For Quick Alerts
ALLOW NOTIFICATIONS  
For Daily Alerts

ಭಗವಾನ್ ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ

By Deepu
|

ಶ್ರಾವಣ ಮಾಸದಲ್ಲಿ ಶಿವ ಭಕ್ತರು ಶಿವನನ್ನು ಬಗೆ ಬಗೆಯಾಗಿ ಪೂಜಿಸಿ ಭಜಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಉಪವಾಸವನ್ನು ಕೈಗೊಂಡು ದೇವಾಲಯಕ್ಕೆ ಭೇಟಿ ನೀಡಿ ಶಿವನ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಂಡು ಶಿವನು ಸಮಸ್ತ ಲೋಕ ಕಲ್ಯಾಣವನ್ನು ಮಾಡುತ್ತಾರೆ ಮತ್ತು ಲೋಕದ ಜನರ ಜವಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿಸಿರುವಂತಹದ್ದಾಗಿದೆ. ಶ್ರಾವಣ ಮಾಸವನ್ನು ಅತ್ಯುನ್ನತ ಮಾಸ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ದೇವರಿಗೆ ಪೂಜೆಯನ್ನು ನೀಡುವುದರಿಂದ ಗ್ರಹದೋಸ ನಿವಾರಣೆಯಾಗಿ ಶಿವನ ಅನುಗ್ರಹ ದೊರೆಯುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಗ್ರಹದೋಷ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ.

ಗ್ರಹ ದೋಷ ಎಂಬುದು ಗ್ರಹಗಳಿಂದ ನಮಗೆ ಬರುವ ದೋಷಗಳ ಬಗ್ಗೆ ತಿಳಿಸುತ್ತದೆ. ನಮ್ಮ ಜನ್ಮ ಕುಂಡಲಿಯಲ್ಲಿ ಗ್ರಹ ದೋಷದ ವಿಪತ್ತುಗಳು ಗೋಚರವಾಗುತ್ತದೆ. ಗ್ರಹಗಳು ತಮ್ಮ ಸ್ಥಾನದಲ್ಲಿ ಸರಿಯಾಗಿ ಕೂರದೇ ಇರುವಾಗ ಈ ದೋಷಗಳು ಮಾನವರನ್ನು ಕಾಡುತ್ತವೆ. ಗ್ರಹಗಳ ಅನಾನುಕೂ ಸ್ಥಾನ ಮತ್ತು ನಕ್ಷತ್ರಗಳು ಸರಿಯಾಗಿ ತಮ್ಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ವ್ಯಕ್ತಿಯು ತಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಗ್ರಹಶಾಂತಿ ಪೂಜೆಗಳನ್ನು ಮತ್ತು ಹವನಗಳನ್ನು ನಡೆಸಲಾಗುತ್ತದೆ. ಶಿವನನ್ನು ಆರಾಧಿಸುವುದರಿಂದ ಗ್ರಹ ದೋಷವನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಎಲ್ಲಾ ಸಂಕಷ್ಟಗಳಿಗೂ ಶಿವನನ್ನು ನಂಬಿಕೊಂಡರೆ ಆ ದೇವರ ಅನುಗ್ರಹ ಭಕ್ತರ ಮೇಲೆ ಸದಾ ಕಾಲ ಇರುತ್ತದೆ ಎಂದಾಗಿದೆ. ಪುರಾಣಗಳಲ್ಲಿ ಕೂಡ ಶಿವನನ್ನು ಹಾಡಿ ಹೊಗಳಿ ಅವರ ಮಹಿಮೆಯನ್ನು ತಿಳಿಸಲಾಗಿದೆ. ಬರಿಯ ಬಿಲ್ವ ಪತ್ರೆಯನ್ನು ನೀಡಿ ಕೂಡ ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದು ಮತ್ತು ಅವರು ಸಂತುಷ್ಟರಾಗಿ ಭಕ್ತರನ್ನು ಹರಸುತ್ತಾರೆ. ಹಾಗಿದ್ದರೆ ಗ್ರಹ ದೋಷಕ್ಕೆ ಪರಿಹಾರವನ್ನು ಶಿವನ ಪೂಜೆ ಮಾಡಿ ಹೇಗೆ ಪಡೆದು ಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ....

ಶಿವ ಪೂಜೆಯಿಂದ ಗ್ರಹ ದೋಷ ನಿವಾರಣೆ

ಶಿವ ಪೂಜೆಯಿಂದ ಗ್ರಹ ದೋಷ ನಿವಾರಣೆ

ಶಿವನ ಆರಾಧನೆಯನ್ನು ಮಾಡುವುದರಿಂದ ಗ್ರಹ ದೋಷದ ನಿವಾರಣೆಯಾಗುತ್ತದೆ. ದೋಷವನ್ನು ಆಧರಿಸಿಕೊಂಡು ಇದಕ್ಕೆ ಪರಿಹಾರವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಸೂರ್ಯನಿಗೆ ಸಂಬಂಧಿಸಿದ ದೋಷ

ಸೂರ್ಯನಿಗೆ ಸಂಬಂಧಿಸಿದ ದೋಷ

ಸೂರ್ಯನಿಗೆ ಸಂಬಂಧಿಸಿದ ದೋಷ ಇದ್ದಲ್ಲಿ ಶಿವನಿಗೆ ಕೆಂಪು ಹೂವು ಮತ್ತು ಅದರ ಎಲೆಯನ್ನು ಅರ್ಪಿಸಬೇಕು. ಪಂಚಪೊಹಾರ್ ಪೂಜೆಯನ್ನು ಮಾಡಬೇಕು. ಕೆಂಪು ಹೂವು ಸೂರ್ಯನಿಗೆ ಅತಿ ಪ್ರಿಯವಾದುದು.

