For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹಕ್ಕೆ ಪಾತ್ರರಾಗಲು ಹೀಗೆ ಮಾಡಿ

By Deepu
|

ಶ್ರಾವಣ ಮಾಸ ಇನ್ನೇನು ಆರಂಭವಾಗುತ್ತಿದ್ದು ಸಿದ್ಧತೆಗಳನ್ನು ಭರದಿಂದ ನಡೆಸಲಾಗುತ್ತಿದೆ. ಭಾರತದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಈ ಮಾಸಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಈ ಮಾಸದಂದು ಶಿವನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶಿವನ ಆರಾಧನೆಯನ್ನು ಮಾಡಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಶಿವನ ಅನುಗ್ರಹವನ್ನು ಪಡೆಯಲು ದೇವರ ಆರಾಧನೆಯನ್ನು ಮಾಡುವುದರ ಜೊತೆಗೆ ನೀವು ಕೆಲವೊಂದು ಪದ್ಧತಿಗಳನ್ನು ಅನುಸರಿಬೇಕು. ಇಂದಿನ ಲೇಖನದಲ್ಲಿ ಆ ಅನುಷ್ಠಾನಗಳೇನು ಎಂಬುದನ್ನು ನಾವು ತಿಳಿಸುತ್ತಿದ್ದು ಇದರಿಂದ ಶಿವನ ಪ್ರೀತಿಗೆ ನೀವು ಬೇಗನೇ ಪಾತ್ರರಾಗಬಹುದಾಗಿದೆ. ಶ್ರಾವಣ ಮಾಸವೆಂದರೆ ನಮಗೆ ಮಾತ್ರವಲ್ಲದೆ ಇಡಿಯ ಪ್ರಕೃತಿಯೇ ಹೊಸದರಂತೆ ನಳನಳಿಸುತ್ತದೆ.

ಮಾವು ಚಿಗುರುವುದು, ಕೋಗಿಲೆಯ ಹಾಡು, ಸಸ್ಯಗಳು ಹೊಸದಾಗಿ ಚಿಗೊರೊಡೆದು ಹೊಸ ವಾತಾವರಣದ ಕೊಡುಗೆಯನ್ನು ನೀಡುತ್ತಿರುತ್ತವೆ. ಶ್ರಾವಣ ಮಾಸದಂದು ಭಕ್ತರು ಶಿವ ಪೂಜೆಯನ್ನು ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗುವ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹಿಂದೂ ಶಾಸ್ತ್ರಗಳ ಪ್ರಕಾರ ಶ್ರಾವಣ ಮಾಸದ ಸೋಮವಾರಗಳಂದು ಕನ್ಯೆಯರು ಮತ್ತು ಹೆಂಗಳೆಯರು ಶಿವನನ್ನು ಆರಾಧಿಸಿದಲ್ಲಿ ಅವರಿಗೆ ಉತ್ತಮ ವರನು ದೊರಕಿ ಕುಟುಂಬದಲ್ಲಿ ಶಾಂತಿ ನೆಲೆಸುವ ವರವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ.

ಶಿವ ದೇವರಿಗೆ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಶಿವ ಪೂಜೆಯ ಜೊತೆಗೆ ನೀವು ಅನುಸರಿಸಬೇಕಾದ ಕೆಲವೊಂದು ಪದ್ಧತಿಗಳ ಬಗ್ಗೆ ತಿಳಿದುಕೊಳ್ಳೋಣ...

1. ಭಸ್ಮ

1. ಭಸ್ಮ

ಹಿಂದೂ ಧರ್ಮದಲ್ಲಿ ಶಿವನನ್ನು ಭಸ್ಮ ಪ್ರಿಯ ಎಂದು ಕರೆಯುತ್ತಾರೆ. ಮೈಯೆಲ್ಲಾ ವಿಭೂತಿಯನ್ನು ಶಿವನು ಹಚ್ಚಿರುತ್ತಾರೆ ಎಂಬುದು ನಂಬಿಕೆಯಾಗಿದೆ. ಸಂತರು ಋಷಿ ಮುನಿಗಳು ಭಸ್ಮವನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಶಿವನು ಕೂಡ ಸಾಧು ಯೋಗಿಯಾಗಿದ್ದಾರೆ. ಶಿವನ ಅನುಗ್ರಹವನ್ನು ಪಡೆದುಕೊಳ್ಳಲು ಮನೆಯ ಪೂಜಾ ಕೊಠಡಿಯಲ್ಲಿ ಭಸ್ಮವನ್ನು ಇರಿಸಿ.

