For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನ ವಿಶೇಷ: ಹಿಮಾ ದಾಸ್ ಎಂಬ ಚಿನ್ನದ ಹುಡುಗಿಯ ಸ್ಪೂರ್ತಿಯ ಕತೆ

|

ಹಿಮಾ ದಾಸ್‌ ಆ ಹೆಸರೇ ಎಲ್ಲರಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ. ತನ್ನ ಸಾಧನೆಯ ಮೂಲಕ ಇಂದು ಅಸ್ಸಾಂನ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಾನು ಬಾಲ್ಯದಲ್ಲಿ ಕಂಡಂಥ ಕನಸು ನನಸು ಮಾಡುವ ಮೂಲಕ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಇಂದು ಆಕೆಯ ಸಾಧನೆ ನೋಡಿ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಬಡತನದ ಬೇಗೆಯಲ್ಲಿ ಬೆಂದರೂ ತನ್ನ ಓಟದ ಮೂಲಕ ಅಸಾಧ್ಯ ಸಾಧನೆ ಮಾಡಿದ ಹುಡುಗಿ.

ಮಹಿಳೆಯರ ದಿನದ ವಿಶೇಷವಾಗಿರುವ ಲೇಖನದಲ್ಲಿ ಇಂಥ ಚಿನ್ನದ ಹುಡುಗಿಯ ಬಗ್ಗೆ ಹೇಳದಿರಲು ಸಾಧ್ಯವೇ?

ನಮ್ಮ ಪುರುಷ ಪ್ರಧಾನ ದೇಶದಲ್ಲಿ ಹೆಣ್ಣು ಒಂದು ಸಾಧನೆ ಮಾಡಬೇಕೆಂದರೆ ಆಕೆಗೆ ಅಷ್ಟೇ ಮನೋಬಲ ಇರಬೇಕು. ಹಿಮಾಳ ಬದುಕು ಕೂಡ ಕಲ್ಲರಳಿ ಹೂವಾದ ಕತೆಯಾಗಿದೆ. ಅತೀ ಬಡತನದಲ್ಲಿ ಹುಟ್ಟಿದ ಹಿಮಾ ಇಂದು ಚಿನ್ನದ ಹುಡುಗಿ ಎಂದೇ ಗುರುತಿಸಿಕೊಂಡಿದ್ದಾರೆ.

ಅವರು ಮಾಡಿದ ಸಾಧನೆ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೆ ಗೊತ್ತು. ಭತ್ತದ ಗದ್ದೆಯಲ್ಲಿ ಓಡಿ ಅಭ್ಯಾಸ ಮಾಡಿದ್ದ ಹಿಮಾ 2018ರಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್‌ ಓಟದಲ್ಲಿ ಮಿಂಚಿನಂತೆ ಓಡಿ ಚಾಂಪಿಯನ್‌ ಆಗಿ ಹೊಸದೊಂದು ದಾಖಲೆ ಬರೆಯುವ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು.

