For Quick Alerts
ALLOW NOTIFICATIONS  
For Daily Alerts

ಸಂಪತ್ತಿನ ಅಧಿದೇವತೆ 'ಮಹಾಲಕ್ಷ್ಮಿ' ಬಗ್ಗೆ ತಿಳಿಯೋಣ ಬನ್ನಿ...

By Jaya subramanya
|

ಸಂಪತ್ತಿನ ಅಧಿದೇವತೆ ಎಂದೆನಿಸಿರುವ ಲಕ್ಷ್ಮಿಯು ಹಿಂದೂಗಳ ಪಾಲಿಗೆ ಅದೃಷ್ಟ ದೇವತೆ ಆಗಿದ್ದಾಳೆ. ಸಂಸ್ಕೃತ ಪದವಾದ ಲಕ್ಷ್ಯ ಎಂಬುದು ಗುರಿ ಎಂಬ ಅರ್ಥವನ್ನು ಸೂಚಿಸುತ್ತದೆ. ಅಂತೆಯೇ ಲಕ್ಷ್ಮಿಯು ಸಂಪತ್ತು ಮತ್ತು ಸಮೃದ್ಧಿಯ ಮೂಲ ಎಂದೆನಿಸಿದ್ದಾರೆ. ಹಿಂದೂಗಳ ಮನೆಯಲ್ಲಿ ನಿತ್ಯ ಆರಾಧನೆಯ ದೇವತೆ ಎಂದೆನಿಸಿರುವ ಲಕ್ಷ್ಮಿಯು ಮಹಿಳೆಯರಿಗೆ ಅಚ್ಚುಮೆಚ್ಚಿನವರು. ನಿತ್ಯವೂ ಆಕೆಗೆ ಪೂಜೆ ನಡೆಯುತ್ತಿದ್ದು, ಹಬ್ಬಗಳ ತಿಂಗಳು ಎಂದೆನಿಸಿರುವ ಅಕ್ಟೋಬರ್ ಮಾಸವು ಆಕೆಗೆ ವಿಶೇಷವಾದುದು. ಕೋಜಗರಿ ಪೂರ್ಣಿಮೆಯ ಪೂರ್ಣ ಚಂದ್ರನ ರಾತ್ರಿಯಂದು ಆಕೆಯನ್ನು ಪೂಜಿಸುತ್ತಾರೆ.

ಆಕೆಯ ಅಂದವನ್ನು ವರ್ಣಿಸುವುದಾದರೆ ಅದಕ್ಕೆ ಪದಗಳೇ ಸಾಲದು. ಅಷ್ಟೊಂದು ಸುಂದರಿ ಎಂದೆನಿಸಿದ್ದಾರೆ ಲಕ್ಷ್ಮಿ ದೇವರು. ನಾಲ್ಕು ಕೈಗಳು, ಅರಳಿದ ತಾವರೆಯ ಮೇಲೆ ಕುಳಿತ ಭಂಗಿ, ಕೈಯಲ್ಲಿ ಕಮಲದ ಮೊಗ್ಗು, ಇದು ಸೌಂದರ್ಯ ಫಲವತ್ತತೆ ಮತ್ತು ಪರಿಶುದ್ಧತೆಯ ಸಂಕೇತವಾಗಿದೆ. ಆಕೆಯ ನಾಲ್ಕು ಕೈಗಳು ಮಾನವ ಜೀವನದ ನಾಲ್ಕು ಅಂತ್ಯಗಳನ್ನು ಸೂಚಿಸುತ್ತದೆ. ಧರ್ಮ ಅಥವಾ ಸದಾಚಾರ, "ಕಾಮ ಅಥವಾ ಆಸೆ, "ಅರ್ಥ" ಅಥವಾ ಸಂಪತ್ತು, ಮತ್ತು ಜನನ ಮತ್ತು ಮರಣ ಚಕ್ರದಿಂದ "ಮೋಕ್ಷ" ಅಥವಾ ವಿಮೋಚನೆ ಎಂಬುದನ್ನು ಸಾರುತ್ತದೆ. ಲಕ್ಷ್ಮಿ ದೇವಿಯನ್ನು ಆಕರ್ಷಿಸುವ 10 ವಸ್ತುಗಳು

