For Quick Alerts
ALLOW NOTIFICATIONS  
For Daily Alerts

ಶನಿವಾರದ ವ್ರತ-ಪೂಜೆ ಹೀಗಿರಲಿ- ಶನಿ ದೇವ ಸಂತುಷ್ಟನಾಗುವನು

|

ಶನಿವಾರವನ್ನು ವಿಶೇಷವಾಗಿ ಶನಿ ದೇವರಿಗೆ ಮೀಸಲಾಗಿಟ್ಟಿದ್ದು ಈ ದಿನ ಶನಿ ದೋಷ ನಿವಾರಣೆಗೆ ಬೇಕಾದ ಪೂಜೆಗಳನ್ನು ವ್ರತಗಳನ್ನು ಕೈಗೊಳ್ಳಲಾಗುತ್ತದೆ. ಮಾನವ ಜನ್ಮದಲ್ಲಿ ಶನಿಯು ವಿಪರೀತವಾಗಿ ಮಾನವರನ್ನು ಕಾಡುತ್ತಾರೆ, ಕಷ್ಟಗಳ ಪರಿಚಯವನ್ನು ಅವರಿಗೆ ಮಾಡಿಸುತ್ತಾರೆ, ದುಃಖವನ್ನು ನುಂಗಿಕೊಳ್ಳುವ ಶಕ್ತಿಯನ್ನು ನೀಡುತ್ತಾರೆ. ಹುಲು ಮಾನವರಾದ ನಾವು ಮಾತ್ರವಲ್ಲದೆ ದೇವಾಧಿ ದೇವತೆಗಳೂ ಕೂಡ ಶನಿಯ ಉಪಟಳವನ್ನು ಅನುಭವಿಸಿದ್ದಾರೆ. ರಾಜಾಧಿರಾಜರೂ ಕೂಡ ಶನಿಗೆ ಶಿರಬಾಗಿದ್ದಾರೆ

ಇಂತಿಪ್ಪ ಶನಿಯ ದೋಷವನ್ನು ಕಡಿಮೆಗೊಳಿಸಿ ಅವರ ಅನುಗ್ರಹವನ್ನು ಪಡೆದುಕೊಳ್ಳಲು ನೀವು ವಿಶೇಷ ಪೂಜೆ ಮತ್ತು ವ್ರತಗಳನ್ನು ಕೈಗೊಳ್ಳಬೇಕಾಗುತ್ತದೆ. ಎಳ್ಳಿನ ಎಣ್ಣೆ ಎಂದರೆ ಶನಿ ದೇವರಿಗೆ ಹೆಚ್ಚು ಪ್ರಿಯವಾಗಿದ್ದು ಇದರಿಂದ ಉರಿಸಿದ ದೀಪವನ್ನು ಶನಿ ವಿಗ್ರಹದ ಮುಂದೆ ಇರಿಸಿ ನೀವು ಅವರನ್ನು ಪ್ರಾರ್ಥಿಸಬಹುದು, ಇಲ್ಲದಿದ್ದರೆ ಹನುಮನ ಗುಡಿಗೆ ಹೋಗಿ ಹನುಮನನ್ನ ಪ್ರಾರ್ಥಿಸಿದರೂ ಕೂಡ ಶನಿ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು.

