For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

|

ಸೋಮವಾರ ಬಂದಿತೆಂದರೆ ಶಿವ ಭಕ್ತರಿಗೆ ಏನೋ ಉತ್ಸಾಹ ಮತ್ತು ಹಬ್ಬದ ವಾತಾವರಣ ಬಂದಂತೆ. ಹೌದು ಸೋಮವಾರದಂದು ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ವಾರದ ಆರಂಭದಲ್ಲಿ ಶಿವನನ್ನು ನೆನೆದರೆ ಸಾಕು ಮತ್ತೆಲ್ಲಾ ದಿನಗಳು ಪರಿಪೂರ್ಣವಾಗಿರುತ್ತವೆ ಮತ್ತು ಆನಂದದಾಯಕವಾಗಿರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಭೋಲೇನಾಥ ಎಂದೇ ಕರೆಯಿಸಿಕೊಳ್ಳುವ ಶಂಕರ ಭಕ್ತ ವತ್ಸಲನೆಂದೇ ಹೆಸರುವಾಸಿಯಾಗಿದ್ದಾರೆ. ಲೋಕಕಂಠಕವಾಗಿರು ಅಸುರರಿಗೂ ಶಿವನೇ ಬೇಕು, ಲೋಕವನ್ನು ಕಾಯುವ ದೇವಾಧಿ ದೇವತೆಗಳಿಗೂ ಹರನೇ ಬೇಕು. ದುಷ್ಟರನ್ನು ಶಿಷ್ಟರನ್ನು ಸಮಾನವಾಗಿ ಕಾಣುವ ಹರ ಕೈಲಾಸವಾಸಿಯಾಗಿದ್ದಾರೆ ಜೊತೆಗೆ ಪ್ರತಿಯೊಬ್ಬ ಭಕ್ತನ ಅಂತರಾತ್ಮದಲ್ಲಿ ಸ್ಥಿತರಾದವರಾಗಿದ್ದಾರೆ.

Most Read: ಈ ಊರಿನಲ್ಲಿ ಮದುವೆಯಾದ ನಂತರ ವಧು ಐದು ದಿನಗಳ ಕಾಲ ನಗ್ನವಾಗಿರಬೇಕು!!

ಸೋಮವಾರದಂದು ವಿಶೇಷವಾಗಿ ಶಿವನ ಗುಡಿಗಳಲ್ಲಿ ಶಿವನಿಗೆ ಪೂಜೆ ಪುನಸ್ಕಾರಗಳನ್ನು, ಧೂಪ ದೀಪಗಳ ಮಂಗಳಾರತಿಯನ್ನು, ರುದ್ರಾಭಿಷೇಕ, ಹೋಮ ಹವನಗಳಂತಹ ವಿಶೇಷ ಕಾರ್ಯಗಳನ್ನು ಶಿವ ಭಕ್ತರು ಮಾಡುತ್ತಾರೆ. ಭರ್ಜರಿ ಪೂಜೆಯನ್ನು ನೀವು ಆ ವಿಷಕಂಠನಿಗೆ ಮಾಡದೇ ಇದ್ದರೂ ಬಿಲ್ವ ಪತ್ರೆಯಲ್ಲಿ ಅರ್ಚನೆ ಮಾಡಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿದರೂ ಸಾಕು ಆ ಮುಕ್ಕೋಟಿ ಒಡೆಯ ನಿಮ್ಮ ಪ್ರಾರ್ಥನೆಗೆ ಕರಗುತ್ತಾರೆ ಮತ್ತು ನಿಮ್ಮನ್ನು ಕಾಪಾಡುತ್ತಾರೆ. ಇಂದಿನ ಲೇಖನದಲ್ಲಿ ಶಿವನನ್ನು ಮೆಚ್ಚಿಸಲು ಅವರನ್ನು ಒಲಿಸಿಕೊಳ್ಳಲು ಭಕ್ತರಾದ ನಾವು ಮಾಡಬೇಕಾದ ಕಾರ್ಯಗಳೇನು ಮಾಡಲೇಬಾರದ ಕಾರ್ಯಗಳೇನು ಎಂಬುದನ್ನು ಅರಿತುಕೊಳ್ಳೋಣ.

