For Quick Alerts
ALLOW NOTIFICATIONS  
For Daily Alerts

ಗುರು ಪೂರ್ಣಿಗೆ 2019: ಈ ಚಂದ್ರಗ್ರಹಣದ ದಿನ ಗುರು ಪೂರ್ಣಿಮೆ ಪೂಜೆ ಯಾವಾಗ ನಡೆಸಬೇಕು?

|

2019ನೇ ಜುಲೈ 16ನೇ ತಾರೀಖು ಹುಣ್ಣೆಮೆಯ ದಿನವಾಗಿದೆ. ಆದರೆ ಚಂದ್ರ ರಾತ್ರಿಯ ಎಲ್ಲಾ ಸಮಯದಲ್ಲಿ ಇತರ ಹುಣ್ಣಿಮೆಗಳಷ್ಟು ಪ್ರಕಾಶಮಾನನಾಗಿರುವುದಿಲ್ಲ. ಏಕೆಂದರೆ ಈ ಹುಣ್ಣಿಮೆಯಂದು ಚಂದ್ರಗ್ರಹಣವಾಗಲಿದೆ. ಈ ದಿನದಂದು ಗುರುಪೂಜೆಯನ್ನು ನಿರ್ವಹಿಸುವುದು ಗುರುಪೂರ್ಣಿಮೆಯ ಅಗತ್ಯತೆಯಾಗಿದ್ದರೆ ವಿಪರ್ಯಾಸವೆಂಬಂತೆ ಹುಣ್ಣಿಮೆಯಂದು ಯಾವುದೇ ಪೂಜೆಯನ್ನು ನಡೆಸಬಾರದು ಎಂದೂ ಹೇಳಲಾಗುತ್ತದೆ. ಆದರೆ ಬೇರೆ ಯಾವುದೇ ಹುಣ್ಣಿಮೆಗಿಲ್ಲದ ವಿಶೇಷತೆ ಇಂದಿನ ಹುಣ್ಣಿಮೆಗೇಕಿದೆ? ಕುತೂಹಲ ಕೆರಳಿತೇ? ಮುಂದೆ ಓದಿ.

ಈ ವರ್ಷದ ಆಷಾಢ ಮಾಸದ ಪ್ರಖರ ಶುಕ್ಲಪಕ್ಷದ ಹದಿನೈದನೇ ದಿನ ಗುರು ಪೂರ್ಣಿಮೆ ಹಬ್ಬ ಬರುತ್ತಿದೆ. ಆಂಗ್ಲ ದಿನಸೂಚಿಯ ಪ್ರಕಾರ ಇದು ಜುಲೈ ಹದಿನಾರನೇ ಮಂಗಳವಾರವಾಗಿದೆ. ಈ ದಿನದ ತಿಥಿ ಪ್ರಾತಃ ಕಾಲ 1:48 ಕ್ಕೆ ಪ್ರಾರಂಭವಾಗಿ ಜುಲೈ ಹದಿನೇಳರ ಪ್ರಾತಃ ಕಾಲ 3:07 ಕ್ಕೆ ಕೊನೆಗೊಳ್ಳುತ್ತದೆ. ಈ ದಿನವನ್ನು ಗುರುಪೂರ್ಣಿಮೆಯ ಹಬ್ಬದ ದಿನವಾಗಿ ಹಿಂದೂ ಧರ್ಮೀಯರು, ಬೌದ್ಧರು ಹಾಗೂ ಜೈನಧರ್ಮೀಯರು ಗುರುಪೂಜೆ ನಿರ್ವಹಿಸುವ ಮೂಲಕ ಆಚರಿಸುತ್ತಾರೆ. ಭಾರತದ ವಿವಿಧೆಡೆ ಈ ಪೂಜೆಯನ್ನು ಶಿವದೇವನಿಗೆ, ಬುದ್ದದೇವನಿಗೆ ಹಾಗೂ ಗುರು ವೇದವ್ಯಾಸರಿಗೆ ಸಲ್ಲಿಸಲಾಗುತ್ತದೆ. ಅಲ್ಲದೇ ಆಯಾ ಪ್ರಾಂತಗಳಲ್ಲಿ ಜನರು ತಮ್ಮ ಸಂಪ್ರದಾಯದ ಪ್ರಕಾರ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ, ಪ್ರತಿವರ್ಷವೂ ಗುರುವಿಗೆ ನಮನ ಸಲ್ಲಿಸುವ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಹಲವಾರು ಧಾರ್ಮಿಕ ಕಾರ್ಯ್ರಕ್ರಮಗಳು ನಡೆಯುತ್ತವೆ.

