For Quick Alerts
ALLOW NOTIFICATIONS  
For Daily Alerts

ರಕ್ತ ಕುಡಿಯುವ ರಕ್ತಪಿಶಾಚಿಗಳ ಲೋಕದತ್ತ ಒಂದು ಪ್ರಯಾಣ

By Super
|

ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಹೊಂಬುಜ ಎಂದ ಪುಣ್ಯಕ್ಷೇತ್ರವಿದೆ. ದೇಗುಲದ ಪಕ್ಕದಲ್ಲಿ ಕೆಲವು ಮರಗಳಲ್ಲಿ ಎಲೆಗಳಿಗಿಂತ ಹೆಚ್ಚು ಕಪ್ಪು ಕಾಯಿಗಳು ಜೋತುಬಿದ್ದಿರುವಂತೆ ಕಾಣುತ್ತವೆ. ಸ್ವಲ್ಪ ಗಮನವಿಟ್ಟು ನೋಡಿದರೆ ಇವು ಕಾಯಿಗಳಲ್ಲ, ಜೋತುಬಿದ್ದು ನಿದ್ದೆ ಮಾಡುತ್ತಿರುವ ಬಾವಲಿಗಳು ಎಂದು ಗೊತ್ತಾಗುತ್ತದೆ. ವಾಸ್ತವವಾಗಿ ಬಾವಲಿಗಳು ಕೀಟಾಹಾರಿಗಳು. ತಮ್ಮ ಆಹಾರವನ್ನು ಇವು ಕತ್ತಲಲ್ಲಿಯೂ ಬೇಟೆಯಾಡಬಲ್ಲವು. ಏಕೆಂದರೆ ಇವು ಉಪಯೋಗಿಸುವ ಅಸ್ತ್ರವೆಂದರೆ ಅಲ್ಟ್ರಾಸೌಂಡ್ ಅಲೆಗಳು. ಅಂದರೆ ನಮ್ಮ ಕಿವಿಗೆ ಕೇಳಲಾಗದ ಕಂಪನಗಳು.

ತಮ್ಮ ಬಾಯಿಯಿಂದ ಹೊರಡಿಸಿದ ಶಬ್ಧ ವಸ್ತುವಿಗೆ ಬಡಿದು ಹಿಂದಿರುಗುವ ಬಳಿಕ ಆದ ವ್ಯತ್ಯಾಸವನ್ನೇ ಗುರುತಿಸಿ ಇವು ಕತ್ತಲಲ್ಲಿಯೂ ಚಿಕ್ಕ ವಸ್ತುಗಳನ್ನೂ ಗುರುತಿಸಬಲ್ಲವು. ಬಾವಲಿಗಳಲ್ಲಿ ಹಲವು ಪ್ರಬೇಧಳಿದ್ದು ಹೆಚ್ಚಿನವು ಕೀಟಾಹಾರಿಗಳಾಗಿದ್ದರೆ ಒಂದೆರಡು ಪ್ರಬೇಧಗಳು ಮಾತ್ರ ಕೊಂಚ ಭಿನ್ನವಾಗಿ ಪ್ರಾಣಿಗಳ ರಕ್ತ ಕುಡಿದು ಜೀವಿಸುತ್ತವೆ. ಸಾಮಾನ್ಯವಾಗಿ ರಾತ್ರಿ ಹೊರಡುವ ಇವು ದನ, ಎಮ್ಮೆ, ಕಾಡಿನ ಪ್ರಾಣಿಗಳಾದ ಜಿಂಕೆ ಮೊದಲಾದವುಗಳ ಕುತ್ತಿಗೆಯ ಮೇಲೆ ಸದ್ದಿಲ್ಲದಂತೆ ಇಳಿದು ತಮ್ಮ ಬ್ಲೇಡಿನಷ್ಟು ಹರಿತವಾದ ಹಲ್ಲುಗಳಿಂದ ಚಿಕ್ಕದಾದ ಗಾಯ ಮಾಡಿ ಜೊಲ್ಲು ಸುರಿಸುತ್ತವೆ. ಲಿಂಬೆಹಣ್ಣು: ಅದೇನು ಮಾಯೆ, ಅದೇನು ಜಾದೂ!

