Just In
Don't Miss
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Movies
ಸಾಯುವ ಮುನ್ನಾ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಜಯಶ್ರೀ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬ ಹಾಗೂ ವ್ರತಗಳಿವು
ವರ್ಷ ಪ್ರಾರಂಭವಾಗಿದೆ. ಹೊಸ ಸಂಭ್ರಮದೊಂದಿಗೆ ಎಲ್ಲರೂ ಹೊಸತನ್ನು ಆಚರಿಸಲು ಆಸ್ವಾದಿಸಲು ಸಿದ್ಧರಾಗಿದ್ದೇವೆ. ಜನವರಿ ತಿಂಗಳು ಎಂದರೆ ವರ್ಷದ ಆರಂಭದ ತಿಂಗಳು.
ಹಿಂದೂ ಪಂಚಾಗದ ಪ್ರಕಾರ ಜನವರಿಯಲ್ಲಿ ಹಬ್ಬ ಹಾಗೂ ವ್ರತಗಳಿವೆ. ಮಕರ ಸಂಕ್ರಾಂತಿ, ಪ್ರದೋಷ ವ್ರತ, ಏಕಾದಶಿ ಹೀಗೆ ಅನೇಕ ಆಚರಣೆಗಳನ್ನು ಮಾಡಲಾಗುವುದು.
ಜನವರಿ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬ ಹಾಗೂ ವ್ರತಗಳು ಯಾವುವು, ಯಾವಾಗ ಬರುತ್ತದೆ ಎಂದು ಲೇಖನದಲ್ಲಿ ಹೇಳಲಾಗಿದೆ ನೋಡಿ:

ಸಂಕಷ್ಠಿ ಚತುರ್ಥಿ, ಶನಿವಾರ
ಜನವರಿ 2ರಂದು ಸಂಕಷ್ಠಿ ಚತುರ್ಥಿ ಆಚರಿಸಲಾಗುತ್ತಿದೆ. ಈ ದಿನ ಗಣೇಶನನ್ನು ಪೂಜಿಸಲಾಗುವುದು.

ಸರ್ವೈಕಾದಶಿ - 2021 ಜನವರಿ 9, ಶನಿವಾರ
ಧನುರ್ಮಾಸ ತಿಂಗಳ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲಾ ಏಕಾದಶಿ ಅಥವಾ ಸರ್ವೈಕಾದಶಿ ಎಂದು ಆಚರಿಸಲಾಗುವುದು. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸಲಾಗುವುದು.

ಮಾಸಿಕ ಶಿವ ರಾತ್ರಿ ಜನವರಿ 11 ಸೋಮವಾರ
ಸೋಮವಾರ ಶಿವನ ಪೂಜೆಗೆ ವಿಶೇಷವಾದ ದಿನ. ಈ ದಿನದಂದೇ ಜನವರಿ ತಿಂಗಳ ಮಾಸಿಕ ಶಿವರಾತ್ರಿ ಬಂದಿದೆ. ಈ ದಿನ ಭಕ್ತರು ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ.

ಮಕರ ಸಂಕ್ರಾಂತಿ ಜನವರಿ 14, ಗುರುವಾರ
ಮಕರ ಸಂಕ್ರಾಂತಿ ಹಿಂದುಗಳಿಗೆ ತುಂಬಾ ವಿಶೇಷವಾದ ದಿನ. ದಕ್ಷಿಣ ಭಾರತದಲ್ಲಿ ಇದನ್ನು ತುಂಬಾ ಸಂಭ್ರಮದಿಂದ ಆಚರಿಸಲಾಗುವುದು. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥಲಾಯಿಸುತ್ತಾನೆ. ಈ ದಿನವೇ ಮಕರ ಸಂಕ್ರಾಂತಿ. ಈ ದಿನ ಎಳ್ಳು ಬೆಲ್ಲ ಸವಿಯಲಾಗುವುದು.

