For Quick Alerts
ALLOW NOTIFICATIONS  
For Daily Alerts

ಗಣೇಶ ವಿಸರ್ಜನೆ 2020 ದಿನಾಂಕ, ಸಮಯ, ಪ್ರಾಮುಖ್ಯತೆ ಮತ್ತು ಮಹತ್ವ

|

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಶುಸರ್ವದಾ||

ಯಾವುದೇ ಶುಭಕಾರ್ಯ ಆರಂಭವಾಗಬೇಕಿದ್ದರೂ ಹಿಂದೂ ಧರ್ಮದಲ್ಲಿ ಮೊದಲು ಪೂಜಿಸುವುದು ವಿಘ್ನವಿನಾಶಕ ಗಣಪತಿ ದೇವರನ್ನು. ಪ್ರತಿವರ್ಷ ಗಣೇಶ ಚತುದರ್ಶಿಯಿಂದ ಹಿಡಿದು ಅನಂತ ಚತುದರ್ಶಿ ತನಕ ಗಣಪತಿ ದೇವರ ಆರಾಧನೆ ಮಾಡಿದ ಬಳಿಕ ಜಲಸ್ತಂಭನವು ನಡೆಯುವುದು. ಅನಂತ ಚತುದರ್ಶಿ ದಿನದಂದು ದೇಶದೆಲ್ಲೆಡೆ ಗಣಪತಿ ವಿಸರ್ಜನೆ ಕಾರ್ಯಕ್ರಮವು ನಡೆಯುವುದು.

ಮುಂದಿನ ವರ್ಷ ಬೇಗನೆ ಬಾ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿವರ್ಷ ಭಕ್ತರು ಗಣಪತಿ ವಿಸರ್ಜನೆ ಮಾಡುವರು. ಗಣಪತಿ ವಿಸರ್ಜನೆ ದಿನ ಭಕ್ತರು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಹಾಡಿ ಕುಣಿಯುವರು.

ಭಾದ್ರಪದ ತಿಂಗಳ 4ನೇ ದಿನದಂದು ಬರುವ ಗಣೇಶ ಚತುದರ್ಶಿ ಬಳಿಕ ಹತ್ತು ದಿನಗಳ ಕಾಲ ಈ ಹಬ್ಬವು ನಡೆಯುವುದು. ಸಾಮಾನ್ಯವಾಗಿ ಈ ಹಬ್ಬವು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬರುವುದು. ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವಂತಹ ಗಣೇಶ ಚತುದರ್ಶಿ ಹಬ್ಬದ ವೇಳೆ ಹತ್ತು ದಿನಗಳ ಕಾಲ ಮಂಟಪಗಳಲ್ಲಿ ಬೃಹತ್ ಆಕಾರದ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ಅದೇ ರೀತಿಯಾಗಿ ಹೆಚ್ಚಿನ ಮನೆಗಳಲ್ಲಿ ಕೂಡ ಸಣ್ಣ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವರು.

ಸಾರ್ವಜನಿಕವಾಗಿ ಆಚರಿಸಲ್ಪಡುವಂತಹ ಈ ಹಬ್ಬವು ವಿನಾಯಕ ಚತುದರ್ಶಿಯಂದು ನಡೆಯುವ ಗಣಪತಿ ಮೂರ್ತಿಯ ಜಲಸ್ತಂಭನದೊಂದಿಗೆ ಕೊನೆಯಾಗುವುದು. ಗಣಪತಿ ಮೂರ್ತಿಗೆ ಮಂಟಪದಲ್ಲಿ ಅಂತಿಮ ಮಂಗಳಾರತಿ ನಡೆಸಿದ ಬಳಿಕ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರ ಅಥವಾ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಮಹಾರಾಷ್ಟ್ರದೆಲ್ಲೆಡೆ ಗಣಪತಿ ಚತುದರ್ಶಿಯು ತುಂಬಾ ಸಂಭ್ರಮ ಹಾಗೂ ಎಲ್ಲಾ ಕಡೆಗಳಲ್ಲಿ ಆಚರಿಸಲಾಗುತ್ತದೆ.

