Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಪ್ರತಿ ಮಹಿಳೆಯೂ ತನ್ನ ಪುರುಷನ ಬಗ್ಗೆ ಖಂಡಿತವಾಗಿಯೂ ತಿಳಿದಿರಬೇಕಾದ 5 ಸೆಕ್ಸ್ ರಹಸ್ಯಗಳು
ಸೆಕ್ಸ್ ಅಥವಾ ಲೈಂಗಿಕ ವಿಷಯಕ್ಕೆ ಬಂದಾಗ ಪುರುಷರ ಪ್ರತಿಕ್ರಿಯೆಯ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇವರಲ್ಲಿ ಹಲವಾರು ಅಚ್ಚರಿಗಳಿದ್ದು ಇವರನ್ನು ಅರ್ಥ ಮಾಡಿಕೊಳ್ಳುವುದು ತೀರಾ ಕಷ್ಟಕರವಾದ ಸಂಗತಿಯಾಗಿದೆ ಹಾಗೂ ಇವರು ತಮ್ಮ ಸಂಗಾತಿಯಿಂದ ಏನನ್ನು ಬಯಸುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯದ ಬಗ್ಗೆ ಅತಿ ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ ಹಾಗೂ ಈ ಬಗ್ಗೆ ಇವರಿಗೆ ಯಾವುದೇ ಅಳುಕು ಇರುವುದಿಲ್ಲ. ಆದರೆ ಲೈಂಗಿಕ ವಿಷಯದಲ್ಲಿ ಪುರುಷರನ್ನು ಅರ್ಥ ಮಾಡಿಕೊಳ್ಳಲು ಮಹಿಳೆಯರಿಗೆ ಇನ್ನೂ ಕೆಲವು ರಹಸ್ಯಗಳನ್ನು ಅರಿತುಕೊಳ್ಳುವುದು ಅಗತ್ಯವಿದೆ. ಇದರಿಂದ ಮಹಿಳೆಯರು ತಮ್ಮ ಸಂಗಾತಿಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತದೆ.

1.ಪುರುಷರಿಗೆ ತಾನು ಲೈಂಗಿಕವಾಗಿ ಸಮರ್ಥವಾದ ನಿರ್ವಹಣೆ ನೀಡಬಲ್ಲೆನೇ ಎಂಬ ಅಳುಕು ಸದಾ ಇರುತ್ತದೆ
ಪುರುಷರು ಈ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದ್ದರೂ ಹಾಸಿಗೆಯ ಪ್ರದರ್ಶನದ ಕುರಿತು ಇವರಲ್ಲಿ ಕೊಂಚ ಮಾನಸಿಕ ಒತ್ತಡವಿದ್ದೇ ಇರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಲೈಂಗಿಕ ನಿರ್ವಹಣೆಯ ಬಗ್ಗೆ ಸಾಮಾನ್ಯವಾಗಿ ವ್ಯಾಕುಲರಾಗಿರುವುದಿಲ್ಲ. ಆದರೆ ತಮ್ಮ ಸಂಗಾತಿಯನ್ನು ಪೂರ್ಣವಾಗಿ ತೃಪ್ತಿಪಡಿಸಬೇಕೆಂಬ ಬಯಕೆ ಪ್ರತಿ ಪುರುಷರಲ್ಲಿರುತ್ತದೆ. ಮಹಿಳೆಯರಿಗೆ ತನ್ನ ಪುರುಷನಿಂದ ಈ ಪರಿಪೂರ್ಣ ತೃಪ್ತಿಯ ಪಡೆಯುವಿಕೆಯ ಬಗ್ಗೆ ಹೆಚ್ಚು ಕಾಳಜಿ ಇರದೇ ಇದ್ದರೂ ಪುರುಷರಿಗಂತೂ ಈ ಬಗ್ಗೆ ವ್ಯಾಕುಲತೆ ಇದ್ದೇ ಇರುತ್ತದೆ. ಹಾಗಾಗಿ, ಒಂದು ವೇಳೆ ನಿಮ್ಮ ಪುರುಷ ಅಕಾಸ್ಮಾತ್ತಾಗಿಯಾದರೂ ಸರಿ, ಈ ಪರಿಪೂರ್ಣ ತೃಪ್ತಿಯ ಒದಗಿಸುವ ಬಗ್ಗೆ ತನ್ನ ಅಸಾಮರ್ಥ್ಯತೆ ಅಥವಾ ಅಸಹಾಯಕತೆಯನ್ನು ತೋಡಿಕೊಂಡರೆ ನೀವು ಆತನನ್ನು ಪೂರ್ಣವಾಗಿ ಬೆಂಬಲಿಸಿ ಆತ ಮಾನಸಿಕವಾಗಿ ನಿರಾಳವಾಗುವಂತೆ ಮಾಡುವುದು ಅಗತ್ಯ.