ಶನಿಯು ಕಷ್ಟವನ್ನು ನೀಡಿ ತನ್ನ ಇರುವಿಕೆಯನ್ನು ಮಾನವರಿಗೆ ಮಾಡಿಸುತ್ತಾರೆ. ಅವರಲ್ಲಿ ಶಕ್ತಿ, ಸ್ಥೈರ್ಯ ಕುಂದದಂತೆ ಕಾಪಾಡುತ್ತಾರೆ. ಅದಾಗ್ಯೂ ಅವರನ್ನು ಒಲಿಸಿಕೊಳ್ಳುವುದೂ ಕೂಡ ನಮ್ಮ ಜೀವನದಲ್ಲಿ ಅತ್ಯಗತ್ಯವಾಗಿರುವುದರಿಂದ ಕೆಲವೊಂದು ಪರಿಹಾರಗಳನ್ನು ಕಂಡುಕೊಂಡು ಶನಿಯ ಕೃಪೆಗೆ ಒಳಗಾಗಬಹುದು. ಸೂರ್ಯ ಮತ್ತು ಛಾಯಾ ದಂಪತಿಗಳ ಪುತ್ರನಾಗಿರುವ ಶನಿ ಹುಟ್ಟಿನಿಂದಲೇ ತಂದೆಯ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಹೀಗೆ ಅವರು ಕೂಡ ನಮ್ಮಂತೆಯೇ ನೋವಿನ ಜೀವನವನ್ನು ಉಂಡವರಾಗಿದ್ದಾರೆ. ಭಕ್ತರನ್ನು ಕಾಪಾಡುವ ಶನಿ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಇಂದಿನ ಲೇಖನದಲ್ಲಿ ಶನಿ ದೇವರನ್ನು ಸಂಪ್ರೀತಗೊಳಿಸುವ ಪೂಜೆ ವ್ರತಗಳೇನು ಎಂಬುದನ್ನು ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.

ಶನಿದೇವರನ್ನು ಒಲಿಸಿಕೊಳ್ಳಲು ತಪ್ಪದೇ ಮಾಡಿ ಶನಿವಾರ ವ್ರತ

ಶನಿವಾರದ ವ್ರತ

ಶನಿವಾರದ ವ್ರತ

ಶನಿವಾರ ವ್ರತ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದ್ದು ಉಳಿದ ವ್ರತಗಳಿಗಿಂತ ಹೆಚ್ಚು ಮಹತ್ವಪೂರ್ಣವಾದುದು. ತಮ್ಮ ಜಾತಕದಲ್ಲಿ ದುರ್ಬಲ ಶನಿ ಇರುವವರು ಈ ದಿನ ಉಪವಾಸವನ್ನು ಕೈಗೊಳ್ಳುವುದರಿಂದ ಶನಿ ದೇವರ ಅನುಗ್ರಹಕ್ಕೆ ಒಳಗಾಗಬಹುದು. ಅಂತೆಯೇ ತಮ್ಮ ದೋಷಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.

ಶನಿವಾರ ಶನಿ ಪೂಜೆ ಮಾಡುವುದು ಹೇಗೆ

ಶನಿವಾರ ಶನಿ ಪೂಜೆ ಮಾಡುವುದು ಹೇಗೆ

ಯಾವುದೇ ತಿಂಗಳಿನ ಶುಕ್ಷ ಪಕ್ಷದಂದು ಬರುವ ಪ್ರಥಂ ಶನಿವಾರದಂದು ಈ ವೃತವನ್ನು ಕೈಗೊಳ್ಳಬೇಕು. 11 ಅಥವಾ 51 ವಾರಗಳಂದು ಈ ವೃತವನ್ನು ಮಾಡಬೇಕು. ನಂತರ ಉದ್ಯಾಪನವನ್ನು ಮಾಡಿ ವ್ರತವನ್ನು ಸಂಪನ್ನ ಗೊಳಿಸಬೇಕು.

