For Quick Alerts
ALLOW NOTIFICATIONS  
For Daily Alerts

ಹೋಳಿ ಹಬ್ಬದಂದು ಪೂಜೆಗೆ ಶುಭ ಸಮಯ ಯಾವುದು?

|

ಹಬ್ಬ ಯಾವುದೇ ಇರಲಿ, ಹಬ್ಬವನ್ನ ಆಚರಿಸೋದು ಅಂದ್ರೆ ನಾವು ಭಾರತೀಯರಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ. ಇಂತಹ ಅತ್ಯಂತ ಪ್ರಿಯವಾದ ಹಬ್ಬಗಳಲ್ಲಿ, ಹೋಳಿ ಹಬ್ಬವೂ ಒಂದು. ಇದು ಭಾರತದ ಮೂಲೆ ಮೂಲೆಯಲ್ಲಿಯೂ ಭರದಿಂದ ಆಚರಿಸಲಾಗುತ್ತದೆ. ಈ ಹಬ್ಬ ಆಚರಣೆಗೆ ಯಾವುದೇ ಜಾತಿ, ವಯಸ್ಸಿನ ಬೇಧವಿಲ್ಲ.

ಎಲ್ಲಾ ವಯಸ್ಸಿನ ಜನರು ಪ್ರತಿವರ್ಷ ಈ ಉತ್ಸವಕ್ಕಾಗಿ ಕಾಯುತ್ತಿರುತ್ತಾರೆ. ಬಣ್ಣಗಳ ಹಬ್ಬ ಎಂದು ಕರೆಯಲ್ಪಡುವ ಇದು ಭಾರತದಲ್ಲಿ ಚಳಿಗಾಲದ ಅಂತ್ಯ ಮತ್ತು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ, ವಿಶೇಷವಾಗಿ ಉತ್ತರ ಪ್ರದೇಶಗಳಲ್ಲಿ ಈ ಹೋಳಿ ಹಬ್ಬವು ಹೆಚ್ಚು ಜನಪ್ರಿಯವಾಗಿದೆ. ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳೊಂದಿಗೆ ಈ ಲೇಖನ ನಿಮ್ಮಮುಂದಿದೆ. ಈ ವರ್ಷ ಉತ್ಸವವನ್ನು ಮಾರ್ಚ್ 9-10 ರಂದು ಆಚರಿಸಲಾಗುವುದು.

ಹೋಳಿ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವನ್ನು ಹೋಲಿಕಾ ದಹನ್ ಎಂದು ಕರೆಯಲಾಗಿದ್ದರೆ, ಎರಡನೇ ದಿನವನ್ನು ಹೋಳಿ ಎಂದು ಕರೆಯಲಾಗುತ್ತದೆ. ಹೋಳಿ ಬಗ್ಗೆ ಮಾತನಾಡುವಾಗ ಜನರು ಮುಖ್ಯವಾಗಿ ಉಲ್ಲೇಖಿಸುವುದು ಎರಡನೇ ದಿನವನ್ನು. ಹೋಲಿಕಾ ದಹನ್ ದಿನವನ್ನು ಆಡುಮಾತಿನಲ್ಲಿ ಚೋತಿ ಹೋಳಿ ಎಂದೂ ಕರೆಯುತ್ತಾರೆ. ಈ ಹುಣ್ಣಿಮೆ ದಿನದಂದು ಆಚರಿಸುವುದಕ್ಕಾಗಿ ಹೋಳಿ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಹೋಳಿ ಆಚರಚಣೆಗೆ ಸೂಕ್ತ ಸಮಯ ಯಾವುದು?

ಹುಣ್ಣಿಮೆಯಲ್ಲಿ ಓಕುಳಿ ಆಟ

ಹುಣ್ಣಿಮೆಯಲ್ಲಿ ಓಕುಳಿ ಆಟ

ಪ್ರತಿವರ್ಷ ಹಿಂದೂ ತಿಂಗಳ ಫಲ್ಗುಣ ಪೂರ್ಣಿಮಾ ತಿಥಿ (ಹುಣ್ಣಿಮೆಯ ದಿನ) ಯಂದು ಹೋಳಿ ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇದು ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಮಾರ್ಚ್ 9-10 ನೇ ತಾರೀಕಿನಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು.