Guru Purnima

ಗುರುಪೂರ್ಣಿಮೆ ಮತ್ತು ಗ್ರಹಣ

ಈ ವರ್ಷದ ಪೂರ್ಣಿಮೆಯಂದೇ ಚಂದ್ರಗ್ರಹಣವೂ ಸಂಭವಿಸಲಿರುವುದರಿಂದ ಈ ಪೂಜೆಯನ್ನು ಯಾವಾಗ ನಿರ್ವಹಿಸಬೇಕು ಎಂಬ ಪ್ರಶ್ನೆ ಹೆಚ್ಚಿನವರಿಗೆ ಎದುರಾಗಿದೆ. ಏಕೆಂದರೆ ಗ್ರಹಣದ ಸಮಯ ಸೂತಕ ಕಾಲವೆಂದು ಪರಿಗಣಿಸಲ್ಪಟ್ಟಿರುವುದರಿಂದ ಹಾಗೂ ಸೂತಕದ ಸಮಯದಲ್ಲಿ ಪೂಜೆ ನಿರ್ವಹಿಸಬಾರದು ಎಂದಿರುವ ಕಾರಣ ಗೊಂದಲ ಎದುರಾಗಿದೆ. ಗುರುಪೂರ್ಣಿಮೆಯ ತಿಥಿ ಹೆಚ್ಚೂ ಕಡಿಮೆ ಇಪ್ಪತ್ತೈದು ಘಂಟೆಗಳ ಅವಧಿ ಇದ್ದರೆ ಗ್ರಹಣದ ಸಮಯದ ಹದಿನೇಳನೇ ಜುಲೈ ಪ್ರಾತಃ ಕಾಲ 1:31 ರಿಂದ ಮುಂಜಾನೆ 5:47 ರವರೆಗೆ ಇರುತ್ತದೆ. ಸೂತಕ ಕಾಲ ಗ್ರಹಣ ಮುಗಿಯುವ ಒಂಭತ್ತು ಘಂಟೆಗಳಿಗೂ ಮುನ್ನ ಪ್ರಾರಂಭವಾಗುತ್ತದೆ. ಆ ಪ್ರಕಾರ ಹದಿನಾರನೇ ಜುಲೈ ಮಂಗಳವಾರ ಸಂಜೆ 4:30ಕ್ಕೆ ಈ ಅವಧಿ ಪ್ರಾರಂಭವಾಗುತ್ತದೆ. ಆದರೆ ಇದೇ ದಿನ ಬೆಳಿಗ್ಗೆ ಹತ್ತು ಘಂಟೆಯ ಬಳಿಕ ರಾಹುಕಾಲ ಪ್ರಾರಂಭವಾಗುತ್ತದೆ. ರಾಹುಕಾಲದಲ್ಲಿಯೂ ಪೂಜೆ ನಿರ್ವಹಿಸಬಾರದು. ಈ ಮಾಹಿತಿಗಳನ್ನು ಪರಿಗಣಿಸಿ ಗುರುಪೂರ್ಣಿಮೆಯ ದಿನ ಗುರುಪೂಜೆಯನ್ನು ಮುಂಜಾನೆಯೇ ಪ್ರಾರಂಭಿಸಿ ಹತ್ತು ಘಂಟೆಗೂ ಮುನ್ನವೇ ಪೂರೈಸಿಬಿಡಬೇಕು. ಅತಿ ಸೂಕ್ತ ಸಮಯವೆಂದರೆ ಮಂಗಳವಾರ ಮುಂಜಾನೆ ಐದು ಘಂಟೆಯಿಂದ ಬೆಳಿಗ್ಗೆ ಹತ್ತು ಘಂಟೆಯವರೆಗೆ ಪೂಜೆ ನಡೆಸಲು ಸಮಯ ಪ್ರಶಸ್ತವಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡುವುದಿದ್ದರೆ ಈ ಸಮಯದಲ್ಲಿಯೇ ನಿರ್ವಹಿಸಬೇಕು. ಏಕೆಂದರೆ ಸೂತಕ ಕಾಲ ಪ್ರಾರಂಭವಾದ ಬಳಿಕ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ.

