For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀ ದೇವಿ ಇರುವ ಐದು ಪವಿತ್ರ ಸ್ಥಳಗಳು

|

ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ಇಲ್ಲದೆ ಹಣವನ್ನು ಗಳಿಸಲು ಸಾಧ್ಯವಿಲ್ಲ. ದಾರಿದ್ರ್ಯವನ್ನು ತೊಳೆದು ಸುಖ ಸಂತೋಷನ್ನು ಜೀವನಕ್ಕೆ ತಂದುಕೊಡುವ ದೇವತೆ ಅವಳು. ಸೃಷ್ಟಿಯ ಪಾಲಕನಾದ ಶ್ರೀ ವಿಷ್ಣು ದೇವನ ಪತ್ನಿ ಲಕ್ಷ್ಮೀ ದೇವಿ. ಸೃಷ್ಟಿಯ ಒಳಿತಿಗಾಗಿ ಹಾಗೂ ಮನುಷ್ಯನ ಜೀವನ ಕಲ್ಯಾಣಕ್ಕೆ ಇರುವ ದೇವತೆಗಳು ಇವರು ಎಂದು ಹಿಂದೂ ಧರ್ಮದಲ್ಲಿ ಆರಾಧನೆ ಮಾಡಲಾಗುವುದು. ಲಕ್ಷ್ಮೀ ದೇವಿಯ ಕೃಪೆಗೆ ಒಳಗಾದ ವ್ಯಕ್ತಿಯು ಮುಟ್ಟಿದ ವಸ್ತುಗಳು ಬಂಗಾರವಾಗುವುದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಲಕ್ಷ್ಮೀ ದೇವಿಗೆ ಸಂಬಂಧಿಸಿದಂತಹ ಅನೇಕ ಹಬ್ಬ ಹರಿದಿನಗಳು ಹಾಗೂ ವ್ರತಗಳು ಇರುವುದನ್ನು ನಾವು ನೋಡಬಹುದು.

ಶ್ರೀಮಂತಿಕೆ, ಹಣ, ಆಸ್ತಿ, ಧಾನ್ಯ ಸೇರಿದಂತೆ ಎಲ್ಲಾ ಬಗೆಯ ಜೀವನದ ಅಷ್ಟ ಐಶ್ವರ್ಯಗಳನ್ನು ದೇವಿ ಲಕ್ಷ್ಮಿಯು ಅನುಗ್ರಹಿಸುತ್ತಾಳೆ. ಅದಕ್ಕಾಗಿಯೇ ಮನೆಯಲ್ಲಿ ದೇವಿಗೆ ಸರಿಯಾದ ಪೂಜೆ-ಪುನಸ್ಕಾರಗಳು ನಡೆಯಬೇಕು ಎಂದು ಹೇಳಲಾಗುವುದು. ಶತಮಾನಗಳ ಕಾಲದಿಂದಲೂ ಲಕ್ಷ್ಮೀ ದೇವಿಯ ಆರಾಧನೆಯನ್ನು ನಮ್ಮ ಹಿರಿಯರು ನೆರವೇರಿಸಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮುಂದಿನ ಆಚಾರ-ವಿಚಾರಗಳು ಸಾಗಬೇಕು. ಆಗಲೇ ಸೃಷ್ಟಿಯಲ್ಲಿ ಮನುಷ್ಯ ಸುಂದರವಾದ ಅನುಭವ ಹಾಗೂ ಜೀವನವನ್ನು ನಡೆಸಲು ಸಾಧ್ಯ ಎಂದು ಹೇಳಲಾಗುವುದು.