ಪೂರ್ಣಿಮಾ ತಿಥಿ ಮಾರ್ಚ್ 9 ರಂದು ಬೆಳಿಗ್ಗೆ 03:03 ಕ್ಕೆ ಪ್ರಾರಂಭವಾಗಲಿದೆ. ಹೋಲಿಕಾ ದಹನ್ ಮುಹೂರ್ತ ಸಂಜೆ 06:22 ರಿಂದ ಪ್ರಾರಂಭವಾಗಿ ರಾತ್ರಿ 08:49 ಕ್ಕೆ ಕೊನೆಗೊಳ್ಳುತ್ತದೆ. ಭದ್ರಾ ಪಂಚ ಬೆಳಿಗ್ಗೆ 09:37 ರಿಂದ 10:38 ರವರೆಗೆ, ಭದ್ರಾ ಮುಖ ಬೆಳಿಗ್ಗೆ 10:38 ರಿಂದ ಮಧ್ಯಾಹ್ನ 12:19 ರವರೆಗೆ ಮತ್ತು ರಂಗ್ವಾಲಿ ಹೋಳಿ ಮಾರ್ಚ್ 10 ರಂದು ಆಚರಿಸಲಾಗುತ್ತದೆ.

ಹೋಳಿ ಏಕೆ ಆಚರಿಸಲಾಗುತ್ತದೆ ?

ಹೋಳಿ ಏಕೆ ಆಚರಿಸಲಾಗುತ್ತದೆ ?

ಪ್ರತಿ ಹಿಂದೂ ಹಬ್ಬವು ಅದರದ್ದೇ ಆದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಅದೇ ರೀತಿ ಹೋಳಿ ಆಚರಣೆಯ ಹಿಂದೆ ವಿಷ್ಣುವಿನ ದಂತಕಥೆಯಿದೆ. ಭಗವಾನ್ ವಿಷ್ಣುವಿಗೆ ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ಇದ್ದರು, ಅವರು ನಾಲ್ಕು ದೈವಿಕ ಮಕ್ಕಳಿಂದ ಭೂಮಿಯ ಮೇಲೆ ರಾಕ್ಷಸರಾಗಿ ಜನಿಸಬೇಕೆಂದು ಶಾಪಗ್ರಸ್ತರಾಗಿದ್ದರು.

ಜಯ ಮತ್ತು ವಿಜಯಾ ನಂತರ ಇಬ್ಬರು ರಾಕ್ಷಸ ಆಡಳಿತಗಾರರು ಮತ್ತು ಸಹೋದರರಾಗಿ ಹಿರಣ್ಯಕಶಿಪು ಷ್ಯಪ ಮತ್ತು ಹಿರಣ್ಯಾಕ್ಷರಾಗಿ ಜನಿಸಿದರು. ವಿಷ್ಣುವಿನ ಕೈಯಲ್ಲಿ ಹಿರಣ್ಯಾಕ್ಷ ಕೊಲ್ಲಲ್ಪಟ್ಟನು. ನಂತರ ತನ್ನ ಸಹೋದರನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ ಹಿರಿಯ ಸಹೋದರ ಹಿರಣ್ಯಕಶಿಪು ವಿಷ್ಣುವಿನ ಮೇಲೆ ಕ್ರೋಧಗೊಂಡನು.

ಹಿರಣ್ಯಕಶಿಪು ವಿಷ್ಣುವಿನ ಪ್ರತಿಯೊಬ್ಬ ಭಕ್ತನನ್ನು ಕೊಲ್ಲಲು ಮುಂದಾದನು ಮತ್ತು ದೇವರ ಬದಲಿಗೆ ತನ್ನನ್ನೇ ಪೂಜಿಸಬೇಕೆಂದು ಒತ್ತಾಯಿಸಿದನು. ಆದರೆ ಅವನ ಮಹ ಪ್ರಹ್ಲಾದ ಮಹಾವಿಷ್ಣುವಿನ ಪರಮ ಭಕ್ತ ಎಂಬುದು ಹಿರಣ್ಯಕಶಿಪುವಿಗೆ ತಿಳಿದಿರುವುದಿಲ್ಲ. ಆದರೆ ಇದನ್ನು ತಿಳಿದ ಕೂಡಲೇ ಮಗನನ್ನು ತಡೆಯಲು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಾನೆ.

