For Quick Alerts
ALLOW NOTIFICATIONS  
For Daily Alerts

ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು

|

ರಾಮನ ಬಂಟ ಹನುಮಂತ ಎಂಬುದು ಪುರಾಣ ಕಾಲದಿಂದಲೂ ಜನಜನಿತವಾಗಿರುವ ಮಾತಾಗಿದೆ. ರಾಮನ ಮೇಲಿನ ಭಕ್ತಿಯನ್ನು ಹನುಮಂತನು ಹಲವಾರು ಪ್ರಕಾರಗಳಲ್ಲಿ ಪ್ರಕಟಪಡಿಸಿದ್ದಾರೆ. ಸೀತಾಮಾತೆಯನ್ನು ರಾಮನ ಕಾರಾಗೃಹದಲ್ಲಿ ನೋಡಿ ಸಂಧಿಸಿದ್ದು, ಲಂಕೆಗೆ ತನ್ನ ಅನುಚರರ ಜತೆಗೂಡಿ ಕಲ್ಲಿನ ಸೇತುವೆಯನ್ನು ನಿರ್ಮಾಣ ಮಾಡಿದ್ದು, ರಾಕ್ಷಸರೊಂದಿಗೆ ಕಲಹ ಮಾಡಿದ್ದು, ಯುದ್ಧ ಮಾಡಿದ್ದು ಹೀಗೆ ರಾಮನನ್ನು ತನ್ನ ಹೃದಯ ಕಮಲದಲ್ಲಿ ಹನುಮಂತನು ಇಟ್ಟಿದ್ದರು. ತಮ್ಮ ಹೃದಯವನ್ನು ಒಮ್ಮೆ ಅವರು ಹರಿದು ತೋರಿಸಿದಾಗ ಅಲ್ಲಿ ಸೀತಾ ರಾಮರು ನೆಲೆಸಿದ್ದರು. ಅಂದರೆ ಹನುಮನ ಭಕ್ತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.

ಶಿವನ ಅನುಗ್ರಹದಿಂದ ಆಂಜನೇಯನು ಅಂಜನೆಗೆ ಪುತ್ರನಾಗಿ ಜನಿಸುತ್ತಾರೆ, ಶಿವನ ಇನ್ನೊಂದು ರೂಪವೇ ಆಂಜನೇಯ ಎಂಬುದಾಗಿ ಪುರಾಣಗಳು ಬಣ್ಣಿಸುತ್ತವೆ. ಅಪ್ಸರೆಯಾಗಿದ್ದ ಅಂಜನೆಯನ್ನು ಬ್ರಹ್ಮನು ಭೂಮಿಗೆ ಮಾನವ ರೂಪದಲ್ಲಿ ಕಳುಹಿಸುತ್ತಾರೆ. ಕೇಸರಿಯೊಂದಿಗೆ ಪ್ರೇಮಾಂಕುರವಾಗಿ ಆಕೆ ಆತನನ್ನು ವಿವಾಹವಾಗುತ್ತಾಳೆ, ಮತ್ತು ಅವರ ಪುತ್ರನಾಗಿ ಆಂಜನೇನು ಜನಿಸುತ್ತಾರೆ.

ಹನುಮನ ದವಡೆ ವಿರೂಪಗೊಳ್ಳಲು ಕಾರಣಗಳು

ಹನುಮನ ದವಡೆ ವಿರೂಪಗೊಳ್ಳಲು ಕಾರಣಗಳು

ಅನುರೂಪವಲ್ಲದ ದವಡೆಯನ್ನು ಹೊಂದಿರುವವರು ಎಂಬುದು ಹನುಮಾನ್ ಹೆಸರಿನ ಅರ್ಥವಾಗಿದೆ. ಇಂದ್ರನು ತನ್ನ ವಜ್ರಾಯುಧದಿಂದ ಹೊಡೆದಿದ್ದಕ್ಕೆ ಹನುಮನ ದವಡೆ ವಿರೂಪಗೊಂಡಿತು. ತದನಂತರ ಅವರ ಹೆಸರು ಹನುಮಂತ ಎಂದಾಯಿತು.

Most Read : ಈ 5 ರಾಶಿಯವರಿಗೆ ಮಾತು ಕಮ್ಮಿ-ಆದರೆ ಇವರ ಆಲೋಚನೆಗಳನ್ನು ಊಹಿಸುವುದೂ ಕಷ್ಟ!