2. ರುದ್ರಾಕ್ಷ

2. ರುದ್ರಾಕ್ಷ

ಶಿವನ ಕಣ್ಣೀರಿನಿಂದ ರುದ್ರಾಕ್ಷ ಉದ್ಭವವಾಗಿದೆ ಎಂದು ನಂಬಲಾಗಿದೆ. ಸೋಮವಾರದಂದು ರುದ್ರಾಕ್ಷ ಬೀಜವನ್ನು ತೆಗೆದುಕೊಂಡು ಬನ್ನಿ ಮನೆಯ ಹಿರಿಯರ ಕೋಣೆಯಲ್ಲಿ ಅದನ್ನು ಇರಿಸಿ. ಮನೆಯಲ್ಲಿ ಶಾಂತಿಯನ್ನು ತರುವುದರ ಜೊತೆಗೆ ಮಂದ ಗತಿಯ ಕೆಲಸ ಕಾರ್ಯಗಳು ವೇಗವಾಗಿ ಮುಗಿಯುತ್ತವೆ. ಭಗವಾನ್ ಶಿವನ ಸಾವಿರಾರು ವರ್ಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊ೦ಡು ತಪೋನಿರತನಾಗಿದ್ದನೆ೦ದು ಹೇಳಲಾಗಿದೆ. ಧ್ಯಾನದ ನ೦ತರ ಭಗವಾನ್ ಶಿವನು ಕಣ್ಣುಗಳನ್ನು ತೆರೆದಾಗ, ಕಣ್ಣಿನಿ೦ದ ಕೆಲವು ನೀರಿನ ಹನಿಗಳು ನೆಲದ ಮೇಲೆ ಉದುರಿದವು. ತರುವಾಯ, ಈ ಹನಿಗಳು ರುದ್ರಾಕ್ಷಿ ವೃಕ್ಷಗಳ ಬೆಳವಣಿಗೆಗೆ ಕಾರಣವಾದವು. ಈ ಕಾರಣದಿ೦ದಾಗಿಯೇ, ರುದ್ರಾಕ್ಷಿವನ್ನು ಹೊ೦ದಿರುವ ಯಾರೇ ಆಗಿರಲಿ, ಅವರು ಜೀವನದಲ್ಲಿ ಸ೦ತೋಷದಿ೦ದಿರುತ್ತಾರೆ.

3. ಗಂಗಾಜಲ

3. ಗಂಗಾಜಲ

ಭಗೀರಥನ ಪ್ರಯತ್ನದಿಂದಾಗಿ ಗಂಗೆ ಭೂಮಿಗೆ ಧರೆಗಿಳಿಯುವ ಸಮಯದಲ್ಲಿ ಆಕೆಯ ವೇಗವನ್ನು ತಡೆಯಲು ಶಿವನು ತಮ್ಮ ಕೂದಲನ್ನು ಹರಡಿ ಆಕೆಯನ್ನು ಬಂಧಿಸುತ್ತಾರೆ. ಗಂಗೆಯು ಶಿವನ ಶಿರದಲ್ಲಿ ನಂತರ ನೆಲೆಸುತ್ತಾರೆ. ಶ್ರಾವಣ ಸೋಮವಾರದಂದು ಗಂಗಾಜಲವನ್ನು ನಿಮ್ಮ ಮನೆಗೆ ತನ್ನಿ ಮತ್ತು ಅದನ್ನು ಅಡುಗೆ ಮನೆಯಲ್ಲಿ ಇರಿಸಿ. ಮನೆಯ ಎಲ್ಲಾ ಕುಟುಂಬ ಸದಸ್ಯರಿಗೆ ಇದು ಯಶಸ್ಸನ್ನು ತಂದುಕೊಡುತ್ತದೆ.