ಇದರಿಂದ ಪ್ರಾಣಿಗೆ ಗಾಯವಾದ ಅರಿವೇ ಆಗುವುದಿಲ್ಲ. ಈ ಗಾಯದಿಂದ ಒಸರುವ ರಕ್ತವನ್ನು ಕುಡಿದು ಬಾವಲಿ ಅಲ್ಲಿಂದ ನಿಧಾನಕ್ಕೆ ಜಾಗ ಖಾಲಿ ಮಾಡುತ್ತದೆ. ಬಾವಲಿ ನಿರ್ಗಮಿಸಿದ ಕೊಂಚ ಸಮಯದ ಬಳಿಕ ಈ ಗಾಯದಿಂದ ಸ್ವಲ್ಪ ಕಾಲ ರಕ್ತ ಸುರಿದು ಬಳಿಕ ಹೆಪ್ಪುಗಟ್ಟಿ ನಿಂತು ಹೋಗುತ್ತದೆ. ಈ ರಕ್ತವನ್ನು ಕಂಡ ಕೆಲವರು ಕುತೂಹಲದಿಂದ ಗಮನಿಸಿ ಬಾವಲಿಯ ಚಟುವಟಿಕೆಗಳನ್ನು ಪತ್ತೆಹಚ್ಚಿದರು. ಈ ಸ್ವಾರಸ್ಯವನ್ನು ಮನಗಂಡ ಬ್ರಾಂ ಸ್ಟೋಕರ್ ಎಂಬ ಲೇಖಕರು ತಮ್ಮ ಕಲ್ಪನೆಯನ್ನು ಈ ವಾಸ್ತವದೊಂದಿಗೆ ಬೆರೆಸಿ ಒಂದು ಪಾತ್ರಕ್ಕೆ ಜನ್ಮ ನೀಡಿದರು. ಅದೇ ಡ್ರಾಕುಲಾ.

ಡ್ರಾಕುಲಾ ಅಥವಾ ರಕ್ತಪೀಪಾಸುಗಳ ಕಲ್ಪನೆಯೇನೂ ಹೊಸದಲ್ಲ. ಇತಿಹಾಸದಲ್ಲಿ ಜಗತ್ತಿನ ಎಲ್ಲಾ ಕಡೆಗಳಲ್ಲಿ ಇವುಗಳ ವರ್ಣನೆಯಿದೆ. ಆದರೆ ಇತ್ತೀಚೆಗೆ ದೃಶ್ಯಮಾಧ್ಯಮದ ಮೂಲಕ ಕಥೆಯ ರೂಪದಲ್ಲಿ ಪ್ರಸ್ತುತಗೊಂಡ ಬಳಿಕವೇ ಈ ಕಲ್ಪನೆಗೆ ಹೆಚ್ಚಿನ ಜನಮನ್ನಣೆ ದೊರಕಿದೆ. ಕಾಲ್ಪನಿಕ ಪಾತ್ರವಾದ ಕೌಂಟ್ ಡ್ರಾಕುಲಾ, ಸ್ಟೆಫನೀ ಮೇಯರ್ ರವರ ಸುಪ್ರಸಿದ್ಧ ಟ್ವಿಲೈಟ್ ಸೀರೀಸ್‌ನ ಕಾಲ್ಪನಿಕ ಪಾತ್ರ ಎಡ್ವರ್ಡ್ ಕಲೆನ್ ಈ ಬಾವಲಿಯ ರಕ್ತಪೀಪಾಸು ಗುಣವನ್ನು ಆಧರಿಸಿ ಬಿಡುಗಡೆಯಾದ ಚಲನಚಿತ್ರ ಹಾಗೂ ಟೀವಿ ಧಾರಾವಾಹಿಗಳು. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ಈ ಕಥೆಗಳ ಪ್ರಕಾರ ರಕ್ತಪಿಶಾಚಿ ಅಥವಾ ಡ್ರಾಕುಲಾಗಳು ಕೋರೆ ಹಲ್ಲುಗಳನ್ನು ಹೊಂದಿದ್ದು ಮನುಷ್ಯರ ರಕ್ತ ಕುಡಿದು ಜೀವಿಸುತ್ತವೆ. ಈ ಡ್ರಾಕುಲಾದ ಕಡಿತಕ್ಕೊಳಗಾದವರೂ ಶೀಘ್ರವೇ ಹೊಸ ಡ್ರಾಕುಲಾಗಳಾಗಿ ರೂಪಾಂತರ ಹೊಂದುತ್ತಾರೆ. ಇವುಗಳಿಂದ ಪಾರಾಗುವ ರೋಮಾಂಚನವೇ ಈ ಚಿತ್ರಗಳ ಯಶಸ್ಸಿಗೆ ಕಾರಣವಾಗಿದೆ. ಚಿತ್ರಗಳಲ್ಲಿ ನಟರು ಈ ರೂಪಕಗಳನ್ನು ಎಷ್ಟು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರೆ ನಿಜಕ್ಕೂ ಡ್ರಾಕುಲಾಗಳು ಇದ್ದಾರೆಂದೇ ಹೆಚ್ಚಿನವರು ನಂಬಿದ್ದಾರೆ. ನಿಜಕ್ಕೂ ಈ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿವೆಯೇ ಇಲ್ಲವೇ ಎಂಬುವುದೇ ಗಹನಚರ್ಚೆಗೆ ಗ್ರಾಸವಾಗಿದೆ. ಇದು ನಿಜವೋ ಸುಳ್ಳು ಬೇರೆ ಮಾತು, ಆದರೆ ಈ ಚರ್ಚೆಯಿಂದ ಎಷ್ಟೋ ರೋಮಾಂಚಕ ಕಥೆಗಳು ಬೆಳಕಿಗೆ ಬಂದಿವೆ.

