Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ
ಖ್ಯಾತ ಕವಿ ಗೋಸ್ವಾಮಿ ತುಳಸಿದಾಸರ ಖ್ಯಾತ ರಚನೆಯೇ ಹನುಮಾನ್ ಚಾಲೀಸ್ ಅಥವಾ ಚಾಲೀಸಾ. ಹಿಂದೂ ಧರ್ಮದಲ್ಲಿ ಈ ಚಾಲೀಸಾಕ್ಕೆ ವಿಶೇಷವಾದ ಮಹತ್ವವಿದ್ದು ಇದನ್ನು ಪಠಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲಾಗುತ್ತದೆ. ಅಲ್ಲದೇ ಸೈತಾನನ ಪ್ರಭಾವವನ್ನೂ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕೊನೆಗಾಣಿಸಬಹುದು. ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!
ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ. ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಬನ್ನಿ, ಹನುಮಾನ್ ಚಾಲೀಸಾವನ್ನು ರಾತ್ರಿ ಪಠಿಸುವ ಮೂಲಕ ಯಾವ ರೀತಿಯಾದ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ...

ಎಂಟು ಬಾರಿ ಪಠಿಸಿ
ಪ್ರತಿ ರಾತ್ರಿ ಮಲಗುವ ಮುನ್ನ ಹನುಮಾನ್ ಚಾಲೀಸಾ ಪ್ರಥಮ ಅಧ್ಯಾಯಗಳನ್ನು ಎಂಟು ಬಾರಿ ಪಠಿಸುವ ಮೂಲಕ ಅಂದಿನ ದಿನ ನಿಮಗೆ ಅರಿವಿದ್ದೋ, ಅರಿವಿರದೆಯೋ ಯಾರ ಮನಸ್ಸನ್ನು ನೋಯಿಸಿದ್ದರೆ ಆ ಪಾಪ ಇಲ್ಲವಾಗುತ್ತದೆ.

ಸಂಕಷ್ಟಗಳು ದೂರ
ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು. ವಿಶೇಷವಾಗಿ ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು.

ಸಂಕಷ್ಟಗಳು ದೂರ
ಏಕೆಂದರೆ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ.

ಆಂಜನೇಯ ದೇವರ ರಕ್ಷಣೆ ನಿಮ್ಮ ಮೇಲಿರುತ್ತದೆ
ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಆಂಜನೇಯ ದೇವರ ರಕ್ಷಣೆಯನ್ನು ಪಡೆಯಬಹುದು. ಅಲ್ಲದೇ ದೇವರ ಅನುಗ್ರಹದಿಂದ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳು ಇಲ್ಲವಾಗಿ ಜೀವನದ ಗುರಿಯನ್ನು ಸುಲಭವಾಗಿ ತಲುಪಬಹುದು.

1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ....
ಜೀವನದಲ್ಲಿ ಮಹತ್ತರವಾದ ಗುರಿಯನ್ನು ಸಾಧಿಸುವ ಇಚ್ಛೆಯುಳ್ಳವರು ತಮ್ಮ ಗುರಿ ಸಾಧನೆಯ ಅವಧಿಯಲ್ಲಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಅಥವಾ ಮೂಲಾ ನಕ್ಷತ್ರದ ರಾತ್ರಿ ಒಟ್ಟು 1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಹನುಮದೇವರ ಅನುಗ್ರಹ ಪಡೆಯಬಹುದು.

ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ
ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಭಕ್ತಿ ಶ್ರದ್ಧೆಯಿಂದ ಪಠಿಸಿ.



Click it and Unblock the Notifications