ಚಂದ್ರನಿಗೆ ಸಂಬಂಧಿಸಿದ ದೋಷ

ಚಂದ್ರನಿಗೆ ಸಂಬಂಧಿಸಿದ ದೋಷ

ಚಂದ್ರನಿಗೆ ಸಂಬಂಧಿಸಿದ ದೋಷವಿದ್ದರೆ ಶಿವನಿಗೆ ಹಸುವಿನ ಹಾಲನ್ನು ನೀಡಬೇಕು. ಚಂದ್ರ ದೇವರು ಇದರಿಂದ ಪ್ರಸನ್ನಗೊಳ್ಳುತ್ತಾರೆ ಎಂದು ಹೇಳಲಾಗಿದೆ. ಅಂತೆಯೇ ಸೋಮವಾರ ಉಪವಾಸವಿರುವುದು ಕೂಡ ಶಿವನ ಅನುಗ್ರಹ ಪಡೆಯಲು ಒಳ್ಳೆಯದು.

 ಮಂಗಳನಿಗೆ ಸಂಬಂಧಿಸಿದ ದೋಷ

ಮಂಗಳನಿಗೆ ಸಂಬಂಧಿಸಿದ ದೋಷ

ಮಂಗಳನಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಶಿವನಿಗೆ ಅಮೃತ ಬಳ್ಳಿಯ ರಸವನ್ನು ನೀಡಬೇಕು. ಲಿಂಗಕ್ಕೆ ಇದನ್ನು ಅಭಿಷೇಕ ರೂಪದಲ್ಲಿ ಅರ್ಪಿಸಬೇಕು.

 ಬುಧಕ್ಕೆ ಸಂಬಂಧಿಸಿದ ದೋಷ

ಬುಧಕ್ಕೆ ಸಂಬಂಧಿಸಿದ ದೋಷ

ವಿದರ್ಭ ಸಸ್ಯದ ರಸವನ್ನು ದೇವರಿಗೆ ನೀಡಿ ಈ ದೋಷದಿಂದ ಪರಿಹಾರ ಕಂಡುಕೊಳ್ಳಬಹುದು.

ಗುರುವಿಗೆ ಸಂಬಂಧಿಸಿದ ದೋಷ

ಗುರುವಿಗೆ ಸಂಬಂಧಿಸಿದ ದೋಷ

ಗುರುಗ್ರಹಕ್ಕೆ ಸಂಬಂಧಿಸಿದ ದೋಷ ನಿವಾರಣೆಗಾಗಿ ಶಿವ ಅಭಿಷೇಕದ ಸಮಯದಲ್ಲಿ ಹಾಲಿಗೆ ಅರಶಿನ ಸೇರಿಸಿ ಕೊಡಬೇಕು. ಗುರುಗ್ರಹವನ್ನು ಬೃಹಸ್ಪತಿ ದೇವ ಮತ್ತು ಹಳದಿ ಬಣ್ಣ ಆಳುತ್ತದೆ, ಆದ್ದರಿಂದ ಹಾಲಿಗೆ ಅರಶಿನ ಮಿಶ್ರ ಮಾಡಿ ನೀಡುವುದರಿಂದ ಗುರು ಗ್ರಹ ದೋಷ ನಿವಾರಣೆಯಾಗುತ್ತದೆ.

 ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷ

ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷ

ಶುಕ್ರ ಗ್ರಹದ ದೋಷ ಪರಿಹಾರಕ್ಕಾಗಿ ನೀವು ಪಂಚಾಮೃತ ಮತ್ತು ತುಪ್ಪವನ್ನು ದೇವರಿಗೆ ನೀಡಬೇಕು. ತುಪ್ಪ, ಮೊಸರು, ಜೇನು, ಹಾಲು, ಸಕ್ಕರೆಯಿಂದ ಮಾಡಿರುವುದೇ ಪಂಚಾಮೃತವಾಗಿದೆ. ಐದು ಭಕ್ಷ್ಯಗಳನ್ನು ಪಂಚಾಮೃತ ವಿವರಿಸುತ್ತದೆ.

 ಶನಿಗೆ ಸಂಬಂಧಿಸಿದ ದೋಷ

ಶನಿಗೆ ಸಂಬಂಧಿಸಿದ ದೋಷ

ಜನ್ಮಕುಂಡಲಿಯಲ್ಲಿ ಶನಿಯ ಕಾರಣದಿಂದ ದೋಷಗಳು ಉದ್ಭವಿಸಿದ್ದರೆ, ಕಬ್ಬಿನ ಹಾಲಿನ ಅಭಿಷೇಕ ಮತ್ತು ಮಜ್ಜಿಗೆಯ ಅಭಿಷೇಕವನ್ನು ಶಿವನಿಗೆ ಮಾಡಬೇಕು.

 ರಾಹು ಕೇತುವಿನಿಂದ ದೋಷ

ರಾಹು ಕೇತುವಿನಿಂದ ದೋಷ

ನೀರಿನಲ್ಲಿ ಕುಶ್ ಸಸ್ಯವನ್ನು ಮಿಶ್ರ ಮಾಡಿ ರಾಹು ಕೇತುವಿಗೆ ದೋಷ ಪರಿಹಾರಕ್ಕಾಗಿ ಶಿವನಿಗೆ ಅರ್ಪಿಸಬೇಕು.

English summary

Grah Shanti Remedies In Shravana Month

Grah Shanti refers to removing the negative effects of unfavourably placed planets. These effects can be removed simply by performing Shiva puja according to the dosha to be removed. For instance, to remove a dosha related to Sun, Lord Shiva should be offered red flowers and leaves. The dosha to be removed might be associated with any planet or star.
Story first published: Tuesday, August 7, 2018, 18:16 [IST]
X
Desktop Bottom Promotion