For Quick Alerts
ALLOW NOTIFICATIONS  
For Daily Alerts

ಶಿವನಿಗೆ ಗಣೇಶ,ಕಾರ್ತಿಕೇಯರಲ್ಲದೆ ಹೆಣ್ಣು ಮಕ್ಕಳೂ ಇದ್ದಾರೆ ಗೊತ್ತಾ?

|

ಪಾರ್ವತೀ ದೇವಿಯು ಲೋಕದಲ್ಲೇ ಅತ್ಯಂತ ಸುಂದರವಾದ ಉದ್ಯಾನವನಕ್ಕೆ ಹೋಗಲು ಅಪೇಕ್ಷಿಸಿದಾಗ, ಶಿವನು ಪಾರ್ವತೀ ದೇವಿಯನ್ನು ನಂದನ ವನಕ್ಕೆ ಕರೆದೊಯ್ದನು. ಅಲ್ಲಿಗೆ ತಲುಪಿದ ನಂತರ, ಆ ಸ್ಥಳದ ಸೌಂದರ್ಯಕ್ಕೆ ದೇವಿಯು ಮಾರುಹೋದಳು. ಸ್ವಲ್ಪ ಕಾಲ ಅಲ್ಲಿ ಕುಳಿತುಕೊಳ್ಳಬೇಕೆಂದು ಆಲೋಚಿಸಿದಳು. ಆರಾಮದಾಯಕವಾದ ಒಂದು ಸ್ಥಳವನ್ನು ಹುಡುಕುತ್ತಿರುವಾಗ, ಕಲ್ಪವೃಕ್ಷವು ಎದುರಾಯಿತು. ಕಲ್ಪವೃಕ್ಷವು ಆರಾಧಕನ ಎಲ್ಲಾ ಆಸೆಗಳನ್ನು ಪೂರೈಸುವಂತಹ ಅತ್ಯಂತ ಪವಿತ್ರ ಮರ.

ಶಿವ ದೇವರ ಕುಟುಂಬ

ದೇವತೆ ಅಶೋಕ ಸುಂದರಿ

ಪಾರ್ವತಿ ದೇವಿಯು ಆ ಮರವನ್ನು ತುಂಬಾ ಇಷ್ಟಪಡುತ್ತಾಳೆ, ಆಕೆ ತನ್ನ ಪವಿತ್ರ ವಾಸಸ್ಥಾನಕ್ಕೆ ಆ ಮರವನ್ನು ತೆಗೆದುಕೊಂಡು ಹೋಗಲು ಬಯಸುತ್ತಾಳೆ. ಇದಕ್ಕೆ ಶಿವನಿಂದ ಅನುಮತಿಯೂ ನೀಡಲಾಗುತ್ತದೆ. ತಮ್ಮ ಸ್ಥಳಕ್ಕೆ ಹಿಂದಿರುಗಿದ ನಂತರ ಪಾರ್ವತೀ ದೇವಿಯು ಅಲ್ಲಿ ಕಲ್ಪವೃಕ್ಷ ಮರವನ್ನು ಸ್ಥಾಪಿಸುತ್ತಾಳೆ. ಒಂದು ದಿನ ಭಗವಾನ್ ಶಿವ, ಅರಮನೆಯಲ್ಲಿ ಇಲ್ಲದ ಸಮಯದಲ್ಲಿ ಪಾರ್ವತೀ ದೇವಿಯು ಏಕಾಂಗಿತನವನ್ನು ಅನುಭವಿಸುತ್ತಾಳೆ. ತಕ್ಷಣ ಆಕೆಗೆ ಒಂದು ಉಪಾಯ ಹೊಳೆಯುತ್ತದೆ. ತನ್ನ ವಾಸಸ್ಥಳದಲ್ಲಿ ಕಲ್ಪವೃಕ್ಷದ ಮರವನ್ನು ಹೊಂದಿರುವುದು ಅದೃಷ್ಟವೇ ಎಂದು, ಆ ಮರದೊಂದಿಗೆ ಮಗಳನ್ನು ಕೇಳಬೇಕೆಂದು ಯೋಚಿಸುತ್ತಾಳೆ. ಅವಳು ತಕ್ಷಣ ಮರದ ಬಳಿಗೆ ಹೋಗಿ ತನ್ನ ಆಶಯವನ್ನು ವ್ಯಕ್ತಪಡಿಸುತ್ತಾಳೆ.

