For Quick Alerts
ALLOW NOTIFICATIONS  
For Daily Alerts

ಮೇ 8ಕ್ಕೆ ಗಂಗಾ ಸಪ್ತಮಿ: ಮನೆಯಲ್ಲಿ ಈ ದಿನ ಗಂಗಾ ಜಲದಿಂದ ಈ ರೀತಿ ಮಾಡಿದರೆ ಮೋಕ್ಷ ಪ್ರಾಪ್ತಿ, ಗ್ರಹ ದೋಷವಿದ್ದರೆ ನಿವಾರಣೆಯಾಗುವುದ

|

ಭಾರತದಲ್ಲಿ ಗಂಗಾ ನದಿಯನ್ನು ಪವಿತ್ರವಾದ ನದಿಯೆಂದು ಪರಿಗಣಿಸಲಾಗಿದೆ. ಗಂಗೆಯಲ್ಲಿ ಮಿಂದರೆ ಪಾಪವೆಲ್ಲಾ ಹೋಗಿ ಮೋಕ್ಷ ಪ್ರಾಪ್ತಿಯಾಗುವುದು ಎಂಬುವುದು ಬಲವಾದ ನಂಬಿಕೆ. ಅದರಲ್ಲೂ ಗಂಗಾ ಸಪ್ತಮಿಯಂದು ತುಂಬಾ ಜನ ಗಂಗಾ ನದಿಗೆ ಹೋಗಿ ಗಂಗಾ ಆರತಿ ಬೆಳಗುತ್ತಾರೆ. ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲೂ ಗಂಗೆಗೆ ಪೂಜೆ ಸಲ್ಲಿಸಬಹುದು. ಗಂಗಾ ಸಪ್ತಮಿ ಯಾವಾಗ? ಈ ದಿನ ಪೂಜಾ ವಿಧಿಗಳೇನು? ಇದರ ಮಹತ್ವವೇನು ಎಂದು ನೋಡೋಣ ಬನ್ನಿ.

ಗಂಗೆ ಭೂಮಿಗೆ ಬಂದ ಕತೆ

ಗಂಗೆ ಭೂಮಿಗೆ ಬಂದ ಕತೆ

ಭಗೀರಥ ಮಹರ್ಷಿ ಕಠಿಣ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಕರೆತಂದ ಎಂಬ ಪೌರಾಣಿಕ ಕತೆಯಿದೆ. ಭಗೀರಥನು ತನ್ನ ಪೂರ್ವಜರಿಗೆ ಮೋಕ್ಷವನ್ನು ನೀಡಲು ಗಂಗೆಯನ್ನು ಭೂಮಿಗೆ ಕರೆಸುತ್ತಾನೆ. ಗಂಗೆ ಭೂಮಿಗೆ ಬರುವುದಾದರೆ ನಾನು ಹರಿಯುವ ರಭಸ ತಡೆಯುವವರು ಯಾರು ಎಂದು ಕೇಳುತ್ತಾಳೆ. ಏಕೆಂದರೆ ಅವಳು ಹರಿಯುವ ರಭಸಕ್ಕೆ ಇಡೀ ಭೂಮಂಡವೇ ಕೊಚ್ಚಿ ಹೋಗಬಹುದು ಎಂದು ಹೇಳುತ್ತಾನೆ, ಆಗ ಭಗೀರಥ ಶಿವನ ಮೊರೆ ಹೋಗುತ್ತಾನೆ, ಶಿವನ ತನ್ನ ಮುಡಿಯಲ್ಲಿ ಗಂಗೆಯನ್ನು ಬಂಧಿಸಿ ಭೂಮಿಗೆ ಹರಿಯಲು ಬಿಡುತ್ತಾನೆ ಹೀಗೆ ಗಂಗೆ ಭೂಮಿಯನ್ನು ತಲುಪಿದಳು ಎಂಬ ಪೌರಾಣಿಕ ಕತೆಯಿದೆ.

2022ರಲ್ಲಿ ಗಂಗಾ ಸಪ್ತಮಿ ಯಾವಾಗ?

2022ರಲ್ಲಿ ಗಂಗಾ ಸಪ್ತಮಿ ಯಾವಾಗ?

ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನಾಂಕದಂದು ಗಂಗಾ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 8ರಂದು ಆಚರಿಸಲಾಗುವುದು.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಮೇ 07 ರ ಶನಿವಾರದಂದು ಮಧ್ಯಾಹ್ನ 02:56 ರಿಂದ ಪ್ರಾರಂಭವಾಗುತ್ತದೆ. ಈ ದಿನಾಂಕವು 08 ಮೇ, ಭಾನುವಾರ ಸಂಜೆ 05 ಗಂಟೆಗೆ ಕೊನೆಗೊಳ್ಳುತ್ತದೆ. ವೈಶಾಖ ಶುಕ್ಲ ಪಕ್ಷದ ಸಪ್ತಮಿಯ ಉದಯ ದಿನಾಂಕವನ್ನು ಮೇ 08 ರಂದು ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಗಂಗಾ ಸಪ್ತಮಿಯನ್ನು ಮೇ 08 ರಂದು ಆಚರಿಸಲಾಗುವುದು.

ಗಂಗಾ ಸಪ್ತಮಿ 2022 ಶುಭ ಮುಹೂರ್ತ

ಗಂಗಾ ಸಪ್ತಮಿ 2022 ಶುಭ ಮುಹೂರ್ತ

ಗಂಗಾ ಸಪ್ತಮಿಯ ಪೂಜೆಯ ಶುಭ ಸಮಯ: ಮೇ 08 ರಂದು ಬೆಳಗ್ಗೆ 10:57 ರಿಂದ ಮಧ್ಯಾಹ್ನ 02:38 ರವರೆಗೆ ಇರುತ್ತದೆ. ಪೂಜೆಯ ಶುಭ ಮುಹೂರ್ತವು 02 ಗಂಟೆ 41 ನಿಮಿಷಗಳ ಕಾಲ ಇರಲಿದೆ.

ಗಂಗಾ ಸಪ್ತಮಿ ಪೂಜೆ - ವಿಧಾನ

ಗಂಗಾ ಸಪ್ತಮಿ ಪೂಜೆ - ವಿಧಾನ

* ಗಂಗಾ ಸಪ್ತಮಿಯ ಪವಿತ್ರ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಆದರೆ ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸೂರ್ಯೋದಯಕ್ಕೆ ಮುನ್ನಸ್ನಾನ ಮಾಡಿ.

*ಸ್ನಾನ ಮಾಡುವಾಗ, ಗಂಗೆಯನ್ನು ಧ್ಯಾನಿಸಿ.

ಸ್ನಾನದ ನಂತರ ದೇವರ ಮನೆ ಸ್ವಚ್ಛ ಮಾಡಿ ದೀಪ ಬೆಳಗಿ.

* ಗಂಗಾಜಲವನ್ನು ದೇವರ ಕೋಣೆ ಸೇರಿ ಎಲ್ಲಾ ಕಡೆ ಸಿಂಪಡಿಸಿ.

* ಗಂಗಾ ಮಾತೆಯನ್ನು ಧ್ಯಾನಿಸುತ್ತಾ ಹೂವುಗಳನ್ನು ಅರ್ಪಿಸಿ.

* ಈ ಪವಿತ್ರ ದಿನದಂದು ಗಂಗೆಗೆ ನೈವೇದ್ಯವಾಗಿ ಅರ್ಪಿಸಿ.

* ಗಂಗೆಗೆ ಆರತಿ ಮಾಡಿ.

* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.

ಗಂಗಾ ಸಪ್ತಮಿಯ ಮಹತ್ವ

ಗಂಗಾ ಸಪ್ತಮಿಯ ಮಹತ್ವ

ಗಂಗೆಮಾಪ ತೊಳೆದು ಮೋಕ್ಷ ನೀಡುತ್ತಾಳೆ. ಈ ದಿನ ಗಂಗಾ ಮಾತೆಯನ್ನು ಪೂಜಿಸುವುದರಿಂದ ಮರಣಾನಂತರ ಮೋಕ್ಷ ಸಿಗುತ್ತದೆ. ಗಂಗಾ ಮಾತೆಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ. ಗಂಗಾ ಮಾತೆಯ ಕೃಪೆಯಿಂದ ಜಾತಕದಲ್ಲಿ ಅಶುಭ ಗ್ರಹಗಳ ಪ್ರಭಾವವೂ ಕಡಿಮೆಯಾಗುತ್ತದೆ.

English summary

Ganga Saptami 2022 Date, Tithi, Shubh Muhurat, Puja Vidhi and Significance in kannada

Ganga Saptami 2022 Date, Tithi, Shubh Muhurat, Puja Vidhi and Significance in kannada, read on...
X
Desktop Bottom Promotion