ಹಿಂದೆ ಸಮುದ್ರ ಅಥವಾ ಕೆರೆಗಳಿಗೆ ಗಣಪತಿ ಮೂರ್ತಿಯನ್ನು ಕೊಂಡುಹೋಗಿ ಅಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಮೂರ್ತಿ ಬಳಸುವ ರಾಸಾಯನಿಕಗಳಿಂದಾಗಿ ಅದು ಪರಿಸರಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ಕೃತಕ ನೀರಿನ ಕುಂಡದಲ್ಲಿ ಇದು ವಿಸರ್ಜಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯ ಆರಾಧನೆಯು ಹೆಚ್ಚಾಗುತ್ತಲಿದೆ.

ಗೌರಿ-ಗಣೇಶ ಪೂಜೆಗೆ ಶುಭ ಮುಹೂರ್ತ

ಗೌರಿ-ಗಣೇಶ ಪೂಜೆಗೆ ಶುಭ ಮುಹೂರ್ತ

ಈ ವರ್ಷ (2020) ಸ್ವರ್ಣ ಗೌರಿ ಪೂಜೆಯನ್ನು ಆಗಸ್ಟ್ 21 ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಪ್ರಾತಃಕಾಲದಲ್ಲಿ 8.27ರಿಂದ 8.34 ಹಾಗೂ ಪ್ರದೋಶ ಸಮಯದಲ್ಲಿ 6.27ರಿಂದ 8.46ರ ಸಮಯದಲ್ಲಿ ಗೌರಿ ಪೂಜೆ ಮಾಡಿದರೆ ಶುಭ ಲಭಿಸುತ್ತದೆ. ಗಣೇಶ ಚತುರ್ಥಿ ಆಗಸ್ಟ್ 22 ಶನಿವಾರದಂದು ಅಚರಿಸಲಾಗುತ್ತಿದ್ದು, ಮಧ್ಯಾಹ್ನ 11ಗಂಟೆ 6ನಿಮಿಷದಿಂದ 1ಗಂಟೆ 33ನಿಮಿಷದ ವರೆಗೆ ಒಟ್ಟು 2 ಗಂಟೆ 27 ನಿಮಿಷ ಗಣೇಶನ ಪೂಜೆಗೆ ಶುಭ ಮುಹೂರ್ತವಿದೆ.

ಗಣೇಶ ವಿಸರ್ಜನೆಗೆ ಕೆಲವು ನಿಗದಿಯಾದ ದಿನಗಳಿಗೆ, ಈ ಮುಹೂರ್ತದಲ್ಲಿ ಗಣೇಶನನ್ನು ವಿಸರ್ಜನೆ ಮಾಡಿದರೆ ಶುಭ ಅಥವಾ ಗಣೇಶ ಕೈಲಾಸಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇದೆ. ಹಿಂದೂ ಪಂಚಾಂಗದ ಪ್ರಕಾದ ಶುಭ ದಿನ ಹಾಗೂ ಸಮಯದ ಬಗ್ಗೆ ತಿಳಿಯೋಣ.

ಗಣೇಶ ಚತುದರ್ಶಿ ದಿನ

ಗಣೇಶ ಚತುದರ್ಶಿ ದಿನ

ಗಣೇಶ ವಿಸರ್ಜನೆಯನ್ನು ಗಣೇಶ ಚತುರ್ದಶಿ ದಿನ ಪೂಜೆ ನೆರವೇರಿಸಿದ ಬಳಿಕ ನೆರವೇರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಪೂಜೆ ನೆರವೇರಿಸಿದ ಬಳಿಕವಷ್ಟೇ ಹಿಂದೂ ದೇವರ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಗಣೇಶ ಚತುದರ್ಶಿಯಂದೇ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಕಡಿಮೆ. ಆದರೆ ಕೆಲವೊಂದು ಸಂದರ್ಭ ಹಾಗೂ ಪ್ರದೇಶಗಳಲ್ಲಿ ಇದನ್ನು ಆಚರಿಸಲಾಗುತ್ತದೆ.

ಒಂದುವರೆ ದಿನದಲ್ಲಿ

ಒಂದುವರೆ ದಿನದಲ್ಲಿ

ಗಣೇಶ ಚತುದರ್ಶಿಯ ಮರುದಿನ ಗಣೇಶ ಮೂರ್ತಿಯ ವಿಸರ್ಜನೆ ಮಾಡಿದರೆ ಆಗ ಅದನ್ನು ಒಂದುವರೆ ದಿನದ ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಹೆಚ್ಚಿನ ಭಕ್ತರು ಒಂದುವರೆ ದಿನದ ಗಣಪತಿ ಪೂಜಿಸಿ, ವಿಸರ್ಜನೆ ಮಾಡುವರು. ಒಂದುವರೆ ದಿನದ ಗಣೇಶನ ಪೂಜೆ ಮಾಡುವವರು ಮಧ್ಯಾಹ್ನ ಮಂಗಳಾರತಿ ಮಾಡಿದ ಬಳಿಕ ವಿಸರ್ಜನೆಗೆ ಕೊಂಡೊಯ್ಯುವರು.