 ಕೂಡು ಕುಟುಂಬದಲ್ಲಿ ಬೆಳೆದ ಹುಡುಗಿ

ಕೂಡು ಕುಟುಂಬದಲ್ಲಿ ಬೆಳೆದ ಹುಡುಗಿ

ಹಿಮಾ ದಾಸ್‌ ಜನವರಿ 9, 2000ರಂದು ಬಡ ರೈತ ಕುಟುಂಬದಲ್ಲಿ ಜನಿಸಿದರು. ಅದೊಂದು ಕೂಡು ಕುಟುಂಬವಾಗಿತ್ತು. ಆದರೆ ಅಲ್ಲಿ ಬೆಳೆದ ಮಕ್ಕಳಲ್ಲಿ ಹಿಮಾ ದಾಸ್‌ ಭಿನ್ನವಾಗಿ ನಿಂತರು. ಹಿಮಾ 15 ವರ್ಷವಿದ್ದಾಗ ಹಳ್ಳಿಯನ್ನೆಲ್ಲಾ ಮಹಿಳೆಯರನ್ನು ಸೇರಿಸಿ ಅಕ್ರಮವಾಗಿ ಮದ್ಯ ಮಾರುತ್ತಿದ್ದವನ ವಿರುದ್ಧ ತಿರುಗಿ ಬಿದ್ದಿದ್ದರು. ಇದಾದ ಮಾರನೇಯ ದಿನ ಯುವಕನೊಬ್ಬ ಹಿಮಾ ಅವರ ಮನೆ ಮುಂದೆ ಬಂದು 'ನಾನು ಮದ್ಯ ಮಾರುವುದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ' ಎಂದೆಲ್ಲಾ ಹೇಳುತ್ತಾ ಕೆಟ್ಟದಾಗಿ ಕೂಗುತ್ತಿದ್ದ. ಇದನ್ನು ಕೇಳಿದ ಹಿಮಾ ಅವನಿಗೆ ಸರಿಯಾಗಿ ಗೂಸಾ ನೀಡಿದ್ದರು. ಏಟು ತಿಂದ ಹುಡುಗನ ಕುಟುಂಬದವರು ಹಿಮಾ ತಂದೆಯ ವಿರುದ್ಧವಾಗಿ FIR ದಾಖಲಿಸಿದ್ದರು. ಈ ಕೇಸ್‌ ಸಂಬಂಧ ಅವರ ತಂದೆ ಅನೇಕ ಬಾರಿ ಕೋರ್ಟ್-ಕೇಸ್ ಅಂತ ಅಲೆದಾಡಿದ್ದರು.

 ಫುಟ್ಬಾಲ್ ಆಡ ಬಯಸಿದ್ದ ಹಿಮಾ

ಫುಟ್ಬಾಲ್ ಆಡ ಬಯಸಿದ್ದ ಹಿಮಾ

ಹಿಮಾಗೆ ಫುಟ್ಬಾಲ್ ಆಡಬೇಕೆಂಬ ಆಸೆ ತುಂಬಾ ಇತ್ತು. ಅವರು ಆಟದ ಗುಂಪಿನಲ್ಲಿ ಇಲ್ಲದಿದ್ದರೂ ಗೋಲ್‌ ಹಿಂದೆ ನಿಂತು ತನ್ನ ಸಮೀಪ ಬರುವ ಬಾಲ್‌ಗೆ ಬಲವಾಗಿ ಒದೆ ಕೊಟ್ಟು ಅವರು ನೋಡುವ ಮೊದಲೇ ಓಡಿ ಹೋಗುತ್ತಿದ್ದಳು.

ಒಂದು ದಿನ ಮಹಿಳೆಯ ಸ್ಥಳೀಯ ಫುಟ್ಬಾಲ್‌ ಟೂರ್ನ್‌ಮೆಂಟ್‌ ಇತ್ತು. ಆಗ ತಂದೆ ಬಳಿ ಕಾಡಿ ಬೇಡಿ ಆಟ ಆಡಲು ಅನುಮತಿ ಪಡೆದಿದ್ದಳು.

ಚಿಕ್ಕ ಹುಡುಗಿಯಾಗಿದ್ದಾಗಲೇ ವಿಮಾನದಲ್ಲಿ ಹಾರುವ ಕನಸು ಕಂಡಿದ್ದ ಹಿಮಾ

ಚಿಕ್ಕ ಹುಡುಗಿಯಾಗಿದ್ದಾಗಲೇ ವಿಮಾನದಲ್ಲಿ ಹಾರುವ ಕನಸು ಕಂಡಿದ್ದ ಹಿಮಾ

ಹಿಮಾ ಅವರ ತಂದೆ ಮಗಳ ಸಾಧನೆಯ ಕುರಿತು ಹೇಳುತ್ತಾ ' ಅವಳು ಚಿಕ್ಕವಳಿದ್ದಾಗ ಅಪ್ಪಾ ಒಂದು ದಿನ ನಾನು ವಿಮಾನದಲ್ಲಿ ಹಾರುತ್ತೇನೆ ಎಂದು ಹೇಳುವಾಗ ನಾನು ನೀನು ಚೆನ್ನಾಗಿ ಓದಿ, ಆಡಿದರೆ ಮಾತ್ರ ಅದು ಸಾಧ್ಯವೆಂದು ಹೇಳಿದ್ದೆ' ಎಂದು ಮಗಳ ಕುರಿತು ಹೆಮ್ಮೆ ಪಡುತ್ತಾರೆ.