ಸಂಸ್ಕ್ರೃದಲ್ಲಿ ಲಕ್ಷ್ಮಿಯು ಲಕ್ಸ್ ಎಂಬ ಪದ ಅಂದರೆ ಗ್ರಹಿಕೆ ಅಥವಾ ವೀಕ್ಷಣೆ ಎಂಬ ಅರ್ಥವನ್ನು ನೀಡುತ್ತದೆ. ಅಂತೆಯೇ ಇದಕ್ಕೆ ಗುರಿ ಅಥವಾ ಉದ್ದೇಶ ಎಂಬ ಅರ್ಥ ಕೂಡ ಇದೆ. ಲಕ್ಷ್ಮಿಯು ಹೆಚ್ಚಿನ ಹೆಸರುಗಳನ್ನು ಹೊಂದಿದ್ದಾರೆ. ಶರತ್ಕಾಲದ ಆಚರಣೆಯ ಹೊರತಾಗಿ ಲಕ್ಷ್ಮಿಯೊಂದಿಗೆ ಅಲಕ್ಷ್ಮಿ (ಆಕೆಯ ನೆರಳು) ಯನ್ನು ಕೆಲವು ಬಂಗಾಳಿ ಸಮುದಾಯವು ದೀಪಾವಳಿ ರಾತ್ರಿಯಂದು ಪೂಜಿಸುತ್ತಾರೆ. ಕಾಳಿಘಾಟ್‎ನ ಕಾಳಿ ಮಾತೆಯು ಕೋಲ್ಕಾತ್ತಾದಲ್ಲಿ ದೀಪಾವಳಿಯಂದು ಮಹಾಲಕ್ಷ್ಮಿ ರೂಪದಲ್ಲಿ ಪೂಜಿಸುತ್ತಾರೆ.

ಕಮಲದೊಂದಿಗೆ ಆಕೆ ಹೆಚ್ಚು ನಿಕಟವಾಗಿರುತ್ತಾರೆ ಎಂದೇ ಪ್ರಸಿದ್ಧಿಯಲ್ಲಿದೆ. ಅಂತೆಯೇ ಆಕೆಯ ಹೆಚ್ಚಿನ ವಿಶೇಷತೆ ಈ ಕಮಲದೊಂದಿಗೆ ನಂಟನ್ನು ಹೊಂದಿದೆ ಎಂದೂ ಹೇಳುತ್ತಾರೆ. ಅಂದರೆ ಪದ್ಮ: ಕಮಲ ವಾಸಿ ಕಮಲಾ: ಕಮಲದ ವಾಸಿ ಪದ್ಮಪ್ರಿಯ: ಕಮಲಗಳನ್ನು ಇಷ್ಟಪಡುವವರು ಪದ್ಮಮಾಲಾಧಾರಿ ದೇವಿ: ಕಮಲಗಳನ್ನೇ ಹಾರವನ್ನಾಗಿ ಧರಿಸಿಕೊಂಡಾಕೆ ಪದ್ಮಮುಖಿ: ಕಮಲದಮತೆ ಸುಂದರವಾದ ಮುಖಾರವಿಂದವನ್ನು ಹೊಂದಿರುವವರು ಪದ್ಮಾಕ್ಷಿ: ಕಮಲದಂತೆ ಸುಂದರವಾಗಿರುವ ಕಣ್ಣುಗಳನ್ನು ಹೊಂದಿದವಳು ಪದ್ಮಾಷ್ಟ: ಕಮಲವನ್ನು ಕೈಯಲ್ಲಿ ಹಿಡಿದಾಕೆ ಪದ್ಮಸುಂದರಿ: ಕಮಲದಂತೆ ಸುಂದರವಾಗಿರುವಾಕೆ. ಬನ್ನಿ ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ನೋಡೋಣ...

