For Quick Alerts
ALLOW NOTIFICATIONS  
For Daily Alerts

ಗಾಯತ್ರಿ ಮಂತ್ರ ಪಠಿಸಿದರೆ, ನಿಮ್ಮ ಮನದ ಬಯಕೆ ಈಡೇರುವುದು

|

ಹಿಂದೂಗಳಿಗೆ ಗಾಯತ್ರಿ ಮಂತ್ರವು ತುಂಬಾ ಪವಿತ್ರವಾದದ್ದು. ಗಾಯತ್ರಿ ಮಂತ್ರದಿಂದ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಣೇ ಮಾಡಬಹುದು ಎಂದು ಹೇಳಲಾಗುತ್ತದೆ. ಗಾಯತ್ರಿ ಮಂತ್ರವು ನಿಮ್ಮ ಇಚ್ಛೆಯನ್ನು ಈಡೇರಿಸುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರವಾಗಿದೆ. ಬೇರೆಲ್ಲಾ ಮಂತ್ರಗಳಿಗಿಂತ ಗಾಯತ್ರಿ ಮಂತ್ರವು ತುಂಬಾ ಅದ್ಭುತವಾದ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ.

ಗಾಯತ್ರಿ ಮಂತ್ರವನ್ನು ದೇವರನ್ನು ಪೂಜಿಸುವ ವೇಳೆ, ದೇವರ ಆಶೀರ್ವಾದ ಪಡೆಯುವ ವೇಳೆ ಮತ್ತು ಬ್ರಹ್ಮಜ್ಞಾನ ಪಡೆಯುವ ವೇಳೆ, ಸಮಾಜದ ಸಂತೋಷಕ್ಕಾಗಿ ಮತ್ತು ಪ್ರಾಪಂಚಿಕ ವೈಭೋಗ ಮತ್ತು ಹಣಕ್ಕಾಗಿ ಇದನ್ನು ಪಠಿಸಬಹುದು. ದಿನದ ನಿದಿಷ್ಟ ಸಮಯದಲ್ಲಿ ಮಾತ್ರ ಗಾಯತ್ರಿ ಮಂತ್ರವನ್ನು ಪಠಿಸಬಹುದಾಗಿದೆ. ದಿನದ ಮೂರು ಅವಧಿಯನ್ನು ಸಂಧ್ಯಾಕಾಲ ಎಂದು ಹೇಳಲಾಗುತ್ತದೆ. ಮೊದಲ ಸಲ ಗಾಯತ್ರಿ ಮಂತ್ರವನ್ನು ಸೂರ್ಯ ಉದಯಿಸುವ ಮೊದಲು ಆರಂಭಿಸಿ ಉದಯಿಸುವ ತನಕ ಪಠಿಸಬೇಕು.

ಮಧ್ಯಾಹ್ನದ ವೇಳೆ ಎರಡನೇ ಸಲ ಮಂತ್ರವನ್ನು ಪಠಿಸಬೇಕು. ಮೂರನೇ ಸಲ ಸೂರ್ಯ ಮುಳುಗಲು ಆರಂಭವಾಗುವ ಮೊದಲು ಆರಂಭಿಸಿ ಸೂರ್ಯಾಸ್ತದ ತನಕ ಪಠಿಸಬೇಕು. ಈ ಸಮಯಕ್ಕೆ ಹೊರತಾಗಿ ಯಾರಾದರೂ ಈ ಮಂತ್ರವನ್ನು ಪಠಿಸುವುದಿದ್ದರೆ ಆಗ ಆತ/ಆಕೆ ಮೌನವಾಗಿ ಮತ್ತು ಶಾಂತ ಮನಸ್ಸಿನಲ್ಲಿ ಇದನ್ನು ಪಠಿಸಬೇಕು. ಈ ಮಂತ್ರವನ್ನು ದೊಡ್ಡ ಸ್ವರದೊಂದಿಗೆ ಪಠಿಸಬಾರದು.

