ಲ

ಕಾಣಿಕೆಗಳನ್ನು ಕೊಳ್ಳಿ, ಆದರೆ ಕಡ್ಡಾಯವಿಲ್ಲ

ಪೂಜೆಯ ಬಳಿಕ ದೇವರಿಗೆ ಕಾಣಿಕೆಯಾಗಿ ಹೂವು, ಹಣ್ಣು, ಬಟ್ಟೆ, ತೆಂಗಿನಕಾಯಿ, ಸಿಹಿಗಳನ್ನು ನೀಡುವುದು ಒಂದು ಸಂಪ್ರದಾಯವಾಗಿದೆ. ಆದರೆ ಈ ಕಾಣಿಕೆಗಳು ಕಡ್ಡಾಯವಲ್ಲ. ದೇವರನ್ನು ನಂಬುವ ಭಕ್ತರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿ ತಮ್ಮ ಕಷ್ಟಗಳ ನಿವಾರಣೆಗೆ ಮತ್ತು ಸುಖಜೀವನಕ್ಕಾಗಿ ದೇವರಲ್ಲಿ ಬೇಡಿಕೊಂಡ ಬಳಿಕ ತಮ್ಮ ತೃಪ್ತಿಗಾಗಿ ದೇವರಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಈ ಬೇಡಿಕೆಯನ್ನು ಪರಿಗಣಿಸಿದ ವ್ಯಾಪಾರಿಗಳು ಈ ಕಾಣಿಕೆಗಳನ್ನೇ ಮಾರಾಟ ಮಾಡುವ ಮಳಿಗೆಗಳಿಂದ ಇಡಿಯ ದೇವಸ್ಥಾನದ ಪ್ರವೇಶದ್ವಾರದ ಬಳಿ ನೂರಾರು ಅಂಗಡಿಗಳನ್ನು ತೆರೆದಿರುತ್ತಾರೆ.

ಕಾಣಿಕೆಗಳನ್ನು ಕೊಳ್ಳಿ, ಆದರೆ ಕಡ್ಡಾಯವಿಲ್ಲ

ಕಾಣಿಕೆಗಳನ್ನು ಕೊಳ್ಳಿ, ಆದರೆ ಕಡ್ಡಾಯವಿಲ್ಲ

ಭಕ್ತರು ಮನೆಯಿಂದಲೇ ಅಥವಾ ದೇವಸ್ಥಾನದ ಬಳಿಯ ಅಂಗಡಿಯಿಂದಲೇ ಪೂಜೆಯ ಮತ್ತು ಕಾಣಿಕೆಗೆ ಅಗತ್ಯವಾದ ಪರಿಕರಗಳನ್ನು ಕೊಳ್ಳುತ್ತಾರೆ. ಸಂದರ್ಶಕರೂ ತಮಗೆ ಇಚ್ಛೆಯುಂಟಾದರೆ ಈ ಪರಿಕಗಳನ್ನು ಕೊಂಡು ದೇವರಿಗೆ ಅರ್ಪಿಸಬಹುದು, ಆದರೆ ಕಡ್ಡಾಯವಿಲ್ಲ. ದೇವರ ಪೂಜೆಯ ಬಳಿಕ ಪ್ರಸಾದ ವಿತರಣೆಯ ಸಮಯದಲ್ಲಿ ಕಾಣಿಕೆ ನೀಡಿರುವುದು, ನೀಡದಿರುವುದನ್ನು ಪರಿಗಣಿಸಲಾಗುವುದಿಲ್ಲ, ದೇವರಿಗೆ ಎಲ್ಲಾ ಭಕ್ತರು ಏಕಸಮಾನರು.