ಆಕೆಯ ಇತರ ಹೆಸರುಗಳು

ಆಕೆಯ ಇತರ ಹೆಸರುಗಳು

ಮನುಶ್ರೀ, ಚಕ್ರಿಕಾ, ಕಮಲಿಕಾ, ಐಶರ್ಯಾ,ಲಾಲಿಮಾ, ಕಲ್ಯಾಣಿ, ನಂದಿಕಾ, ರಾಜುಲಾ, ವೈಷ್ಣವಿ, ಸಮೃದ್ಧಿ, ನಾರಾಯಣಿ, ಭಾರ್ಗವಿ, ಶ್ರೀದೇವಿ, ಚಂಚಲಾ, ಜಲಜಾ, ಮಾಧವಿ, ಸುಜಾತಾ, ಶ್ರೇಯಾ. ಮಹಾಲಕ್ಮೀ ಅಷ್ಟಕದಲ್ಲಿ ಆಕೆಯನ್ನು ಜಗನ್ಮಾತೆ (ಭೂಮಂಡಲದ ತಾಯಿ) ಎಂಬುದಾಗಿ ಉಲ್ಲೇಖಿಸಲಾಗಿದೆ. ರಮಾ ಮತ್ತು ಇಂದಿರಾ ಹೆಚ್ಚು ಜನಪ್ರಿಯ ಹೆಸರುಗಳಾಗಿವೆ.

ಲಕ್ಷ್ಮಿಯನ್ನು ಪೂಜಿಸುವ ವಿಧಾನ

ಲಕ್ಷ್ಮಿಯನ್ನು ಪೂಜಿಸುವ ವಿಧಾನ

ಕಮಲದ ಹೂವು, ಶ್ರೀಗಂಧ, ಕುಂಕಮ, ವೀಳ್ಯದೆಲೆ ಮತ್ತು ನಟ್ಸ್, ಹಣ್ಣುಗಳು ಮತ್ತು ಬೆಲ್ಲ, ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಬಳಸಿ ಆಕೆಯ ಪೂಜೆಗಾಗಿ ಬೇರೆ ಬೇರೆ ಸಿಹಿಗಳನ್ನು ಮಾಡುತ್ತಾರೆ.

ಲಕ್ಷ್ಮಿ ವೃತ/ಪೂಜಾ

ಲಕ್ಷ್ಮಿ ವೃತ/ಪೂಜಾ

ಗುರುವಾರ ಅಥವಾ ಪೂರ್ಣ ಚಂದ್ರನ ದಿನಗಳಂದು ಲಕ್ಷ್ಮಿ ವೃತ/ಪೂಜಾವನ್ನು ಕೈಗೊಳ್ಳುವುದು ಹೆಚ್ಚು ಜನಪ್ರಿಯವಾಗಿದೆ. ಮಹಿಳೆಯರು ಆಕೆಯ ಮಹಿಮೆಯನ್ನು ಸಾರುವ ಪಂಚಾಲಿ ಸ್ತೋತ್ರವನ್ನು ಹೇಳುತ್ತಾರೆ.

ಆಕೆಯ ರಾಜಶಕ್ತಿ

ಆಕೆಯ ರಾಜಶಕ್ತಿ

ಉನ್ನತಿಯ ನಾಣ್ಯಗಳನ್ನು ಸುರಿಯುತ್ತಿರುವುದು ಮತ್ತು ಆನೆಗಳಿಂದ ಸುತ್ತುವರಿದಿರುವುದು ಆಕೆಯ ರಾಜಶಕ್ತಿಯನ್ನು ಸೂಚಿಸುತ್ತದೆ. ಅದಾಗ್ಯೂ ಕೆಲವು ಪಠ್ಯಗಳಲ್ಲಿ ತನ್ನ ವಾಹನವಾಗಿ ಗೂಬೆಯನ್ನು ಇರಿಸಿಕೊಂಡಿರುವುದು ತಿಳಿದು ಬರುತ್ತದೆ. ಆಕೆಯ ಅಭಿವ್ಯಕ್ತಿ ಯಾವಾಗಲೂ ಶಾಂತ ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಕಮಲವು ಸಾವಯವ ಜೀವನದ ಫಲವತ್ತಾದ ಬೆಳವಣಿಗೆಯ ಸಂಕೇತವಾಗಿದ್ದು, ವಿಷ್ಣುವಿನ ಹೊಕ್ಕುಳದಿಂದ ಕಮಲವು ಬೆಳೆಯುತ್ತಿರುವಂತೆ ವಿಶ್ವವು ನಿರಂತರವಾಗಿ ಮರುಜನ್ಮ ಪಡೆಯುತ್ತಿದೆ ಎಂದಾಗಿದೆ.

