For Quick Alerts
ALLOW NOTIFICATIONS  
For Daily Alerts

Festivals and Vrats in December 2022 : ಡಿಸೆಂಬರ್‌ನಲ್ಲಿದೆ ಈ ಪ್ರಮುಖ ವ್ರತಗಳು-ಹಬ್ಬಗಳು

|

2022ರ ಕೊನೆಯ ತಿಂಗಳು ಬಂದಾಯ್ತು. ಈ ವರ್ಷ ಸಾಲು-ಸಾಲುಗಳ ಹಬ್ಬಗಳನ್ನು ಹೊತ್ತು ತಂದಿದ್ದ 2022 ಇನ್ನೇನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟ ಸೇರಿ, ನಾವು 2023ನ್ನು ಸ್ವಾಗತಿಸಲಿದ್ದೇವೆ. ಡಿಸೆಂಬರ್ ನಿಮಗಾಗಿ ಅನೇಕ ವ್ರತಗಳು ಹಾಗೂ ಹಬ್ಬಗಳನ್ನು ಹೊತ್ತು ತಂದಿದೆ. ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳಾವುವು, ಈ ವ್ರತಗಳಾವುವು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ:

Festivals and Vrats in the month of December 2022

ಡಿಸೆಂಬರ್ 3: ಮೋಕ್ಷದ ಏಕಾದಶಿ
ಡಿಸೆಂಬರ್ 4: ವೈಷ್ಣವ ಮೋಕ್ಷದ ಏಕಾದಶಿ
ಡಿಸೆಂಬರ್ 5: ಹನುಮಾನ್‌ ಜಯಂತಿ ಹಾಗೂ ಪ್ರದೋಷ ವ್ರತ
ಡಿಸೆಂಬರ್‌ 7: ದತ್ತಾತ್ರೇಯ ಜಯಂತಿ, ಮಾರ್ಗಶೀರ್ಷ ಸತ್ಯನಾರಾಯಣ ವ್ರತ
ಡಿಸೆಂಬರ್ 8: ಮಾರ್ಗಶೀರ್ಷ ಪೂರ್ಣಿಮೆ, ರೋಹಿಣಿ ವ್ರತ
ಡಿಸೆಂಬರ್11: ಅಕೃತ ಸಂಕಷ್ಟಿ ಚತುರ್ಥಿ
ಡಿಸೆಂಬರ್ 16: ಧನು ಸಂಕ್ರಾಂತಿ, ಕಾಲಾಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಟಮಿ
ಡಿಸೆಂಬರ್ 19: ಸಫಲ ಏಕಾದಶಿ
ಡಿಸೆಂಬರ್ 21: ಪ್ರದೋಷ ವ್ರತ, ಮಾಸಿಕ ಶಿವರಾತ್ರಿ
ಡಿಸೆಂಬರ್ 22: ವರ್ಷದಲ್ಲಿಯೇ ಚಿಕ್ಕ ದಿನ
ಡಿಸೆಂಬರ್ 24: ಇಸ್ತಿ, ಚಂದ್ರ ದರ್ಶನ

ಡಿಸೆಂಬರ್ 25: ಕ್ರಿಸ್ಮೆಸ್
ಡಿಸೆಂಬರ್ 26: ವಿನಾಯಕ ಚತುರ್ಥಿ
ಡಿಸೆಂಬರ್ 28: ಮಂಡಲ ಪೂಜೆ
ಡಿಸೆಂಬರ್ 29: ಗುರು ಗೋವಿಂದ ಸಿಂಗ್‌ ಜಯಂತಿ
ಡಿಸೆಂಬರ್ 30: ಮಾಸಿಕ ದುರ್ಗಾಷ್ಟಮಿ

ಮೋಕ್ಷದ ಏಕಾದಶಿ
ಮಾರ್ಗಶಿರ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುವುದು. ಈ ದಿನ ಸ್ವರ್ಗದ ಅಥವಾ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಪೌರಾಣಿಕ ನಂಬಿಕೆ ಇದೆ. ಈ ಬಾರಿ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ. ಈ ದಿನ ನೀವು ಉಪವಾಸ ಮಾಡಿದರೆ ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ.

ದತ್ತಾತ್ರೇಯ ಜಯಂತಿ
ಮಾರ್ಗಶಿರ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನಂದು ಭಕ್ತರು ದತ್ತಾತ್ರೇಯನಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಬೇರೆಲ್ಲಾ ದಿನಗಳಿಗೆ ಹೊರತುಪಡಿಸಿ, ಮುಖ್ಯವಾಗಿ ಈ ದಿನದಂದು ದತ್ತಾತ್ರೇಯನ್ನು ಪೂಜಿಸಿದರೆ ಹೆಚ್ಚಿನ ಫಲ ದೊರೆಯುವುದೆಂದು ನಂಬಿಕೆ ಇದೆ. ಈ ಜಯಂತಿಯನ್ನು ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವೆಡೆ ಆಚರಸಲಾಗುವುದು.

ಸಫಲ ಏಕಾದಶಿ: 2022ರ ಕೊನೆಯ ಏಕಾದಶಿ ಇದಾಗಿದೆ. ಮಾರ್ಗಶಿರ ಮಾಸದ ಕೃಷ್ಣ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಮಾರ್ಗಶಿರ-ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಯೇ ಸಫಲಾ ಏಕಾದಶಿ. ಈ ಏಕಾದಶಿಯನ್ನು ಹಿಂದೂ ಪಂಚಾಂಗದಲ್ಲಿ ಸರ್ವೈಕಾದಶೀ ಎಂದು ಕೂಡ ಕರೆಯಲಾಗುವುದು. ಉತ್ತರ ಭಾರತ ಕಡೆ ಈ ಏಕಾದಶಿಯನ್ನುಪುಷ್ಯ ಏಕಾದಶಿಯೆಂದೂ ಕರೆಯುತ್ತಾರೆ. ಈ ದಿನ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆಯಿದೆ.

ಧನು: ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧನು ಸಂಕ್ರಾಂತಿ ಉಂಟಾಗುವುದು. ಸೂರ್ಯ ರಾಶಿ ಬದಲಾಯಿಸಿದಾಗ ನಮ್ಮ ರಾಶಿಯಲ್ಲಿ ಅದರ ಸ್ಥಾನಕ್ಕೆ ತಕ್ಕಂತೆ ಫಲ ಸಿಗಲಿದೆ.

ಪ್ರದೋಷ ವ್ರತ: ಪ್ರದೋಷ ವ್ರತದಲ್ಲಿ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಸಿಗುವುದು.

English summary

Festivals and Vrats in the month of December 2022

Here are complete list of Festivals and Vrats in the month of December 2022,
X
Desktop Bottom Promotion