Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಗಂಗಾ ದಸರಾ 2021: ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರನೆಗೂ ಅದರದ್ದೇ ಆದ ಮಹತ್ವಿದೆ. 2021 ರ ಜೂನ್ 20 ರಂದು ಗಂಗಾ ದಸರಾ ಹಬ್ಬ ನಡೆಯಲಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಜ್ಯೇಷ್ಠ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನ, ಭಾಗೀರಥಿ ಋಷಿಯ ದಣಿವರಿಯದ ಶ್ರಮದಿಂದಾಗಿ ಗಂಗಾ ಮಾತೆ ಭೂಮಿಗೆ ಬರುತ್ತಾಳೆ. ಗಂಗೆ ಭೂಮಿಗೆ ಬಂದು ಭೂಮಿಯನ್ನು ಪಾವನ ಮಾಡಿದ ದಿನವನ್ನು ಗಂಗಾ ದಸರಾವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಹರಿಯುವ ಅನೇಕ ಪುಣ್ಯ ನದಿಗಳಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಳೆದು ಹೋಗಿ , ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ.
ಗಂಗಾ ದಸರಾ ಶುಭ ಸಮಯ, ಪೂಜಾ ವಿಧಾನ ಮತ್ತು ಮಹತ್ವದ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

ಗಂಗಾ ದಸರಾ ಅವರ ಶುಭ ಸಮಯ:
ದಶಮಿ ತಿಥಿ ಪ್ರಾರಂಭ: 19 ಜೂನ್ 2021, ಸಂಜೆ 06:50 ಕ್ಕೆ
ದಶಮಿ ತಿಥಿ ಮುಕ್ತಾಯ: 20 ಜೂನ್ 2021, ಸಂಜೆ 04:25 ಕ್ಕೆ

ಪೂಜಾ ವಿಧಾನ
ಗಂಗಾ ದಸರಾ ದಿನದಂದು ಮುಂಜಾನೆ ಎದ್ದು ಗಂಗೆಯಲ್ಲಿ ಸ್ನಾನ ಮಾಡಬೇಕು, ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಬೆರೆಸಿ ಸ್ನಾನ ಮಾಢಬೇಕು. ನಂತರ ಒಂದು ತಾಮ್ರದ ಜೊಂಬಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಗಂಗಾ ಜಲ ಬೆರೆಸಿ ಆ ನೀರಿನಿಂದ ಸೂರ್ಯ ದೇವರಿಗೆ ಅರ್ಗ್ಯಾವನ್ನು ಅರ್ಪಿಸಿ. ಅದರ ನಂತರ ದೇವರ ಮನೆಗೆ ಆ ನೀರನ್ನು ಸಿಂಪರಿಸಬೇಕು, ಮನೆಯೊಳಗಡೆ ಆ ಪವಿತ್ರ ನೀರನ್ನು ಸಿಂಪಡಿಸಿ. ನಂತರ ಗಂಗಾ ಪೂಜೆ ಮಾಡಬೇಕು.

ಗಂಗಾ ಪೂಜೆಯಲ್ಲಿ 10 ಸಂಖ್ಯೆಗೆ ವಿಶೇಷ ಸ್ಥಾನವಿದೆ
* ಹತ್ತು ದಿನ ಭಕ್ತರು ಗಂಗೆಗೆ ಪೂಜೆಗೆ ಸಲ್ಲಿಸುತ್ತಾರೆ
* ಗಂಗಾ ಸ್ನಾನ ಮಾಡುವುದರಿಂದ ಹತ್ತು ಪಾಪಗಳಿಂದ ಮುಕ್ತಿ ಪಡೆಯಬಹುದು.
* ಬೆಳಗ್ಗೆ 10 ಬಗೆಯ ಪದ್ಧತಿಯಲ್ಲಿ ಗಂಗೆಯನ್ನು ಪೂಜಿಸಿದರೆ ಮೋಕ್ಷ ದೊರೆಯುವುದು
* ಗಂಗೆಗೆ ಪ್ರಿಯವಾದ ಹತ್ತು ಬಗೆಯ ಹೂ, ಹಣ್ಣುಗಳನ್ನು ಇಟ್ಟು ಪೂಜಿಸಲಾಗುವುದು.
* ಗಂಗೆ ಪೂಜೆಯಲ್ಲಿ ಬಡವರಿಗೆ 10 ಬಗೆಯ ತಿನಿಸುಗಳನ್ನು ನೀಡಲಾಗುವುದು
* ಗಂಟೆಗಳ ಕಾಲ ನೀರು ಸಹ ಸೇವಿಸದೆ ಉಪವಾಸವ್ರತ ಪಾಲಿಸಿದರೆ ಒಳ್ಳೆಯದು.
* ಗಂಗಾ ನದಿ ಹಿಮಾಚಲ ಪ್ರದೇಶ, ಉತ್ತರಖಾಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಹೀಗೆ 10 ರಾಜ್ಯಗಳಲ್ಲಿ ನಡೆಯುತ್ತದೆ.
* 10 ಬಿದಿರಿನ ಕಡ್ಡಿಯಿಂದ ಗಂಗೆ ನದಿ ತೀರದಲ್ಲಿ ಗಂಗೆಗೆ ಚಿಕ್ಕ ಮಂದಿರ ಕಟ್ಟಿ ಪೂಜೆ ಸಲ್ಲಿಸುತ್ತಾರೆ

ಗಂಗಾ ದಸರಾ ಮಹತ್ವ
ಗಂಗಾ ದಸರಾ ದಿನದಂದು, ಯಾರು ಗಂಗಾ ನದಿಯಲ್ಲಿ ಅಥವಾ ಯಾವುದೇ ಪವಿತ್ರ ನದಿ ಅಥವಾ ಕೊಳದಲ್ಲಿ ಸ್ನಾನ ಮಾಡಿ ತನ್ನ ಯೋಗ್ಯತೆಗೆ ಅನುಗುಣವಾಗಿ ದಾನ ಮಾಡಿದರೆ, ಅವನು ತನ್ನ ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ. ತಾಯಿಯ ಗಂಗೆಯ ಆರಾಧನೆಯಿಂದ ಮೋಕ್ಷ ಸಿಗುವುದು.



Click it and Unblock the Notifications