For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಉಪವಾಸದ ವೇಳೆ ಯಾವ ಆಹಾರ ಸೇವಿಸಬಹುದು?

|

ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಸಹ ಒಂದು. ವಿವಾಹಿತ ಮಹಿಳೆಯರು ಸಂಕಲ್ಪ ಮಾಡಿ ಕಳಶವಿಟ್ಟು ಲಕ್ಷ್ಮಿ ದೇವಿಯನ್ನು ವಿಗ್ರಹಗಳಲ್ಲಿ ಆವಾಹಿಸಿ ಶುದ್ಧ ಮನಸ್ಸಿನಿಂದ ತನ್ನ ಪತಿ, ಕುಟುಂಬದ ಶ್ರೇಯೋಭಿವೃದ್ಧಿ, ಧನ ಪ್ರಾಪ್ತಿಗಾಗಿ ಕಟ್ಟುನಿಟ್ಟಿನಿಂದ ಪೂಜಿಸುತ್ತಾರೆ. ಈ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ ಆಗಸ್ಟ್ 9ರಂದು ಆಚರಿಸಲಾಗುತ್ತಿದೆ.

2019ನೇ ಸಾಲಿನ ವರಮಹಾಲಕ್ಷ್ಮಿ: ಪೂಜಾ ದಿನಾಂಕ, ಸಮಯ ಮತ್ತು ಆಚರಣೆಗಳು

ವರಮಹಾಲಕ್ಷ್ಮಿ ವ್ರತಾಚರಣೆ ವೇಳೆ ಸಂಕಲ್ಪ ತೊಟ್ಟ ಮಹಿಳೆಯರು ಬೆಳಗಿನಿಂದ ಸಂಜೆವರೆಗೂ ಉಪವಾಸ ಮಾಡುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನನ್ನು ವೀಕ್ಷಿಸಿದ ಬಳಿಕವಷ್ಟೇ ದೇವಿಯನ್ನು ಪ್ರಾರ್ಥಿಸಿ ಉಪವಾಸವನ್ನು ಕೈಬಿಡುತ್ತಾರೆ.

ವರಮಹಾಲಕ್ಷ್ಮಿ ವ್ರತಾಚರಣೆ ವೇಳೆ ಈ ಕೆಳಗಿನ ಆಹಾರಗಳನ್ನು ಸೇವಿಸಬಹುದು.

ಬಾಳೆಹಣ್ಣು

ಬಾಳೆಹಣ್ಣು

ಶಕ್ತಿಸಂವರ್ಧನೆಗೆ ಬಾಳೆಹಣ್ಣು ಸಾಕಷ್ಟು ಅತ್ಯುಪಕಾರಿ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿರುತ್ತದೆ, ಅಲ್ಲದೇ ನೈಸರ್ಗಿಕವಾದ ಗ್ಲೊಕೋಸ್ ಅಂಶಗಳನ್ನು ಹೊಂದಿದೆ. ಆದ್ದರಿಂದ ಉಪವಾಸದ ವೇಳೆ ಎಷ್ಟೇ ಕೆಲಸಗಳಿದ್ದರೂ ಬಾಳೆಹಣ್ಣಿನ ಸೇವೆನೆಯಿಂದ ನಿಶ್ಯಕ್ತಿ ಕಾಡುವುದಿಲ್ಲ. ಇದನ್ನು ಹಣ್ಣು ಅಥವಾ ಜ್ಯೂಸ್ ಮಾಡಿ ಸೇವಿಸಬಹುದು.

ವರಮಹಾಲಕ್ಷ್ಮಿ ಪೂಜಾ 2019 ದಿನಾಂಕ, ಮುಹೂರ್ತ ಮತ್ತು ಆಚರಣೆ

ಹಾಲು

ಹಾಲು

ಹಾಲನ್ನು ಅಮೃತ ಎನ್ನುತ್ತಾರೆ, ಪೂಜಾ ವೇಳೆ ಲಕ್ಷ್ಮಿದೇವಿಗೆ ಹಾಲಿನಿಂದಲೂ ಸಹ ಅಭಿಷೇಕ ಮಾಡುತ್ತಾರೆ. ಪೋಷಕಾಂಶಗಳು, ಮೆಗ್ನೀಷಿಯಂ, ಕ್ಯಾಲ್ಶಿಯಂನ ಅಪಾರ ಸತ್ವಾಂಶವುಳ್ಳ ಹಾಲು ಅತ್ಯುತ್ತಮ ಶುದ್ಧಾಹಾರವಾಗಿದೆ. ಅದರಲ್ಲೂ ವ್ರತಾಚರಣೆ ವೇಳೆ ಹಾಲಿನ ಸೇವನೆ ಶಕ್ತಿಗೆ ಪೂರಕವಾಗಿರುತ್ತದೆ. ಒಂದು ಲೋಟ ಹಾಲು ಸಾಕಷ್ಟು ಶಕ್ತಿ ಜತೆಗೆ, ಹಸಿವನ್ನೂ ಸಹ ಹೋಗಲಾಡಿಸುತ್ತದೆ.

ಹಣ್ಣಿನ ರಸ

ಹಣ್ಣಿನ ರಸ

ಉಪವಾಸದ ಸಂದರ್ಭದಲ್ಲಿ ಪೂಜಾ ವಿಧಿ-ವಿಧಾನ ಮಾಡುವ ವೇಳೆ ಆಗುವ ನಿತ್ರಾಣವನ್ನು ತಡೆಯಲು ತಾಜಾ ಹಣ್ಣಿನ ರಸಗಳು ಸಹ ಬಲು ಸಹಕಾರಿ. ಮೂಸಂಬಿ, ಪಪ್ಪಾಯ, ಕಲ್ಲಂಗಡಿ, ಆರೆಂಜ್, ದಾಳಿಂಬೆ ಹೀಗೆ ಹಲವು ಹಣ್ಣುಗಳು ಹಸಿವನ್ನು ನೀಗಿಸಿ ಆರೋಗ್ಯಕರ ಶಕ್ತಿ ತುಂಬುತ್ತದೆ.

ಒಣಹಣ್ಣುಗಳು

ಒಣಹಣ್ಣುಗಳು

ಒಣಹಣ್ಣುಗಳು ದುಬಾರಿ ಬೆಲೆಯಂತೆ ದೇಹಕ್ಕೆ ಸಹ ದುಬಾರಿಯಾಗಿಯೇ ಶಕ್ತಿಯನ್ನು ನೀಡುತ್ತದೆ. ಅದರಲ್ಲೂ ಬಾದಾಮಿ ಹಾಗೂ ಒಣ ದ್ರಾಕ್ಷಿ ಇ ಪೋಷಕಾಂಶವನ್ನು ಹೊಂದಿದ್ದು, ಸಾಕಷ್ಟು ಶಕ್ತಿದಾಯಕ ಆಹಾರವಾಗಿದೆ. 4ರಿಂದ 5 ಬಾದಾಮಿ ಹಾಗೂ ಒಣ ದ್ರಾಕ್ಷಿಯನ್ನು ರಾತ್ರಿಯೇ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವದರಿಂದ ಹೆಚ್ಚು ಶಕ್ತಿ ದೇಹಕ್ಕೆ ಪೂರೈಕೆಯಾಗುತ್ತದೆ.

English summary

Foods To Eat During Varamahalakshmi Vratha

Varamahalakshmi puja is one of the most important and popular celebrations in South India. During the day of Varamahalakshmi puja married women observe vratha or fast till the time the puja is completed. Here are these few items which women can have while fasting to build up their stamina and get the energy as they keep their fast. take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X