ಕಲ್ಪವೃಕ್ಷವು ಪಾರ್ವತೀ ದೇವಿಯ ಆಸೆಯನ್ನು ಅರ್ಥಮಾಡಿಕೊಂಡು ಅಶೋಕ ಸುಂದರಿಯನ್ನು ಕರುಣಿಸುತ್ತದೆ. ಆಕೆಯ ಸೌಂದರ್ಯದಿಂದಾಗಿ ಆಕೆಗೆ ಅಶೋಕ ಸುಂದರಿ ಎಂದು ಹೆಸರಿಸಲಾಯಿತು.ಅಶೋಕ ಸುಂದರಿ ಭವಿಷ್ಯವನ್ನು ಮುಂಗಾಣಬಹುದು ಎಂಬ ವರವನ್ನು ಹೊಂದಿದ್ದಳು. ಪ್ರಖ್ಯಾತ ರಾಜ ನಹುಷನನ್ನು ಮದುವೆಯಾಗುವಳು ಎಂದು ಅವಳು ಮೊದಲೇ ತಿಳಿದಿದ್ದಳು. ದೇವತೆ ಪಾರ್ವತಿಯಿಂದ, ಇಂದ್ರನಂತೆ ಪ್ರಬಲ ರಾಜನನ್ನು ವಿವಾಹವಾಗಲಿ ಎಂಬ ಆಶೀರ್ವಾದವನ್ನೂ ಅವಳು ಪಡೆದಿದ್ದಳು.

ಒಮ್ಮೆ ಅಶೋಕ ಸುಂದರಿಯು ನಂದನ ವನದಲ್ಲಿ ಕುಳಿತಿರುವಾಗ, ಹುಂಡ್ ಎಂಬ ರಾಕ್ಷಸನು, ಅವಳನ್ನು ನೋಡಿ, ಅವಳನ್ನು ಮದುವೆಯಾಗಲು ಬಯಸುತ್ತಾನೆ. ಅಶೋಕ ಸುಂದರಿಯ ಮುಂದೆ ಹುಂಡ್ ತನ್ನ ಅಪೇಕ್ಷೆಯನ್ನು ಪ್ರಸ್ಥಾಪಿಸಿದಾಗ, ಅಶೋಕ ಸುಂದರಿಯು, ತನಗೆ ನಹುಶ ನೊಂದಿಗೆ ಮದುವೆ ನಿಶ್ಚಯವಾಗಿರುವುದಾಗಿ ಹೇಳಿ, ನಿರಾಕರಿಸುತ್ತಾಳೆ. ಇದನ್ನು ಕೇಳಿ ಕೋಪಗೊಂಡ ರಾಕ್ಷಸನು ಅವಳನ್ನು ಮದುವೆಯಾಗಲು ಇರುವವನನ್ನು ಕೊಲ್ಲಬೇಕು ಎಂದು ನಿರ್ಧರಿಸುತ್ತಾನೆ.

ಒಂದು ದಿನ ನೀನು ನನ್ನ ಪತಿಯಿಂದಲೇ ಕೊಲ್ಲಲ್ಪಡುತ್ತಿ ಎಂದು ಅಶೋಕ ಸುಂದರಿಯು ಹುಂಡ ನಿಗೆ ಶಾಪವನ್ನು ನೀಡುತ್ತಾಳೆ. ಶೀಘ್ರದಲ್ಲೇ ರಾಕ್ಷಸನು ಮಗುವಾಗಿದ್ದ ನಹುಷ್ ನನ್ನು ಅಪಹರಿಸುತ್ತಾನೆ. ಆದರೆ. ಈ ರಾಕ್ಷಸನ ಸೇವಕರಲ್ಲಿ ಒಬ್ಬನ್ನು ನಹುಷ ನನ್ನು ರಕ್ಷಿಸಿ ಅವನನ್ನು ವಶಿಷ್ಠ ರಿಷಿಗಳ ಆಶ್ರಮಕ್ಕೆ ಕಳುಹಿಸುತ್ತಾನೆ. ಅಲ್ಲಿಯೇ ರಾಜಕುಮಾರನನ್ನು ಬೆಳೆಸಲಾಗುತ್ತದೆ. ಮುಂದೆ ಅವನು ರಾಕ್ಷಸ ಹಂಡ್ ನನ್ನು ಕೊಂದು ಅಶೋಕ ಸುಂದರಿಯನ್ನು ವಿವಾಹವಾಗುತ್ತಾನೆ ಮತ್ತು ಯಯಾತಿ ಎಂಬ ಹೆಸರಿನ ಒಬ್ಬ ಮಗ ಹಾಗೂ ನೂರು ಸುಂದರ ಹೆಣ್ಣುಮಕ್ಕಳನ್ನು ಪಡೆಯುತ್ತಾರೆ.

