For Quick Alerts
ALLOW NOTIFICATIONS  
For Daily Alerts

ಭೂ ತಾಯಿಯ ಮಗಳು 'ಸೀತಾ ಮಾತೆಯ' ರಹಸ್ಯ....

By Jaya subramanya
|

ಜನಕ ರಾಜನ ದತ್ತುಪುತ್ರಿ ಸೀತಾ ಮಾತೆ ತನ್ನ ಸಹನೆ ಮತ್ತು ಪತಿ ಶ್ರೀರಾಮನ ಕಡೆಗಿನ ಅದಮ್ಯ ಒಲವಿನಿಂದ ಲೋಕಮಾತೆಯಾಗಿ ಹೆಸರುಗಳಿಸಿದವಳು. 14 ವರುಷ ವನವಾಸವನ್ನು ತನ್ನ ಪತಿಯೊಂದಿಗೆ ಅನುಭವಿಸಿದ ಸೀತಾ ಮಾತೆ ಎಂತಹ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಹೋರಾಡುವ ತ್ಯಾಗ ಮೂರ್ತಿಯಾಗಿ ರಾಮಾಯಣದಲ್ಲಿ ಕಂಡುಬಂದಿದ್ದಾಳೆ.

ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಕೂಡ ಸೀತೆಯ ಸಹನೆ, ವಿನಯತೆ ಮತ್ತು ಪತಿಭಕ್ತಿಯ ಬಗ್ಗೆ ಹೊಗಳಿ ಬರೆದಿದ್ದಾರೆ. ಜನಕನ ಮಗಳಾದ್ದರಿಂದ ಜಾನಕಿ ಎಂಬ ಹೆಸರೂ ಮಾತೆಗೆ ಇದೆ. ರಾಮನ ಹೆಜ್ಜೆ ಗುರುತು ಸೀತೆ ಲಕ್ಷ್ಮಣರಿಗೆ ಪಾವನ ಏಕೆ?

ಭೂಮಿಯನ್ನು ಊಳುತ್ತಿರುವಾಗ ದೊರಕಿದ ಮಗುವನ್ನು ಜನಕ ರಾಜ ಪ್ರೀತಿಯಿಂದ ಸಲಹುತ್ತಾರೆ. ಅಂತೆಯೇ ಮಗಳಾಗಿ, ಪತ್ನಿಯಾಗಿ ತಾಯಿಯಾಗಿ ಹೆಣ್ಣು ಹೇಗೆ ಲೋಕದಲ್ಲಿ ಇರಬೇಕೆಂಬ ಅಂಶವನ್ನು ಸಾರಿದ್ದಾರೆ. ಇಂದಿನ ಲೇಖನದಲ್ಲಿ ಸೀತಾ ಮಾತೆಯಿಂದ ನಾವು ತಿಳಿದುಕೊಳ್ಳುವ ಅಂಶಗಳೇನು ಎಂಬುದನ್ನು ಅರಿತುಕೊಳ್ಳೋಣ.....

ಸೀತಾ ಎಂಬ ಪದವು ಸಂಸ್ಕೃತದ ಮೂಲ....

ಸೀತಾ ಎಂಬ ಪದವು ಸಂಸ್ಕೃತದ ಮೂಲ....

ಸೀತಾ ಎಂಬ ಪದವು ಸಂಸ್ಕೃತದಿಂದ ವಿಭಜನೆಗೊಂಡಿದ್ದು, ತನ್ನ ತಂದೆಗೆ ಭೂಮಿಯನ್ನು ಉಳುತ್ತಿರುವಾಗ ದೊರಕಿದ ಮಗಳಾಗಿದ್ದಾಳೆ ಸೀತೆ. ಭೂಮಿಯ ಫಲವತ್ತತೆಯ ಸಂಕೇತವಾಗಿ ಆಕೆಯನ್ನು ಬಣ್ಣಿಸಲಾಗಿದೆ.

ಭೂ ತಾಯಿಯ ಮಗಳು....

ಭೂ ತಾಯಿಯ ಮಗಳು....

ಭೂ ತಾಯಿಯ ಮಗಳು ಎಂಬುದಾಗಿ ಕೂಡ ಸೀತೆ ಪುರಾಣದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ, ಆದ್ದರಿಂದ ಭೂಮಿಜೆ ಎಂಬ ಹೆಸರೂ ಕೂಡ ಆಕೆಗಿದೆ. ತನ್ನ ಪತಿ ಶ್ರೀರಾಮನೊಂದಿಗೆ ಆಕೆ ವನವಾಸವನ್ನು ಅನುಭವಿಸುತ್ತಿದ್ದಾಗ "ವೈದೇಹಿ" ಎಂಬುದಾಗಿ ಕೂಡ ಆಕೆಯನ್ನು ಕರೆದಿದ್ದಾರೆ.