ಗುರುಪೂರ್ಣಿಮೆಯ ಇತಿಹಾಸ

ಗುರು ಎಂಬುದು ಸಂಸ್ಕೃತ ಪದವಾಗಿದ್ದು ಇದರಲ್ಲಿ ಗು ಎಂದರೆ ಕತ್ತಲು ಎಂದೂ ರು ಎಂದರೆ ನಿವಾರಿಸುವವನು ಎಂದೂ ಅರ್ಥವಿದೆ. ಆ ಪ್ರಕಾರ ಗುರು ಎಂದರೆ ಕತ್ತಲನ್ನು ನಿವಾರಿಸುವವನು ಎಂದು ಅರ್ಥಬರುತ್ತದೆ. ಅಜ್ಞಾನದ ಕತ್ತಲನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವವನೇ ಗುರುವಾಗಿದ್ದಾನೆ. ಗುರುಪೂರ್ಣಿಮೆಯ ದಿನ ಗುರು ಅಥವಾ ಶಿಕ್ಷಕರಿಗೆ, ವಿಶೇಷವಾಗಿ ಆಧ್ಯಾತ್ಮದ ಪಾಠ ನೀಡುವ ಶಿಕ್ಷಕರಿಗೆ ಮೀಸಲಾಗಿದೆ. ಮೂಲತಃ ಈ ದಿನ ಗುರು ವೇದವ್ಯಾಸದ ಹುಟ್ಟಿದ ದಿನವೂ ಆಗಿದೆ. ಈ ಜಗತ್ತಿನ ಪ್ರಥಮ ಗುರು ಎಂದು ವೇದವ್ಯಾಸರನ್ನು ಸ್ಮರಿಸಲಾಗುತ್ತದೆ. ವೇದಗಳು ಪುರಾಣಗಳು ಹಾಗೂ ಮಹಾಭಾರತವನ್ನು ಬರೆದವರೇ ವೇದವ್ಯಾಸರು ಎಂದು ಹೇಳಲಾಗುತ್ತದೆ.

