For Quick Alerts
ALLOW NOTIFICATIONS  
For Daily Alerts

ಭಗವಾನ್ ಕೃಷ್ಣ ಹೇಳಿದಂತೆ ದಿನ ಬೆಳಿಗ್ಗೆ ಹೀಗೆ ಮಾಡಿ, ಸಂಕಷ್ಟ ದೂರವಾಗುತ್ತೆ

By Manu
|

ಭಗವದ್ಗೀತೆ ಎನ್ನುವುದು ಹಿಂದೂಗಳಿಗೆ ಒಂದು ಧರ್ಮಗ್ರಂಥ ಮಾತ್ರವಲ್ಲ. ಇದರಲ್ಲಿ ಜೀವನಕ್ಕೆ ಬೇಕಾಗುವಂತಹ ಹಲವಾರು ಸಾರಗಳು ಇದೆ. ಇದನ್ನು ಓದಿಕೊಂಡು ಜೀವನವನ್ನು ಮುನ್ನಡೆಸಿಕೊಂಡು ಹೋದರೆ ಅದರಿಂದ ಖಂಡಿತವಾಗಿಯೂ ನಮಗೆ ಒಳ್ಳೆಯದಾಗುತ್ತದೆ. ಭಗವದ್ಗೀತೆಯಲ್ಲಿರುವ ಶ್ರೀಕೃಷ್ಣನ ಕೆಲವೊಂದು ಉಪದೇಶಗಳು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿರುವಂತದ್ದಾಗಿದೆ. ಧರ್ಮ ಮಾರ್ಗದ ಉಪದೇಶ ನೀಡುವ- ಭಗವದ್ಗೀತೆ

ಜೀವನದ ಆರಂಭದಿಂದ ಹಿಡಿದು ಅಂತ್ಯದ ತನಕ ಶ್ರೀಕೃಷ್ಣನು ಭಗವದ್ಗೀತೆಯನ್ನು ಹೇಳಿದ್ದಾನೆ. ಪ್ರತಿದಿನವೂ ಏಳುವಾಗ ಯಾವ ರೀತಿಯಲ್ಲಿ ಏಳಬೇಕು ಎನ್ನುವ ಬಗ್ಗೆಯೂ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ಉತ್ತಮ ದಿನ ನಿಮ್ಮದಾಗುವುದಲ್ಲಿ ಸಂಶಯವೇ ಇಲ್ಲ.....

ಭಗವಾನ್ ಶ್ರೀಕೃಷ್ಟ ಹೇಳಿರುವುದು

ಭಗವಾನ್ ಶ್ರೀಕೃಷ್ಟ ಹೇಳಿರುವುದು

ಮಹರ್ಷ್ಯ ಸಪ್ತ ಪೂರ್ವೇ ಚತ್ವರೇ ಮಾನವಸ್ತಥ ಮದ್ರಾವ ಮಾನಸ ಜಾತಾ ಯಷ ಲೋಕಹೀಯಂ ಪ್ರಜಾಃ

ಶ್ಲೋಕದ ಅರ್ಥ

ಸಪ್ತಋಷಿಗಳು ನನ್ನ ಹೃದಯದಿಂದ ಜನ್ಮ ತಳೆದಿದ್ದಾರೆ ಮತ್ತು ಅವರೆಲ್ಲರೂ ನನ್ನ ಪ್ರತಿಬಿಂಬ. ಯಾರು ಇವರೆಲ್ಲರ ಹೆಸರನ್ನು ಬೆಳಿಗ್ಗೆ ಜಪಿಸುತ್ತಾರೆಯಾ ಅವರ ದಿನವು ಸಂತೋಷದಾಯಕವಾಗಲಿದೆ. ಅವರಿಗೆ ಆ ದಿನ ಯಶಸ್ಸು ಕೂಡ ಸಿಗಲಿದೆ.

ಸಪ್ತ ಋಷಿಗಳೆಲ್ಲಾ ಭಗವಾನ್ ಕೃಷ್ಣನ ಪ್ರತಿಬಿಂಬ

ಸಪ್ತ ಋಷಿಗಳೆಲ್ಲಾ ಭಗವಾನ್ ಕೃಷ್ಣನ ಪ್ರತಿಬಿಂಬ

ವಿಶ್ವಾಮಿತ್ರ- ಇವರು ಗಾಯತ್ರಿ ಮಂತ್ರವನ್ನು ಬರೆದಿರುವವರು ಮತ್ತು ರಾಮ ಹಾಗೂ ಲಕ್ಷ್ಮಣನಿಗೆ ದೇವಶಾಸ್ತ್ರವನ್ನು ಹೇಳಿಕೊಟ್ಟ ಗುರು. ಯುದ್ಧದ ಜ್ಞಾನ ಮತ್ತು ಅಸ್ತ್ರಗಳನ್ನು ಉಪಯೋಗಿಸುವ ರೀತಿಯನ್ನು ಹೇಳಿಕೊಟ್ಟಿದ್ದಾರೆ. ರಾಮಾಯಣದಲ್ಲಿ ಬರುವಂತಹ ಹಲವಾರು ರೀತಿಯ ದುಷ್ಟರನ್ನು ಧ್ವಂಸ ಮಾಡಲು ರಾಮ ಮತ್ತು ಲಕ್ಷ್ಮಣನಿಗೆ ವಿಶ್ವಾಮಿತ್ರ ಮಾರ್ಗದರ್ಶನ ನೀಡಿದ್ದಾರೆ.