Most Read: ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ

ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್

ಅನುವಾದ: ಆ ಭವ್ಯವಾದ ದೈವಿಕ ವಾಸ್ತವದ ಆಧ್ಯಾತ್ಮಿಕ ಉತ್ಸಾಹವನ್ನು ನಾವು ಧ್ಯಾನಿಸುತ್ತೇವೆ, ದೈಹಿಕ, ಆಸ್ಟ್ರಲ್ ಮತ್ತು ಅಸ್ತಿತ್ವದ ಸ್ವರ್ಗೀಯ ಗೋಳಗಳ ಮೂಲ ಯಾರು? ಸರ್ವೋತ್ತಮ ದೈವವು ನಮ್ಮ ಬುದ್ಧಿಶಕ್ತಿಯನ್ನು ಬೆಳಗಿಸಿ, ನಾವು ಸುಪ್ರಸಿದ್ಧ ಸತ್ಯವನ್ನು ಅರ್ಥಮಾಡಿಕೊಳ್ಳಬಹುದು. ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಈ ಮಂತ್ರವನ್ನು ಜಪಿಸಿದರೆ ಆಗ ಹೆಚ್ಚಿನ ಲಾಭವು ಸಿಗುವುದು.

ಗಾಯತ್ರಿ ಮಂತ್ರದಿಂದ ಸಿಗುವ ಹತ್ತು ಲಾಭಗಳು

ಸಂತೋಷ, ಕಾಂತಿಯುತ ಚರ್ಮ, ಕೆಟ್ಟ ಆಹಾರಕ್ಕೆ ದ್ವೇಷ, ದೇವರಲ್ಲಿ ನಂಬಿಕೆ, ಆರನೇ ಇಂದ್ರಿಯದ ಸುಧಾರಣೆ, ಆಶೀರ್ವಾದದ ಶಕ್ತಿ ಹೆಚ್ಚಾಗುವುದು. ದೃಷ್ಟಿಯು ಪ್ರಕರವಾಗುವುದು. ಮನಸ್ಸಿಗೆ ಶಾಂತಿ ಸಿಗುವುದು. ಕೋಪ ತಡೆಯಬಹುದು ಮತ್ತು ಜಾಣ್ಮೆಯು ಹೆಚ್ಚಾಗುವುದು.

ಗಾಯತ್ರಿ ಮಂತ್ರವು ಪ್ರತಿಯೊಬ್ಬರಿಗೆ ತುಂಬಾ ಅದೃಷ್ಟವನ್ನು ಉಂಟುಮಾಡುವುದು. ಆದರೆ ಇದು ಮಕ್ಕಳಿಗೆ ತುಂಬಾ ಲಾಭಕಾರಿ. ಪ್ರತಿನಿತ್ಯ 108 ಸಲ ಗಾಯತ್ರಿ ಮಂತ್ರವನ್ನು ಜಪಿಸಿದರೆ ಆಗ ಮಕ್ಕಳು ತುಂಬಾ ಬುದ್ಧಿವಂತರಾಗುವರು ಮತ್ತು ಅವರಿಗೆ ಬೇಕಿರುವುದು ಸಿಗುವುದು.

ಗಾಯತ್ರಿ ಮಂತ್ರ ಪಠಿಸುವುದರಿಂದ ಬಡತನವು ನಿರ್ಮೂಲನೆ ಆಗುವುದು. ಸಂಬಳ, ಬರದೆ ಇರುವಂತಹ ಹಣ, ಉದ್ಯೋಗದಲ್ಲಿ ಯಶಸ್ಸು, ಆಸ್ತಿ ಕಳೆದುಕೊಲ್ಳುವುದು ಮತ್ತು ಇತರ ಕೆಲವೊಂದು ಸಮಸ್ಯೆಗಳನ್ನು ಈ ಮಂತ್ರವನ್ನು ಪಠಿಸುವ ಮೂಲಕವಾಗಿ ನಿವಾರಣೆ ಮಾಡಬಹುದು. ಹಳದಿ ಬಣ್ಣ ಧರಿಸಿ, ಶುಕ್ರವಾರದ ದಿನ ಈ ಮಂತ್ರ ಪಠಿಸಬೇಕು. ಇದರೊಂದಿಗೆ ಭಾನುವಾರದಂದು ಉಪವಾಸ ಮಾಡಿದರೆ ಅದರಿಂದ ನೆರವಾಗುವುದು.

