ರಾಮಾಯಣದಲ್ಲಿ ರಾಕ್ಷಸ ರಾವಣ, ಇದೆಲ್ಲಾ ಕಾರಣಕ್ಕೆ ಇಷ್ಟವಾಗುತ್ತಾನೆ!!

Posted By: Jaya Subramanaya
Subscribe to Boldsky

ಹಿಂದೂ ಧರ್ಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಹೆಚ್ಚು ಪವಿತ್ರ ಮತ್ತು ಪ್ರಸಿದ್ಧ ಧರ್ಮಗ್ರಂಥಗಳಾಗಿ ಪರಿಗಣಿಸಲಾಗುತ್ತದೆ. ರಾಮಾಯಣದಲ್ಲಿ ಬರವ ರಾಮ, ಸೀತೆ, ಲಕ್ಷ್ಮಣ, ಹನುಮಂತನಂತೆಯೇ ಮನದಲ್ಲಿ ಅಚ್ಚಳಿಯು ಪಾತ್ರವಾಗಿ ಉಳಿಯುವುದು ರಾವಣನದ್ದಾಗಿದೆ. ಮಹಾಭಾರತದಲ್ಲಿ ಹೇಗೆ ಕರ್ಣ, ದುರ್ಯೋಧನ, ಮೊದಲಾದ ದುಷ್ಟರು ಮನದಲ್ಲಿ ಅಚ್ಚಳಿಯದೆಯೇ ಕೆಲವೊಂದು ಸಂದೇಶಗಳನ್ನು ತಿಳಿಸುತ್ತಾರೋ ಅಂತೆಯೇ ರಾವಣನೆಂಬ ಅಸುರ ಕೂಡ ನಮಗೆ ಕೆಟ್ಟದ್ದು ಮತ್ತು ಒಳ್ಳೆಯದ್ದರ ಮನವರಿಕೆಯನ್ನು ಮಾಡಿಕೊಡುತ್ತಾನೆ.

ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

ಹಿಂದೂ ಧರ್ಮದಲ್ಲಿ ಹೇಳುವಂತೆ ರಾವಣನು ಒಳ್ಳೆಯ ಖಳನಾಗಿದ್ದಾನೆ. ಅವನಲ್ಲಿರುವ ಕೆಲವೊಂದು ಗುಣಗಳನ್ನು ನಾವು ಕಲಿಯಬೇಕಾಗಿದೆ, ನಮ್ಮ ಜೀವನದಲ್ಲಿ ಅದನ್ನು ಅಳವಡಿಸಬೇಕಾಗಿದೆ. ರಾವಣ ಅಸುರನಾಗಿದ್ದರೂ ಅವರನ ಮನ ಶುದ್ಧವಾಗಿತ್ತು. ಸೀತೆಯನ್ನು ಅಪಹರಿಸಿ ಅಶೋಕ ವನದಲ್ಲಿ ಇರಿಸಿದ್ದನಾದರೂ ಒಮ್ಮೆಯೂ ಆಕೆಯ ದೇಹವನ್ನು ಸೋಕಲಿಲ್ಲ, ಆಕೆ ಒಪ್ಪಿಕೊಳ್ಳುವಳೆಂಬ ದಿನಕ್ಕಾಗಿ ಎದುರು ನೋಡುತ್ತಿದ್ದ ಅಸುರ ರೂಪಿ ನಾಯಕನಾಗಿದ್ದಾನೆ ರಾವಣ. ರಾವಣ ಕುರಿತು ಇನ್ನಷ್ಟು ರೋಚಕ ಸಂಗತಿಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ಅದೇನು ಎಂಬುದನ್ನು ಅರಿತುಕೊಳ್ಳೋಣ.