ಜಾನಕಪುರ v/s ಸೀತಾಮರಾಹಿ

ಜಾನಕಪುರ v/s ಸೀತಾಮರಾಹಿ

ಸೀತಾ ಮಾತೆಯ ಹುಟ್ಟಿದ ಸ್ಥಳದ ಕುರಿತು ಸಾಕಷ್ಟು ವದಂತಿಗಳಿವೆ. ನೇಪಾಳದ ದಕ್ಷಿಣದಲ್ಲಿರುವ ಮಿಥಿಲಾದ ಜಾನಕಪುರ ಆಕೆಯ ಜನ್ಮಸ್ಥಳ ಎಂಬುದಾಗಿ ಕೆಲವರು ಹೇಳಿದರೆ, ಬಿಹಾರದಲ್ಲಿರುವ ಸೀತಾಮರಾಹಿ ಎಂಬುದಾಗಿ ಇನ್ನು ಕೆಲವರು ಹೇಳುತ್ತಾರೆ.

ಹಿಂದಿನ ಜನ್ಮದಲ್ಲಿ ವೇದವತಿ

ಹಿಂದಿನ ಜನ್ಮದಲ್ಲಿ ವೇದವತಿ

ಸೀತಾ ಮಾತೆಯು ವೇದವತಿ ಎಂಬ ಹೆಸರಿನಿಂದ ಹಿಂದಿನ ಜನ್ಮದಲ್ಲಿ ವಿಷ್ಣುವನ್ನು ವರಿಸಲು ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ರಾವಣನ ಕಿರುಕುಳಕ್ಕೆ ಒಳಗಾಗಿದ್ದರು. ಮುಂದಿನ ಜನ್ಮದಲ್ಲಿ ವಿನಾಶಗೊಳ್ಳುವ ಶಾಪವನ್ನು ವೇದವತಿಯಿಂದ ರಾವಣ ಪಡೆದುಕೊಂಡಿದ್ದನು.

ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ

ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ

ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ರಾವಣ ಮತ್ತು ಮಂಡೋದರಿಯ ಪ್ರಥಮ ಪುತ್ರಿ ಸೀತೆಯಾಗಿದ್ದಾರೆ. ಮಂಡೋದರಿಯಲ್ಲಿ ಜನಿಸಿದ ಪ್ರಥಮ ಮಗುವಿನಿಂದ ಸಂಪೂರ್ಣ ಸ್ವತ್ತು ನಾಶವಾಗುತ್ತದೆ ಎಂಬುದಾಗಿ ಜ್ಯೋತಿಷಿಗಳು ಹೇಳಿದ್ದರಿಂದ ಮಗುವನ್ನು ಭೂಮಿಯಲ್ಲಿ ಹೂಳಲು ನಿರ್ಧರಿಸಿದರು. ಈ ಮಗುವೇ ನಂತರ ಜನಕನಿಗೆ ದೊರಕಿ ಮಿಥಿಲಾದ ರಾಜಕುಮಾರಿಯಾಗಿ ಬೆಳೆದರು.

ಮಾಯಾ ಸೀತೆ.....

ಮಾಯಾ ಸೀತೆ.....

ಸೀತೆಯ ಬಗ್ಗೆ ಇರುವ ಇನ್ನೊಂದು ಮಹತ್ತರ ಅಂಶವೆಂದರೆ, ರಾಮಾಯಣದಲ್ಲಿ ಮಾಯಾ ಸೀತೆಯ ಬಗ್ಗೆ ಉಲ್ಲೇಖವಿದೆ. ಇದರ ಪ್ರಕಾರ ರಾವಣ ಅಪಹರಿಸಿದ್ದು ಮಾಯಾ ಸೀತೆಯಾಗಿದ್ದು ನಿಜವಾದ ಸೀತೆ ಬೆಂಕಿಯ ದೇವತೆ ಅಗ್ನಿಯಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದರು. ಅಗ್ನಿಯು ಆಕೆಯನ್ನು ಪಾರ್ವತಿಯಲ್ಲಿಗೆ ಕರೆದೊಯ್ದಿದ್ದರು.

ಮಾಯಾ ಸೀತೆ.....

ಮಾಯಾ ಸೀತೆ.....

ಯುದ್ಧ ಸಮಾಪ್ತಿಯಾದ ಬಳಿಕ ಆಕೆ ರಾಮನ ಬಳಿಗೆ ಬಂದರು. ಮಾಯಾ ಸೀತೆಯು ತನ್ನ ಮುಂದಿನ ಜನ್ಮದಲ್ಲಿ ದ್ರೌಪದಿಯಾಗಿ ಮರುಜನ್ಮವನ್ನು ಪಡೆದುಕೊಂಡರು.

English summary

Facts That You Didn't Know About Sita

Devi Sita, the adopted daughter of King Janak and consort of the great Lord Ram, is the female protagonist of the Hindu epic Ramayana written by Maharishi Valmiki. Even though she is said to be an incarnation of goddess Laxmi, the goddess of all the worldly comforts, Devi Sita spent a period of 14 years of exile in a forest, following her husband, setting up an example of loyalty and patience to the world.
X
Desktop Bottom Promotion