ಶನಿ ದೇವರಿಗೆ ಪೂಜೆ ಮಾಡುವುದು ಹೇಗೆ

ಶನಿ ದೇವರಿಗೆ ಪೂಜೆ ಮಾಡುವುದು ಹೇಗೆ

ಶನಿವಾರ ವ್ರತ ಕೈಗೊಳ್ಳುವವರು ಈ ದಿನ ಸೂರ್ಯೋದಯಕ್ಕೂ ಕನಿಷ್ಠ ಒಂದು ಗಂಟೆ ಮೊದಲೇ ಎದ್ದು ಪ್ರಾತಃ ವಿಧಿಗಳನ್ನು ಪೂರೈಸಿ ಸ್ನಾನ ಮಾಡಿದ ಬಳಿಕ ಕೇವಲ ಕಪ್ಪು ವಸ್ತ್ರಗಳನ್ನು ಮಾತ್ರ ಧರಿಸಬೇಕು. ಮೈ ಮೇಲೆ ಇತರ ಬಣ್ಣದ ಒಂದು ನೂಲು ಸಹಾ ಇರಬಾರದು. ಮನೆಯಲ್ಲಿ ದೇವರ ಪಟದ ಮುಂದೆ ಇರುವ ಹಣತೆಯಲ್ಲಿ ಇಡಿಯ ದಿನ ಎಳ್ಳೆಣ್ಣೆ ಹಾಕಿ ಇಡಿಯ ದಿನ ಆರದಂತೆ ನೋಡಿಕೊಳ್ಳಬೇಕು. ಬಳಿಕ ಕಬ್ಬಿಣದಿಂದ ಮಾಡಿದ ಶನಿದೇವರ ವಿಗ್ರಹವನ್ನು ಪೂಜೆಸಬೇಕು. ಒಂದು ವೇಳೆ ನಿಮ್ಮ ಪ್ರಯತ್ನಕ್ಕೂ ಮೀರಿ ಶನಿದೇವರ ಕಬ್ಬಿಣದ ಮೂರ್ತಿ ಲಭ್ಯವಾಗದೇ ಇದ್ದರೆ ಶನಿದೇವರ ಪಟವನ್ನು ಪೂಜಿಸಬಹುದು. ಪೂಜೆಯ ಸಮಯದಲ್ಲಿ ಕಪ್ಪು ಹೂವು, ಕಪ್ಪೆಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಶನಿ ದೇವರಿಗೆ ಬೇಯಿಸಿದ ಅನ್ನದೊಂದಿಗೆ ಸಮರ್ಪಿಸಬೇಕು. ಶನಿ ದೇವರ ಮಂತ್ರವನ್ನು ಪಠಿಸಿ ಮತ್ತು ಶನಿ ದೇವರ ವ್ರತ ಕಥೆಯನ್ನು ಓದಿ ಪೂಜೆಯನ್ನು ಸಂಪೂರ್ಣಗೊಳಿಸಬೇಕು.

ಶನಿವಾರ ವ್ರತದ ನಿಯಮಗಳು

ಶನಿವಾರ ವ್ರತದ ನಿಯಮಗಳು

ಹನುಮಂತ ಇಲ್ಲದಿದ್ದರೆ ಭೈರವನ ದೇವಸ್ಥಾನಕ್ಕೆ ಹೋಗಿ ಎಳ್ಳು, ಕಪ್ಪು ಉದ್ದು, ಕಪ್ಪು ಎಳ್ಳು ಮತ್ತು ಕಪ್ಪು ಬಟ್ಟೆಗಳನ್ನು ದೇವರಿಗೆ ಅರ್ಪಿಸಬೇಕು. ಬೆಳಗ್ಗೆ ಎಲ್ಲಾ ಉಪವಾಸ ಮಾಡಿ ಸೂರ್ಯಾಸ್ತದ ನಂತರ ಆಹಾರ ಸೇವಿಸಬೇಕು.

ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ಒಮ್ಮೆ ಒಂಭತ್ತು ಗ್ರಹಗಳು ತಮ್ಮಲ್ಲಿ ಯಾರು ಶ್ರೇಷ್ಠರು ಎಂಬ ವಾದಕ್ಕೆ ಇಳಿಯುತ್ತಾರೆ. ತಮ್ಮ ವಾದವನ್ನು ಮಂಡಿಸಿ ತಮ್ಮಲ್ಲಿ ಶ್ರೇಷ್ಠರು ಯಾರು ಎಂಬುದನ್ನು ತಿಳಿಸಲು ಅವರುಗಳು ಇಂದ್ರನನ್ನು ಭೇಟಿ ಮಾಡುತ್ತಾರೆ. ಅದರೆ ಅವರ ಕೋಪಕ್ಕೆ ಹೆದರಿ ಇಂದ್ರನು ಅವರನ್ನು ಉಜ್ಜಯಿನಿಯ ಪ್ರಖ್ಯಾತ ರಾಜ ವಿಕ್ರಮಾದಿತ್ಯನ ಬಳಿ ಕಳುಹಿಸುತ್ತಾರೆ.

