For Quick Alerts
ALLOW NOTIFICATIONS  
For Daily Alerts

ಗಣೇಶ ವಿಸರ್ಜನೆ ಸಮಯದಲ್ಲಿ ಯಾವ ತಪ್ಪುಗಳು ಆಗಬಾರದು?

|

ಗಣೇಶನ ಪೂಜೆಗೆ ತುಂಬಾ ಕಟ್ಟು ನಿಟ್ಟಿನ ನಿಯಮಗಳು ಇಲ್ಲದಿದ್ದರೂ ಮಾಡುವ ಪೂಜೆಯನ್ನು ಭಕ್ತಿ, ಶ್ರದ್ಧೆಯಿಂದ ಮಾತ್ರ ಫಲ ಸಿಗುವುದು. ಗಣೇಶ ಚತುರ್ಥಿಯಂದು ಗಣೇಶನ ತಂದು ಶುಭ ಸಮಯದಲ್ಲಿ ಕೂರಿಸಿ ಪೂಜೆ ಮಾಡುತ್ತೇವೆ, ಅದೇ ರೀತಿ ಶುಭ ಸಮಯ ನೋಡಿ ವಿಸರ್ಜನೆ ಮಾಡಬೇಕು. ಕೂರಿಸುವಾಗ, ವಿಸರ್ಜನೆ ಮಾಡುವಾಗ ತಪ್ಪುಗಳಾಗದಂತೆ ಎಚ್ಚರವಹಿಸಬೇಕು.

ಗಣೇಶ ಚತುರ್ಥಿಗೆ ಮನೆಗೆ ತಂದ ಗಣೇಶನ ವಿಸರ್ಜನೆ ಮಾಡುವಾಗ ಏ ನು ಮಾಡಬೇಕು, ಏನು ಮಾಡಲೇಬಾರದು ಎಂದು ನೋಡೋಣ:

ಗಣೇಶನ ವಿಸರ್ಜನೆ ಸಮಯದಲ್ಲಿ ಏನು ಮಾಡಬೇಕು?

ಗಣೇಶನ ವಿಸರ್ಜನೆ ಸಮಯದಲ್ಲಿ ಏನು ಮಾಡಬೇಕು?

* ಗಣೇಶನ ಮನೆಯಲ್ಲಿರುವಾಗ ಸಾತ್ವಿಕ ಆಹಾರಗಳನ್ನಷ್ಟೇ ಮಾಡಬೇಕು.

* ಗಣಪನನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವ ಮುನ್ನ ಆರತಿ ಎತ್ತಬೇಕು.

* ಮಣ್ಣಿನ ಗಣಪನ ಮೂರ್ತಿಯಾಗಿರಬೇಕು. ಆಗ ಮಾತ್ರ ಮೂರ್ತಿ ನೀರಿನಲ್ಲಿ ಕರಗುವುದು. ಬಣ್ಣ ಹಚ್ಚದ ಮೂರ್ತಿಯಾದರೆ ಇನ್ನೂ ಒಳ್ಳೆಯದು.

* ಗಣಪನ ಮೂರ್ತಿಯನ್ನು ಸಮುದ್ರ, ನದಿಯಲ್ಲಿ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಬೇಕು. ನದಿ, ಕೊಳದಲ್ಲಿ ಬಿಡುವುದಾದರೆ ಮಣ್ಣಿನ ಗಣಪನ ಮಾತ್ರ ವಿಸರ್ಜನೆ ಮಾಡಿ.

* ಪ್ಯಾರಿಸ್ ಆಫ್‌ ಫ್ಲಾಸ್ಟರ್‌ನಿಂದ ಮಾಡಿದ ಗಣಪನನ್ನು ನದಿಯಲ್ಲಿ ವಿಸರ್ಜಿಸಬೇಡಿ. ಟ್ಯಾಂಕ್‌ ಅಥವಾ ಡ್ರಮ್‌ನಲ್ಲಿ ಮುಳುಗಿಸಿ. ಇದರಿಂದ ಜಲಚರಗಳಿಗೆ ತೊಂದರೆಯಾಗುವುದು ತಪ್ಪುವುದು. ನಿಮ್ಮ ಈ ನಡೆಯಿಂದ ಗಣೇಶನು ಖುಷಿಯಾಗುತ್ತಾನೆ.