ದೇವಸ್ಥಾನದೊಳಗೆ ಪಾದರಕ್ಷೆ ಸಲ್ಲದು

ದೇವಸ್ಥಾನದೊಳಗೆ ಪಾದರಕ್ಷೆ ಸಲ್ಲದು

ಯಾವುದೇ ದೇವಸ್ಥಾನದಲ್ಲಿ ಪಾದರಕ್ಷೆಗಳೊಂದಿಗೆ ಯಾರಿಗೂ ಪ್ರವೇಶವಿಲ್ಲ. ಪಾದರಕ್ಷೆಗಳನ್ನು ಕಳಚಿಡಲು ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲಿ ನಿಗದಿತ ಸ್ಥಳಗಳ ಏರ್ಪಾಟು ಇರುತ್ತದೆ. ಕೆಲವು ಕಡೆ ಚಪ್ಪಲಿ ಕದಿಯುವ ಅಪಾಯವಿರುವ ಕಾರಣ ಚಿಕ್ಕ ಮೊಬಲಗು ನೀಡಿ ಪಾದರಕ್ಷೆಗಳನ್ನು ಸುರಕ್ಷಿತವಾಗಿರಿಸುವ ಕೋಣೆಗಳಲ್ಲಿರಿಸುವುದೇ ಕ್ಷೇಮ. ಒಂದು ವೇಳೆ ಭಕ್ತರು ಬೂಟು ಧರಿಸುವವರಾಗಿದ್ದರೆ ಕಾಲುಚೀಲ ಧರಿಸಿ ಒಳಗೆ ಅಡಿಯಿಡಬಹುದು. ಆದರೆ ಒಳಗಿನ ನೆಲ ಮಾರ್ಬಲ್ ಅಥವಾ ನುಣಪಾದ ಕಲ್ಲುಗಳಿಂದ ಮಾಡಿದ್ದರೆ ಮಾತ್ರ.

ದೇವಸ್ಥಾನದೊಳಗೆ ಪಾದರಕ್ಷೆ ಸಲ್ಲದು

ದೇವಸ್ಥಾನದೊಳಗೆ ಪಾದರಕ್ಷೆ ಸಲ್ಲದು

ಎಷ್ಟೋ ಕಡೆ ನೆಲ ಅತಿ ನುಣುಪಾಗಿದ್ದು ಕಾಲುಚೀಲ ಧರಿಸಿದ್ದರೆ ಜಾರುವ ಅಪಾಯವಿರುತ್ತದೆ. ಅಂತಹ ಸ್ಥಳಗಳಲ್ಲಿ ಬರಿಗಾಲೇ ಲೇಸು. ಇತರರು ಹೇಗೆ ಹೋಗುತ್ತಿದ್ದಾರೆ ಎಂದು ಗಮನಿಸಿ ಅಂತೆಯೇ ನಡೆದುಕೊಳ್ಳುವುದೇ ಜಾಣತನ. ಆದರೆ ಉಳಿದಂತೆ ಚಪ್ಪಲ್, ಸ್ಯಾಂಡಲ್, ಹೈ ಹೀಲ್ಡ್ ಮೊದಲಾದ ಪಾದರಕ್ಷೆಗಳಿಗೆ ಯಾವುದೇ ದೇವಸ್ಥಾನದಲ್ಲಿ ಕಡ್ಡಾಯವಾಗಿ ಪ್ರವೇಶವಿಲ್ಲ.

ಗರ್ಭಗುಡಿಯ ದರ್ಶನವನ್ನು ಸರತಿಯಲ್ಲಿಯೇ ಪಡೆಯಿರಿ

ಗರ್ಭಗುಡಿಯ ದರ್ಶನವನ್ನು ಸರತಿಯಲ್ಲಿಯೇ ಪಡೆಯಿರಿ

ಮಂದಿರದೊಳಗೆ ಬಂದ ಬಳಿಕ ದೇವಸ್ಥಾನದಲ್ಲಿ ನೋಡಲು ನೂರಾರು ವಿಷಯ ಮತ್ತು ವಸ್ತುಗಳಿವೆಯಾದರೂ ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ಗರ್ಭಗುಡಿಯ ದರ್ಶನ. ಆದರೆ ಹೆಚ್ಚಿನ ಭಕ್ತರು ಇತರ ವಿಷಯಗಳೆಡೆಗೆ ಗಮನ ನೀಡದೇ ನೇರವಾಗಿ ಗರ್ಭಗುಡಿಯತ್ತ ಸಾಗುವ ಕಾರಣ ಇವು ಸದಾ ಜನನಿಬಿಡವಾಗಿರುತ್ತವೆ.