ರಕ್ತಪಿಶಾಚಿಯ ಗುಣಲಕ್ಷಣಗಳು

ರಕ್ತಪಿಶಾಚಿಯ ಗುಣಲಕ್ಷಣಗಳು

ಜಗತ್ತಿನೆಲ್ಲೆಡೆ ನೀಡಿರುವ ವರ್ಣನೆಯ ಪ್ರಕಾರ ಎಲ್ಲಾ ಡ್ರಾಕುಲಾಗಳ ಪ್ರಮುಖ ಲಕ್ಷಣವೆಂದರೆ ಕೋರೆ ಹಲ್ಲು ಮತ್ತು ಕುತ್ತಿಗೆಯನ್ನು ಕಚ್ಚಿ ರಕ್ತ ಕುಡಿಯುವ ಗುಣ. ಕೆಲವರ ಪ್ರಕಾರ ಇವುಗಳ ಕಿವಿ ಮೇಲ್ಭಾಗದಲ್ಲಿ ಚೂಪಾಗಿರುವುದು, ಗಾಢ ಕಂದುಬಣ್ಣ ಅಥವಾ ನೇರಳೆ ಬಣ್ಣದ ಚರ್ಮ ಹೊಂದಿರುವುದು ಸಹಾ ಸಾಮಾನ್ಯವಾದ ಲಕ್ಷಣವಾಗಿದೆ. ಇನ್ನು ಕೆಲವರ ಪ್ರಕಾರ ಈ ಜೀವಿಗಳು ಅತ್ಯಂತ ಆಕರ್ಷಕವಾಗಿದ್ದು ತಮ್ಮ ಕಣ್ಣುಗಳಿಂದ ನೀಡುವ ಸೆಳೆತ ಯಾರಿಗೂ ನಿರಾಕರಿಸಲಾಗದಂತಹದ್ದಾಗಿದ್ದು ತಾವಾಗಿಯೇ ಅವುಗಳ ಬಲೆಗೆ ಬೀಳುವಂತಿರುತ್ತದೆ. ಡ್ರಾಕುಲಾಗಳು ಅಮರಜೀವಿಗಳಾಗಿದ್ದು ರಕ್ತ ಕುಡಿದೇ ಜೀವಿಸುತ್ತವೆ ಎಂದು ಕೆಲವೆಡೆ ವರ್ಣಿಸಲಾಗಿದೆ. ಎಲ್ಲಾ ಕಡೆಯ ಸಮಾನವಾದ ಅಭಿಪ್ರಾಯವೆಂದರೆ ಇವು ನಿಶಾಚರಿಗಳಾಗಿದ್ದು ಕೇವಲ ರಾತ್ರಿ ತಮ್ಮ ಬೇಟೆಯನ್ನು ಹಿಡಿಯುತ್ತವೆ ಮತ್ತು ಬೆಳಗಾಗುತ್ತಲೇ ಅಡಗಿಕೊಳ್ಳುತ್ತವೆ.

