For Quick Alerts
ALLOW NOTIFICATIONS  
For Daily Alerts

ಗರುಡ ಪುರಾಣ ಪ್ರಕಾರ ನೀವು ಇಂಥವರ ಮನೆಯಲ್ಲಿ ಆಹಾರ ಸೇವಿಸಲೇಬಾರದು!

|

ಹಿಂದೂ ಧರ್ಮದಲ್ಲಿ ಹಲವಾರು ಪುರಾಣಗಳು ಇವೆ. ಇದರಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ವೇದವ್ಯಾಸರು ಇದನ್ನು ಬರೆದಿದ್ದಾರೆ. ಇದರಲ್ಲಿ ಸುಮಾರು 279 ಅಧ್ಯಯಗಳು ಮತ್ತು 18,000 ಶ್ಲೋಕಗಳು ಇವೆ. ಸಾಮಾನ್ಯ ಮನುಷ್ಯರಿಗಾಗಿ ಕೆಲವೊಂದು ಮಾರ್ಗದರ್ಶನ ಹಾಗೂ ಸಲಹೆಗಳನ್ನು ಈ ಶ್ಲೋಕಗಳಲ್ಲಿ ನೀಡಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ನಾವು ಕೆಲವು ವ್ಯಕ್ತಿಗಳ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು.

ನಾವು ಏನು ತಿನ್ನುತ್ತೇವೆ ಎನ್ನುವುದರ ಮೇಲೆ ನಂಬಿಕೆಗಳು ಅವಲಂಬಿತವಾಗಿದೆ. ಇದರ ಪ್ರಮುಖ ವಿಚಾರವೆಂದರೆ ಆಹಾರವು ನಕಾರಾತ್ಮಕ ಅಂಶಗಳನ್ನು ಆಕರ್ಷಿಸುವುದು ಮತ್ತು ಈ ಆಹಾರ ಸೇವನೆ ಮಾಡಿದವರ ದೇಹದಲ್ಲಿ ಅದು ಹೋಗಿ ಸೇರಿಕೊಳ್ಳುವುದು. ಇದರಲ್ಲಿ ಅವರಲ್ಲಿ ಕೂಡ ನಕಾರಾತ್ಮಕ ಪರಿಣಾಮ ಉಂಟಾಗುವುದು.

ಗರುಡ ಪುರಾಣದ ಲೇಖಕರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಇನ್ನಷ್ಟು ತಿಳಿಯುತ್ತಾ ಸಾಗುವ…

ಗರುಡ ಪುರಾಣದ ಲೇಖಕರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಇನ್ನಷ್ಟು ತಿಳಿಯುತ್ತಾ ಸಾಗುವ…

ಭಾರತೀಯರು ತಮ್ಮ ಸಂಸ್ಕೃತಿ ಅಥವಾ ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮನೆಯಲ್ಲಿ ಆಹಾರ ಸೇವನೆ ಮಾಡುವರು. ಆದರೆ ಈ ಲೇಖನದಲ್ಲಿ ನಾವು ಆಹಾರ ಸೇವನೆ ಮಾಡಲೇಬಾರದ ಕೆಲವು ಜನರ ಬಗ್ಗೆ ತಿಳಿಸಲಿದ್ದೇವೆ. ಅದಾಗ್ಯೂ, ಯಾರ ಮನೆಯಲ್ಲಾದರೂ ಆಹಾರ ಸೇವನೆ ಮಾಡುವುರು ಅವರೊಂದಿಗೆ ನಮಗೆ ಇರುವಂತಹ ಅನ್ಯೋನ್ಯತೆ ಮತ್ತು ನಿಕಟ ಸಂಬಂಧವನ್ನು ಹೇಳುವುದು.

ಕಳ್ಳ ಅಥವಾ ಅಪರಾಧಿ

ಕಳ್ಳ ಅಥವಾ ಅಪರಾಧಿ

ಒಬ್ಬ ಅಪರಾಧಿಯ ಮನೆಯಲ್ಲಿ ಯಾವತ್ತೂ ಆಹಾರ ಸೇವನೆ ಮಾಡಬಾರದು. ಗರುಡ ಪುರಾಣ ಹೇಳುವ ಪ್ರಕಾರ, ಒಬ್ಬ ಕಳ್ಳನ ಮನೆಯಲ್ಲಿ ಊಟ ಮಾಡುವುದರಿಂದ ನೀವು ಕೂಡ ಆತ ಮಾಡಿದಂತಹ ದುಷ್ಕೃತ್ಯಗಳಲ್ಲಿ ಪಾಲುದಾರರಾಗುತ್ತೀರಿ. ಕೆಲವೊಂದು ಕುಕೃತ್ಯಗಳನ್ನು ಮಾಡಿ ಗಳಿಸಿರುವಂತಹ ಹಣದಿಂದ ಆಹಾರವನ್ನು ಖರೀದಿ ಮಾಡಿ ತರಲಾಗಿದೆ. ಈ ಆಹಾರವನ್ನು ತಿಂದವರಿಗೆ ಕೂಡ ಕಳ್ಳತನದಲ್ಲಿ ಭಾಗಿಯಾದ ಫಲವು ಸಿಗುವುದು. ಅದೇ ರೀತಿ ಕಳ್ಳನು ನಿಮ್ಮನ್ನು ಕೂಡ ತನ್ನ ಗುರಿಯನ್ನಿಗಿಸಬಹುದು.