ಗರ್ಭಗುಡಿಯ ದರ್ಶನವನ್ನು ಸರತಿಯಲ್ಲಿಯೇ ಪಡೆಯಿರಿ

ಗರ್ಭಗುಡಿಯ ದರ್ಶನವನ್ನು ಸರತಿಯಲ್ಲಿಯೇ ಪಡೆಯಿರಿ

ಕೆಲವೆಡೆ ಎಲ್ಲರಿಗೂ ಸಮಾನವಾದ ಸರತಿ ಇದ್ದರೆ ಕೆಲವೆಡೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸರತಿಗಳಿರುತ್ತವೆ. ಈ ಸರತಿಯನ್ನು ಪಾಲಿಸುವುದು ಕಡ್ಡಾಯವಾಗಿದ್ದು ಅನುಮತಿ ನೀಡಿದಷ್ಟು ಸಮಯ ಮಾತ್ರ ಗರ್ಭಗುಡಿಯನ್ನು ವೀಕ್ಷಿಸಿದರೆ ಸಾಕು. ಹೆಚ್ಚು ಸಮಯ ಕಬಳಿಸಿದಷ್ಟೂ ನಿಮ್ಮ ಹಿಂದಿನ ಭಕ್ತರ ಸಮಯವನ್ನು ತೆಗೆದುಕೊಂಡಂತೆ ಆಗುತ್ತದೆ.

ನಿಮ್ಮ ಕಾಣಿಕೆಯನ್ನು ಸಲ್ಲಿಸಿ

ನಿಮ್ಮ ಕಾಣಿಕೆಯನ್ನು ಸಲ್ಲಿಸಿ

ಒಂದು ವೇಳೆ ನೀವು ಕಾಣಿಕೆಯನ್ನು ತಂದಿದ್ದರೆ ಪೂಜೆಯ ಬಳಿಕ ಪೂಜಾರಿಗಳು ಕಾಣಿಕೆಯನ್ನು ಸ್ವೀಕರಿಸಲು ಬಂದಾದ ಮಾತ್ರ ಅರ್ಪಿಸಿ. ಕಾಣಿಕೆ ಸಲ್ಲಿಸಲು ಆತುರ ಪಡಬೇಡಿ. ಕೆಲವು ಕಡೆಗಳಲ್ಲಿ ಸರತಿ ತುಂಬಾ ಉದ್ದವಾಗಿದ್ದರೆ ಗರ್ಭಗುಡಿಯ ಬಳಿ ಕಾಣಿಕೆಗಳನ್ನು ಸ್ವೀಕರಿಸಲು ಸೂಕ್ತ ಏರ್ಪಾಡು ಮಾಡಿರುತ್ತಾರೆ. ಈ ಪ್ರಕಾರವೇ ನಿಮ್ಮ ಕಾಣಿಕೆಗಳನ್ನು ಅರ್ಪಿಸಿ. ಆದರೆ ಯಾವುದೇ ಕಾರಣಕ್ಕೂ ಗರ್ಭಗುಡಿಯ ಒಳಗೆ ಪ್ರವೇಶಿಸದಿರಿ. ಏಕೆಂದರೆ ಗರ್ಭಗುಡಿಯು ದೇವಸ್ಥಾನದ ಅತ್ಯಂತ ಪವಿತ್ರ ಸ್ಥಳವಾಗಿದ್ದು ಈ ಸ್ಥಳದ ಒಳಗೆ ಹೋಗಲು ಕೇವಲ ಪೂರ್ವಾನುಮತಿ ಪಡೆದ ಮತ್ತು ನಿಗದಿತ ವ್ಯಕ್ತಿಗಳು ಮಾತ್ರ ಹೋಗಲು ಸಾಧ್ಯ.