ರಾಮನ ಭಕ್ತ

ರಾಮನ ಭಕ್ತ

ಹನುಮಂತನು ರಾಮನ ಭಕ್ತನಾಗಿದ್ದಾರೆ, ವಿಷ್ಣುವಿನ ಅವತಾರವಾಗಿರುವ ರಾಮನು ದಶರಥನ ಮಗನಾಗಿ ಭೂಮಿಯಲ್ಲಿ ಜನಿಸುತ್ತಾರೆ. ಭಕ್ತರ ಕಷ್ಟಕಾರ್ಪಣ್ಯವನ್ನು ತೊಡೆದು ಹಾಕಲು ಅವರು ಜನ್ಮತಾಳಿದ್ದಾರೆ ಎನ್ನಲಾಗಿದೆ. ಅದರಲ್ಲೂ ಹನುಮನು ದುಷ್ಟಶಕ್ತಿಗಳ ಹುಟ್ಟಡಗಿಸಲು ಸಮರ್ಥರು. ಹನುಮನ ಸ್ರೋತ್ರ ಜಪಿಸಿ ಮಲಗಿದರೆ ಯಾವುದೇ ರೀತಿಯ ಕೆಟ್ಟ ಕನಸುಗಳು, ಕೆಟ್ಟ ಶಕ್ತಿಗಳು ನಮ್ಮ ಮೇಲೆ ದಾಳಿ ಮಾಡಲಾರವು. ಹನುಮಂತನನ್ನು ಪೂಜಿಸುವುದರಿಂದ ಶಿವ ಮತ್ತು ಶನಿ ದೇವರ ಕೃಪಾಕಟಾಕ್ಷಕವನ್ನು ಪಡೆದುಕೊಳ್ಳಬಹುದಾಗಿದೆ. ಈ ಕೆಳಗಿನ ವಸ್ತುಗಳನ್ನು ಅವರಿಗೆ ಅರ್ಪಿಸಿ ಅವರ ಅನುಗ್ರಹವನ್ನು ಪಡೆದು ಕೊಳ್ಳಬಹುದಾಗಿದೆ.

ಮಲ್ಲಿಗೆ ಎಣ್ಣೆ

ಮಲ್ಲಿಗೆ ಎಣ್ಣೆ

ಶಿವನನ್ನು ಪೂಜಿಸಿ ಅವರ ಅನುಗ್ರಹವನ್ನು ಪಡೆದಂತೆಯೇ ನಾವು ಹನುಮನನ್ನು ಪೂಜಿಸಿ ಅವರನ್ನು ಒಲಿಸಿಕೊಳ್ಳಬಹುದಾಗಿದೆ. ಮಲ್ಲಿಗೆ ಎಣ್ಣೆಯನ್ನು ಹನುಮನಿಗೆ ನೀಡಿ ಅವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಕುಂಕುಮವನ್ನು ಕೂಡ ದೇವರಿಗೆ ನೀಡಬಹುದು.

ಕುಂಕುಮ

ಕುಂಕುಮ

ಒಮ್ಮೆ ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನಿಟ್ಟುಕೊಳ್ಳುವುದನ್ನು ಹನುಮಂತನು ನೋಡುತ್ತಾರೆ. ಇದು ಏಕೆ ಎಂಬುದಾಗಿ ಸೀತೆಯನ್ನು ಹನುಮಂತನು ಕೇಳಿದಾಗ ಸೀತೆಯ ಇದು ತನ್ನ ಸೌಭಾಗ್ಯದ ಸಂಕೇತವಾಗಿದ್ದು, ರಾಮನ ಮೇಲಿನ ನನ್ನ ಪ್ರೀತಿ ಕಾಳಜಿಯನ್ನು ಈ ಸಿಂಧೂರವನ್ನಿಟ್ಟುಕೊಂಡು ತಾನು ಪ್ರದರ್ಶಿಸುತ್ತಿರುವುದಾಗಿ ಸೀತೆಯು ಹೇಳುತ್ತಾರೆ. ಇದನ್ನು ಕೇಳಿದ ಹನುಮಂತನು ತನ್ನ ಮೈಗೆಲ್ಲಾ ಕುಂಕುಮನ್ನು ಹಚ್ಚಿಕೊಂಡು ರಾಮನ ಮೇಲಿದ್ದ ತನ್ನ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ತದನಂತರ ಕುಂಕುವನ್ನು ಹನುಮನಿಗೆ ಅರ್ಪಿಸಲಾಗುತ್ತದೆ.