ಭಾರತೀಯ ಜನಪದದಲ್ಲಿ ಕಂಡುಬಂದ ವರ್ಣನೆ

ಭಾರತೀಯ ಜನಪದದಲ್ಲಿ ಕಂಡುಬಂದ ವರ್ಣನೆ

ಬಹಳ ಹಿಂದಿನಿಂದ ಭಾರತ ವಿದೇಶೀಯರಿಗೆ ಆಕರ್ಷಕ ತಾಣವಾಗಿತ್ತು. ಆ ದಿನಗಳಲ್ಲಿ ಆಗಮಿಸಿದ ಪರ್ಯಟಕರು ಇಲ್ಲಿನ ವಿದ್ಯಮಾನ, ಕಥೆಗಳನ್ನು ರೋಮೇನಿಯಾ, ರಷ್ಯಾ ಮೊದಲಾದ ವಿದೇಶಗಳಲ್ಲಿ ಪ್ರಕಟಿಸಿದ ಬಳಿಕ ಈ ಸಂಗತಿಗಳ ಪ್ರೇರಣೆ ಪಡೆದು ಹಲವು ಕಥೆಗಳು ಹುಟ್ಟಿಕೊಂಡವು. ಡ್ರಾಕುಲಾ ಸಹಾ ಇದೇ ರೀತಿಯ ಒಂದು ಪ್ರೇರಣೆಯಾಗಿರಬಹುದೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಚೀನಾ ಮತ್ತು ಟಿಬೆಟ್ ನದ್ದೂ ಸಹಾ ಸರಿಸುಮಾರು ಇದೇ ಕಥೆ. ಏಕೆಂದರೆ ಭಾರತೀಯ ಜನಪದ ಕಥೆಗಳಲ್ಲಿ ಬರುವ ರಕ್ತ ಕುಡಿಯುವ ರಾಕ್ಷಸರ ವರ್ಣನೆಗೂ ವಿದೇಶದ ಡ್ರಾಕುಲಾದ ವರ್ಣನೆಗೂ ಬಹಳ ಸಾಮ್ಯವಿದೆ. ನಮ್ಮ ಪುರಾಣ, ಮಹಾಭಾರತ, ರಾಮಾಯಣಗಳಲ್ಲಿಯೂ ಅಲ್ಲಲ್ಲಿ ರಕ್ತಪೀಪಾಸು ರಾಕ್ಷಸರ, ನರಭಕ್ಷಕರ ವರ್ಣನೆಯಿದೆ. ಭೀಮನ ಹೆಂಡತಿ ಹಿಡಿಂಬೆ ಸಹಾ ನರಭಕ್ಷಕಿಯೂ, ಮನುಷ್ಯರ ರಕ್ತ ಕುಡಿಯುವವಳೂ ಆಗಿದ್ದಳು. ಗಾಳಿಯಲ್ಲಿ ತೇಲಿಬಂದ ವಾಸನೆಯಿಂದಲೇ ರಕ್ತದ ಮೂಲವನ್ನು ಕಂಡುಹಿಡಿಯಬಲ್ಲವಳಾಗಿದ್ದಳು.