ಪ್ರಸಾದವನ್ನು ಬಲಗೈಯಿಂದಲೇ ಸ್ವೀಕರಿಸಿ

ಪ್ರಸಾದವನ್ನು ಬಲಗೈಯಿಂದಲೇ ಸ್ವೀಕರಿಸಿ

ಹಿಂದೂ ಧರ್ಮದಲ್ಲಿ ಯಾವುದೇ ಕಾಣಿಕೆಗಳನ್ನು ಬಲಗೈಯಿಂದಲೇ ಸ್ವೀಕರಿಸುವುದು ಕಡ್ಡಾಯವಾಗಿದ್ದು ಎಡಗೈಯಿಂದ ಸ್ವೀಕರಿಸುವ ಪರಿಯನ್ನು ಒಪ್ಪಲಾಗುವುದಿಲ್ಲ. ಆದ್ದರಿಂದ ಪೂಜೆಯ ಬಳಿಕ ಪೂಜಾರಿಗಳು ಪ್ರಸಾದ ನೀಡಲು ಕೈಚಾಚಿದರೆ ಬಲಗೈಯನ್ನೇ ಮುಂದೆ ಚಾಚಿ.

ಪ್ರಸಾದವನ್ನು ಬಲಗೈಯಿಂದಲೇ ಸ್ವೀಕರಿಸಿ

ಪ್ರಸಾದವನ್ನು ಬಲಗೈಯಿಂದಲೇ ಸ್ವೀಕರಿಸಿ

ಸಾಮಾನ್ಯವಾಗಿ ಪ್ರಸಾದವು ಮನೆಯಲ್ಲಿ ಮಾಡಿರುವ ಸಿಹಿಖಾದ್ಯವಾಗಿದ್ದು ಪೂಜೆಯ ಸಮಯದಲ್ಲಿ ದೇವರ ಬಳಿ ಇರುವ ಕಾರಣ ಇದನ್ನು ಸೇವಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಹಿಂದೂಗಳು ನಂಬುತ್ತಾರೆ. ಆದರೆ ಪ್ರಸಾದವನ್ನು ಅಲ್ಲಿಯೇ ತಿನ್ನುವುದು ಸರಿಯಲ್ಲ. ಇದನ್ನು ತಮ್ಮೊಂದಿಗೇ ಹೊರತಂದು ಮಂದಿರದ ಹೊರಭಾಗದಲ್ಲಿ ಸೇವಿಸಬೇಕು.

ಗರ್ಭಗುಡಿಗೆ ಕೈಮುಗಿಯಿರಿ

ಗರ್ಭಗುಡಿಗೆ ಕೈಮುಗಿಯಿರಿ

ಕೈಮುಗಿಯುವುದು ಹಿಂದೂ ಧರ್ಮದಲ್ಲಿ ಪಾಲಿಸಲಾಗುವ ಒಂದು ವಿಧಿಯಾಗಿದ್ದು ನಮಸ್ಕರಿಸುವ ಸಂಕೇತವಾಗಿದೆ. ಇದನ್ನು ದೇವರಿಗೆ ಪೂಜಿಸಲೂ, ಅತಿಥಿಗಳಿಗೆ, ಹಿರಿಯರಿಗೆ ವಂದಿಸಲೂ ಬಳಸಲಾಗುತ್ತದೆ. ಅಷ್ಟೇ ಅಲ್ಲ, ನಿತ್ಯದ ಚಟುವಟಿಕೆಗಳಲ್ಲಿ ಪೂಜೆ ಮತ್ತು ಮನವಿಗಳಿಗೂ ಕೈಮುಗಿಯಲಾಗುತ್ತದೆ.