ಶಿವನನ್ನು ಪೂಜಿಸುವುದು

ಶಿವನನ್ನು ಪೂಜಿಸುವುದು

ಸರಿಯಾದ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡದೇ ಇರುವ ಸ್ಥಳದಲ್ಲಿ ಶಿವಲಿಂಗವನ್ನು ಇರಿಸಿ ಪೂಜೆ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಶಿವನಿಗೆ ಅಗೌರವ ತೋರಿದಂತೆ ಮತ್ತು ಅವರು ಸಿಟ್ಟಾಗುತ್ತಾರೆ. ಭೋಲೇನಾಥ ಮುಗ್ಧರಾಗಿದ್ದು ಯಾವುದೇ ಸಮಯದಲ್ಲಿ ಕೂಡ ಭಕ್ತಿಗೆ ಮೆಚ್ಚುತ್ತಾರೆ. ಆದರೆ ಅವರು ಸಿಟ್ಟಾದರೆ ಮಾತ್ರ ಇಡಿಯ ವಿಶ್ವವೇ ನಾಶವಾಗುತ್ತದೆ.

ಶಿವನಿಗೆ ಏನು ಇಷ್ಟ?

ಶಿವನಿಗೆ ಏನು ಇಷ್ಟ?

ಕಡಿಮೆ ಅಗತ್ಯತೆಗಳೊಂದಿಗೆ ಸರಳವಾಗಿ ಜೀವಿಸುವವರೆಂದರೆ ಶಿವನಿಗೆ ಇಷ್ಟ. ದತ್ತೂರ ಹಣ್ಣು, ಬಿಲ್ವ ಪತ್ರೆ, ಬಾಂಗ್, ತಂಪಾದ ಹಾಲು, ಶ್ರೀಗಂಧದ ಪೇಸ್ಟ್ ಮತ್ತು ಭಸ್ಮವೆಂದರೆ ಇಷ್ಟ. ಈ ವಸ್ತುಗಳನ್ನು ಬಳಸಿ ಶಿವನನ್ನು ಪೂಜಿಸಿದರೆ ಅವರು ಸಂಪ್ರೀತರಾಗುವುದು ಮಾತ್ರವಲ್ಲ ಇತರ ದೇವರುಗಳನ್ನು ಪ್ರೀತ್ಯರ್ಥಪಡಿಸಬಹುದು.

ಶಿವಲಿಂಗಕ್ಕೆ ನೀಡುವ ವಸ್ತುಗಳು

ಶಿವಲಿಂಗಕ್ಕೆ ನೀಡುವ ವಸ್ತುಗಳು

ಶಿವಪುರಾಣದಲ್ಲಿ ಹೇಳಿರುವಂತೆ ಶಿವಲಿಂಗವನ್ನು ಶಿವ ಭಕ್ತರು ಪೂಜಿಸುವಾಗ ಈ ವಸ್ತುಗಳನ್ನು ಅರ್ಪಿಸಬಾರದು. ಇದರಿಂದ ಶಿವನು ಕ್ರೋಧಗೊಳ್ಳುತ್ತಾರೆ.