ಶನಿವಾರ ವ್ರತ ಕಥೆ

ಶನಿವಾರ ವ್ರತ ಕಥೆ

ವಿಕ್ರಮಾದಿತ್ಯರು ಚಿನ್ನ, ಬೆಳ್ಳಿ, ಕಂಚಿನ, ತಾಮ್ರ, ಹಿತ್ತಾಳೆ, ತವರ, ಸತು, ಮೈಕಾ ಮತ್ತು ಕಬ್ಬಿಣ ಮತ್ತು ಅವರ ಆಯ್ಕೆಯ ಪ್ರಕಾರ ಸಿಂಹಾಸನಗಳನ್ನು ಆಕ್ರಮಿಸಿಕೊಳ್ಳಲು ಗ್ರಹಗಳ ದೇವರುಗಳನ್ನು ಕೇಳಿದರು. ಸೂರ್ಯನಿಂದ ಆರಂಭಗೊಂಡು, ಶನಿಯು ಕೊನೆಗೆ ಕಬ್ಬಿಣವನ್ನು ಆಕ್ರಮಿಸುವಲ್ಲಿಂದ ಕೊನೆಗೊಂಡು ಅನುಕ್ರಮವಾಗಿ ಸಿಂಹಾಸನಗಳನ್ನು ಆಕ್ರಮಿಸಿಕೊಂಡರು.

ಶನಿವಾರ ವ್ರತದ ಕಥೆ - ಶನಿ ದೇವ

ಶನಿವಾರ ವ್ರತದ ಕಥೆ - ಶನಿ ದೇವ

ತಮ್ಮ ಸಿಂಹಾಸವನ್ನು ಆರಿಸಿಕೊಂಡಿರುವುದನ್ನು ಆಧರಿಸಿಕೊಂಡು ಅವರಲ್ಲಿ ಯಾರು ಶ್ರೇಷ್ಠರು ಎಂಬುದನ್ನು ಅರಿತುಕೊಳ್ಳಬಹುದು ಎಂಬುದು ರಾಜ ತಿಳಿಸುತ್ತಾರೆ. ರಾಜನ ತರ್ಕಕ್ಕೆ ಒಪ್ಪದ ಶನಿಯು ಕೋಪಗೊಂಡು ವಿಕ್ರಮಾದಿತ್ಯನಿಗೆ ಶಾಪವನ್ನು ನೀಡುತ್ತಾರೆ.

ಸಾಡೇ ಸಾಥಿ ದೋಷದ ಉಪಟಳ

ಸಾಡೇ ಸಾಥಿ ದೋಷದ ಉಪಟಳ

ಮುಂದಿನ ಏಳೂವರೆ ವರ್ಷ ವಿಕ್ರಮಾದಿತ್ಯನಿಗೆ ಸಾಡೇ ಸಾಥಿ ಶನಿಯು ಕಾಡುತ್ತದೆ ಎಂಬ ದುಃಖಕ್ಕೆ ವಿಕ್ರಮಾದಿತ್ಯ ಒಳಗಾಗುತ್ತಾರೆ. ಕಾಡಿನಲ್ಲಿ ದಾರಿ ತಿಳಿಯದೆಯೇ, ಅಹಾರವಿಲ್ಲದೆ ಅಲೆದು ಕಳ್ಳತನದ ಅಪರಾಧಕ್ಕೆ ಬಂಧಿಸಲ್ಪಡುತ್ತಾರೆ. ಅವರ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಗುತ್ತದೆ. ಎಣ್ಣೆ ಗಾಣದಲ್ಲಿ ಅವರಿಗೆ ಉದ್ಯೋಗ ದೊರೆಯುತ್ತದೆ. ಅವರು ಸುಮಧುರ ಹಾಡನ್ನು ಹಾಡುತ್ತಿದ್ದಾಗ ಅದಕ್ಕೆ ಮನಸೋತು ಆ ದೇಶದ ರಾಜಕುಮಾರಿ ರಾಜನನ್ನು ಮದುವೆಯಾಗಲು ಬಯಸುತ್ತಾಳೆ.

ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಸಾಡೇ ಸಾಥಿ ದೋಷದ ಉಪಟಳ

ಸಾಡೇ ಸಾಥಿ ದೋಷದ ಉಪಟಳ

ಅಕೆಯನ್ನು ವಿವಾಹವಾಗುವುದರ ಹೊರತು ವಿಕ್ರಮಾದಿತ್ಯನಿಗೆ ಬೇರೆ ದಾರಿ ಇರಲಿಲ್ಲ. ಆ ಸಮಯದಲ್ಲಿ ಸಾಡೇ ಸಾಥಿಯು ಮುಗಿಯುವ ಹಂತದಲ್ಲಿತ್ತು ಮತ್ತು ವಿಕ್ರಮಾದಿತ್ಯ ತಮ್ಮ ಅಧಿಕಾರವನ್ನು ಪುನಃ ಪಡೆದುಕೊಳ್ಳುತ್ತಾರೆ. ಅವರನ್ನು ರಾಜಕುಮಾರಿಯನ್ನು ವಿವಾಹವಾದರು ಅಂತೆಯೇ ಶ್ರೀಮಂತರ ಪುತ್ರಿಯನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾರೆ.

ಹಿರಿಮೆ ಮರಳಿತು

ಹಿರಿಮೆ ಮರಳಿತು

ಏಳೂವರೆ ವರ್ಷಗಳ ನಂತರ ವಿಕ್ರಮಾದಿತ್ಯ ತಮ್ಮ ಹಿಂದಿನ ರಾಜ ವೈಭವನ್ನು ಮರಳಿ ಪಡೆದುಕೊಂಡರು. ಶನಿ ದೇವರನ್ನು ಮೆಚ್ಚಿಸಲು ಅವರು ವಾರ ಬಿಟ್ಟು ವಾರ ಶನಿವಾರ ವ್ರತ ಕೈಗೊಳ್ಳಲು ಆರಂಭಿಸಿದರು. ಶನಿ ದೇವರ ಅನುಗ್ರಹವನ್ನು ಪಡೆದುಕೊಂಡು ತಮ್ಮ ಸಂಪತ್ತಿನೊಂದಿಗೆ ವಿಕ್ರಮಾದಿತ್ಯ ಆನಂದದಿಂದ ಕಳೆಯುತ್ತಾರೆ.

ಶನಿವಾರ ಉವಾಸದ ಪ್ರಯೋಜನಗಳು

ಶನಿವಾರ ಉವಾಸದ ಪ್ರಯೋಜನಗಳು

ಶನಿದೇವರ ಸಾಡೇ ಸಾಥಿ, ದಹಿಯಾ, ಮಹಾದರ್ಶ ಅಥವಾ ಅಂತಾದರ್ಶವನ್ನು ಹೊಂದಿರುವವರು ಈ ಉಪವಾಸವನ್ನು ಕೈಗೊಳ್ಳುತ್ತಾರೆ. ಶನಿವಾರ ಉಪವಾಸ ಮಾಡುವುದರಿಂದ ಕೀಲು ನೋವು, ಸ್ನಾಯು ನೋವು, ಬೆನ್ನು ನೋವು, ಸ್ನಾಯು ಸಂಬಂಧಿ ನೋವುಗಳಿಂದ ರಕ್ಷಣೆ ಪಡೆಯಬಹುದು. ಅಂತೆಯೇ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು. ತಮ್ಮ ಚಿಂತೆಗಳನ್ನು ದೂರ ಮಾಡಿಕೊಂಡು ಒತ್ತಡದಿಂದ ಬಿಡುಗಡೆ ಹೊಂದಿ ತಮ್ಮ ಜೀವನದಲ್ಲಿ ಮಹತ್ವಾಕಾಂಕ್ಷಿಗಳಾಗುತ್ತಾರೆ.

'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

English summary

Everything you Need To Know about Saturday vrata

Fasting on Saturday is considered highly beneficial and the most significant of all the weekly vrats. Scriptures advise this vrat for those who have a weak Shani dev in their Kundalis. Observed to please Saturn (Shani Dev), this vrat can win the blessings of Shani and remedy the ill effects of a weak Shani in the Kundali.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more