ಗರ್ಭಗುಡಿಗೆ ಕೈಮುಗಿಯಿರಿ

ಗರ್ಭಗುಡಿಗೆ ಕೈಮುಗಿಯಿರಿ

ಅಂತೆಯೇ ಗರ್ಭಗುಡಿಯಲ್ಲಿದ್ದಾಗ ದೇವರಿಗೆ ಕೈಮುಗಿಯುವುದು ದೇವರಿಗೆ ಸಲ್ಲಿಸುವ ಗೌರವವಾಗಿದ್ದು ಆ ಸಮಯದಲ್ಲಿ ಕೊಂಚವೇ ಬಾಗುವ ಮೂಲಕ ದೇವರಿಗೆ ಶರಣಾಗುವ ಪರಿಯನ್ನು ಅನುಸರಿಸಲಾಗುತ್ತದೆ. ಆದರೆ ಈ ವಿಧಿ ಕಡ್ಡಾಯವಲ್ಲ. ವಿದೇಶೀಯರು ಮತ್ತು ಹಿಂದೂ ಧರ್ಮದ ಬಗ್ಗೆ ಅರಿವಿರದವರು ತಲೆಬಾಗಲು ಇಚ್ಛಿಸದಿದ್ದರೆ ಅವರನ್ನು ಬಲವಂತಪಡಿಸಲಾಗುವುದಿಲ್ಲ.

ದೇವಾಲಯದ ವಿಗ್ರಹಗಳನ್ನು ಮುಟ್ಟಬೇಡಿ

ದೇವಾಲಯದ ವಿಗ್ರಹಗಳನ್ನು ಮುಟ್ಟಬೇಡಿ

ದೇವಾಲಯದೊಳಗಿನ ಪ್ರತಿ ಗೋಡೆ, ಕಂಭಗಳಲ್ಲಿ ಶಿಲ್ಪಕಲೆಯ ಸಾಕಾರವಾಗಿ ನೂರಾರು ಕಲೆಗಳು ಮೂಡಿರುವುದನ್ನು ಗಮನಿಸಬಹುದು. ಪ್ರತಿ ವಿಗ್ರಹಕ್ಕೂ ಅದರದ್ದೇ ಆದ ಕಥೆ ಮತ್ತು ಇತಿಹಾಸವಿರುತ್ತದೆ. ಇವುಗಳನ್ನು ಕೇವಲ ನೋಡಿ ತೃಪ್ತಿಪಟ್ಟುಕೊಂಡಷ್ಟೂ ಉತ್ತಮ. ಸರ್ವಥಾ ಇವುಗಳನ್ನು ಮುಟ್ಟಬೇಡಿ.

ಫೋಟೋ ತೆಗೆಯಬೇಡಿ

ಫೋಟೋ ತೆಗೆಯಬೇಡಿ

ಇಂದಿನ ದಿನಗಳಲ್ಲಿ ಕ್ಯಾಮೆರಾ ಎಲ್ಲರ ಬಳಿ ಇರುತ್ತದೆ. ಅಂತೆಯೇ ದೇವಾಲಯದೊಳಗೆ ಬಂದ ಬಳಿಕ ತಮ್ಮ ಛಾಯಾಚಿತ್ರವನ್ನು ತೆಗೆದು ತಮ್ಮ ಸಂಬಂಧಿಕರಿಗೆ ತೋರುವ ಆತುರ ಎಲ್ಲರಿಗೂ ಇರುತ್ತದೆ. ಆದರೆ ಪ್ರತಿ ದೇವಸ್ಥಾನದಲ್ಲಿಯೂ ಫೋಟೋ ತೆಗೆಯುವ ಬಗ್ಗೆ ಸ್ಪಷ್ಟವಾದ ಕಾನೂನುಗಳಿದ್ದು ಈ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಅಗತ್ಯ.

ಫೋಟೋ ತೆಗೆಯಬೇಡಿ

ಫೋಟೋ ತೆಗೆಯಬೇಡಿ

ಒಂದು ವೇಳೆ ಫೋಟೋಗ್ರಾಫಿ ನಿಷಿದ್ಧ ಎಂದು ಸ್ಪಷ್ಟವಾಗಿ ಬರೆದಿದ್ದರೆ ಕ್ಯಾಮೆರಾ ಹೊರತೆಗೆಯುವ ಸಾಹಸಕ್ಕೇ ಹೋಗಬೇಡಿ. ಇದರಿಂದ ನಿಮಗೇ ಕ್ಷೇಮ. ಒಂದು ವೇಳೆ ಯಾವುದೇ ಫಲಕಗಳಿಲ್ಲದಿದ್ದರೆ ಫೋಟೋ ತೆಗೆಯುವ ಮುನ್ನ ದೇವಸ್ಥಾನದ ಸಿಬ್ಬಂದಿ ಅಥವಾ ಪೂಜಾರಿಗಳಲ್ಲಿ ಅನುಮತಿ ಪಡೆದ ಬಳಿಕವೇ ಫೋಟೋ ತೆಗೆಯಿರಿ.