ಕೇತಕಿ ಹೂವು

ಕೇತಕಿ ಹೂವು

ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ನಮ್ಮಲ್ಲಿ ಯಾರು ಶಕ್ತಿವಂತರು ಎಂಬ ಕಲಹ ಚರ್ಚೆ ಉಂಟಾಗುತ್ತದೆ. ಇಬ್ಬರು ಆಯುಧಗಳನ್ನು ಹಿಡಿದು ಯುದ್ಧ ಮಾಡಲು ಸನ್ನದ್ಧರಾಗುತ್ತಾರೆ. ಈ ಸಮಯದಲ್ಲಿ ಶಿವನು ಲಿಂಗ ರೂಪದಲ್ಲಿ ಅಲ್ಲಿ ಪ್ರತ್ಯಕ್ಷಗೊಳ್ಳುತ್ತಾರೆ. ಇಬ್ಬರನ್ನೂ ಸಮಾಧಾನಪಡಿಸಿ ಲಿಂಗದ ತಳ ಮತ್ತು ತುದಿಯನ್ನು ಕಂಡುಹಿಡಿದು ಬರಲು ಸೂಚಿಸುತ್ತಾರೆ. ಯಾರು ಇದರಲ್ಲಿ ಯಶಸ್ವಿಯಾಗುತ್ತಾರೋ ಅವರೇ ಶಕ್ತಿವಂತರು ಎಂಬುದಾಗಿ ಶಿವನು ಹೇಳುತ್ತಾರೆ. ವಿಷ್ಣುವು ಲಿಂಗದ ತಳಭಾಗವನ್ನು ಕಂಡುಹಿಡಿಯಲು ಹೋಗಿ ಸೋಲುತ್ತಾರೆ. ಆದರೆ ಬ್ರಹ್ಮ ದೇವರು ಕೇತಕಿ ಹೂವಿಗೆ ತನ್ನ ಸುಳ್ಳಿನಲ್ಲಿ ಪಾಲುದಾರನಾಗಿ ಸುಳ್ಳು ಸಾಕ್ಷಿ ನುಡಿಯುವಂತೆ ಹೇಳುತ್ತಾರೆ.

Most Read: ಪ್ರತಿ ಮಹಿಳೆಯೂ ತನ್ನ ಪುರುಷನ ಬಗ್ಗೆ ಖಂಡಿತವಾಗಿಯೂ ತಿಳಿದಿರಬೇಕಾದ 5 ಸೆಕ್ಸ್ ರಹಸ್ಯಗಳು

ತುಳಸಿ

ತುಳಸಿ

ಶಿವ ಪುರಾಣದಲ್ಲಿ ತಿಳಿಸಿರುವಂತೆ, ಅಸುರ ಜಲಂಧರನನ್ನು ಶಿವನು ಕೊಂದು ಬೂದಿ ಮಾಡಿರುತ್ತಾರೆ. ಜಲಂಧರನ ಪತ್ನಿ ತುಳಸಿಯ ಪವಿತ್ರೆತೆಯ ಮೇಲೆ ಜಲಂಧರನ ಮರಣ ಬರೆದಿತ್ತು. ಆಕೆ ಅಪವಿತ್ರಳಾದರೆ ಜಲಂಧರನನ್ನು ಕೊಲ್ಲಬಹುದು ಎಂದಾಗಿತ್ತು. ವಿಷ್ಣುವು ತುಳಸಿಯ ಪವಿತ್ರತೆಯನ್ನು ಅಪವಿತ್ರಗೊಳಿಸಿದರು. ತನ್ನ ಪತಿಯ ಸಾವು ಮತ್ತು ಮೋಸಕ್ಕೆ ಒಳಗಾದ ತುಳಸಿಯು ತನ್ನ ಪವಿತ್ರ ಎಲೆಗಳಿಂದ ಶಿವನನ್ನು ಪೂಜಿಸಬಾರದು ಎಂಬುದಾಗಿ ಶಾಪವನ್ನು ನೀಡುತ್ತಾರೆ.

ಎಳನೀರು

ಎಳನೀರು

ಶಿವನಿಗೆ ತೆಂಗಿನ ಕಾಯನ್ನು ಅರ್ಪಿಸಬಹುದು ಆದರೆ ಅದರ ನೀರಿನಿಂದ ಶಿವನನ್ನು ಪೂಜಿಸಬಾರದು. ಶಿವನಿಗೆ ಅರ್ಪಿಸಿರುವುದನ್ನು ನಿರ್ಮಾಲ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅದನ್ನು ಸೇವಿಸಬಾರದು. ಅಂತೆಯೇ ಒಮ್ಮೆ ದೇವರಿಗೆ ಅರ್ಪಿಸಿದ ನಂತರ ಶಿವ ಭಕ್ತರು ಅದನ್ನು ಸೇವಿಸಲೇಬೇಕು.