Sacred Places Where Goddess Laxmi

ಮನುಷ್ಯನ ಕಲ್ಯಾಣಕ್ಕಾಗಿಯೇ ಇರುವ ಲಕ್ಷ್ಮಿದೇವಿಯು ಕೆಲವು ಪವಿತ್ರ ಸ್ಥಳದಲ್ಲಿ ನೆಲೆಸಿರುತ್ತಾಳೆ. ಅವಳ ಆ ಪವಿತ್ರ ವಸ್ತು-ಹಾಗೂ ಸ್ಥಳಗಳನ್ನು ನಾವು ಸೂಕ್ತ ರೀತಿಯಲ್ಲಿ ಗುರುತಿಸಿ ಆರಾಧನೆ ಗೈಯಬೇಕು. ಆಗಲೇ ಲಕ್ಷ್ಮೀ ದೇವಿ ಆಶೀರ್ವಾದ ನೀಡುವಳು ಎನ್ನುವ ನಂಬಿಕೆಯಿದೆ. ಹಾಗಾದರೆ ಲಕ್ಷ್ಮೀ ದೇವಿ ಇರುವ ಆ ಪವಿತ್ರವಾದ ಐದು ಸ್ಥಳಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಖು ಎನ್ನುವ ಕುತೂಹಲ ಹಾಗೂ ಆಸೆಯನ್ನು ಹೊಂದಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಕಮಲದ ಹೂವಿನಲ್ಲಿ ಲಕ್ಷ್ಮೀ ದೇವಿ

ಕಮಲದ ಹೂವಿನಲ್ಲಿ ಲಕ್ಷ್ಮೀ ದೇವಿ

ಹಿಂದೂ ಧರ್ಮದಲ್ಲಿ ಕಮಲದ ಹೂವನ್ನು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಹೂವು ಎಂದು ಪರಿಗಣಿಸಲಾಗುವುದು. ಇದು ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವು ಹೌದು. ಗುಲಾಬಿ ಬಣ್ಣದ ಕಮಲದ ಹೂವಿನಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ. ಹಾಗಾಗಿಯೇ ಲಕ್ಷ್ಮೀ ದೇವಿಗೆ ಪದ್ಮಿನಿ, ಪದ್ಮಪ್ರಿಯಾ ಸೇರಿದಂತೆ ಇನ್ನಿತರ ಹೆಸರುಗಳಿಂದ ಲಕ್ಷ್ಮೀ ದೇವಿಯನ್ನು ಕರೆಯಲಾಗುವುದು. ಇದು ಲಕ್ಷ್ಮೀ ದೇವಿಗೆ ಅತ್ಯಂತ ಸಂತೋಷವನ್ನು ತಂದುಕೊಡುವುದು. ಈ ನಿಟ್ಟಿನಲ್ಲಿಯೇ ಹಿಂದಿನ ಕಾಲದಿಂದಲೂ ಲಕ್ಷ್ಮೀ ದೇವಿಯ ಆರಾಧನೆಗೆ ಗುಲಾಬಿ ಬಣ್ಣದ ಕಮಲದ ಹೂವನ್ನು ವ್ಯಾಪಕವಾಗಿ ಬಳಸಲಾಗುವುದು ಎಂದು ಹೇಳಲಾಗುತ್ತದೆ.

