For Quick Alerts
ALLOW NOTIFICATIONS  
For Daily Alerts

ಗಣೇಶ ವಿಸರ್ಜನೆ 2021: ಯಾವ ದಿನ ಮಾಡಬಹುದು? ಶುಭ ಸಮಯ ಯಾವಾಗ?

|

ಗಣೇಶನ ಕೂರಿಸಿದ ಮೇಲೆ ಗಣೇಶ ವಿಸರ್ಜನೆ ಕುಡ ಅಷ್ಟೇ ಮುಖ್ಯವಾಗಿದೆ. ಗಣೇಶ ವಿಸರ್ಜನೆ ಹುಟ್ಟು, ಬದುಕು, ಸಾವಿನ ನಮ್ಮ ಜೀವನ ಚಕ್ರವನ್ನು ಸೂಚಿಸುತ್ತದೆ. ಗಣೇಶನ ಕೂರಿಸಿದ ಮೇಲೆ ಆ ದಿನ ಅಥವಾ 3, ದಿನವಾದ ಮೇಲೆ, 7 ದಿನವಾದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆಯನ್ನು ಗಣೇಶನ ಕೂರಿಸಿದ ಒಂದೂವರೆ ದಿನದ ನಂತರ ವಿಸರ್ಜನೆ ಮಾಡಬಹುದು. ಮೂರನೇ ದಿನ, ಐದನೇ ದಿನ, ಏಳನೇ ದಿನ ಹೀಗೆ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ

ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ

ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ

ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ

ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ

ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ

ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ

ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ

ಗಣೇಶ ಕೂರಿಸಿ ಮಾರನೇಯ ದಿನ ಮಧ್ಯಾಹ್ನದ ಮೇಲೆ ಕೆಲವು ಕಡೆ ವಿಸರ್ಜನೆ ಮಾಡಲಾಗುವುದು. ಮಧ್ಯಾಹ್ನ ಹೊತ್ತು ಗಣೇಶನಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಗಣೇಶನನ್ನು ತೆಗೆದುಕೊಂಡು ಹೋಗಿ ಗಣೇಶನ ವಿಸರ್ಜನೆ ಮಾಡಲಾಗುವುದು.

3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ

3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ

ಅನಂತ ಚತುರ್ಧಶಿಗೆ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಮಹತ್ವವಾದರೂ 3ನೇ, 5ನೇ, 7ನೇ ದಿನ ಕೂಡ ಗಣೇಶನ ವಿಸರ್ಜನೆ ಮಾಡಬಹುದು. ಗಣೇಶ ವಿಸರ್ಜನೆಯನ್ನು ಬೆಸ ಸಂಖ್ಯೆಯಲ್ಲಿ ಮಾಡಬೇಕು. ಗಣೇಶನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ 11ನೇ ದಿನವಾದ ಗಣೇಶ ಚತುರ್ಧಶಿಯಾಗಿದೆ.

ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ

ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ

ಗಣೇಶನ ವಿಸರ್ಜನೆಗೆ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ. ಗಣೇಶನ ವಿಸರ್ಜನೆಗೆ ಮಾತ್ರವಲ್ಲ ವಿಷ್ಣು ಭಕ್ತರಿಗೂ ಈ ದಿನ ತುಂಬಾ ಮಹತ್ವದ್ದಾಗಿದೆ. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು ಹಾಗೂ ಕೈಗೆ ಪವಿತ್ರ ದಾರವನ್ನು ಕಟ್ಟಲಾಗುವುದು. ಈ ದಾರ ಎಲ್ಲಾ ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು ಎಂಬ ನಂಬಿಕೆ ಇದೆ.

11ನೇ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು. ಸಾಮಾನ್ಯವಾಗಿ ನದಿ, ಕೆರೆ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು. ಇದೀಗ ಪರಿಸರ ಉಳಿಸಲು ದೊಡ್ಡ ಡ್ರಮ್ ಅಥವಾ ಬಕೆಟ್‌ನಲ್ಲಿ ಮುಳುಗಿಸಲಾಗುವುದು. ಅಲ್ಲದೆ ಮಣ್ಣಿನ ಗಣಪನ ಬಳಕೆ ಹೆಚ್ಚಾಗಿದೆ. ಗಣೇಶನನನ್ನು ವಿಸರ್ಜನೆ ಮಾಡುವಾಗ ಜೈ ಗಣೇಶ.. ಎಂದು ಹಾಡಿ ಕುಣಿಯುತ್ತಾ ವಿಸರ್ಜನೆ ಮಾಡಲಾಗುವುದು. ಈ ವರ್ಷ ಅನಂತ ಚತುರ್ಧಶಿ ಸೆಪ್ಟೆಂಬರ್‌ 19ಕ್ಕೆ ಇದೆ.

English summary

Ganesh Visarjan 2021 Date, Shubh Muhurat and Know The Time For ganpati Visarjan in kannada

Ganesh Visarjan 2021 Date, Shubh Muhurat and Know The Time For ganpati Visarjan in kannada, read on...
X
Desktop Bottom Promotion