ದಂಪತಿಗೆ ತುಂಬಾ ದೀರ್ಘಕಾಲದಿಂದ ಮಕ್ಕಳಾಗದೆ ಇದ್ದರೆ ಆಗ ಪ್ರತಿನಿತ್ಯ ಬಿಳಿ ಬಟ್ಟೆ ಧರಿಸಿ ಸೂರ್ಯೋದಯದ ಮೊದಲಿನಿಂದ ಸೂರ್ಯೋದಯದ ತನಕ ಈ ಮಂತ್ರವನ್ನು ಪಠಿಸಬೇಕು. ನಿಮಗೆ ಶತ್ರುಗಳಿಂದ ತುಂಬಾ ಕಾಟವಿದ್ದರೆ ಆಗ ನೀವು ಈ ಮಂತ್ರವನ್ನು ಮಂಗಳವಾರ, ಭಾನುವಾರ ಮತ್ತು ಅಮವಾಸ್ಯೆ ದಿನದಂದು ಪಠಿಸಬೇಕು. ಈ ವೇಳೆ ಕೆಂಪು ಬಟ್ಟೆ ಧರಿಸಿ. ಗಾಯತ್ರಿ ಮಂತ್ರ ಪಠಿಸುವ ವೇಳೆ ನೀವು ದುರ್ಗಾ ದೇವಿಯನ್ನು ಮನಸ್ಸಿನಲ್ಲಿ ನೆನೆಯಿರಿ. ಹೀಗೆ ಮಾಡಿದರೆ ಆಗ ನಿಮಗೆ ಎಲ್ಲಾ ರೀತಿಯ ಶತ್ರು ಸಮಸ್ಯೆಯಿಂದ ನಿವಾರಣೆ ಸಿಗುವುದು.

ವಿವಾಹವು ವಿಳಂಬವಾಗುತ್ತಿದ್ದರೆ ಆಗ ನೀವು ಗಾಯತ್ರಿ ಮಂತ್ರವನ್ನು ಪ್ರತೀ ಸೋಮವಾರ ಹಳದಿ ಬಟ್ಟೆ ಧರಿಸಿ ಪಠಿಸಬೇಕು. ಈ ಮಂತ್ರವನ್ನು ಪಠಿಸುವ ವೇಳೆ ನೀವು ಪಾವರ್ತಿ ದೇವಿಯನ್ನು ಮನಸ್ಸಿನಲ್ಲಿ ನೆನೆಯಿರಿ. ಆಗ ನಿಮಗೆ ಬೇಗನೆ ಸೂಕ್ತ ಸಂಗಾತಿಯು ಸಿಗುವರು. ದೀರ್ಘಕಾಲಿಕ ಅನಾರೋಗ್ಯದಿಂದ ದೂರವಾಗಬೇಕಾದರೆ ಆಗ ನೀವು ಈ ಮಂತ್ರವನ್ನು ತುಂಬಾ ಶುಭ ದಿನದಂದು ಪಠಿಸಬೇಕು. ಒಂದು ಬಿಂದಿಗೆ ನೀರನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡು, ಕೆಂಪು ಬಟ್ಟೆ ಮೇಲೆ ಕುಳಿತುಕೊಂಡು ನೀವು ಈ ಮಂತ್ರವನ್ನು ಪಠಿಸಬೇಕು. ಮಂತ್ರ ಪಠಿಸಿದ ಬಳಿಕ ನೀರು ಕುಡಿಯಿರಿ.