ಜಗತ್ತಿನ ಪ್ರಥಮ ಗುರುವಾಗಿರುವ ಶಿವ

ಹದಿನೈದು ಸಾವಿರ ವರ್ಷಗಳಿಗೂ ಹಿಂದಿನ ಒಂದು ಕಥೆಯ ಪ್ರಕಾರ ಒಮ್ಮೆ ಶಿವ ಹಿಮಾಲಯದಲ್ಲಿ ತಪಸ್ಸಿಗೆ ಕುಳಿತಿದ್ದನಂತೆ. ಈತನನ್ನು ನೋಡಿದ ಅಕ್ಕಪಕ್ಕದ ಜನರು ಈತ ಓರ್ವ ಯೋಗಿ ಇರಬೇಕೆಂದು (ತಪಸ್ವಿ) ತಿಳಿದಿದ್ದರು. ಆಗಾಗ ಕಣ್ಣುಗಳಿಂದ ಸುರಿಯುತ್ತಿದ್ದ ಅಶ್ರುಗಳ ಹೊರತಾಗಿ ಬೇರಾವ ಚಿಹ್ನೆಯೂ ಶಿವನಿಂದ ಬರುತ್ತಿರಲಿಲ್ಲ. ಈತನನ್ನು ಕಾಣಲು ಆಗಾಗ ಸುತ್ತ ಮುತ್ತಲ ಜನ ಬರುತ್ತಿದ್ದರು. ಆದರೆ ಯಾರಿಗೂ ಈತನ ತಪಸ್ಸನ್ನು ಭಂಗಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಈತನ ತಪಸ್ಸನ್ನು ಮುರಿಯಬೇಕೆಂದು ಹಠ ತೊಟ್ಟ ಏಳು ಜನರು ಏಳು ವರ್ಷಗಳವರೆಗೆ ಸತತ ಪರಿಶ್ರಮ ನಡೆಸಿದ್ದರು. ಏಳು ವರ್ಷಗಳ ಬಳಿಕ ಕಣ್ಣು ತೆರೆದ ಶಿವನಿಗೆ ಈ ಏಳು ವ್ಯಕ್ತಿಗಳು ಕಂಡರಂತೆ. ತಪಸ್ಸಿನ ಅವಧಿಯಲ್ಲಿ ತನ್ನ ಕಣ್ಣುಗಳಿಂದ ಉದುರುವ ಅಶ್ರುಗಳ ಬಗ್ಗೆ ರಹಸ್ಯವನ್ನು ಶಿವ ಅವರಿಗೆ ತಿಳಿಸಿದನಂತೆ. ಇದು ಕೇವಲ ಧ್ಯಾನದಿಂದ ಮಾತ್ರ ಲಭಿಸುವ ಫಲವಾಗಿದ್ದು ಅಪಾರ ತಾಳ್ಮೆಯಿಂದ ಕಾದ ಈ ವ್ಯಕ್ತಿಗಳಿಗೆ ತನ್ನ ಅಶ್ರುಗಳನ್ನು ದಯಪಾಲಿಸಿದನಂತೆ. ಆ ಬಳಿಕ ಈ ಏಳು ಪುರುಷರು ಸಪ್ತಋಷಿಗಳಾಗಿ ಪರಿವರ್ತಿತರಾದರಂತೆ. ಈ ಜಗತ್ತಿನಲ್ಲಿ ಮೊದಲಾಗಿ ಅವರಿಗೆ ಹೆಚ್ಚಿನ ಪ್ರಜ್ಞೆಯ ರಹಸ್ಯವನ್ನು ನೀಡುವ ಮೂಲಕ ಮೊದಲ ಗುರು ಅಥವಾ ಅದಿ ಗುರು ಎಂದು ಕರೆಸಿಕೊಳ್ಳುತ್ತಾನೆ. ಯೋಗಾಭ್ಯಾಸದಲ್ಲಿ ಈ ಹೆಚ್ಚಿನ ಪ್ರಜ್ಞೆಯನ್ನು ಪ್ರಮುಖವಾಗಿ ಪಾಲಿಸಲಾಗುತ್ತದೆ. ಆದಿ ಗುರು ಎಂದರೆ ಸಂಸ್ಕೃತದಲ್ಲಿ ಪ್ರಥಮ ಶಿಕ್ಷಕ ಎಂಬ ಅರ್ಥ ಬರುತ್ತದೆ. ಆ ಮೂಲಕ ಈ ಋಷಿಗಳಿಗೆ ಯೋಗಾಭ್ಯಾಸದ ರಹಸ್ಯಗಳನ್ನು ಹೇಳಿಕೊಟ್ಟ ಶಿವ ಪ್ರಥಮ ಗುರುವಾಗಿದ್ದಾನೆ ಹಾಗೂ ಈ ದಿನವನ್ನು ಗುರುವಿನೆ ಪೂಜಿಸುವ ಮೂಲಕ ಗುರುಪೂರ್ಣಿಮೆಯಾಗಿ ಆಚರಿಸಲ್ಪಡುತ್ತದೆ.

English summary

Guru Purnima 2019: When To Do Guru Purnima Puja On The Lunar Eclipse Day?

On July 16 2019 it will be a full moon day, but there will be no bright full moon to see, like the other Purnima days because of the lunar eclipse. While the festival demands a Guru puja to be performed, the eclipse says, no auspicious puja should be performed on this day. What a dilemma, right? Well, we will give you a solution, read on!
X
Desktop Bottom Promotion