2.ಪ್ರತಿಬಾರಿಯ ಪ್ರಯತ್ನಗಳನ್ನೂ ಸಂಗಾತಿ ಮೆಚ್ಚಬೇಕೆಂದು ಇವರು ಬಯಸುತ್ತಾರೆ
ಲೈಂಗಿಕ ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಪ್ರತಿ ಪುರುಷನ ಬಯಕೆಯಾಗಿರುತ್ತದೆ. ಪುರುಷ ತನ್ನ ಪ್ರಣಯ ಚಟುವಟಿಕೆಗಳಿಗೆ ಸಂಗಾತಿಯ ಮೆಚ್ಚುಗೆ ಪಡೆಯಬಯಸುತ್ತಾನೆ. ಒಂದು ವೇಳೆ ಈ ಚಟುವಟಿಕೆ ನಿಮಗೆ ಇಷ್ಟವಾದರೆ ಇದನ್ನು ಸ್ಪಷ್ಟಪದಗಳಲ್ಲಿ ನಿಮ್ಮಿಂದ ಕೇಳಲು ಆತ ಉತ್ಸುಕನಾಗಿರುತ್ತಾನೆ. ಈ ಸಮಯದಲ್ಲಿ ಪದಗಳಲ್ಲಿ ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಹೋದರೂ ಮುಲುಕಾಟದ ಸದ್ದುಗಳೇ ಇವರಿಗೆ ಇನ್ನಷ್ಟು ಪ್ರೇರಣೆ ನೀಡಬಹುದು.

3.ಪುರುಷರು ಲೈಂಗಿಕ ಚಟುವಟಿಕೆಗೆ ಕಾಯಬಯಸುವುದಿಲ್ಲ
ಪ್ರತಿ ಮಹಿಳೆಯೂ ಈ ವಿಷಯವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಕೆಲವು ಮಹಿಳೆಯರು ಪುರುಷನೊಂದಿಗೆ ಹೆಚ್ಚು ಕಾಲ ಸಾಂಗತ್ಯದಲ್ಲಿದ್ದು ಆ ಬಳಿಕವೇ ಲೈಂಗಿಕ ಮಿಲನಕ್ಕೆ ಮುಂದಾಗುತ್ತಾರೆ. ಆದರೆ ಈ ಕಾಯುವಿಕೆಯ ಅವಧಿಯನ್ನು ಇವರ ಪುರುಷ ಒಳಗೊಳಗೇ ದ್ವೇಶಿಸುವುದು ಮಾತ್ರ ಈ ಮಹಿಳೆಯರಿಗೆ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರ ತಡಮಾಡುವ ಈ ಅಭ್ಯಾಸವನ್ನು ಪುರುಷನ ಉತ್ಸಾಹಕ್ಕೆ ತಣ್ಣೀರೆರೆಚಬಹುದು. ಒಂದು ವೇಳೆ ನೀವು ನಿಮ್ಮ ಪುರುಷನಲ್ಲಿ ಭರವಸೆ ಹೊಂದಿದ್ದರೆ ಕೇವಲ ನಿಯಮಗಳಿಗೆ ಕಟ್ಟುಬಿದ್ದು ಲೈಂಗಿಕ ಸಂಪರ್ಕಕ್ಕೆ ಬೇಡವೆನ್ನದಿರಿ. ಆತ ಲೈಂಗಿಕವಾಗಿ ಆಕರ್ಷಣೀಯ ಮತ್ತು ಆತನಲ್ಲಿ ವಿಶ್ವಾಸಾರ್ಹತೆಯನ್ನು ಪ್ರಕಟಿಸಿ ಹೆಚ್ಚಿನ ಭರವಸೆ ಮೂಡಿಸಿ.