ವಿದೇಶದ ಜನಪದದಲ್ಲಿ ವರ್ಣನೆ

ವಿದೇಶದ ಜನಪದದಲ್ಲಿ ವರ್ಣನೆ

ಭಾರತದಂತೆಯೇ ವಿದೇಶದ ಹಲವು ಜನಪದಗಳಲ್ಲಿ ಈ ಡ್ರಾಕುಲಾಗಳ ಬಗ್ಗೆ ವರ್ಣನೆ ನೀಡಲಾಗಿದೆ. ಈಜಿಪ್ಟ್, ಗ್ರೀಸ್, ರೋಮ್ ಮೊದಲಾದ ಅತಿ ಪುರಾತನ ಸಂಸ್ಕೃತಿಯಲ್ಲಿಯೂ ಡ್ರಾಕುಲಾಗಳ ವರ್ಣನೆಯಿದೆ. ಈಜಿಪ್ಟ್‌ನ ಕಥೆಗಳ ಪ್ರಕಾರ ಸ್ಟ್ರಿಗೋ ಅಥವಾ ಲಾಮೀ ಎಂಬ ರಾಕ್ಷಸರು ದೈತ್ಯ ಆಕಾರ ಹೊಂದಿದ್ದು ಮಕ್ಕಳನ್ನು ಕೊಂದು ರಕ್ತ ಕುಡಿಯುತ್ತಿದ್ದರು. ದಂತಕಥೆಯ ಪ್ರಕಾರ ಲಾಮಿಯಾ ಎಂಬ ರಾಕ್ಷಸಿ ಜ಼ೀಯುಸ್ ಎಂಬ ರಾಜನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ರಾಣಿ ಹೇರಾ ಇದನ್ನು ಪ್ರತಿಭಟಿಸಿ ರಾಕ್ಷಸಿಯ ವಿರುದ್ಧ ಹೋರಾಡುತ್ತಾಳೆ. ಇದರಿಂದ ಕ್ರೋಧಗೊಂಡ ರಾಕ್ಷಸಿ ಮತಿಭ್ರಮೆಗೊಳಗಾಗಿ ತನ್ನ ಸ್ವಂತ ಮಕ್ಕಳನ್ನೇ ಕೊಂದು ಹಾಕುತ್ತಾಳೆ. ಇದರ ಸೇಡು ತೀರಿಸಿಕೊಳ್ಳಲು ಪ್ರತಿ ರಾತ್ರಿ ಮನುಷ್ಯರ ಮಕ್ಕಳ ರಕ್ತವನ್ನು ಕುಡಿಯುತ್ತಾಳೆ. ಚೀನಾದ ದಂತಕಥೆಗಳ ಪ್ರಕಾರ ಕಿಯಾಂಗ್ ಶಿ ಎಂಬ ರಾಕ್ಷಸನೂ ರಕ್ತ ಕುಡಿದು ಜೀವಿಸುತ್ತಿದ್ದ. ನೇಪಾಳದಲ್ಲಿ ಹಲವು ಗುಹೆಗಳ ಒಳಭಾಗದಲ್ಲಿ ಸಿಕ್ಕಿರುವ ವರ್ಣಚಿತ್ರಗಳಲ್ಲಿ ರಕ್ತ ಕುಡಿಯುವ ರಾಕ್ಷಸನ ವರ್ಣನೆಯಿದೆ. ಮನುಷ್ಯನ ತಲೆಬುರುಡೆಯಲ್ಲಿ ರಕ್ತವನ್ನು ತುಂಬಿಸಿ ಕುಡಿಯುವ ದೈವದ ಚಿತ್ರಣವನ್ನು ನೇಪಾಳೀಯರು 'ಸಾವಿನ ದೇವ' ಎಂದು ನಂಬುತ್ತಾರೆ.