ಕೆಟ್ಟ ನಡತೆಯ ಮಹಿಳೆಯ ಮನೆ

ಕೆಟ್ಟ ನಡತೆಯ ಮಹಿಳೆಯ ಮನೆ

ಮಹಿಳೆಯು ಉದ್ದೇಶಪೂರ್ವಕವಾಗಿ ಮೋಸ, ಅನೈತಿಕತೆ ಮತ್ತು ಇತರ ಕೆಲವೊಂದು ಕೆಟ್ಟ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಆಗ ಇದು ದೇವರ(ಕೇವಲ ಸಮಾಜ ಮಾತ್ರವಲ್ಲ) ದೃಷ್ಟಿಯಲ್ಲಿ ತಪ್ಪು ಎಂದು ಪರಿಗಣಿಸಲಾಗುತ್ತದೆ. ಈಕೆಯ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಮೇಲೆ ಹೇಳಿದಂತೆ ಆಕೆಯ ಪಾಪಕರ್ಮದಲ್ಲಿ ನೀವು ಕೂಡ ಪಾಲುದಾರರು ಆಗುತ್ತೀರಿ.

Most Read: ವಿಧುರನ ಪ್ರಕಾರ ಈ 5 ಸಂಗತಿಗಳನ್ನು ಹೊಂದಿರುವವರು ಸದಾ ಸಂತೋಷವಾಗಿ ಇರುತ್ತಾರಂತೆ

ದುಬಾರಿ ಬಡ್ಡಿಗೆ ಸಾಲ ಕೊಡುವಾತ

ದುಬಾರಿ ಬಡ್ಡಿಗೆ ಸಾಲ ಕೊಡುವಾತ

ಈತ ಯಾವುದೇ ಕಾರಣವಿಲ್ಲದೆ ತುಂಬಾ ದುಬಾರಿ ಬಡ್ಡಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುವನು. ಇಂತಹವರು ಬೇರೆಯವರ ಸಮಸ್ಯೆಯನ್ನು ಗುರಿಯಾಗಿಸಿಕೊಂಡು ಮರುಕ್ಷಣದಲ್ಲಿ ಅವರಿಂದ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುವರು. ತಮ್ಮ ಚಾಣಾಕ್ಷತೆಯಿಂದ ಇವರು ಜನರನ್ನು ಗುರಿಯಾಗಿಸುವರು. ಹಣಕ್ಕಾಗಿ ಇವರು ತಮ್ಮ ಸ್ನೇಹಿತರನ್ನು ಕೂಡ ತಮ್ಮ ಜಾಲದಲ್ಲಿ ಬೀಳಿಸುವರು. ಇಂತಹವರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬೇಡಿ.

ಕೆಟ್ಟ ಕೋಪ ಬರುವ ವ್ಯಕ್ತಿಯ ಮನೆ

ಕೆಟ್ಟ ಕೋಪ ಬರುವ ವ್ಯಕ್ತಿಯ ಮನೆ

ತನ್ನ ಕೋಪದ ಮೇಲೆ ನಿಯಂತ್ರಣ ಇಲ್ಲದೆ ಇರುವಂತಹ ವ್ಯಕ್ತಿಯ ಮನೆಯಲ್ಲಿ ಆಹಾರ ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಕೋಪದಲ್ಲಿ ಹಿಂಸೆಗೆ ತಿರುಗುವ ವ್ಯಕ್ತಿಗಳು ತುಂಬಾ ಅಪಾಯಕಾರಿಯಾಗಿರುವರು. ಕೋಪದಲ್ಲಿ ಇವರು ನಿಮ್ಮ ಮೇಲೆ ಕೂಡ ದಾಳಿ ಮಾಡಬಹುದು. ಇಂತಹವರ ಮನೆಯಲ್ಲಿ ನೀವು ಆಹಾರ ಸೇವನೆ ಮಾಡಲೇಬಾರದು.

ದುಷ್ಟ ವ್ಯಕ್ತಿ ಮತ್ತು ದುಷ್ಟ ರಾಜ

ದುಷ್ಟ ವ್ಯಕ್ತಿ ಮತ್ತು ದುಷ್ಟ ರಾಜ

ದುಷ್ಟ ವ್ಯಕ್ತಿ ಮತ್ತು ದುಷ್ಟ ರಾಜನು ಜನರನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವನು. ಈ ಕಾರಣದಿಂದಾಗಿ ಇಂತಹವರನ್ನು ನೀವು ಕಡೆಗಣಿಸಿ. ಪ್ರಾಮಾಣಿಕರ ಭಾವನೆಗಳಿಗೆ ಘಾಸಿ ಉಂಟು ಮಾಡಿ ಸಂಪಾದಿಸಿದ ಹಣದಿಂದ ಇವರು ಆಹಾರ ಖರೀದಿ ಮಾಡುವರು. ಇಂತಹ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮನ್ನು ಕೂಡ ಬಂಧಿಯಾಗಿಸಬಹುದು.