ಸಣ್ಣ ಸಮಸ್ಯೆಯಿಂದ ಹಿಡಿದು ದೊಡ್ಡ ಮಟ್ಟದ ಸಮಸ್ಯೆ ನಿವಾರಣೆ ಮಾಡಲು ನೀವು ಒಂದು ಚೊಂಬು ಹಸಿ ಹಾಲು, ಅಶ್ವತ್ಥದ ಕಡ್ಡಿ, ಶಮಿ, ವಾತ, ಗೂಲರ್ ತೆಗೆದುಕೊಳ್ಳಿ. ಈ ಸಾಮಗ್ರಿಯ ಬದಿಯಲ್ಲಿ ಕುಳಿತು ಒಂದು ಹೋಮ ಹಾಕಿಕೊಳ್ಳಿ ಮತ್ತು ಗಾಯತ್ರಿ ಮಂತ್ರವನ್ನು ಒಂದು ಸಾವಿರ ಸಲ ಪಠಿಸಬೇಕು. ಮಂತ್ರ ಪಠಿಸಿದ ಬಳಿಕ ಅಶ್ವತ್ಥದ ಕಡ್ಡಿ, ಶಮಿ, ವಾತ ಮತ್ತು ಗೂಲರ್ ನ್ನು ಒಂದೊಂದರಂತೆ ಹಾಲಿನಲ್ಲಿ ಮುಳುಗಿಸಿ ಮತ್ತು ಅದನ್ನು ಹೋಮಕ್ಕೆ ಹಾಕಿ. ಇದರಿಂದ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆ ಆಗುವುದು. ಯಾವುದೇ ಪವಿತ್ರ ದಿನದಂದು ಹಾಲು, ತುಪ್ಪ, ಮೊಸರು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಿ ಮತ್ತು ಹೋಮ ಹಾಕಿಕೊಂಡು ಗಾಯತ್ರಿ ಮಂತ್ರವನ್ನು ಒಂದು ಸಾವಿರ ಸಲ ಪಠಿಸಬೇಕು. ಇದರಿಂದ ಕಣ್ಣುಗಳು ಮತ್ತು ಹೊಟ್ಟೆಯ ಅನಾರೋಗ್ಯವು ದೂರವಾಗುವುದು.

ಗಾಯತ್ರಿ ಮಂತ್ರದ ಮಹತ್ವ

ದೇವರನ್ನು ಕುರಿತು ಧ್ಯಾನಿಸುವಾಗ, ಗಾಯತ್ರಿ ಮ೦ತ್ರವನ್ನು ಪಠಿಸಲಾಗುತ್ತದೆ. ದೇವರ ಅನುಗ್ರಹವನ್ನು ಪಡೆಯಲು, ಬ್ರಹ್ಮಜ್ಞಾನವನ್ನು ಹೊ೦ದಲು, ಪ್ರಾಪ೦ಚಿಕ ವೈಭೋಗ, ಸಾಮಾಜಿಕ ಸ್ಥಾನಮಾನ, ಹಾಗೂ ಸ೦ಪತ್ತನ್ನು ಪಡೆಯಲು ಗಾಯತ್ರಿ ಮ೦ತ್ರವು ನೆರವಾಗುತ್ತದೆ.ಗಾಯತ್ರಿ ಮ೦ತ್ರವನ್ನು ಪಠಿಸುವುದಕ್ಕಾಗಿ ದಿನದ ಮೂರು ವಿಶಿಷ್ಟ ಸಮಯಗಳು ಅತ್ಯ೦ತ ಪ್ರಶಸ್ತವಾಗಿವೆ. ದಿನದ ಈ ಮೂರು ಸಮಯ ಅಥವಾ ಕಾಲಾವಧಿಗಳು ತ್ರಿಸ೦ಧ್ಯಾ ಎ೦ದು ಪ್ರಸಿದ್ಧವಾಗಿವೆ. ಮೊದಲನೆಯ ಆವೃತ್ತಿಯು ಸೂರ್ಯೋದಯದ ಮೊದಲನೆಯ ಕಾಲಾವಧಿಯಾಗಿದ್ದು, ಸೂರ್ಯನ ಸ೦ಪೂರ್ಣ ಉದಯದವರೆಗೂ ಪಠಣವನ್ನು ಮು೦ದುವರಿಸಬೇಕು.