Most Read: ಲಕ್ಷ್ಮೀ ದೇವಿಯನ್ನು ಆಕರ್ಷಿಸುವ 10 ವಸ್ತುಗಳು

ಕಮಲದ ಹೂವಿನಲ್ಲಿ ಲಕ್ಷ್ಮೀ ದೇವಿ

ಕಮಲದ ಹೂವಿನಲ್ಲಿ ಲಕ್ಷ್ಮೀ ದೇವಿ

ಜನರು ಜೀವನದಲ್ಲಿ ಸಮೃದ್ಧತೆ ಹಾಗೂ ಸಂಪತ್ತು ನೆಲೆಸಲಿ ಎಂದು ಬಹುತೇಕ ದೇವಸ್ಥಾನಗಳಲ್ಲಿ ಲಕ್ಷ್ಮೀ ದೇವಿಗೆ ಕಮಲದ ಹಾರವನ್ನು ಹಾಕಿ ಪೂಜೆ ಸಲ್ಲಿಸುವರು. ಹಾಗೆಯೇ ತಾಮ್ರವು ವಿಷ್ಣುವಿಗೆ ಅತ್ಯಂತ ಪ್ರಿಯವಾದ ವಸ್ತು ಎಂದು ಪರಿಗಣಿಸಲಾಗುವುದು. ಅಲ್ಲದೆ ವಿಷ್ಣು ದೇವರ ಆರಾಧನೆಗೂ ಕಮಲದ ಹೂವನ್ನು ನೀಡಲಾಗುವುದು. ಏಕೆಂದರೆ ಲಕ್ಷ್ಮಿ ಮತ್ತು ವಿಷ್ಣು ದೇವರು ಸದಾ ಒಟ್ಟಿಗೆ ಇರುತ್ತಾರೆ. ಎರಡು ದೇವತೆಗಳಿಗೂ ಕಮಲದ ಹೂವು ಅತ್ಯಂತ ಶ್ರೇಷ್ಠವಾದದ್ದು. ಇವರ ಪೂಜೆಗೆ ಕಮಲವನ್ನು ಬಳಸಿದರೆ ಹೆಚ್ಚಿನ ಶ್ರೇಷ್ಠತೆ ದೊರೆಯುವುದು ಎನ್ನುವ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯಾಗಿ ಧರ್ಮ, ಸಂಪ್ರದಾಯ, ಶಿಲ್ಪಕಲೆ, ಪ್ರತಿಮಾ ಶಾಸ್ತ್ರ, ದೃಷ್ಟಿಗೋಚರ, ಪ್ರದರ್ಶನ ಕಲೆಗಳಲ್ಲಿ ಕಮಲಕ್ಕೆ ಹೆಚ್ಚಿನ ಪ್ರಾಶಸ್ತ್ರ್ಯ ನೀಡಲಾಗಿದೆ. ಅಲ್ಲದೆ ಲಕ್ಷಿ ದೇವಿಯ ಚಿತ್ರದಲ್ಲಿ ಕಮಲದ ಹೂವನ್ನು ಹಿಡಿದಿರುವುದು ಹಾಗೂ ಕಮಲದ ಮೇಲೆಯೇ ಕುಳಿತಿರುವ ಕೆತ್ತನೆಗಳನ್ನು ಕಾಣಬಹುದು. ಲಕ್ಷ್ಮೀ ದೇವಿ ಸದಾ ತಾಮಸಲದಲ್ಲಿ ವಾಸಿಸುತ್ತಾಳೆ ಎನ್ನಲಾಗುವುದು.

ಆನೆಯ ಹಣೆಯ ಮೇಲೆ ಲಕ್ಷ್ಮಿ

ಆನೆಯ ಹಣೆಯ ಮೇಲೆ ಲಕ್ಷ್ಮಿ

ಆನೆಯ ಹಣೆಯ ಮೇಲೆ ಎರಡು ಭಾಗದಲ್ಲಿ ಕೊಂಬುಗಳಂತೆ ಉಬ್ಬುಗಳಿರುವುದನ್ನು ಕಾಣಬಹುದು. ಅವುಗಳನ್ನು ಗಜಾ ಕುಂಭಮ್ ಎಂದು ಕರೆಯಲಾಗುತ್ತದೆ. ಈ ಎರಡು ಕೊಂಬುಗಳ ನಡುವೆ ಇರುವ ಸ್ಥಳದಲ್ಲಿ ಲಕ್ಷ್ಮೀ ದೇವಿಯು ಇರುತ್ತಾಳೆ ಎಂದು ಹೇಳಲಾಗುವುದು. ಹಾಗಾಗಿಯೇ ಆನೆಯ ಹಣೆಯ ಮೇಲೆ ಇರುವ ಸಣ್ಣ ಉಬ್ಬಿನ ಮೇಲೆ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ.

Most Read: ಸಪಾಟಾದ ಹೊಟ್ಟೆ ಪಡೆಯಲು ಕೇವಲ 14 ದಿನ ಎಳೆನೀರು ಸೇವಿಸಿ ಸಾಕು!