4.ಕೇವಲ ನೀವು ಮಾತ್ರವಲ್ಲ, ಪುರುಷರೂ ತಮ್ಮ ದೇಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ
ಸಾಮಾನ್ಯವಾಗಿ ಪುರುಷರೂ ತಮ್ಮ ದೇಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಒಂದು ವೇಳೆ ನಿಮ್ಮ ಪುರುಷ ಲೈಂಗಿಕವಾಗಿ ನಿಮ್ಮನ್ನು ಪೂರ್ಣಪ್ರಮಾಣದಲ್ಲಿ ತೃಪ್ತಿ ಒದಗಿಸಬೇಕೆಂದು ನಿಮ್ಮ ಬಯಕೆಯಾಗಿದ್ದರೆ ನೀವು ಇಚ್ಛಿಸುವಂತೆಯೇ ಪುರುಷರಿಗೂ ಮೆಚ್ಚುಗೆಯನ್ನು ಒದಗಿಸಬೇಕಾಗುತ್ತದೆ. ಪುರುಷರಿಗೆ ತಮ್ಮ ದೇಹದಾರ್ಢ್ಯತೆ, ಸೌಂದರ್ಯ, ಕಟ್ಟುಮಸ್ತುತನ, ಕೂದಲ ವಿನ್ಯಾಸ ಮೊದಲಾದವುಗಳ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ ಹಾಗೂ ಇವುಗಳ ಬಗ್ಗೆ ಮೆಚ್ಚುಗೆಯನ್ನು ಇವರು ಅಪೇಕ್ಷಿಸುತ್ತಾರೆ. ಇವರ ಮನವನ್ನು ಗೆಲ್ಲಬೇಕಾದರೆ ಇವರ ದೇಹಸೌಂದರ್ಯದ ಬಗ್ಗೆ ಪ್ರಾಮಾಣಿಕವಾದ ಮೆಚ್ಚುಗೆಯನ್ನು ನೀವು ವ್ಯಕ್ತಿಪಡಿಸಿದರೆ ಸಾಕು. ಉಳಿದ ಕಾರ್ಯವೆಲ್ಲಾ ಸುಗಮವಾಗಿ ಮುಂದುವರೆಯುತ್ತದೆ.

5.ಮಹಿಳೆಯರ ಮೋಸವನ್ನು ಪುರುಷರು ಕ್ಷಮಿಸುತ್ತಾರೆ
ಒಂದು ವೇಳೆ ಯಾವುದೋ ಸಂದರ್ಭದಲ್ಲಿ ಇತರ ಪುರುಷನೊಂದಿಗೆ ಸಂಪರ್ಕ ಪಡೆದು ನಿಮ್ಮ ಪುರುಷನಿಗೆ ನೀವು ಮೋಸ ಮಾಡಿದ್ದರೂ ಸಾಮಾನ್ಯವಾಗಿ ನಿಮ್ಮ ಪುರುಷ ನಿಮ್ಮನ್ನು ಕ್ಷಮಿಸುವ ಸಾಧ್ಯತೆ ಹೆಚ್ಚು. ಆದರೆ, ಈ ಸಂಪರ್ಕದ ಸಂದರ್ಭದಲ್ಲಿಯೇ ನಿಮ್ಮ ಪುರುಷ ನಿಮ್ಮನ್ನು ಪರಪುರುಷನೊಂದಿಗೆ ಕಂಡರೆ ನಿಮ್ಮ ಸಂಬಂಧ ಕೊನೆಗೊಳ್ಳುವುದು ನಿಶ್ಚಿತ! ಹಾಗಾಗಿ ನಿಮ್ಮ ಪುರುಷನಿಗೆ ಯಾವುದೇ ಮೋಸ ಮಾಡದೇ ಎಲ್ಲಾ ವಿಧಾನಗಳಿಂದಲೂ ನಿಮ್ಮ ಬದ್ದತೆಯನ್ನು ನಿಮ್ಮ ಪುರುಷನಿಗೆ ಮನದಟ್ಟು ಮಾಡಿಕೊಡುವುದು ನಿಮಗೆ ಅಗತ್ಯವಾಗಿದೆ. ಪುರುಷರು ತಮ್ಮ ಸಂಗಾತಿಯಿಂದ ಬದ್ಧತೆಯನ್ನು ನಿರೀಕ್ಷಿಸುತ್ತಾರೆ ಹಾಗೂ ಕೊಂಚ ಭಿನ್ನವಾಗಿರಲೂ ಬಯಸುತ್ತಾರೆ. ನಿಮ್ಮ ಬದ್ದತೆಯನ್ನು ನೀವು ನೀವು ಸಾಧಿಸಿ ತೋರಿಸಿದಿರೋ, ನಿಮ್ಮ ಪುರುಷನಿಂದ ಹಾಸಿಗೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀವು ನಿರೀಕ್ಷಿಸಬಹುದು.



Click it and Unblock the Notifications