ಅರಿಶಿನ

ಅರಿಶಿನ

ಪವಿತ್ರ ಅರಶಿನವನ್ನು ಶಿವಲಿಂಗಕ್ಕೆ ಹಚ್ಚಬಾರದು, ಇದನ್ನು ಮಹಿಳೆಯರ ಸೌಂದರ್ಯವನ್ನು ಶ್ರೀಮಂತಗೊಳಿಸಲು ಬಳಸಲಾಗುತ್ತದೆ. ಶಿವಲಿಂಗವು ಶಿವನ ದ್ಯೋತಕವಾಗಿದೆ.

ಕುಂಕುಮ

ಕುಂಕುಮ

ವಿವಾಹಿತ ಸ್ತ್ರೀಯರಿಗೆ ಕುಂಕಮವು ಸೌಭಾಗ್ಯದ ಸಂಕೇತವಾಗಿದೆ. ತನ್ನ ಪತಿಯ ದೀರ್ಘ ಆಯುಷ್ಯಕ್ಕಾಗಿ ಸ್ತ್ರೀಯು ಇದನ್ನು ಹಚ್ಚಿಕೊಳ್ಳುತ್ತಾರೆ. ಶಿವನು ನಾಶಕರಾಗಿದ್ದಾರೆ ಅವರನ್ನು ಕುಂಕುಮದಿಂದ ಪೂಜಿಸುವುದು ಸರಿಯಲ್ಲ.

ಶಿವಲಿಂಗ ಪ್ರಮುಖವಾಗಿ ಮಾಡಬೇಕಾದುದು ಮಾಡಬಾರದುದು

ಶಿವಲಿಂಗ ಪ್ರಮುಖವಾಗಿ ಮಾಡಬೇಕಾದುದು ಮಾಡಬಾರದುದು

ಮನೆಯಲ್ಲಿ ಶಿವಲಿಂಗವನ್ನು ಇರಿಸಬಾರದು, ಅಂತೆಯೇ ಅದನ್ನು ಸರಿಯಾದ ವಿಧಾನದಲ್ಲಿ ಶುದ್ಧ ಸ್ಥಳದಲ್ಲಿ ಪೂಜಿಸಬೇಕು. ಇತರ ಪೂಜೆಗಳಂತಲ್ಲದೆ ಶಿವಲಿಂಗ ಪೂಜೆ ಭಿನ್ನವಾಗಿದೆ. ನಿರ್ದಿಷ್ಟ ವಿಧಾನದಲ್ಲಿ ಈ ಪೂಜೆಯನ್ನು ಮಾಡಬೇಕು. ಇಲ್ಲದಿದ್ದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಸ್ನಾನದ ನಂತರ

ಸ್ನಾನದ ನಂತರ

ನಿಮ್ಮ ಸ್ನಾನದ ನಂತರ ಗಂಗಾಜಲವನ್ನು ಎಲ್ಲಾ ಕಡೆ ಪ್ರೋಕ್ಷಣೆ ಮಾಡಬೇಕು. ಇದರಿಂದ ಆ ಸ್ಥಳ ಶುದ್ಧವಾಗುತ್ತದೆ.

ಶಿವಲಿಂಗವನ್ನು ಸ್ಥಳಾಂತರಿಸುವ ಮುನ್ನ...

ಶಿವಲಿಂಗವನ್ನು ಸ್ಥಳಾಂತರಿಸುವ ಮುನ್ನ...

ಶಿವಲಿಂಗವನ್ನು ಸ್ಥಳಾಂತರಿಸುವ ಮುನ್ನ ಅದನ್ನು ಸ್ಪರ್ಶಿಸಿ. ಗಂಗಾಜಲ ಮಿಶ್ರಿತ ನೀರಿನ ತಟ್ಟೆಯಲ್ಲಿ ಅದನ್ನಿರಿಸಿ. ನಂತರ ಅದನ್ನು ಗಂಗಾಜಲದಿಂದ ತೊಳೆಯಿರಿ.