ಆನೆಯ ಹಣೆಯ ಮೇಲೆ ಲಕ್ಷ್ಮಿ

ಆನೆಯ ಹಣೆಯ ಮೇಲೆ ಲಕ್ಷ್ಮಿ

ಆನೆಗಳ ಕೆತ್ತನೆ, ಚಿತ್ರ ಹಾಗೂ ಪ್ರತಿಮೆಗಳನ್ನು ಕೆಲವು ಜನಪ್ರಿಯ ದೇವಸ್ಥಾನಗಳಲ್ಲಿ ಇರುವುದನ್ನು ನಾವು ಗಮನಿಸಬಹುದು. ಹಿಂದೂ ದೇವಸ್ಥಾನದ ಕೆಲವು ಸಂಪ್ರದಾಯ ಹಾಗೂ ವ್ರತ, ಉತ್ಸವಗಳ ಆಚರಣೆಯಲ್ಲಿ ಆನೆಗಳ ಮೆರವಣಿಗೆಯೂ ಬಹಳ ಪ್ರಮುಖವಾದ ಸಂಗತಿ ಅಥವಾ ಭಾಗವಾಗಿರುತ್ತದೆ. ಆನೆಯ ಹಣೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎನ್ನುವುದರಿಂದಲೇ ಆನೆಯನ್ನು ಪವಿತ್ರ ಎಂದು ಪರಿಗಣಿಸಲಾಗುವುದು. ಕೆಲವು ದೇವಸ್ಥಾನಗಳಲ್ಲಿ ಆನೆಯನ್ನು ಮುಂಜಾನೆ ಪೂಜಿಸಲಾಗುವುದು. ಅಲ್ಲದೆ ಬೆಳಿಗ್ಗೆ ಆನೆಯ ಮುಖವನ್ನು ನೋಡಿ ದರ್ಶನ ಪಡೆದರೆ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದುಕೊಳ್ಳಬಹುದು. ಅದೃಷ್ಟವು ಒಲಿಯುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

ಹಸುವಿನ ಬೆನ್ನಿನ ಮೇಲೆ ಲಕ್ಷ್ಮಿ

ಹಸುವಿನ ಬೆನ್ನಿನ ಮೇಲೆ ಲಕ್ಷ್ಮಿ

ಹಸುವಿನ ಬೆನ್ನಿನ ಮೇಲೆ ಲಕ್ಷ್ಮೀ ದೇವಿ ಇರುತ್ತಾಳೆ ಎನ್ನಲಾಗುವುದು ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಹಸುವಿನ ಪೂಜೆಯು ಅತ್ಯಂತ ಪವಿತ್ರವಾದದ್ದು. ಹಸುವಿನ ದೇಹದಲ್ಲಿ ಎಲ್ಲಾ ದೇವಾನು ದೇವತೆಗಳು ನೆಲೆಸಿರುತ್ತಾರೆ. ಹಾಗಾಗಿ ನಿತ್ಯವೂ ಹಸುವಿಗೆ ಆಹಾರ, ನೀರು ಮತ್ತು ಪೂಜೆಯನ್ನು ಸಲ್ಲಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಂಪತ್ತು ಮತ್ತು ನೆಮ್ಮದಿ ನೆಲೆಸುವುದು ಎಂದು ಹೇಳಲಾವುದು.