1.ರಾಮನಿಗಾಗಿ ಯಜ್ಞವನ್ನು ನಡೆಸಿದ ರಾವಣ

1.ರಾಮನಿಗಾಗಿ ಯಜ್ಞವನ್ನು ನಡೆಸಿದ ರಾವಣ

ರಾವಣನು ರಾಮನಿಗಾಗಿ ಯಜ್ಞವನ್ನು ನಡೆಸಿದ್ದನು ಎಂಬುದಾಗಿ ಹಿಂದೂ ಗ್ರಂಥಗಳು ತಿಳಿಸುತ್ತವೆ. ಲಂಕೆಗಾಗಿ ರಾವಣನು ಸೇತುವೆಯನ್ನು ಕಟ್ಟಲು ಹೊರಟಾಗ ಅವರಿಗೆ ಶಿವ ದೇವರ ಅನುಗ್ರಹ ಬೇಕಿತ್ತು. ರಾವಣನು ಶಿವನ ಮಹಾನ್ ಭಕ್ತನಾಗಿದ್ದನು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಇದಕ್ಕಾಗಿ ರಾಮನು ಯಜ್ಞವನ್ನು ನಡೆಸಲು ಮುಂದಾದರು. ಈ ಯಜ್ಞದಲ್ಲಿ ರಾವಣನ ಹೆಸರೂ ಇದ್ದು ಆತ ರಾಮನು ತನ್ನ ಎದುರಾಳಿ ಎಂಬುದನ್ನು ಮರೆತು ರಾಮನಿಗೆ ಆಶೀರ್ವಾದವನ್ನು ನೀಡುತ್ತಾರೆ.

2.ರಾವಣನು ಜ್ಞಾನವನ್ನು ಲಕ್ಷ್ಮಣನಿಗೆ ತಿಳಿಸಿದನು

2.ರಾವಣನು ಜ್ಞಾನವನ್ನು ಲಕ್ಷ್ಮಣನಿಗೆ ತಿಳಿಸಿದನು

ರಾವಣ ಯುಗದ ಅತ್ಯಂತ ಕಲಿತ ವಿದ್ವಾಂಸರಲ್ಲಿ ಒಬ್ಬನೆಂಬುದರ ಬಗ್ಗೆ ನಮಗೆ ಪ್ರತಿಯೊಬ್ಬರಿಗೂ ತಿಳಿದಿದೆ. ರಾಮನು ತನ್ನ ಸಹೋದರನಾದ ಲಕ್ಷ್ಮಣನನ್ನು ರಾಕ್ಷಸ ರಾಜ, ರಾವಣ ಪಕ್ಕದಲ್ಲಿ ಕುಳಿತು ರಾಜತಾಂತ್ರಿಕ ಮತ್ತು ವಿಶೇಷ ಬುದ್ಧಿಮತ್ತೆಯುಳ್ಳ ಕೆಲವು ಪ್ರಮುಖ ಪಾಠಗಳನ್ನು ಕಲಿಯಲು ಹೇಳುತ್ತಾರೆ. ರಾವಣನು ಓರ್ವ ವಿದ್ವಾಂಸನಾಗಿದ್ದಾನೆ, ರಾಮ ಲಕ್ಷ್ಮಣರು ತನ್ನ ವೈರಿಗಳಾಗಿದ್ದರೂ ಸಹ ತನ್ನ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಕಷ್ಟು ಸಂತೋಷಪಟ್ಟನು.