3, 5, 7, 11 ನೇ ದಿನ

3, 5, 7, 11 ನೇ ದಿನ

ಗಣೇಶ ಚತುದರ್ಶಿಯ ಮೂರು, ಐದು ಮತ್ತು ಏಳನೇ ದಿನದಂದು ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಅನಂತ ಚತುದರ್ಶಿ(11ನೇ ದಿನ)ದಂದು ತುಂಬಾ ಶ್ರದ್ಧಾಭಕ್ತಿಯಿಂದ ಗಣೇಶನ ಪೂಜಿಸಿದ ಬಳಿಕ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಗಣೇಶ ವಿಸರ್ಜನೆ ವೇಳೆ ಸಾವಿರಾರು ಮಂದಿ ಸೇರಿ ಒಟ್ಟಾಗಿ ಸಂತೋಷದಿಂದ ಕುಣಿದು, ಕುಪ್ಪಳಿಸಿ ಗಣೇಶನನ್ನು ಕೈಲಾಸಕ್ಕೆ ಕಳಿಸಿಕೊಡುವ ರೂಢಿ ಇದೆ.

ಗಣೇಶ ವಿಸರ್ಜನೆ ಪ್ರಾಮುಖ್ಯತೆಯೇನು?

ಗಣೇಶ ವಿಸರ್ಜನೆ ಪ್ರಾಮುಖ್ಯತೆಯೇನು?

ಗಣೇಶ ವಿಸರ್ಜನೆಯ ನಂಬಿಕೆ ಏನೇಂದರೆ ಗಣಪತಿ ದೇವರು ತನ್ನ ತಂದೆ ಶಿವ ಮತ್ತು ತಾಯಿ ಪಾರ್ವತಿ ನೆಲೆಸಿರುವಂತಹ ಕೈಲಾಸಕ್ಕೆ ಹೋಗುತ್ತಾರೆ. ಈ ದಿನ ಭಕ್ತರು ಭಗವಂತನ ಆಧ್ಯಾತ್ಮಿಕ ಹಾಗೂ ದೈವಿಕ ಸ್ಥಿತಿಗೆ ಗೌರವ ಸಲ್ಲಿಸುವರು. ಇದು ಗಣಪತಿ ದೇವರ `ಆಕಾರ'ದಿಂದ `ನಿರಾಕಾರ'ದ ಪ್ರಯಾಣವಾಗಿದೆ.

ಈ ಹಬ್ಬದ ಆಚರಣೆಯು ಮನುಷ್ಯನ ಹುಟ್ಟು, ಜೀವನ ಮತ್ತು ಸಾವಿಗೂ ಅನ್ವಯವಾಗುತ್ತದೆ ಮತ್ತು ಜೀವನದಲ್ಲಿ ಎಲ್ಲವೂ ನಶ್ವರ ಎನ್ನುವುದನ್ನು ಇದು ತೋರಿಸಿಕೊಡುತ್ತದೆ. ಹಿಂದೂ ಧರ್ಮಿಯರು ಮಾತ್ರವಲ್ಲದೆ ಇತರರು ಕೂಡ ಗಣೇಶ ಚತುದರ್ಶಿಯ ಸಂಭ್ರಮದಲ್ಲಿ ಬಾಗಿಯಾಗುತ್ತಾರೆ, ಹಬ್ಬವನ್ನು ಪ್ರತಿ ವರ್ಷ ಎದುರು ನೋಡುತ್ತಾರೆ.

English summary

Ganesh Chaturthi 2020 Visarjan : Date and Time, Importance and Significance

The concluding or the end day of the massive Ganesh Chaturthi festival is when the Ganesh Visarjan takes place. This day is also popularly celebrated as Anant Chaturdashi .The sacred day of Ganpati Visarjan is celebrated with great happiness and grandeur as the devotees bid farewell to their favorite Lord Ganesha to go back to his place with a promise of returning next year.
X