ಜನವರಿ 14ಕ್ಕೆ ಪುಷ್ಯ ಮಾಸದ ಆರಂಭ ಹಾಗೂ ಮಾಘ ಸ್ನಾನ
ಪುಷ್ಯ ಮಾಸದಲ್ಲಿ ಮಾಘ ಸ್ನಾನ ಎಂದು ಆಚರಿಸಲಾಗುವುದು. ಪವಿತ್ರ ನದಿಗಳಲ್ಲಿ ಹೋಗಿ ಸ್ನಾನ ಮಾಡಿದರೆ ಪಾಪ ಮೋಕ್ಷವಾಗುವುದು ಎಂದು ಹೇಳಲಾಗುವುದು. ಮಾಘ ಸ್ನಾನವು ಪುಷ್ಯ ಹಣ್ಣಿಮೆಯಂದು ಪ್ರಾರಂಭವಾಗಿ ಮಾಘ ಹುಣ್ಣಿಮೆಯಂದು ಮುಗಿಯುತ್ತದೆ.

ಪುತ್ರದ ಏಕಾದಶಿ ಜನವರಿ 24, ಭಾನುವಾರ
ಸಂತಾನ ಅಪೇಕ್ಷಿತ ದಂಪತಿ ಈ ದಿನದಂದು ಉಪವಾಸವಿದ್ದು ವಿಷ್ಣುವನ್ನು ಪೂಜಿಸುವುದರಿಂದ ಸಂತಾನ ಭಾಗ್ಯ ದೊರೆಯುವುದು ಎಂಬ ನಂಬಿಕೆ.

ಭೌಮ ಪ್ರದೋಷ ಜನವರಿ 26, ಮಂಗಳವಾರ
ಶಿವನ ಕೃಪೆಗೆ ಪಾತ್ರರಾಗಲು ಪ್ರದೋಷ ವ್ರತ ಮಾಡಲಾಗುವುದು. ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಹಸುಗಳಿಗೆ ದಾನ ಮಾಡಿದಷ್ಟು ಪುಣ್ಯ ಸಿಗುವುದು. ಈ ಬಾರಿ ಪ್ರದೋಷ ಮಂಗಳವಾರ ಬಂದಿದ್ದರಿಂದ ಭೌಮ ಪ್ರದೋಷ ಎಂದು ಆಚರಿಸಲಾಗುವುದು.

ಪುಷ್ಯ ಪೂರ್ಣೆಮಾ ಜನವರಿ 28, ಗುರುವಾರ
ಪ್ರತಿದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಈ ಒಂದು ದಿನ ಪವಿತ್ರ ನದಿಯಲ್ಲಿ ಮುಳುಗುವುದರಿಂದ ಸಂಕಲ್ಪ ನೆರವೇರುವುದು. ಈ ದಿನ ಎಲ್ಲಾ ನದಿಯ ನೀರು ಗಂಗೆಯಷ್ಟು ಪವಿತ್ರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಸಂಕಷ್ಟ ಚತುರ್ಥಿ ಜನವರಿ 31, ಭಾನುವಾರ
ಈ ಜನವರಿ 31ಕ್ಕೆ ಸಂಕಷ್ಟ ಚತುರ್ಥಿ ಇದೆ. ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುವುದು. ಈ ವ್ರತವನ್ನು ಆಚರಿಸುವ ಸಂದರ್ಭದಲ್ಲಿ ಭಕ್ತರು ಆಹಾರ ಪಾನೀಯಗಳನ್ನು ತೆಗೆದುಕೊಳ್ಳದೆಯೇ ಕೇವಲ ಒಂದು ಹೊತ್ತು ಆಹಾರವನ್ನು ಸೇವಿಸಿ ಆ ದಿನವನ್ನು ಗಣೇಶನ ಆರ್ರಧನೆಗೆ ಮುಡಿಪಾಗಿಡುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಮನದ ಇಷ್ಟವನ್ನು ಭಗವಂತ ನಡೆಸಿಕೊಡುತ್ತಾರೆ ಎಂಬ ಅಚಲ ನಂಬಿಕೆ .