3.ಗ್ರಹಗಳ ಹೊಂದಾಣಿಕೆಯೊಂದಿಗೆ ಹಸ್ತಕ್ಷೇಪ

3.ಗ್ರಹಗಳ ಹೊಂದಾಣಿಕೆಯೊಂದಿಗೆ ಹಸ್ತಕ್ಷೇಪ

ತನ್ನ ಮಗ, ಮೇಘನಾಥನ ಜನನದ ಸಮಯದಲ್ಲಿ, ರಾವಣನು ಗ್ರಹಗಳನ್ನು ಮಗುವಿನ 11 ನೇ ಮನೆಯಲ್ಲಿ ಉಳಿಯಲು ಸೂಚಿಸಿದನು. ರಾಕ್ಷಸ ರಾಜ ರಾವಣನ, ಸೂಚನೆಯನ್ನು ತಿರಸ್ಕರಿಸಿದ ಶನಿ 12 ನೇ ಮನೆಯಲ್ಲಿ ನಿಲ್ಲಲಿಲ್ಲ. ರಾವಣನು ಶನಿಗ್ರಹ ಅಥವಾ ಶನಿ ದೇವರ ಮೇಲೆ ಆಕ್ರಮಣ ಮಾಡಿದನು ಮತ್ತು ಅವನನ್ನು ಬಂಧಿಸಲಾಯಿತು. ರಾಕ್ಷಸ ರಾಜ ರಾವಣನು ತುಂಬಾ ಶಕ್ತಿಶಾಲಿಯಾಗಿದ್ದು, ಗ್ರಹಗಳ ವ್ಯವಸ್ಥೆಯಲ್ಲಿ ಅವನು ಸಂಪೂರ್ಣ ಅಧಿಕಾರವನ್ನು ಹೊಂದಿದ್ದನು.

4.ಶಿವನಿಟ್ಟ ಹೆಸರೇ ರಾವಣ

4.ಶಿವನಿಟ್ಟ ಹೆಸರೇ ರಾವಣ

ರಾವಣನು ಕೈಲಾಸವನ್ನು ಲಂಕೆಗೆ ಸ್ಥಳಾಂತರಿಸಬೇಕೆಂದು ಬಯಸಿದನು ಮತ್ತು ಇದನ್ನು ಸಾಧ್ಯವಾಗುವಂತೆ ಅವನು ಪರ್ವತವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದನು. ಆದಾಗ್ಯೂ, ಶಿವ ತನ್ನ ಪಾದವನ್ನು ಪರ್ವತದ ಮೇಲೆ ಇಟ್ಟುಕೊಂಡನು, ಅಂತಿಮವಾಗಿ ರಾವಣನ ಬೆರಳನ್ನು ಹತ್ತಿಕ್ಕಿದನು. ರಾವಣನು ನೋವಿನಿಂದ ಕೋಪಗೊಂಡನು ಮತ್ತು ತಾಂಡವ ನೃತ್ಯವನ್ನು ಮಾಡಿದನು. ರಾವಣನು ತುಂಬಾ ನೋವಿನಿಂದ ಬಳಲುತ್ತಿದ್ದನೆಂದು ನಂಬಲಾಗಿದೆ, ಜೊತೆಗೆ ಅವನು ತನ್ನ ಕೈಗಳಿಂದ ನರಗಳನ್ನು ಹಿಡಿದುಕೊಂಡು ಸಂಗೀತವನ್ನು ಒದಗಿಸುವಂತೆ ಮಾಡುತ್ತಾನೆ. ಭಗವಾನ್ ಶಿವನು ಅವನಿಗೆ ತುಂಬಾ ಪ್ರಭಾವಿತನಾಗಿದ್ದರಿಂದ, ರಾವಣ ಎಂಬ ಹೆಸರನ್ನು ಇಡುತ್ತಾರೆ. ರಾವಣ ಎಂದರೆ ಗಟ್ಟಿಯಾಗಿ ಘರ್ಜಿಸುವವರು ಎಂದಾಗಿದೆ.

5.ನಾಲ್ಕು ವೇದಗಳಲ್ಲಿ ಪರಿಣಿತ

5.ನಾಲ್ಕು ವೇದಗಳಲ್ಲಿ ಪರಿಣಿತ

ಇತಿಹಾಸ ಮತ್ತು ಪುರಾಣಗಳ ಪ್ರಕಾರ ರಾವಣನು ಸಾಮಾನ್ಯ ವ್ಯಕ್ತಿಯಾಗಿದ್ದಾನೆ. ತನ್ನ ತಂದೆ ವಿಶ್ರವನಿಂದ ಆತ ಶಾಸ್ತ್ರಗಳನ್ನು ವೇದಗಳನ್ನು ಕಲಿಯುತ್ತಾನೆ. ರಾವಣನು ಶ್ರೇಷ್ಠ ವಿದ್ವಾಂಸನಾಗಿದ್ದಾನೆ.