ಪೂಜೆಯ ವಿಧಿ ವಿಧಾನ

ಪೂಜೆಯ ವಿಧಿ ವಿಧಾನ

ಲಕ್ಷ್ಮೀಯನ್ನು ನಿತ್ಯವೂ ಪೂಜಿಸಲಾಗುತ್ತದೆ, ಆದರೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಗಮನವನ್ನು ಲಕ್ಷ್ಮಿ ಪೂಜೆಗೆ ನೀಡಲಾಗುತ್ತದೆ. ಹಣ್ಣು ಮತ್ತು ಸಿಹಿಗಳನ್ನು ದೇವರಿಗೆ ಅರ್ಪಿಸುವುದು, 108 ಹೆಸರುಗಳನ್ನು ಪಠಿಸುವುದು, ಪ್ರಾರ್ಥನೆಗಳನ್ನು ಮಾಡುವುದು, ದೇವರ ಹಾಡುಗಳನ್ನು ಹಾಡುವುದನ್ನು ಆಕೆಯ ಪೂಜೆಯು ಒಳಗೊಂಡಿದೆ.

ಪೂಜೆಯ ವಿಧಿ ವಿಧಾನ

ಪೂಜೆಯ ವಿಧಿ ವಿಧಾನ

ಅಷ್ಟ ಲಕ್ಷ್ಮೀ (ಸಂಸ್ಕೃತ: ಅಷ್ಟಲಕ್ಷ್ಮಿ ಎಂಟು ಲಕ್ಷ್ಮೀಯರು) ಎಂಟು ಗುಂಪಿರುವ ದೇವರ ಎರಡನೆಯ ಕುರುಹಾಗಿದ್ದು, ಸಂಪತ್ತಿನ ಎಂಟು ಮೂಲಗಳಾಗಿದ್ದು ಶ್ರೀ ಲಕ್ಷ್ಮಿಯರ ಶಕ್ತಿಗಳನ್ನು ಪ್ರಸ್ತುತಪಡಿಸುತ್ತದೆ.ನಿಜವಾಗಿ ಮಹಾಲಕ್ಷ್ಮಿಯು ಸಂಪತ್ತಿನ ಹದಿನೆಂಟನೆಯ ಕುರುಹಾಗಿದ್ದು, ಹತ್ತರಲ್ಲಿ ಎಂಟು ಸಿದ್ಧಿಗಳನ್ನು ಅಷ್ಟ ಸಿದ್ಧಿ ಎಂದು ಕರೆಯಲಾಗಿದೆ. ಜ್ಞಾನದ ಆಧ್ಯಾತ್ಮಿಕ ಅರಿವಾಗಿದೆ, ಮತ್ತು ಯಾವುದೇ ವರ್ಗ ಬೇಧವಿಲ್ಲದೆ ಸಂಪೂರ್ಣ ಜಗತ್ತಿಗೆ ಆಧ್ಯಾತ್ಮಿಕ ಜ್ಞಾನವನ್ನು ಶ್ರುತಪಡಿಸುವುದಾಗಿದೆ.