ಭಾರಧ್ವಜ

ಭಾರಧ್ವಜ

ಮಹಾಭಾರದಲ್ಲಿ ಕೌರವರು ಹಾಗೂ ಪಾಂಡವರಿಗೆ ಗುರುವಾಗಿದ್ದ ದ್ರೋಣಾಚಾರ್ಯರ ತಂದೆ ಭಾರಧ್ವಜರು.

ಅಗಸ್ತ್ಯ

ಅಗಸ್ತ್ಯ

ಅಗಸ್ತ್ಯರ ಹುಟ್ಟಿನ ಬಗ್ಗೆ ತುಂಬಾ ಕುತೂಹಲಕಾರಿಯಾದ ಕಥೆಯಿದೆ. ಅಗಸ್ತ್ಯರನ್ನು ತಂದೆಯೂ ಅಲ್ಲ, ತಾಯಿಯು ಅಲ್ಲ ಎನ್ನಲಾಗುತ್ತಿದೆ. ಪುರಾಣಗಳ ಪ್ರಕಾರ ವರುಣ ಮತ್ತು ಮಿತ್ರಾ ಯಜ್ಞ ಮಾಡುತ್ತಿದ್ದ ವೇಳೆ ತ್ರಿಲೋಕ ಸುಂದರಿ ಊರ್ವಶಿಯು ಪ್ರತ್ಯಕ್ಷಳಾಗುತ್ತಾಳೆ. ಆಕೆಯ ರೂಪವನ್ನು ನೋಡಿ ಅವರಿಬ್ಬರಿಗೆ ಸ್ಖಲನವಾಗಿ ವೀರ್ಯವು ಅಲ್ಲೇ ನೆಲದ ಮೇಲೆ ಬೀಳುತ್ತದೆ. ಅದು ಗರ್ಭವಾಗಿ ಅದರಲ್ಲಿ ಅಗಸ್ತ್ಯರು ಜನಿಸಿದ್ದಾರೆ ಎಂದು ಹೇಳಲಾಗುತ್ತದೆ.

ಭರಿಗು

ಭರಿಗು

ಬ್ರಹ್ಮನು ಸೃಷ್ಟಿಸಿದ ಹಲವಾರು ಪ್ರಜಾಪತಿಗಳಲ್ಲಿ ಇವರು ಒಬ್ಬರಾಗಿದ್ದಾರೆ ಮತ್ತು ಭರಿಗು ಸಂಹಿತ ಎನ್ನುವ ಪುಸ್ತಕದ ಲೇಖಕರಾಗಿದ್ದಾರೆ. ಬ್ರಹ್ಮನ ತಲೆಯಿಂದ ಜನಿಸಿದವರು ಭರಿಗು

ಕಶ್ಯಪ

ಕಶ್ಯಪ

ಋಷಿ ಕಶ್ಯಪರು ತಪಸ್ಸು ಮಾಡಿದಂತಹ ಸ್ಥಳದಿಂದಾಗಿ ಕಾಶ್ಮೀರ ಎನ್ನುವ ಹೆಸರು ಬಂದಿದೆ. ಕಶ್ಯಪ್ ಮಿರ್ ಅಥವಾ ಕಶ್ಯಪ ನದಿಯಿಂದ ಕಾಶ್ಮೀರ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ.

ಅತ್ರಿ

ಅತ್ರಿ

ಸಪ್ತಋಷಿಗಳಲ್ಲಿ ಇವರು ಕೊನೆಯವರು ಮತ್ತು ಬ್ರಹ್ಮನ ನಾಲಗೆಯಿಂದ ಹುಟ್ಟಿದವರು ಎಂದು ಹೇಳಲಾಗುತ್ತದೆ. ಭಗವಾನ್ ಕೃಷ್ಣನ ಪ್ರಕಾರ ಬೆಳಿಗ್ಗೆ ಎದ್ದ ಬಳಿಕ ಈ ಏಳು ಹೆಸರುಗಳನ್ನು ಹೇಳಿದರೆ ನಿಮ್ಮ ದಿನವು ಉತ್ತಮವಾಗಿ ಯಶಸ್ಸನ್ನು ಕಾಣುತ್ತೀರಿ.

ವಶಿಷ್ಠ

ವಶಿಷ್ಠ

ದಶರಥನ ನಾಲ್ಕು ಮಕ್ಕಳ ಗುರುಗಳು ವಶಿಷ್ಠರು. ನಾಲ್ಕು ಮಂದಿಗೆ ಪಾಠ ಮಾಡುತ್ತಿರುವ ವೇಳೆ ರಾಮ ಹೇಳಿದಂತೆ ಪ್ರಶ್ನೆ ಹಾಗೂ ಕೆಲವೊಂದು ಗೊಂದಲಗಳಿಗೆ ವಶಿಷ್ಠರು ಉತ್ತರಿಸಿದ್ದಾರೆ. ಅವರನ್ನು ಯೋಗ ವಶಿಷ್ಠರೆಂದು ಕರೆಯಲಾಗುತ್ತದೆ. ಬ್ರಹ್ಮನ ಶಕ್ತಿಯಿಂದ ಜನಸಿದ್ದ ವಶಿಷ್ಠರು ವೇದಶಾಸ್ತ್ರದ ಎಲ್ಲಾ ವಿದ್ಯೆಗಳನ್ನು ಬಲ್ಲವರಾಗಿದ್ದರು.

English summary

Do This ONE Thing As Told By Lord Krishna To Have A Blissful Day

Therefore, it is important to pay attention to our thoughts and action when we wake up. In Bhagwad Gita, Lord Krishna has given a simple advice to all the devotees, following which they can experience a blissful day. Let's check out what it is....
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more