ತಣ್ಣಗಿನ ಹಾಲು

ತಣ್ಣಗಿನ ಹಾಲು

ತಣ್ಣಗಿನ ಹಾಲನ್ನು ಶಿವನಿಗೆ ಅರ್ಪಿಸಿ ಪ್ಯಾಕೇಜ್ ಹಾಲು ಬೇಡ

ಶ್ರೀಗಂಧದ ಪೇಸ್ಟ್‌

ಶ್ರೀಗಂಧದ ಪೇಸ್ಟ್‌

ಶ್ರೀಗಂಧದ ಪೇಸ್ಟ್‌ನಿಂದ ಮೂರು ತಿಲಕವನ್ನು ಹಚ್ಚಿ

ಶಿವಲಿಂಗವನ್ನು ನಾಗಯೋನಿಯಲ್ಲಿ ಇರಿಸಬೇಕು

ಶಿವಲಿಂಗವನ್ನು ನಾಗಯೋನಿಯಲ್ಲಿ ಇರಿಸಬೇಕು

ಮನೆಗೆ ತಂದರೆ ಶಿವಲಿಂಗವನ್ನು ನಾಗಯೋನಿಯಲ್ಲಿ ಇರಿಸಬೇಕು, ನಾಗಯೋನಿಯನ್ನು ಚಿನ್ನ, ಬೆಳ್ಳಿ ಅಥವಾ ಹಿತ್ತಾಳೆಯಿಂದ ಮಾಡಿರಬೇಕು.

ಜಲಧಾರೆ ಅಡಿಯಲ್ಲಿ

ಜಲಧಾರೆ ಅಡಿಯಲ್ಲಿ

ಶಿವಲಿಂಗವನ್ನು ಮನೆಯಲ್ಲಿ ನಿರಂತರ ಜಲಧಾರೆ ಅಡಿಯಲ್ಲಿ ಇರಿಸಬೇಕು. ಜಲಧಾರೆ ಇಲ್ಲದಿದ್ದರೆ ಲಿಂಗವು ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳಬಹುದು.

ಶ್ರೀಗಂಧದಲ್ಲಿ ಮಾಡಿದ ಗೌರಿ ಹಾಗೂ ಗಣೇಶನ ವಿಗ್ರಹ

ಶ್ರೀಗಂಧದಲ್ಲಿ ಮಾಡಿದ ಗೌರಿ ಹಾಗೂ ಗಣೇಶನ ವಿಗ್ರಹ

ಶಿವಲಿಂಗವನ್ನು ಮಾತ್ರವೇ ಇರಿಸಬಾರದು, ಮಣ್ಣು ಮತ್ತು ಶ್ರೀಗಂಧದಲ್ಲಿ ಮಾಡಿದ ಗೌರಿ ಹಾಗೂ ಗಣೇಶನ ವಿಗ್ರಹವನ್ನು ಇದರೊಂದಿಗೆ ಇರಿಸಬೇಕು. ಅಲ್ಲದೆ ಶಿವಲಿಂಗಕ್ಕೆ ಅರ್ಪಿಸಿರುವುದನ್ನು ಸೇವಿಸಬಾರದು.

Most Read: ದಿನದ ಅದೃಷ್ಟ ನಿಮ್ಮದಾಗಬೇಕೇ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ...

ಬಿಳಿ ಹೂವು

ಬಿಳಿ ಹೂವು

ಬಿಳಿ ಹೂವುಗಳನ್ನೇ ಲಿಂಗಕ್ಕೆ ಅರ್ಪಿಸಬೇಕು, ಇದು ಶಿವನಿಗೆ ಹೆಚ್ಚು ಪ್ರಿಯವಾದುದು. ಇನ್ನಿ ಶಿವಲಿಂಗವನ್ನು ನಿತ್ಯವೂ ತೊಳೆದು ಅದನ್ನು ನಿತ್ಯವೂ ಪೂಜಿಸಬೇಕು.

English summary

Dont do these mistakes while worshiping Shiva Linga at home

As per Shivpuran, a devout devotee must never worship Lord Shiva’s symbol, Shivlinga with these five following offerings or else bear the dreaded consequences.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more