ಲೌಕಿಕ ಸಂಪತ್ತಿನ ಅಧಿದೇವತೆ

ಲೌಕಿಕ ಸಂಪತ್ತಿನ ಅಧಿದೇವತೆ

ಮಹಾಲಕ್ಷ್ಮಿಯನ್ನು ಅಷ್ಟ ಸಿದ್ಧಿಗಳು, ಜ್ಞಾನ ಮತ್ತು ಜ್ಞಾನ ಶ್ರುತಪಡಿಸುವ ಅಂತಲ್ಲದೆ ಲೌಕಿಕ ಸಂಪತ್ತಿನ 16 ರೂಪಗಳ ಅಧಿದೇವತೆ ಎಂದು ಕರೆಯಲಾಗುತ್ತದೆ. ಅವು ಈ ಕೆಳಗಿನಂತಿವೆ: ಪ್ರಸಿದ್ಧಿ, ಜ್ಞಾನ, ಧೈರ್ಯ ಮತ್ತು ಶಕ್ತಿ, ವಿಜಯ, ಉತ್ತಮ ಮಕ್ಕಳು, ಶೌರ್ಯ, ಚಿನ್ನ, ರತ್ನ ಮತ್ತು ಇತರ ಬೆಲೆಬಾಳುವಂಥದ್ದು, ಹೇರಳ ಧಾನ್ಯಗಳು, ಸಂತೋಷ, ಪರಮಾನಂದ, ಬುದ್ಧಿಮತ್ತೆ, ಸೌಂದರ್ಯ, ಹೆಚ್ಚಿನ ಗುರಿ, ಮಹತ್ತರ ಯೋಚನೆ, ಉತ್ತಮ ಧ್ಯಾನ, ನೈತಿಕತೆ ಮತ್ತು ಸಿದ್ಧಾಂತಗಳು, ಉತ್ತಮ ಆರೋಗ್ಯ, ಸುದೀರ್ಘ ಜೀವನ ಎಂಬುದಾಗಿ ವಿವರಿಸಲಾಗಿದೆ.

ಹಿಂದೂ ಪವಿತ್ರ ಗ್ರಂಥಗಳ ಪ್ರಕಾರ....

ಹಿಂದೂ ಪವಿತ್ರ ಗ್ರಂಥಗಳ ಪ್ರಕಾರ....

ಅಷ್ಟಲಕ್ಷ್ಮಿಯರ ವಿಧಗಳನ್ನು ಪ್ರತೀ ಯುಗದಲ್ಲಿ ವಿವರಿಸಲಾಗಿದೆ ಮತ್ತು ಹಿಂದೂ ಪವಿತ್ರ ಗ್ರಂಥಗಳಲ್ಲಿ ಅಷ್ಟಲಕ್ಷ್ಮೀಯರ ಹೆಸರುಗಳಲ್ಲಿ ಏಕರೂಪತೆ ಇಲ್ಲ. ಸೃಷ್ಟಿಯ ಸಂಪೂರ್ಣ ಮೂಲವನ್ನು ಆಕೆ ರಚಿಸಿದ್ದು ಅದಿಲ್ಲದೆ ನಮ್ಮ ಬದುಕು ಕಷ್ಟಾಸಾಧ್ಯವಾಗುತ್ತಿತ್ತು ಆಕೆಯಿಲ್ಲದೆ ಈ ವಿಶ್ವಕ್ಕೆ ಅಸ್ತಿತ್ವವೇ ಇಲ್ಲ ಎಂಬಂತೆ ಕೋಟಿಕುರುಹುಗಳು ಮಹಾಲಕ್ಷ್ಮೀಗೆ ಇವೆ ಎಂಬುದಾಗಿ ತಿಳಿಸಲಾಗಿದೆ. ಆಕೆಯ ಆಶಿರ್ವಾದವಿಲ್ಲದೆ, ತಿನ್ನಲು ಏನೂ ಇಲ್ಲ, ಉಸಿರಾಡಲು ಗಾಳಿ ಇಲ್ಲ, ಮುಂದುವರಿಯಲು ವಂಶವಿಲ್ಲ ಇತ್ಯಾದಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಿಂದೂ ಪವಿತ್ರ ಗ್ರಂಥಗಳ ಪ್ರಕಾರ....

ಹಿಂದೂ ಪವಿತ್ರ ಗ್ರಂಥಗಳ ಪ್ರಕಾರ....

ಒಂದು ಸಣ್ಣ ಹಂತದಲ್ಲಿ, ಸಂಪತ್ತಿಲ್ಲದೆ ಈ ವಿಶ್ವದಲ್ಲಿ ನಾವು ಕಳೆಯಲಾರೆವು, ಒಬ್ಬ ವ್ಯಕ್ತಿ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಂಡ ಎಂದಲ್ಲಿ, ಪ್ರಾರ್ಥನೆಯಿಲ್ಲದೆ ಮಹಾಲಕ್ಷ್ಮಿಯ ಅನುಗ್ರಹಿಲ್ಲದೆ ಆತ ಒಂದು ನಾಣ್ಯವನ್ನು ಗಳಿಸಲಾರ. ದೇವತೆಗಳ ರಾಜ ದೇವೇಂದ್ರ ಮಹಾಲಕ್ಷ್ಮೀಯ ಅನುಗ್ರಹದಿಂದ ಸಂಪತ್ತನ್ನು ಗಳಿಸಿಕೊಂಡ. ದುರ್ವಾಸರಿಗೆ ನೀಡಿದ ಹಾರವನ್ನು ದೇವೇಂದ್ರ ಅಪಚಾರ ಮಾಡಿದೆ ಎಂಬ ಕಾರಣದಿಂದ ಆತ ಶಾಪಕ್ಕೊಳಗಾಗಿದ್ದಾಗ ವಿಮೋಚನೆ ದೊರೆತಿದ್ದು ಲಕ್ಷ್ಮೀಯಿಂದಾಗಿದೆ.