ಏನು ಮಾಡಬಾರದು?

ಏನು ಮಾಡಬಾರದು?

* ಗಣೇಶನಿಗೆ ಆರತಿ ಮಾಡದೆ ವಿಸರ್ಜನೆ ಮುಂದಾಗಬಾರದು

* ಗಣೇಶನ ಮೆರವಣಿಗೆಯನ್ನು ಶುಭ ಸಮಯದಲ್ಲಿಯೇ ಮಾಡಿ.

* ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಮನೆಯ ಬಾಗಿಲು ಹಾಕಬಾರದು. ಯಾರಾದರೂ ಒಬ್ಬರು ಮನೆಯಲ್ಲಿಯೇ ಇರಬೇಕು.

* ದೊಡ್ಡ ಮೂರ್ತಿಯನ್ನು ಹೊತ್ತುಕೊಂಡು ಹೋಗಿ ಮುಳುಗಿಸುವ ಬದಲಿಗೆ ಬೋಟ್‌ನಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಮುಳುಗಿಸಿ.

(ಈ ಬಾರಿ 3 ಅಡಿಗಿಂತ ದೊಡ್ಡ ಗಣಪನ ಕೂರಿಸಲು ಅವಕಾಶವಿಲ್ಲದ ಕಾರಣ, ಎತ್ತಿಕೊಂಡು ಹೋಗಿಯೇ ಮುಳುಗಿಸಬಹುದು, ಆದರೆ ನೀರಿನ ಹರಿವು ಹೆಚ್ಚಿರುವ ಕಡೆ ಜಾಗ್ರತೆ)

ಗಣೇಶನ ವಿಸರ್ಜನೆ ಯಾವಾಗಲ್ಲ ಮಾಡಬಹುದು?

ಗಣೇಶನ ವಿಸರ್ಜನೆ ಯಾವಾಗಲ್ಲ ಮಾಡಬಹುದು?

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಒಂದೂವರೆ, 3, 5. 7, 11ನೇ ದಿನಗಳಲ್ಲಿ ವಿಸರ್ಜನೆ ಮಾಡಲಾಗುವುದು

ಈ ದಿನಗಳಲ್ಲಿ ನೀವು ವಿಸರ್ಜನೆ ಮಾಡಬಹುದಾಗಿದ್ದು ಈ ಶುಭ ಸಮಯದಲ್ಲಿ ಮಾಡಿ.

ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ

ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ

ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ

ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ

ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ

ಅನಂತ ಚತುರ್ಧಶಿ: ಸೆಪ್ಟೆಂಬರ್ 17

ಅನಂತ ಚತುರ್ಧಶಿ ಗಣಪನ ವಿಸರ್ಜನೆಗೆ ತುಂಬಾನೇ ಸೂಕ್ತ

ಗಣಪನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ ಗಣೇಶನ ಕೂರಿಸಿ 11ನೇ ದಿನ. ಈ 11ನೇ ದಿನ ಅನಂತ ಚತುರ್ಧಶಿ ದಿನವಾಗಿದ್ದು ಈ ವರ್ಷ ಸೆಪ್ಟೆಂಬರ್‌ 17ಕ್ಕೆ ಈ ದಿನ ಬಂದಿದೆ.

English summary

Ganesh Visarjan 2021: DOs and DON'Ts in kannada

Ganesh Visarjan 2021: DOs and DON'Ts in kannada, read on...
Story first published: Saturday, September 11, 2021, 16:26 [IST]
X
Desktop Bottom Promotion