ಟಾಟಾ ಸುಮೋ ಚೇಸ್‌ ಮಾಡಿದ್ದ ಹುಡುಗಿ

ಟಾಟಾ ಸುಮೋ ಚೇಸ್‌ ಮಾಡಿದ್ದ ಹುಡುಗಿ

ಹಿಮಾ ದಾಸ್‌ ಕುರಿತು ಹೇಳುವುದಾದರೆ ಈ ಮಿಂಚಿನ ಓಟಗಾರ್ತಿ ಕುರಿತು ಅನೇಕ ಇಂಟೆರೆಸ್ಟಿಂಗ್ ಸ್ಟೋರೀಸ್‌ ಇವೆ. ಇವಳೊಮ್ಮೆ ಸ್ಕೂಲ್‌ಗೆ ಹೋಗುವಾಗ ಟಾಟಾ ಸುಮಾ ಚೇಸ್‌ ಮಾಡಿ ಓಡಿದ್ದಳು. ಮೂರನೇಯ ತರಗತಿಯಲ್ಲಿ ಇರುವಾಗ ಹಳ್ಳಿಯ ವಿದ್ಯಾರ್ಥಿಗಳನ್ನು ತುಂಬಿದ ಟಾಟಾ ಸುಮೋ ಬಂತು, ಆ ಗಾಡಿ ತುಂಬಿದ್ದ ಕಾರಣ ಹಿಮಾಳನ್ನು ಹತ್ತಿಸಲಿಲ್ಲ, ಆಗ ಹಿಮಾ ತಾಯಿ ನೋಡುತ್ತಿದ್ದಂತೆ ಆ ಟಾಟಾ ಸುಮಾ ಬೆನ್ನೆಟ್ಟಿ ಓಡಿದಳು. ಶಾಲೆ ತಲುಪುವಾಗ ಬಿದ್ದು ಕೈ-ಕಾಲುಗಳು ಗಾಯಗೊಂಡಿದ್ದೆವು. ಆದರೂ ಓಡಿ ಆ ಟಾಟಾ ಸುಮೋ ತಲುಪುವಷ್ಟರಲ್ಲಿ ತಾನೂ ತಲುಪುವ ಗುರಿಯಿಂದ ಹಿಮ್ಮುಖವಾಗಿರಲಿಲ್ಲ. ಅಂದು ಛಲದಿಂದ ಓಡಿದ್ದ ಪುಟ್ಟ ಬಾಲಕಿ ಮುಂದೊಂದು ದಿನ ದೇಶಕ್ಕಾಗಿ ಓಡುತ್ತಾಳೆ ಎಂದು ಯಾರೂ ಅಂದು ಕೊಂಡಿರಲಿಲ್ಲ.

ತಾನು ಕಂಡ ಕನಸು ನನಸು ಮಾಡಿದ ಹಿಮಾ

ತಾನು ಕಂಡ ಕನಸು ನನಸು ಮಾಡಿದ ಹಿಮಾ

ಹಿಮಾ ತಾನು ಭಾರತದ ಜೆರ್ಸಿ ಹಾಕಬೇಕೆಂಬ ಕನಸು ಕಂಡಿದ್ದರು. ಅದು ನನಸಾಯ್ತು, ಚಿಕ್ಕ ಹುಡುಗಿಯಾಗಿದ್ದಾಗ ತಾನು ಪೋಲೀಸ್‌ ಆಗಬೇಕೆಂಬ ಕನಸು ಕಂಡಿದ್ದಳು, ಇದೀಗ ಅಸ್ಸಾಂನಲ್ಲಿ ಡಿಎಸ್‌ಪಿಯಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತರುವ ಕನಸು ಹೊಂದಿದ್ದಾರೆ, ಹಿಮಾಳ ಇತರ ಕನಸು ನೆರವೇರಿದಂತೆ ಈ ಕನಸು ನೆರವೇರಲಿ, ಭಾರತಕ್ಕೆ ಮತ್ತಷ್ಟು ಕೀರ್ತಿ ತರಲಿ ಭಾರತಾಂಬೆಯ ಈ ಹೆಮ್ಮೆಯ ಪುತ್ರಿ.

English summary

Hima Das: Inspiring Story Of An Athlete Who Won India's First Gold Medal

Inspiring Story Of An Athlete Who Won India's First Gold Medal, Read on...
Story first published: Tuesday, March 2, 2021, 11:00 [IST]
X