4. ಬೆಳ್ಳಿಯಿಂದ ಮಾಡಿದ ನಂದಿ ವಿಗ್ರಹ

4. ಬೆಳ್ಳಿಯಿಂದ ಮಾಡಿದ ನಂದಿ ವಿಗ್ರಹ

ಶಿವನ ವಾಹನವಾಗಿದೆ ನಂದಿ. ಶಿವಾಲಯದಲ್ಲಿ ನಂದಿಯು ದೇವರ ವಿಗ್ರಹದ ಮುಂಭಾಗದಲ್ಲಿ ಇರುತ್ತದೆ. ಮನೆಯಲ್ಲಿ ನಂದಿಯ ಬೆಳ್ಳಿಯ ವಿಗ್ರಹವನ್ನು ಇರಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತದೆ. ಹಣವನ್ನು ಇಡುವ ಕಬರ್ಡ್‌ನಲ್ಲಿ ವಿಗ್ರಹವನ್ನು ಇರಿಸುವುದರಿಂದ ಧನ ಪ್ರಾಪ್ತಿವುಂಟಾಗುತ್ತದೆ.

5. ಡಮರು

5. ಡಮರು

ಶಿವನು ಬಳಸುವ ಡಮರುವಿನಿಂದ ಮನೆಯಲ್ಲಿ ಧನಾತ್ಮಕ ಅಂಶ ಪ್ರಾಪ್ತಿಯಾಗುತ್ತದೆ. ಅಂತೆಯೇ ವಾತಾವರಣದಲ್ಲಿರುವ ಋಣಾತ್ಮಕ ಅಂಶಗಳು ದೂರಾಗುತ್ತವೆ. ಡಮರುವಿನ ಸ್ವರವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಶ್ರಾವಣದ ಮೊದಲ ದಿನ ಡಮರುವನ್ನು ಮನೆಗೆ ತನ್ನಿ ಹಾಗೂ ತಿಂಗಳ ಕೊನೆಯ ದಿನ ಇದನ್ನು ಮಗುವಿಗೆ ಉಡುಗೊರೆಯಾಗಿ ನೀಡಿ. ಇದರಿಂದ ಕುಟುಂಬಕ್ಕೆ ಶುಭವುಂಟಾಗುತ್ತದೆ.

6. ಬೆಳ್ಳಿಯ ತ್ರಿಶೂಲ

6. ಬೆಳ್ಳಿಯ ತ್ರಿಶೂಲ

ಭಗವಾನ್ ಶಿವನ ತ್ರಿಶೂಲವು ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಮೂರು ರೀತಿಯ ಶಕ್ತಿಗಳನ್ನು ಸಂಕೇತಿಸುತ್ತದೆ. ಮನೆಯೊಳಗೆ ತ್ರಿಶೂಲವನ್ನು ತರುವಲ್ಲಿ ಮೂರು ವಿಧದ ಶಕ್ತಿಗಳು ಮತ್ತು ವಿಕಿರಣ ಸಾತ್ವಿಕ ಗುಣಗಳನ್ನು ಸಮತೋಲನಗೊಳಿಸುತ್ತದೆ. ಆದ್ದರಿಂದ, ಈ ಶ್ರವಣದಂದು ಬೆಳ್ಳಿಯಿಂದ ಮಾಡಿದ ತ್ರಿಶೂಲವನ್ನು ತರಲು ಮರೆಯಬೇಡಿ.