ಕೊನೆಗೆ ಅವನ ಎಲ್ಲಾ ಪ್ರಯತ್ನಗಳೂ ಸೋತಾಗ ತನ್ನ ಸಹೋದರಿ ಹೋಲಿಕಾಳ ಸಹಾಯವನ್ನು ಕೇಳುತ್ತಾನೆ. ಹೋಲಿಕಾ ಒಂದು ಜಾದೂ ಶಾಲನ್ನು ಹೊಂದಿದ್ದಳು, ಅದು ಅವಳನ್ನು ಬೆಂಕಿಯಿಂದ ರಕ್ಷಿಸುವಂತದ್ದು. ತನ್ನ ಯೋಜನೆಯ ಪ್ರಕಾರ, ಅವಳು ಬೆಂಕಿಯಿಂದ ರಕ್ಷಿಸಲ್ಪಡುತ್ತಾಳೆ ಮತ್ತು ಪ್ರಹ್ಲಾದ ಸುಟ್ಟುಹೋಗುತ್ತಾನೆ ಎಂದು ಯೋಚಿಸಿ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಬೆಂಕಿಯ ಮೇಲೆ ಕುಳಿತುಕೊಳ್ಳುತ್ತಾಳೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ಪ್ರಹ್ಲಾದನ ಬದಲು ಹೋಲಿಕಾ ಸುಟ್ಟು ಭಸ್ಮವಾಗುತ್ತಾಳೆ.

ಆದ್ದರಿಂದ ಈ ದಿನವನ್ನು ಹೋಲಿಕಾ ದಹನ ದಿನವನ್ನಾಗಿ ಆಚರಿಸಿ ಅಂದು ಹೋಲಿಕಾ ಪ್ರತಿಮೆಯನ್ನು ದಹನ ಮಾಡುತ್ತಾರೆ. ಇದರ ನಂತರದ ದಿನವನ್ನು ಪ್ರಹ್ಲಾದ ಬದುಕಿದ ಸಂತೋಷ ಮತ್ತು ಖುಷಿಯ ದ್ಯೋತಕವಾಗಿ ಹೋಳಿಯನ್ನು ಆಚರಿಸಲಾಗುತ್ತದೆ.

ಶ್ರೀಕೃಷ್ಣನಿಗೂ ಹೋಳಿಗೂ ಇರುವ ಸಂಬಂಧ?!

ಶ್ರೀಕೃಷ್ಣನಿಗೂ ಹೋಳಿಗೂ ಇರುವ ಸಂಬಂಧ?!

ಕೃಷ್ಣನು ಈ ದಿನ ರಾಧೆಯ ಗ್ರಾಮಕ್ಕೆ ಭೇಟಿ ನೀಡುತ್ತಿದ್ದನು ಮತ್ತು ಬಣ್ಣಗಳು ಮತ್ತು ಬಣ್ಣದ ನೀರನ್ನು ಬಳಸಿ ಅಲ್ಲಿನ ಎಲ್ಲ ಗೋಪಿಗಳೊಂದಿಗೆ ಓಕುಳಿ ಆಟವಾಡುತ್ತಿದ್ದನು. ಭಗವಾನ್ ಕೃಷ್ಣನು ಪ್ರಾರಂಭಿಸಿದ ಅದೇ ಸಂಪ್ರದಾಯದ ನೆನಪಿನಲ್ಲಿ, ಹಿಂದೂಗಳು ಪ್ರತಿವರ್ಷವೂ ಇದೇ ರೀತಿಯಲ್ಲಿ ಹೋಳಿಯ ದಿನವನ್ನು ಆಚರಿಸುತ್ತಾರೆ.