ಬೆನ್ನಿಗೆ ಚೂರಿ ಇರಿಯುವವರು ಮತ್ತು ಹರಟೆಕೋರರು

ಬೆನ್ನಿಗೆ ಚೂರಿ ಇರಿಯುವವರು ಮತ್ತು ಹರಟೆಕೋರರು

ಬೆನ್ನಿಗೆ ಚೂರಿ ಇರಿಯುವವರಿಗೆ ಪ್ರತಿಯೊಂದು ಪರಿಹಾರದಲ್ಲೂ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇವರು ತಕ್ಷಣವೇ ಏನಾದರೂ ಕುಂದುಕೊರತೆ ಹುಡುಕಿ ಅದರ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುವರು. ಇವರು ತಮ್ಮ ತೀಕ್ಷ್ಣ ಬುದ್ಧಿಯಿಂದಾಗಿ ಸುರಕ್ಷಿತ ಆಟವಾಡುವರು. ಇದರಲ್ಲಿ ನೀವು ಮಾತ್ರ ಸಿಲುಕುವಿರಿ. ಇದರಿಂದ ಅವರು ಯಾವಾಗಲೂ ಸುರಕ್ಷಿತವಾಗಿರುವರು ಮತ್ತು ನೀವು ಸಮಸ್ಯೆಗೆ ಸಿಲುಕುವಿರಿ. ಸುಳ್ಳು ಸುದ್ದಿಯಿಂದಾಗಿ ಒಳ್ಳೆಯ ವ್ಯಕ್ತಿಯ ಪ್ರತಿಷ್ಠೆಗೆ ಹಾನಿಯಾಗಬಹುದು.

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

ಡ್ರಗ್ ವ್ಯಾಪಾರಿ ಮತ್ತು ಸ್ಮಗ್ಲರ್

ಡ್ರಗ್ ವ್ಯಾಪಾರಿ ಮತ್ತು ಸ್ಮಗ್ಲರ್

ಮಾದಕ ದ್ರವ್ಯ ಸಾಗಾಟ ಮಾಡುವವರು ಯಾವಾಗಲೂ ತಮ್ಮ ಸ್ನೇಹಿತರನ್ನು ಕೂಡ ಅದರ ಚಟಕ್ಕೆ ಸಿಲುಕಿಸುವರು. ಇದರಿಂದ ಅವರಿಗೆ ಮತ್ತೊಬ್ಬ ವ್ಯಾಪಾರಿಯು ಸಿಗುವನು. ಇವರು ಹಣಕ್ಕಾಗಿ ಏನು ಬೇಕಾದರೂ ಮಾಡುವರು. ಇಂತವರ ಸಂಗವು ಒಬ್ಬರ ಜೀವನವನ್ನು ಹಾಳು ಮಾಡಬಹುದು.

ಬಡವ ಮತ್ತು ನಿರ್ಗತಿಕ

ಬಡವ ಮತ್ತು ನಿರ್ಗತಿಕ

ಈ ಪಟ್ಟಿಯಲ್ಲಿರುವ ಈ ಹೆಸರನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ವೇದವ್ಯಾಸರು ಹೇಳಿರುವ ಪ್ರಕಾರ ತುಂಬಾ ಸಂಕಷ್ಟದಲ್ಲಿ ದಿನ ದೂಡುತ್ತಾ ಇರುವವರು ಮತ್ತು ಜೀವನದಲ್ಲಿ ಬಡತನ ಉಳ್ಳವರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ತನ್ನ ಆಹಾರಕ್ಕೆ ಕಷ್ಟಪಡುತ್ತಿರುವಂತಹ ವ್ಯಕ್ತಿಗೆ ಮನೆಗೆ ಬಂದಂತಹ ಅತಿಥಿಗೆ ಯಾವ ರೀತಿಯ ಸತ್ಕಾರ ಮಾಡಲು ಸಾಧ್ಯ? ಇದರಲ್ಲಿ ದೇಣಿಗೆ ಕೂಡ ಸೇರಿದೆ. ನಾವು ಕಡುಬಡವರಿಂದ ದೇಣಿಗೆ ಕೂಡ ಸ್ವೀಕರಿಸಬಾರದು ಎಂದು ಇಲ್ಲಿ ಹೇಳಲಾಗಿದೆ.

English summary

Garuda Puran: Don't Eat With These People's Houses

Garuda Puran is one of the oldest literatures written by the highly respected sage Ved Vyas, who has authored eighteen great literatures. Consisting of 279 chapters and 18,000 shlokas, this text offers general guidelines for humans along with various other things. These guidelines help one to have a peaceful coexistence with fellow beings.
X
Desktop Bottom Promotion