For Quick Alerts
ALLOW NOTIFICATIONS  
For Daily Alerts

ಮಣ್ಣಿನ ಗಣಪ ಮನೆಯಲ್ಲಿಯೇ ಮಾಡುವುದು ಹೇಗೆ?

|

ಆಗಸ್ಟ್‌ 31ಕ್ಕೆ ವಿನಾಯಕ ಚತುರ್ಥಿ. ಗಣೇಶ ಹಬ್ಬವೆಂದರೆ ಸಂಭ್ರಮವೋ-ಸಂಭ್ರಮ. ಈ ದಿನ ಶುಭ ಮಹೂರ್ತದಲ್ಲಿ ಮನೆಯಲ್ಲಿ ಗಣೇಶನನ್ನು ಕೂರಿಸಿ, ಅವನಿಗೆ ಸಿಹಿ ಕಡುಬು, ಕರ್ಜಿಕಾಯಿ, ಮೋದಕ, ಲಡ್ಡುಗಳನ್ನುಅರ್ಪಿಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುವುದು.

Ganesh Chaturthi 2022: How to Make Ecofriendly Ganesha Idols at Home in kannada

ಗಣೇನನ್ನು ಕೂರಿಸಿದ ದಿನದಿಂದ ಗಣೇಶನನ್ನು ವಿಸರ್ಜನೆ ಮಾಡುವವರಿಗೆ ಮನೆಯಲ್ಲಿ ಹಬ್ಬದ ಕಳೆ. ಕೆಲವರು ಗಣೇಶನನ್ನು ಅದೇ ದಿನ ವಿಸರ್ಜನೆ ಮಾಡಿದರೆ ಇನ್ನು ಕೆಲವರು ಅನಂತ ಚತುರ್ದಶಿಯಂದು ವಿಸರ್ಜನೆ ಮಾಡುತ್ತಾರೆ. ಗಣೇಶನನ್ನು ಕೂರಿಸಿದ ಮೇಲೆ, ಒಂದೂವರೆ ದಿನಕ್ಕೆ , 3 , 5, 7 ಹಾಗೂ 11ನೇ ದಿನ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಬೆಸ ಸಂಖ್ಯೆಯ ದಿನ ವಿಸರ್ಜನೆ ಮಾಡಬೇಕು. ಗಣೇಶನ ವಿಸರ್ಜನೆ ಮಾಡುವಷ್ಟೂ ದಿನ ಪೂಜೆ ಮಾಡಿ ಮಂಗಳಾರಾತಿ ಮಾಡಬೇಕು.

ಗಣೇಶ ಹಬ್ಬ ಸಂಸಂಸ್ಕೃತಿಯ ಪ್ರತಿರೂಪ. ಈ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸಿದರೆ ಹಬ್ಬದ ಸಡಗರದ ಜೊತೆಗೆ ನಮ್ಮಿಂದ ಪ್ರಕೃತಿಗೆ ಹಾನಿಯುಂಟಾಗುವುದನನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಆಚರಿಸಲಾಗುವುದು, ಆದರೆ ಈ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ಕರಗುವುದಿಲ್ಲ, ಅಲ್ಲದೆ ಅದರಲ್ಲಿ ಬಳಸಿರುವ ಬಣ್ಣ ಕೂಡ ನೀರಿನಲ್ಲಿ ಬಿಟ್ಟು ಜಲಚರಗಳಿಗೆ ಹಾನಿಯುಂಟಾಗುವುದು. ಅದರ ಬದಲಿಗೆ ಮಣ್ಣಿನಿಂದಲೇ ಗಣೇಶನ ಮೂರ್ತಿ ಮಾಡಿ ಹಬ್ಬವನ್ನು ಆಚರಿಸಿ. ಮಣ್ಣಿನ ಗಣಪವನ್ನು ಮನೆಯಲ್ಲಿ ಡ್ರಮ್‌ನಲ್ಲಿ ಹಾಕಬಹುದು ಅಥವಾ ಹೂ ಕುಂಡದಲ್ಲಿ ನೀರು ತುಂಬಿ ಹಾಕಬಹುದು. ಆದ್ದರಿಂದ ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಿ.

ನೀವು ಮಣ್ಣಿನ ಗಣಪತಿಯನ್ನು ಮನೆಯಲ್ಲಿಯೇ ಮಾಡಬಹುದು, ಮಾಡುವುದು ಹೇಗೆ ಎಂದು ವೀಡಿಯೋದಲ್ಲಿ ನೀಡಲಾಗಿದೆ ನೋಡಿ:

English summary

Ganesh Chaturthi 2022: How to Make Ecofriendly Ganesha Idols at Home in kannada

Ganesh Chaturthi 2022:How To Make Clay Ganapa, Here is Video....
Story first published: Saturday, August 27, 2022, 16:23 [IST]
X
Desktop Bottom Promotion