6.ಉತ್ತಮ ರಾಜ

6.ಉತ್ತಮ ರಾಜ

ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ, ರಾವಣನು ಒಬ್ಬ ಉತ್ತಮ ರಾಜನಾಗಿದ್ದನು. ಆತನ ಆಡಳಿತದಲ್ಲಿ ಲಂಕೆಯನ್ನು ಚಿನ್ನದ ಲಂಕೆ ಎಂದು ಕರೆಯಲಾಗುತ್ತಿತ್ತು. ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ರಾಜ ರಾವಣನಾಗಿದ್ದ. ಲಂಕೆಯನ್ನು ನಿರ್ಮಿಸಿದವರು ದೇವ ಶಿಲ್ಪಿ ವಿಶ್ವಕರ್ಮನಾಗಿದ್ದರು.

7.ರಾವಣ ಮತ್ತು ಸಹೋದರ ಕುಂಭಕರ್ಣ ವಿಷ್ಣುವಿನ ದ್ವಾರಪಾಲಕರಾಗಿದ್ದವರು

7.ರಾವಣ ಮತ್ತು ಸಹೋದರ ಕುಂಭಕರ್ಣ ವಿಷ್ಣುವಿನ ದ್ವಾರಪಾಲಕರಾಗಿದ್ದವರು

ವಿಷ್ಣುವಿನ ದ್ವಾರವನ್ನು ಕಾಯುವ ದ್ವಾರಪಾಲಕರಾಗಿದ್ದರು ರಾವನ ಮತ್ತು ಕುಂಭಕರ್ಣ. ಅವರೇ ಜಯ ಹಾಗೂ ವಿಜಯರು. ವೈಕುಂಠದ ದ್ವಾರಪಾಲಕರು ಎಂಬ ಸೊಕ್ಕು ಇವರಲ್ಲಿತ್ತು. ಒಮ್ಮೆ ಬ್ರಹ್ಮನ ಮಕ್ಕಳು ವಿಷ್ಣುವಿನ ದ್ವಾರದ ಬಳಿ ಬಂದಾಗಿ ಜಯ ವಿಜಯರು ಅವರನ್ನು ಬೆತ್ತಲೆ ಮಕ್ಕಳೆಂದು ಅಣಕಿಸುತ್ತಾರೆ. ಇದರಿಂದ ಕೋಪಗೊಂಡ ಋಷಿಗಳು ಜಯ ವಿಜಯರನ್ನು ವಿಷ್ಣುವೇ ವಧಿಸಬೇಕೆಂದು ಶಾಪವನ್ನು ನೀಡುತ್ತಾರೆ. ಹೀಗೆ ಮೂರು ಜನ್ಮಗಳಲ್ಲೊಂದು ಜನ್ಮದಲ್ಲಿ ಜಯ ವಿಜಯರು ರಾವಣ ಕುಂಭಕರ್ಣನಾಗಿ ಜನಿಸುತ್ತಾರೆ.

English summary

heres-why-ravana-is-known-as-the-most-loving-villain-in-the-history

Ravana is well known as a demon from Sri Lanka who kidnapped Goddess Sita and was defeated by Lord Ram, who is also believed to be the seventh avatar or be an incarnation of Lord Vishnu. Ravana was defeated by Lord Ram in the battle fought at Lanka. Dussehra is a festival to celebrate the victory of good over evil where Ravana plays the most important character in the Hindu mythology. Ravana is seen as a villain, but let me tell you there's lot more to know about him.