ದಾನ ಮಾಡಿ, ಆದರೆ ಕಡ್ಡಾಯವಲ್ಲ

ದಾನ ಮಾಡಿ, ಆದರೆ ಕಡ್ಡಾಯವಲ್ಲ

ಪ್ರತಿ ದೇವಸ್ಥಾನದಲ್ಲಿಯೂ ಕಾಣಿಕೆ ಹುಂಡಿ ಇರುತ್ತದೆ. ಈ ಧನವನ್ನು ದೇವಸ್ಥಾನದ ನಿತ್ಯದ ಖರ್ಚುಗಳಿಗಾಗಿಯೂ, ಲೋಕಕಲ್ಯಾಣಕ್ಕಾಗಿಯೂ, ಆಪದ್ಧನದ ರೂಪದಲ್ಲಿಯೂ ಬಳಸಲಾಗುತ್ತದೆ. ನಿಮಗೆ ಇಚ್ಛೆಯಿದ್ದರೆ ನಿಮ್ಮ ಸಾಮರ್ಥಕ್ಕೆ ಅನುಸಾರವಾಗಿ ಬಲಗೈಯಿಂದಲೇ ಕಾಣಿಕೆಯನ್ನು ಹುಂಡಿಯೊಳಗೆ ಹಾಕಿ. ಎಡಗೈ ಬಳಸಬೇಡಿ. ಎಂದಿಗೂ ಬೇರೆಯವರು ಏನು ಅರ್ಪಿಸುತ್ತಿದ್ದಾರೆ, ಎಷ್ಟು ಅರ್ಪಿಸುತ್ತಿದ್ದಾರೆ ಎಂಬುದನ್ನು ನೋಡಿ ಹೋಲಿಸಿಕೊಳ್ಳಬೇಡಿ.

ದಾನ ಮಾಡಿ, ಆದರೆ ಕಡ್ಡಾಯವಲ್ಲ

ದಾನ ಮಾಡಿ, ಆದರೆ ಕಡ್ಡಾಯವಲ್ಲ

ನೆನಪಿಡಿ, ಯಾವುದೇ ದೇವಸ್ಥಾನದಲ್ಲಿ ಕಾಣಿಕೆ ಕಡ್ಡಾಯವಲ್ಲ! ದೇವರಿಗೆ ದಾನ ನೀಡಲೇಬೇಕು ಎಂದು ಯಾರಾದರೂ ಪುಸಲಾಯಿಸಿದರೆ ಅಥವಾ ಇದು ಕಡ್ಡಾಯವೆಂದು ಹೇಳಿದರೆ ನಂಬಬೇಡಿ. ನೆನಪಿಡಿ, ಇವರು ಧರ್ಮದ ಹೆಸರಿನಲ್ಲಿ ಹಣ ದೋಚುವ ವಂಚಕರಿರಬಹುದು. ಸ್ಪಷ್ಟ ಮಾತುಗಳಲ್ಲಿ ಇಲ್ಲ ಎಂದು ಹೇಳಿ.