7. ಮನಸ್ಸಿನಲ್ಲಿ ನೆನೆಸಿಕೊಂಡದೆಲ್ಲಾ ಈಡೇರುತ್ತದೆ

7. ಮನಸ್ಸಿನಲ್ಲಿ ನೆನೆಸಿಕೊಂಡದೆಲ್ಲಾ ಈಡೇರುತ್ತದೆ

ಶಿವನು ದೇವಲೋಕದಲ್ಲಿಯೇ ಅತ್ಯಂತ ಶಕ್ತಿಶಾಲಿ ದೇವರು ಎಂದು ಪರಿಗಣಿಸಲಾಗಿದೆ. ವಿವಾಹವಾಗದ ಮಹಿಳೆಯರು ವಿವಾಹ ಭಾಗ್ಯ ಕೋರಿಕೊಂಡು, ಕಷ್ಟದಲ್ಲಿರುವವರು ದಾರಿದ್ರ್ಯ ನಿವಾರಣೆಗಾಗಿ ಶ್ರಾವಣ ಸೋಮವಾರದಂದು ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಆ ವಿಶೇಷ ದಿನದಂದು ಉಪವಾಸದಿಂದ ಶಿವನ ಆರಾಧನೆ ಮಾಡಿದರೆ, ನಮ್ಮ ಸುತ್ತಲಿರುವ ನಕಾರಾತ್ಮಕ ಶಕ್ತಿ ಉಚ್ಚಾಟನೆಗೊಂಡು, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತದೆ. ಮನದ ಬಯಕೆಗಳೆಲ್ಲಾ ಈಡೇರುತ್ತವೆ ಎನ್ನುವ ಪ್ರತೀತಿ ಇದೆ.

8. ಮನೆಯ ವಾಸ್ತು ದೋಷ ನಿವಾರಣೆಯಾಗುವುದು

8. ಮನೆಯ ವಾಸ್ತು ದೋಷ ನಿವಾರಣೆಯಾಗುವುದು

ಶಿವನ ಕುತ್ತಿಗೆಯಲ್ಲಿ ಹಾವು ಇರುವುದನ್ನು ನಾವು ನೋಡುತ್ತೇವೆ. ನಾಗರ ಹಾವಿನ ತಾಮ್ರ ಅಥವಾ ಬೆಳ್ಳಿ ನಾಗರ ಹೆಡೆಯನ್ನು ಮನೆಯ ಪ್ರಧಾನ ಗೇಟಿನ ಕೆಳಗೆ ಹೂತಿಡಬೇಕು. ಹೀಗೆ ಮಾಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುವುದು.

9.ಶ್ರಾವಣ ಶನಿವಾರ

9.ಶ್ರಾವಣ ಶನಿವಾರ

ಶನಿವಾರಗಳನ್ನು ಶ್ರಾವಣ ಶನಿವಾರಗಳೆಂದು ಪೂಜಿಸಲಾಗುತ್ತದೆ. ಈ ದಿನ ಮಹಾವಿಷ್ಣುವನ್ನು ವೆಂಕಟೇಶ್ವರ ಅಥವಾ ಬಾಲಾಜಿ ಎಂಬ ರೂಪದಲ್ಲಿ ಆರಾಧಿಸಲಾಗುತ್ತದೆ. ಶ್ರಾವಣ ಮಾಸವನ್ನು ಶುಭ ಕಾರ್ಯಗಳಿಗಾಗಿ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಯಾರು ಜನಿಸುತ್ತಾರೋ, ಅವರಿಗೆ ಪ್ರಪಂಚದಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆಯುತ್ತಾರಂತೆ. ಈ ಮಾಸದಲ್ಲಿ ಜಗನ್ನಾಥ ಸ್ವಾಮಿ, ಕೃಷ್ಣ, ಹಯಗ್ರೀವ ಮತ್ತು ವೈಕನ್ಸ್ ಮಹರ್ಷಿಯವರನ್ನು ಸಹ ಆರಾಧಿಸಲಾಗುತ್ತದೆ.

English summary

During Shravana Get Lord Shiva's Blessings With These Things

The Shravana month is about to begin and the preparations are going on in full swing. Though the dates for the onset of his highly awaited month will be different for the northern and the southern regions of India, the festival holds great spiritual importance throughout the nation. Since this Shravana month is offering a rare combination of four Mondays after a long period of nineteen years, these Mondays of Shravana are being expected to get the blessings of Lord Shiva soon.
Story first published: Friday, July 20, 2018, 18:19 [IST]
X
Desktop Bottom Promotion