Most Read: ರಾಶಿಗೆ ಅನುಗುಣವಾಗಿ ಲಕ್ಷ್ಮಿ ಮಂತ್ರ ಜಪಿಸಿದರೆ ಸಂಪತ್ತು ಒಲಿದು ಬರುವುದು

ಹಸುವಿನ ಬೆನ್ನಿನ ಮೇಲೆ ಲಕ್ಷ್ಮಿ

ಹಸುವಿನ ಬೆನ್ನಿನ ಮೇಲೆ ಲಕ್ಷ್ಮಿ

ವಿಶೇಷವಾಗಿ ಮಂಗಳವಾರ ಹಾಗೂ ಶುಕ್ರವಾರದಂದು ಹಸುವಿನ ಬೆನ್ನಿಗೆ ಅರಿಶಿನ ಹಾಗೂ ಕುಂಕುಮವನ್ನು ಬಳಿದು ಪೂಜೆ ಸಲ್ಲಿಸಬೇಕು. ಇದು ಲಕ್ಷ್ಮಿ ಪೂಜೆ ಮಾಡುವ ಒಂದು ವಿಧಾನವನೂ ಹೌದು. ಅಲ್ಲದೆ ಈ ರೀತಿಯ ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿ ಆಶೀರ್ವಾದ ನೀಡುವಳು ಎಂದು ಹೇಳಲಾಗುವುದು. ನಿತ್ಯವೂ ಬೆಳಿಗ್ಗೆ ಗೋವಿನ ಮುಖ ನೋಡುವುದು, ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿಗೆ ಆರಾಧನೆ ಸಲ್ಲಿಸಿದಷ್ಟು ಪುಣ್ಯ ದೊರೆಯುವುದು. ಜೀವನವು ಅದೃಷ್ಟ ಹಾಗೂ ಸಂಪತ್ತಿನಿಂದ ಭರಿತವಾಗುವುದು.

ಮನುಷ್ಯನ ಬೆರಳಿನ ತುದಿಯಲ್ಲಿ ಲಕ್ಷ್ಮೀ ದೇವಿ

ಮನುಷ್ಯನ ಬೆರಳಿನ ತುದಿಯಲ್ಲಿ ಲಕ್ಷ್ಮೀ ದೇವಿ

ಮನುಷ್ಯನ ಕೌಶಲ್ಯ ಹಾಗೂ ಸಾಮಥ್ರ್ಯದ ಆಧಾರದ ಮೇಲೆ ಮನುಷ್ಯನ ಬೆರಳುಗಳ ತುದಿಯಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾವುದು. ಹಾಗಾಗಿಯೇ ನಮ್ಮ ಕೈಗಳಿಂದ ಧಾನ-ಧರ್ಮಗಳಂತಹ ಪವಿತ್ರ ಕೆಲಸಗಳನ್ನು ನೆರವೇರಿಸಬೇಕು. ಮುಂಜಾನೆ ಎದ್ದ ಬಳಿಕ ಕಣ್ಣನ್ನು ಬಿಟ್ಟು ಮೊದಲು ಅಂಗೈಯನ್ನು ನೋಡಿ ನಮಸ್ಕರಿಸಬೇಕು. ಇದರಿಂದ ಲಕ್ಷ್ಮೀ ದೇವಿಯನ್ನು ನೆನೆದು ದಿನದ ಆರಂಭ ಮಾಡಿದಂತೆ ಆಗುವುದು ಎಂದು ಹೇಳಲಾಗುತ್ತದೆ.

ಮನುಷ್ಯನು ತನ್ನ ಕೈಗಳಿಂದ ಇತರರಿಗೆ ಹಿಂಸಿಸುವುದು, ಮೋಸ ಮಾಡುವ ಕೆಲಸಗಳನ್ನು ಮಾಡಬಾರದು. ಆದಷ್ಟು ತನ್ನಿಂದಾಗುವ ಉತ್ತಮ ಕಾರ್ಯಗಳನ್ನು ಕೈಗೊಳ್ಳಬೇಕು. ಮುಷ್ಯನಿಗೆ ಕೈಗಳನ್ನು ನೀಡಿರುವುದು ಹಾಗೂ ಅರಿಂದ ಸಾಕಷ್ಟು ಕೆಲಸ ಕಾರ್ಯ ಮಾಡುವ ಶಕ್ತಿ ನೀಡಿರುವುದು ದೇವರು ನೀಡಿದ ವರ. ಇದರಿಂದ ಆದಷ್ಟು ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವ ಧರ್ಮದ ಸಂಗತಿಯನ್ನು ತಿಳಿಸುವುದು. ಈ ರೀತಿಯ ಉತ್ತಮ ಕಾರ್ಯ ಕೈಗೊಳ್ಳುವುದರಿಂದ ಸಂತೋಷ ಗೊಂಡ ಲಕ್ಷ್ಮೀ ದೇವಿಯು ಆಶೀರ್ವಾದ ಮಾಡುವಳು.

English summary

Five Sacred Places Where Goddess Laxmi Resides

Goddess Laxmi, the giver of wealth and prosperity and the consort of Maha Vishnu is one of the popular deities in Hinduism. The Hindu tradition believes there are some places where Laxmi installs herself and some other places that she keeps away from. Know these five sacred places where Laxmi resides.
X
Desktop Bottom Promotion