ಗಾಯತ್ರಿ ಮ೦ತ್ರ ಪಠಣಕ್ಕಾಗಿ ಎರಡನೆಯ ಸೂಕ್ತ ಸಮಯವೆ೦ದರೆ ಅದು ಮಧ್ಯಾಹ್ನದ ಅವಧಿಯಾಗಿದೆ. ಮೂರನೆಯ ಬಾರಿ ಗಾಯತ್ರಿ ಮ೦ತ್ರವನ್ನು ಪಠಿಸಲು ಸೂಕ್ತ ಸಮಯವೆ೦ದರೆ ಸೂರ್ಯಾಸ್ತಮಾನಕ್ಕಿ೦ತ ಮೊದಲು ಆರ೦ಭಗೊ೦ಡು ಸ೦ಪೂರ್ಣ ಸೂರ್ಯಾಸ್ತದವರೆಗೂ ಮು೦ದುವರಿಸಬೇಕು. ಈ ಮೂರು ಸಮಯಗಳನ್ನು ಹೊರತುಪಡಿಸಿ, ಬೇರೆ ಅವಧಿಯಲ್ಲಿ ಮ೦ತ್ರವನ್ನು ಪಠಿಸಲು ಬಯಸುವಿರಾದರೆ, ಪಠಿಸುವವರು ಮನಸ್ಸಿನಲ್ಲಿಯೇ ಮೌನವಾಗಿ ಪಠಿಸಬೇಕು. ಈ ಮ೦ತ್ರವನ್ನು ಉಚ್ಚ ಸ್ವರದಲ್ಲಿ ಪಠಿಸತಕ್ಕದ್ದಲ್ಲ.

ಗಾಯತ್ರಿ ಮಹಾಮ೦ತ್ರದ ಭಾವಾರ್ಥ

ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್

ಜಪ ಮಾಡುವ ವಿಧಾನ:

"ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು. ಗಾಯತ್ರಿ ಆಹ್ವಾನ: ಸ್ನಾನ ಮಾಡಿ ಶುದ್ಧರಾಗಿ, ಸಂಧ್ಯಾವಂದನೆಯ ಪೂರ್ವಭಾಗವಾದ ಆಚಮನ, ಪ್ರಾಣಾಯಾಮ, ಸಂಕಲ್ಪ, ಸೂರ್ಯಾರ್ಘ್ಯಗಳನ್ನು ನೀಡಿ ಗಾಯತ್ರಿ ಮಂತ್ರ ದೇವತೆಯನ್ನು ಹೀಗೆ ಆವಾಹಿಸಬೇಕು. ಪರಮಪೂಜ್ಯನಾದ, ಅತ್ಯುನ್ನತ ದೈವಿಕ ಸತ್ಯನಾದ, ಆ ಪರಮ ಆಧ್ಯಾತ್ಮಿಕ ತೇಜ: ಪು೦ಜನಾದ ಯಾವ ಭಗವ೦ತನು ದೈಹಿಕ, ಆತ್ಮಸ್ವರೂಪದ, ಹಾಗೂ ಸ್ವರ್ಗೀಯ ಆಯಾಮಗಳ ಅಸ್ತಿತ್ವದ ಮೂಲಕಾರಣನಾಗಿರುವನೋ ಅ೦ತಹ ಪರಮ ದೈವ ಸ್ವರೂಪಿಯು ನಮ್ಮ ಬುದ್ಧಿಯನ್ನು ಪ್ರಕಾಶಿಸಲಿ ಹಾಗೂ ತನ್ಮೂಲಕ ಆ ಪರಮ ಸತ್ಯವನ್ನು ನಾವು ಅರಿತುಕೊಳ್ಳುವ೦ತಾಗಲಿ. ಇದು ಗಾಯತ್ರಿ ಮಹಾಮ೦ತ್ರದ ಭಾವಾರ್ಥವಾಗಿದೆ.

English summary

Gayatri mantra can fulfill your wishes

Gayatri Mantra helps people get rid of all their problems. And everybody knows for a fact that there is no better mantra to fulfill your wishes. Out of all the mantras, Gayatri Mantra has most miraculous powers. Gayatri Mantra is chanted when worshipping god, seeking god’s blessings, seeking brahamagyan, societal happiness and facilities and for money. There are three specific times in a day when the Gayatri Mantra should be chanted. The three times of a day is also known as Sandhyakal. The first time is before sunrise. The mantra should then be chanted till the sun rises.
X