ಶಿವನು ಕೂಡ ಹೋಳಿಯೊಂದಿಗೆ ಸಂಬಂಧ ಹೊಂದಿದ್ದಾನೆ

ಶಿವನು ಕೂಡ ಹೋಳಿಯೊಂದಿಗೆ ಸಂಬಂಧ ಹೊಂದಿದ್ದಾನೆ

ಶಿವನು ಪಾರ್ವತಿ ದೇವಿಯನ್ನು ಅದೇ ದಿನ ಪ್ರೀತಿಸಲು ಆರಂಭಿಸಿದನೆಂದು ಹೇಳಲಾಗುತ್ತದೆ. ಬಹುಶಃ ಅದಕ್ಕಾಗಿಯೇ, ಈ ದಿನದಂದು ಭಾರತದ ಕೆಲವು ಪ್ರದೇಶಗಳಲ್ಲಿ ಭಾಂಗ್ ಕುಡಿಯುವ ಸಂಪ್ರದಾಯವಿದೆ. (ಭಾಂಗ್ ಶಿವನಿಗೆ ತುಂಬಾ ಪ್ರಿಯವಾದದ್ದು). ಅಲ್ಲದೇ ಇನ್ನೂ ಕೆಲವು ಹಿಂದೂ ಕಥೆಗಳ ಪ್ರಕಾರ ಶಿವನ ಮಗ ಕಾರ್ತಿಕೇಯ ಕೂಡ ಇದೇ ದಿನ ಜನಿಸಿದ್ದನೆಂದು ಹೇಳಲಾಗುತ್ತದೆ.

ಹೋಳಿ ಹೇಗೆ ಆಚರಿಸಲಾಗುತ್ತದೆ?

ಹೋಳಿ ಹೇಗೆ ಆಚರಿಸಲಾಗುತ್ತದೆ?

ಮೇಲೆ ಹೇಳಿದಂತೆ, ಹೋಲಿಕಾ ದಹನ್ ಅನ್ನು ಹೋಳಿಗೆ ಒಂದು ದಿನ ಮೊದಲು ಆಚರಿಸಲಾಗುತ್ತದೆ ಮತ್ತು ಜನರು ಹೋಳಿ ದಿನದಂದು ಬಣ್ಣಗಳೊಂದಿಗೆ ಆಡುತ್ತಾರೆ. ಅದರ ಹೊರತಾಗಿ ಮನೆಯಲ್ಲಿ ತರಾವರಿ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ.

ಈ ಸಿಹಿತಿಂಡಿಗಳನ್ನು ಭಗವಾನ್ ಶಿವ, ವಿಷ್ಣು ಮತ್ತು ಕುಟುಂಬ ದೇವತೆಗಳಿಗೆ ಅರ್ಪಿಸಲಾಗುತ್ತದೆ ಮತ್ತು ಸಣ್ಣ ಸರಳ ಪೂಜೆಯನ್ನು ನಡೆಸಲಾಗುತ್ತದೆ. ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ಒಟ್ಟಾಗಿ ಹೋಳಿ ಆಚರಿಸಿ ಬಣ್ಣಗಳೊಂದಿಗೆ ಆಟವಾಡುತ್ತಾರೆ. ಇದಾದ ಬಳಿಕ, ಎಲ್ಲರೂ ಒಟ್ಟಿಗೆ ಕುಳಿತು ರುಚಿಕರವಾದ ಆಹಾರವನ್ನು ಸವಿಯುತ್ತಾರೆ. ಪೂಜೆಯನ್ನು ದೈನಂದಿನ ಪೂಜೆಯ ರೀತಿಯಲ್ಲಿಯೇ ಮಾಡಬಹುದು.

ಪವಿತ್ರ ಕೆಂಪು ದಾರ, ಹೂವುಗಳು, ಮಾರಿಗೋಲ್ಡ್ ಹೂವಿನ ಹಾರ, ಬೆಲ್ಲ, ಅರಿಶಿನ ಕೊಂಬು (ಅರಿಶಿನ ಬೇರು, ಅರಿಶಿನ ಪುಡಿ ಅಲ್ಲ), ಬಣ್ಣಗಳು, ಹೆಸರು ಬೇಳೆ ಮತ್ತು ತೆಂಗಿನಕಾಯಿಯನ್ನು ಪೂಜೆಯಲ್ಲಿ ಬಳಸಿ. ಅಲ್ಲದೆ, ಒಂದು ಲೋಟ ನೀರು ಮತ್ತು ಐದು ಸಿರಿಧಾನ್ಯಗಳನ್ನು ಪೂಜೆಯಲ್ಲಿ ಇರಿಸಿ.

ಈ ವರ್ಷದ ಹೋಳಿ ನಿಮ್ಮೆಲ್ಲರ ಜೀವನದಲ್ಲಿ ಬಣ್ಣಗಳ ರಂಗು ತರಲಿ, ಸಂತೋಷದ ದಿನಗಳು ನಿಮ್ಮದಾಗಲಿ.

English summary

Holi 2020 Date And Pooja Timing And Celebration

Holi is thesymbol of life, may this holi bring so many colors in your life. are pooja timing to celebrate holi, Read on.
Story first published: Sunday, March 8, 2020, 18:26 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X