ಭಿಕ್ಷುಕರ ಬಗ್ಗೆ ಗಮನವಿರಲಿ

ಭಿಕ್ಷುಕರ ಬಗ್ಗೆ ಗಮನವಿರಲಿ

ಭಾರತದಲ್ಲಿ ಭಿಕ್ಷಾಟನೆಯ ಬಗ್ಗೆ ಯಾವುದೇ ಸ್ಪಷ್ಟ ಕಾನೂನು ಇಲ್ಲದ ಕಾರಣ ಇಂದು ಭಿಕ್ಷಾಟನೆ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಯಾವುದೇ ಧಾರ್ಮಿಕ ಸ್ಥಳಗಳ ಹೊರಗೆ ಭಿಕ್ಷುಕರು ದೊಡ್ಡ ಸಂಖ್ಯೆಯಲ್ಲಿ ಬೀಡು ಬಿಟ್ಟಿರುತ್ತಾರೆ. ವಾಸ್ತವವಾಗಿ ಅಸಹಾಯಕರು, ನಿರ್ಗತಿಕರು ಉಳ್ಳವರಿಂದ ಭಿಕ್ಷೆಯ ರೂಪದಲ್ಲಿ ಕೊಂಚ ಹಣವನ್ನು ಪಡೆದು ತಮ್ಮ ಜೀವನವನ್ನು ಸವೆಸುತ್ತಿದ್ದು ಉಳ್ಳವರು ನಿರ್ಗತಿಕರಿಗೆ ಸಹಾಯ ಮಾಡಿದ ತೃಪ್ತಿ ಹೊಂದುತ್ತಿದ್ದರು. ಆದರೆ ಇಂದು ಭಿಕ್ಷಾಟನೆಯೂ ಒಂದು ಉದ್ಯಮವಾಗಿದ್ದು ದೈನ್ಯತೆಯೇ ಮೂರ್ತಿವೆತ್ತಂತೆ ನಟಿಸಲು ತರಬೇತಿ ಪಡೆದಿರುವ ಭಿಕ್ಷುಕರು ದೇವಾಲಯದ ಹೊರಗೆಲ್ಲಾ ಭಕ್ತರು ಹೊರಬಂದ ಕೂಡಲೇ ಮುತ್ತಿಕೊಳ್ಳುತ್ತಾರೆ.

ಭಿಕ್ಷುಕರ ಬಗ್ಗೆ ಗಮನವಿರಲಿ

ಭಿಕ್ಷುಕರ ಬಗ್ಗೆ ಗಮನವಿರಲಿ

ಇವರಿಗೆ ದಿನಕ್ಕೆ ಇಂತಿಷ್ಟು ಭಿಕ್ಷೆಯನ್ನು ಈ ಸ್ಥಳದ ಮಾಲಿಕನಿಗೆ ಕೊಟ್ಟು ಉಳಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವ ಒಂದು ಒಪ್ಪಂದ ಇರುತ್ತದೆ. ಸಾಮಾನ್ಯವಾಗಿ ಇವರು ರಾತ್ರಿಯಾಗುತ್ತಿದ್ದಂತೆಯೇ ವ್ಯಸನ, ತಂಬಾಕು, ಮದ್ಯ, ಜೂಜಿನಲ್ಲಿಯೇ ಕಳೆದು ನೀವು ಉತ್ತಮ ಕಾರ್ಯಕ್ಕೆಂದು ನೀಡಿದ ಹಣದ ದುರುಪಯೋಗ ಮಾಡುತ್ತಾರೆ. ಆದ್ದರಿಂದ ಎಷ್ಟೇ ಕನಿಕರ ಮೂಡಿದರೂ ದೇವಸ್ಥಾನದ ಹೊರಗೆ ಇರುವ ಈ ವೃತ್ತಿಪರ ಭಿಕ್ಷುಕರಿಗೆ ಸಹಾಯ ಮಾಡುವ ಬದಲು ನಿಮ್ಮ ಅಕ್ಕಪಕ್ಕದ ನೀವು ಕಣ್ಣಾರೆ ಕಂಡ ಮತ್ತು ನಿಜವಾಗಿ ಸಹಾಯದ ಅಗತ್ಯವುಳ್ಳ ವ್ಯಕ್ತಿಗಳಿಗೆ ನೇರವಾಗಿ ನೀಡಿದರೆ ಆ ಭಗವಂತ ಮೆಚ್ಚುತ್ತಾನೆ.


English summary

How to Be Respectful when Visiting a Hindu Temple

Induism is a very open and forgiving religion. Some even call it a philosophy. There are few different rules that certain sub-religious groups enforce, but even most Hindu may not follow all the rules except for a few. If you feel intimidated, feel free to sit around and observe as different people practice different things including circling the statues, offerings to god etc. Few important things to remember are:
X
Desktop Bottom Promotion