ಶಿವ ದೇವರ ಕುಟುಂಬ

ದೇವತೆ ಜ್ಯೋತಿ

ಶಿವ ಮತ್ತು ಪಾರ್ವತೀ ದೇವಿಯ ಎರಡನೇ ಪುತ್ರಿ ದೇವತೆ ಜ್ಯೋತಿ. ಅವಳು ಬೆಳಕಿನ ಪ್ರತಿನಿಧಿ ಎಂದು ನಂಬಲಾಗಿದೆ. ಪಾರ್ವತೀ ದೇವಿಯ ಹಣೆಯ ಮೇಲಿನ ಮಿಂಚಿನಿಂದ ಅವಳು ಹೊರಹೊಮ್ಮಿದಳು. ಆಕೆಯನ್ನು ಅವಳ ಸಹೋದರ ಕಾರ್ತಿಕೇಯನೊಂದಿಗೆ ಹೆಚ್ಚು ಜೊತೆಗೂಡಿಸಲಾಗುತ್ತದೆ. ಈ ದೇವತೆಯನ್ನು ರೇಕಿ ಮತ್ತು ಜ್ವಾಲಾಮುಖಿ ಎಂಬ ಹೆಸರುಗಳಿಂದ ಕೂಡಾ ಕರೆಯಲಾಗುತ್ತದೆ. ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ಇವಳನ್ನು ವಿಶೇಷವಾಗಿ ಪೂಜಿಸುತ್ತಾರೆ.

ಶಿವ ದೇವರ ಕುಟುಂಬ

ದೇವತೆ ಮಾನಸಾ

ದೇವತೆ ಮಾನಸ ಶಿವನ ಮೂರನೇ ಮಗಳೆಂದು ನಂಬಲಾಗಿದೆ. ಆದರೆ, ಪಾರ್ವತಿ ದೇವಿಯನ್ನು ತಾಯಿ ಎಂದು ಪರಿಗಣಿಸಲಾಗುವುದಿಲ್ಲ. ಇವಳು ಹಾವುಗಳ ದೇವತೆಯಾಗಿ ಪೂಜಿಸಲ್ಪಡುವಳು. ಇವಳು ನಾಗರಾಜ ವಾಸುಕಿಯ ಸಹೋದರಿ ಮತ್ತು ಜಗದ್ಗುರು ಋಷಿಯ ಪತ್ನಿ. ಜಗತ್ಗುರು ಒಬ್ಬ ಋಷಿಯಾಗಿದ್ದರು ಮತ್ತು ಅವರು ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದರು. ಒಮ್ಮೆ ಕಾಡಿನಲ್ಲಿ ಹಾದುಹೋಗುತ್ತಿರುವಾಗ, ಅವರಿಗೆ, ಅನೇಕ ಪುರುಷರು ತಲೆಕೆಳಗಾಗಿ ಮರದಲ್ಲಿ ನೇತಾಡುವುದು ಕಾಣುತ್ತದೆ. ವಿಚಾರಿಸಿದ ನಂತರ, ಅವರು ತಮ್ಮ ಪೂರ್ವಜರು ಎಂದು ಅವರು ತಿಳಿದುಕೊಳ್ಳುತ್ತಾರೆ. ತಮ್ಮ ವಂಶಸ್ಥರು ತಮ್ಮ ಕೊನೆಯ ಆಚರಣೆಗಳನ್ನು ಮಾಡದಕಾರಣ ನಾವು ಇಲ್ಲಿಯೇ ತೂಗಾಡುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಪರಿಹಾರವೆಂದರೆ ಅವರು (ಜಗದ್ಗುರು) ಮದುವೆಯಾಗಬೇಕು ಮತ್ತು ನಂತರ ಅವರಿಗೆ ಹುಟ್ಟುವ ಮಗನು ಪೂರ್ವಜರ ಕೊನೆಯ ಆಚರಣೆಗಳನ್ನು ನಡೆಸಬೇಕು ಎಂದು ತಿಳಿಸುತ್ತಾರೆ. ನಾಗರಾಜ ವಾಸುಕಿ ತನ್ನ ಸಹೋದರಿಯ ಕೈಯನ್ನು ಅವನಿಗೆ ನೀಡುತ್ತಾರೆ ಮತ್ತು ಜಗದ್ಗುರು ಮಾನಸಳನ್ನು ಅವರ ಹೆಂಡತಿಯಾಗಿ ಸ್ವೀಕರಿಸುತ್ತಾರೆ. ದೇವತೆಯಾದ ಮನಸಾ ಒಬ್ಬ ಹುಡುಗನಿಗೆ ಜನ್ಮ ನೀಡುತ್ತಾಳೆ ಮತ್ತು ಅವನಿಗೆ ಅಷ್ಟಕ ಎಂದು ಹೆಸರಿಡುತ್ತಾರೆ. ಅಸ್ಟಕ ನಂತರ ತಮ್ಮ ಪೂರ್ವಜರ ಕೊನೆಯ ಆಚರಣೆಗಳನ್ನು ಮಾಡಿ ಅವರಿಗೆ ಮೋಕ್ಷ ಸಿಗುವಂತೆ ಮಾಡುತ್ತಾನೆ.

Read more about: shiva ಶಿವ ganesha god
English summary

Do you know Lord Shiva has Girl childrens

Do you know Lord Shiva has Girl childrens
Story first published: Thursday, May 10, 2018, 15:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more