ಲಕ್ಷ್ಮಿಯ ಇತರ ರೂಪ..

ಲಕ್ಷ್ಮಿಯ ಇತರ ರೂಪ..

ಲಕ್ಷ್ಮಿಯು ಇತರೆ ರೂಪಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚು ಪ್ರಸಿದ್ಧವಾಗಿರುವಂಥದ್ದು, ಶ್ರೀದೇವಿ, ಭೂದೇವಿ ಮತ್ತು ನೀಲಾದೇವಿಯಾಗಿದೆ. ಪ್ರಸಿದ್ಧ ವೈಷ್ಣವ ಸಂತೆ ಅಂಡಾಲ್, ತಮಿಳು ನಾಡಿನ ಶ್ರೀವಲ್ಲಿಪುತ್ತೂರ್‎ನಲ್ಲಿ ಜನಿಸಿದ್ದ ಈಕೆಗೆ 5050 ವರ್ಷಗಳ ಇತಿಹಾಸವಿದ್ದು ಮಹಾಲಕ್ಷ್ಮೀಯ ಅವತಾರವೆಂದೇ ಅಂಡಾಳ್ ಅನ್ನು ಸ್ಮರಿಸುತ್ತಾರೆ. ಶ್ರೀದೇವಿ ಎಂಬುದು ಸಂಸ್ಕೃತದಲ್ಲಿ ಚಲಿಸಬಹುದಾದ ಸಂಪತ್ತು ಎಂದಾಗಿದ್ದು, ಚಂಚಲ ಎಂದೂ ಸಂಸ್ಕೃತದಲ್ಲಿ ಇದನ್ನು ಕರೆಯುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಕ್ಷ್ಮಿಯ ಇತರ ರೂಪ..

ಲಕ್ಷ್ಮಿಯ ಇತರ ರೂಪ..

ಭೂದೇವಿಯನ್ನು ಚಲಿಸಲು ಸಾಧ್ಯವಿಲ್ಲದ್ದು ಎಂದು ಕರೆಯುತ್ತಾರೆ. ಆದ್ದರಿಂದಲೇ ಭಾರತದಲ್ಲಿರುವ ಪರ್ವತಗಳನ್ನು ಅಚನಾಚಲ ಎಂದು ನಮೂದಿಸಲಾಗಿದೆ ಉದಾಹರಣೆಗೆ ಅರುಣಾಚಲ, ಹಿಮಾಚಲ ಇತ್ಯಾದಿ. ಚಂಚಲ ಎಂಬ ಪದವೂ ಚಂಚಲತೆಯನ್ನೇ ಸೂಚಿಸುತ್ತದೆ. ಆದ್ದರಿಂದಲೇ ಜನರು ಯಾವಾಗಲೂ ಹಣವಂತರಾಗಿರುವುದಿಲ್ಲ. ಮಹಾಲಕ್ಷ್ಮೀಯ ಅನುಗ್ರಹದಿಂದಲೇ ಜಗತ್ತಿನಲ್ಲಿರುವ ಎಲ್ಲವೂ ಕಾರ್ಯನಿರ್ವಿಸುತ್ತದೆ ಎಂದಾಗಿದೆ.

English summary

Facts about Goddess Lakshmi no one knows!

Goddess Lakshmi means Good Luck to Hindus. The word 'Lakshmi' is derived from the Sanskrit word "Laksya", meaning 'aim' or 'goal', and she is the goddess of wealth and prosperity, both material and spiritual. Lakshmi is the household goddess of most Hindu families, and a favorite of women. Although she is worshiped daily, the festive month of October is Lakshmi's special month.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more