ಭಾರತದಲ್ಲಿ ಕಂಡುಬಂದ ಡ್ರಾಕುಲಾಗಳು

ಭಾರತದಲ್ಲಿ ಕಂಡುಬಂದ ಡ್ರಾಕುಲಾಗಳು

ಮಹಾಭಾರತದ ರಾಕ್ಷಸರ ವರ್ಣನೆ ಡ್ರಾಕುಲಾಗಳ ವರ್ಣನೆಗೆ ಬಹುತೇಕ ಹೋಲುತ್ತವೆ. ರಾಕ್ಷಸರು ದೈತ್ಯ ಶರೀರ ಹೊಂದಿದ್ದು ದೊಡ್ಡ ಕೋರೆಹಲ್ಲುಗಳನ್ನು, ಉದ್ದವಾದ ಕೂದಲನ್ನು, ಕೆಂಪು ಕಣ್ಣುಗಳು ಮತ್ತು ಭಾರೀ ಗಿರಿಜಾ ಮೀಸೆಯನ್ನು ಹೊಂದಿದ್ದರು. ವಿದೇಶದ ಡ್ರಾಕುಲಾಗಳ ವರ್ಣನೆ ಕಿವಿ ಮತ್ತು ಕೋರೆಹಲ್ಲಿನ ಹೊರತಾಗಿ ಬೇರೆಲ್ಲಾ ರೀತಿಯಲ್ಲಿ ನರಮನುಷ್ಯರಂತೆಯೇ ಇವೆ. ರಾಕ್ಷಸರಿಗೆ ಅಸಹಾಯಕರಾದ ಗರ್ಭಿಣಿಯರು ಮತ್ತು ಮಕ್ಕಳನ್ನು ತಿನ್ನುವುದೆಂದರೆ ಪಂಚಪ್ರಾಣವಾಗಿತ್ತು. ತಮ್ಮ ಪಾಡಿಗೆ ಪೂಜೆ ಮಾಡುತ್ತಿದ್ದ ಮುನಿಗಳ ಹವನವನ್ನು ಧ್ವಂಸಗೊಳಿಸುವುದು, ಹಬ್ಬ ಹರಿದಿನ, ಪೂಜೆ ಪುನಸ್ಕಾರಗಳಲ್ಲಿ ಬಲವಂತವಾಗಿ ನುಗ್ಗಿ ಪುಂಡಾಟಿಕೆ ನಡೆಸುವುದು ಮೊದಲಾದವು ರಾಕ್ಷಸರ ಗುಣಗಳಾಗಿದ್ದವು. ಆದರೆ ಬೆಂಕಿಗೆ ಹೆದರುವ, ಬೆಳಗಾಗುತ್ತಲೇ ಮಾಯವಾಗುವ ಅವರ ಗುಣಗಳು ಡ್ರಾಕುಲಾಗಳ ಹೋಲಿಕೆಗೆ ಬಹಳ ಹತ್ತಿರವಾಗಿವೆ.

ಭೂತ ಪ್ರೇತಗಳು ಮತ್ತು ಡ್ರಾಕುಲಾಗಳು

ಭೂತ ಪ್ರೇತಗಳು ಮತ್ತು ಡ್ರಾಕುಲಾಗಳು

ಭೂತಪ್ರೇತಗಳು ಭಾರತದ ಹಳ್ಳಿ ಹಳ್ಳಿಯಲ್ಲಿ ಜನಜನಿತವಾದ ವಿದ್ಯಮಾನಗಳು. ಶಾಂತಿ ದೊರಕದೇ ಸತ್ತವರು, ಆತ್ಮಹತ್ಯೆ ಮಾಡಿಕೊಂಡವರು, ಅಂತಿಮ ಸಂಸ್ಕಾರ ಸಿಗದವರು ಪ್ರೇತಾತ್ಮಗಳಾಗಿ ಭೂತದ ರೂಪದಲ್ಲಿ ತಿರುಗುತ್ತಾರೆ ಎಂದು ನಂಬಲಾಗಿದೆ. ಈ ನಂಬಿಕೆ ಡ್ರಾಕುಲಾಗಳ ಕಲ್ಪನೆಗೆ ಹತ್ತಿರವಾಗಿದೆ. ಇಲ್ಲಿ ವ್ಯತ್ಯಾಸವೆಂದರೆ ಡ್ರಾಕುಲಾಗಳು ಆತ್ಮ ತ್ಯಜಿಸಿದ ಕಳೇಬರವನ್ನು ಉಪಯೋಗಿಸಿಕೊಂಡು ರಕ್ತ ಕುಡಿಯುತ್ತಾ ಜೀವಿಸಿದರೆ ಭೂತ ಪ್ರೇತಗಳು ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ.