ಗೋಧಿ ಮತ್ತು ಬೆಲ್ಲ

ಗೋಧಿ ಮತ್ತು ಬೆಲ್ಲ

ಉತ್ತರ ಭಾರತದಲ್ಲಿರುವ ಹೆಚ್ಚಿನ ಜನರು ಬೇರೆ ಬೇರೆ ವಸ್ತುಗಳನ್ನು ಹನುಮನಿಗೆ ಅರ್ಪಿಸುತ್ತಾರೆ. ಇದರಲ್ಲಿ ಬೆಲ್ಲ ಮತ್ತು ಗೋಧಿ ಕೂಡ ಸೇರಿದೆ. ಪೂರ್ಣಿಮೆಯ ದಿನ ಹನುಮಂತನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಅವರಿಗೆ ಆಹಾರವನ್ನು ನೀಡಲಾಗುತ್ತದೆ. ಕುಲದೇವರಾಗಿ ಹನುಮಂತನನ್ನು ಪೂಜಿಸುವವರು ಇದನ್ನು ಮಾಡುತ್ತಾರೆ . ಗೋಧಿ ಮತ್ತು ಬೆಲ್ಲದಿಂದ ಮಾಡಿದ ಆಹಾರ ಪದಾರ್ಥಗಳನ್ನು ಹನುಮನಿಗೆ ನೀಡುತ್ತಾರೆ.

ಅಕ್ಕಿ

ಅಕ್ಕಿ

ತಿಥಿಗಳಲ್ಲಿ ಪೂರ್ಣಿಮೆಯನ್ನು ಹನುಮಂತನಿಗೆ ಅರ್ಪಿಸಲಾಗುತ್ತದೆ. ವಾರಗಳಲ್ಲಿ ಗುರುವಾದರಂದು ಹನುಮಂತನಿಗೆ ವಿಶೇಷ ಪೂಜೆಯನ್ನು ಅರ್ಪಿಸಲಾಗುತ್ತದೆ. ಬ್ರಹ್ಮ ಸ್ನಾನವನ್ನು ಮಾಡಿ (ಬೆಳಗ್ಗೆ 4 ರಿಂದ 6 ಒಳಗೆ ಮಾಡುವ ಸ್ನಾನ) ಅವರನ್ನು ಪೂಜಿಸಲಾಗುತ್ತದೆ. ನಂತರ ಅಕ್ಕಿ ಮತ್ತು ತೆಂಗಿನ ಕಾಯಿಯನ್ನು ನೀಡಿ ಪಂಚೋಪಚಾರವನ್ನು ಮಾಡಲಾಗುತ್ತದೆ ಇದನ್ನು ಹನುಮನ ದೇವಸ್ಥಾನದಲ್ಲಿ ಮಾಡುತ್ತಾರೆ.

Most Read:ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

ಕೇಸರಿ ಬಣ್ಣದ ಬಾವುಟ

ಕೇಸರಿ ಬಣ್ಣದ ಬಾವುಟ

ಅಂಜನೀ ಪುತ್ರ ಹನುಮನ ಆಶೀರ್ವಾದವನ್ನು ಪಡೆದುಕೊಳ್ಳಲು ಹನುಮಾನ್ ಚಾಲೀಸವನ್ನು ಪಠಿಸಬೇಕು. ಇದು ನಿಮ್ಮ ಜ್ಞಾನವನ್ನು ಉತ್ತಮಗೊಳಿಸುತ್ತದೆ ಮತ್ತು ಆರನೆಯ ಇಂದ್ರಿಯನ್ನು ಎಚ್ಚರ ಸ್ಥಿತಿಯಲ್ಲಿರಿಸುತ್ತದೆ. ಪ್ರತೀ ದಿನ ಹನುಮಾನ್ ಚಾಲೀಸವನ್ನು ಪಠಿಸಬೇಕು ಇಲ್ಲಿದ್ದರೆ ಮಂಗಳವಾರದಂದು ಕೇಸರಿ ಬಣ್ಣದ ಬಾವುಟವನ್ನು ದೇವಸ್ಥಾನದಲ್ಲಿ ಪೂರ್ಣಿಮೆಯಂದು ನೀಡಬೇಕು.

English summary

Fulfil Your Wishes By Offering These Things To Lord Hanuman

Lord Hanuman was born to Anjani as a blessing from Lord Shiva. In fact, it is said that he was the incarnation of Lord Shiva himself. Anjani was a celestial dancer who was sent to earth as a human being by Lord Brahma. She fell in love with Kesari and got married to him, after which Hanuman was born as their son.The word Hanuman means the one who has a disfigured jaw. According to one story, Lord Indra, the lord of weather had caused such a thunderbolt that Hanuman's jaw got disfigured. Hence, his name Hanuman.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more