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಡ್ರಾಕುಲಾ ಬಗ್ಗೆ ಸಂಶೋಧನೆ ನಡೆಸಿದವರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಏಕೆಂದರೆ ಇತಿಹಾಸದಲ್ಲಿ ಪ್ರಸ್ತುತಪಡಿಸಿದ ಹಲವು ಪಾತ್ರಗಳು ಭಿನ್ನ ರೀತಿಯ ರೂಪವನ್ನು ಪಡೆದಿವೆ. ಆದರೆ ಅವುಗಳ ರಕ್ತಕುಡಿಯುವ ಗುಣ ಮಾತ್ರ ಏಕಸಮನಾಗಿದೆ. ಉತ್ತರಭಾರತದಲ್ಲಿ ಬ್ರಹ್ಮರಾಕ್ಷಸನ ವರ್ಣನೆಯಲ್ಲಿ ಇದರ ತಲೆ ಕರುಳುಗಳಿಂದ ಸುತ್ತವರೆದಿದ್ದು ತಲೆಯಿರುವಲ್ಲಿ ತಲೆಬುರುಡೆ ಮಾತ್ರ ಇತ್ತು ಹಾಗೂ ರಕ್ತವನ್ನು ಮಾತ್ರ ಕುಡಿಯುತ್ತಿತ್ತು. ವಿಕ್ರಮ ಮತ್ತು ಬೇತಾಳದ ಕಥೆಗಳಲ್ಲಿ ಬರುವ ಬೇತಾಳದ ವರ್ಣನೆ ಡ್ರಾಕುಲಾವನ್ನೇ ಹೊಂದಿದೆ.

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಕೆಲವು ಐರೋಪ್ಯ ದೇಶಗಳಲ್ಲಿ ಚುಪಾಕಾಬ್ರಾ (chupacabra) ಎಂಬ ಪ್ರಾಣಿಯ ವರ್ಣನೆಯಿದೆ. ಇದು ಸಾಮಾನ್ಯವಾಗಿ ಸಾಕುಪ್ರಾಣಿಗಳಾದ ಕುರಿ, ಹಂದಿ ಮತ್ತು ದನಗಳ ರಕ್ತವನ್ನು ಕುಡಿದು ಜೀವಿಸುತ್ತದೆ. ಈ ಎಲ್ಲಾ ವರ್ಣನೆಗಳನ್ನು ಪರಾಮರ್ಶಿಸಿದ ಬಳಿಕ ರಕ್ತ ಕುಡಿಯುವ ಪ್ರಾಣಿಯೊಂದು ಡ್ರಾಕುಲಾ ರೂಪದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರಬಹುದು.

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಡ್ರಾಕುಲಾ ಒಂದು ಪಿಶಾಚಿಯೇ ಅಥವಾ ವಿಕೃತಿಗೊಂಡ ಪ್ರಾಣಿಯೇ

ಇನ್ನೊಂದು ತರ್ಕದ ಪ್ರಕಾರ ಈ ಕಥೆಗಳನ್ನು ಕೇಳಿದ ಬಳಿಕ ನಮ್ಮ ಮನ ಉನ್ಮತ್ತಗೊಂಡು (hysteria) ಕಾಲ್ಪನಿಕ ಪಾತ್ರವೊಂದನ್ನು ಕಲ್ಪಿಸಿಕೊಂಡಿರಲೂ ಬಹುದು. ಆದುದರಿಂದ ಡ್ರಾಕುಲಾ ನಿಜವಾಗಿಯೂ ಇದೆಯೇ ಇಲ್ಲವೇ ಎಂಬುದು ಇಂದಿಗೂ ಸ್ಪಷ್ಟವಾಗಿ ಉತ್ತರಿಸಲಾಗದ ಯಕ್ಷಪ್ರಶ್ನೆಯಾಗಿದೆ.

English summary

Do Vampires Really Exist?

From Bram Stoker's Count Dracula to Stephenie Meyer's Edward Cullen, vampires have always instigated our interest for some or the other reason. We fear them, we love them and we always want to know more about them.Vampires are now looked upon as the most beautiful, charming and mesmerising creatures that you will ever come across.
X
Desktop Bottom Promotion